ಟಾಮ್​ ಆ್ಯಂಡ್​ ಜೆರ್ರಿ ನಿರ್ದೇಶಕ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಜೆನಿ ಡೀಚ್ ನಿಧನ

Gene Deitch Death: ದೇಶ, ಭಾಷೆಯ ಭೇದವಿಲ್ಲದೆ ಇಡೀ ವಿಶ್ವಾದ್ಯಂತ ಟಾಮ್​ ಆ್ಯಂಡ್​ ಜೆರ್ರಿ ಕಾರ್ಟೂನ್​ ಸೀರೀಸ್​ ಗಳಿಸಿದ ಪ್ರಖ್ಯಾತಿಯ ಹಿಂದಿನ ಶಕ್ತಿ ಇದೇ ಜೆನಿ ಡೀಚ್.

news18-kannada
Updated:April 21, 2020, 1:38 PM IST
ಟಾಮ್​ ಆ್ಯಂಡ್​ ಜೆರ್ರಿ ನಿರ್ದೇಶಕ, ಆಸ್ಕರ್ ಪ್ರಶಸ್ತಿ ಪುರಸ್ಕೃತ ಜೆನಿ ಡೀಚ್ ನಿಧನ
ಕಾರ್ಟೂನಿಸ್ಟ್​ ಜೀನ್​ ಡೀಚ್
  • Share this:
ಕಿರುತೆರೆಯಲ್ಲಿ ಹೊಸ ಸಂಚಲನ ಮೂಡಿಸಿದ್ದ 'ಟಾಮ್ ಆ್ಯಂಡ್ ಜೆರ್ರಿ' ಶೋವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಮಕ್ಕಳಿಂದ ದೊಡ್ಡವರವರೆಗೂ 'ಟಾಮ್​ ಆ್ಯಂಡ್ ಜೆರ್ರಿ'ಯ ಅಭಿಮಾನಿಗಳೇ. ಈ ಸರಣಿಯ ನಿರ್ದೇಶಕ ಮತ್ತು ಆಸ್ಕರ್ ಪ್ರಶಸ್ತಿ ಪುರಸ್ಕೃತ ಜೆನಿ ಡೀಚ್ ನಿಧನರಾಗಿದ್ದಾರೆ.

ದೇಶ, ಭಾಷೆಯ ಭೇದವಿಲ್ಲದೆ ಇಡೀ ವಿಶ್ವಾದ್ಯಂತ 'ಟಾಮ್​ ಆ್ಯಂಡ್​ ಜೆರ್ರಿ' ಕಾರ್ಟೂನ್​ ಸೀರೀಸ್​ ಗಳಿಸಿದ ಪ್ರಖ್ಯಾತಿಯ ಹಿಂದಿನ ಶಕ್ತಿ ಇದೇ ಜೆನಿ ಡೀಚ್. 95 ವರ್ಷದವರಾಗಿದ್ದ ಅವರು ಕಳೆದ ಗುರುವಾರವೇ ಪ್ರಾಗ್​ ಲಿಟಲ್ ಕ್ವಾರ್ಟರ್​ನಲ್ಲಿರುವ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ, ಈ ವಿಷಯ ತಡವಾಗಿ ಗೊತ್ತಾಗಿದೆ. ಅವರು 'ಪೊಪೆಯೆ' ಸೀರೀಸ್ ಕೂಡ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್; ಫೇಸ್​ಬುಕ್ ಲೈವ್​ನಲ್ಲಿ ಮಗನ ಅಂತ್ಯಸಂಸ್ಕಾರ ಕಂಡು ಕಣ್ಣೀರಿಟ್ಟ ಕೇರಳದ ದಂಪತಿ!

1924ರಲ್ಲಿ ಚಿಕಾಗೋದಲ್ಲಿ ಜನಿಸಿದ ಡೀಚ್​ ಅವರ ಪೂರ್ತಿ ಹೆಸರು ಯೂಜಿನ್ ಮರಿಲ್ ಡೀಚ್. ಮನ್ರೋ, ಟಾಮ್ ಟೆರಿಫಿಕ್ ಮತ್ತು ನುದ್ನಿಕ್ ಅನಿಮೇಟೆಡ್ ಕಾರ್ಟೂನ್​ಗಳನ್ನು ಡೀಚ್ ನಿರ್ದೇಶಿಸಿದ್ದಾರೆ.


ಇವರು 1960ರಲ್ಲಿ ನಿರ್ದೇಶಿಸಿದ್ದ ಮನ್ರೋ ಎಂಬ ಶಾರ್ಟ್​ ಫಿಲ್ಮ್​ಗೆ ಬೆಸ್ಟ್​ ಅನಿಮೇಟೆಡ್ ಶಾರ್ಟ್​ ಫಿಲ್ಮ್ ಅಕಾಡೆಮಿ ಪ್ರಶಸ್ತಿ ಕೂಡ ಲಭಿಸಿತ್ತು. ವಿಶ್ವದ ಪ್ರಸಿದ್ಧ ಕಾರ್ಟೂನಿಸ್ಟ್​​ನ ಸಾವಿಗೆ ಅನೇಕರು ಸಂತಾಪ ಸೂಚಿಸಿದ್ದಾರೆ.

 
First published: April 21, 2020, 1:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading