ಅಮೆರಿಕ ದಾಳಿ ಭಯೋತ್ಪಾದಕನ ಮಗಳನ್ನು ವರಿಸಿದ ಒಸಾಮ ಬಿನ್​ ಲಾಡೆನ್​ ಮಗ

news18
Updated:August 6, 2018, 6:21 PM IST
ಅಮೆರಿಕ ದಾಳಿ ಭಯೋತ್ಪಾದಕನ ಮಗಳನ್ನು ವರಿಸಿದ ಒಸಾಮ ಬಿನ್​ ಲಾಡೆನ್​ ಮಗ
news18
Updated: August 6, 2018, 6:21 PM IST
ನ್ಯೂಸ್​ 18 ಕನ್ನಡ

ಲಂಡನ್​ (ಆ.06):  ಅಲ್​ ಖೈದಾ ನಾಯಕ ಒಸಾಮ ಬಿನ್​ ಲಾಡೆನ್​ ಮಗ ಹಂಝಾ​ ಬಿನ್​ ಲಾಡೆನ್​ನಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅದು 2001ರಲ್ಲಿ ಅಮೆರಿಕ ಭಯೋತ್ಪಾದಕ ದಾಳಿಯ  ಭಾಗಿಯಾಗಿದ್ದ  ಮೊಗಮ್ಮದ್​ ಅಟ್ಟ ಅವರ ಮಗಳನ್ನು ಮದುವೆಯಾಗಿದ್ದಾರೆ.

ಈ ಮಾಹಿತಿಯನ್ನು ಒಸಾಮ ಬಿನ್​ ಲಾಡೆನ್​ ತಮ್ಮ ಗಾರ್ಡಿಯನ್​ ಪತ್ರಿಕೆಗೆ ನೀಡಿದ  ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ

ಹಂಝಾ ಮೊಹಮ್ಮದ್​ ಅಟ್ಟ ಅವರ ಮಗಳನ್ನು ಮದುವೆಯಾಗುತ್ತಿದ್ದಾನೆ ಎಂಬ ಬಗ್ಗೆ ನಮಗೆ ಸುದ್ದಿ ಕೇಳಿಬಂದಿದೆ. ಆದರೆ ಆತ ಎಲ್ಲಿದ್ದಾನೆ ಎಂಬ ಬಗ್ಗೆ ನಮಗೆ ಖಚಿತವಾಗಿ ತಿಳಿದಿಲ್ಲ. ಆತ ಬಹುಶಃ ಅಫ್ಘಾನಿಸ್ತಾನದಲ್ಲಿರಬಹುದು. ಅಮೆರಿಕ ಮಿಲಿಟರಿ ಪಡೆ ಆತನ ತಂದೆಯನ್ನು ಹತ್ಯೆ ಮಾಡಿದ್ದರ ವಿರುದ್ದ ಪ್ರತೀಕಾರಕ್ಕೆ ಆತ ಸಿದ್ಧನಾಗಿದ್ದು, ಅಲ್​ ಖೈದಾ ಸಂಘಟನೆಯ ಹಿರಿಯ ಸ್ಥಾನದಲ್ಲಿ ಆತ ಪಡೆದಿರಬಹುದು ಎಂದಿದ್ದಾನೆ.

ಅಬೋಟಬಾದ್​ನಲ್ಲಿ ಬಿನ್​ ಲಾಡೆನ್​ ಮೇಲೆ ನಡೆದ ದಾಳಿಯಲ್ಲಿ ಹಂಝ ಬದುಕುಳಿದ್ದ. ಈತನ ಜೊತೆ ಲಾಡೆನ್​ ಮೂವರು ಪತ್ನಿಯರು ಕೂಡ ಬದುಕುಳಿದಿದ್ದರು. ಈ ವೇಳೆ ಲಾಡೆನ್​ ಮತ್ತೊಬ್ಬ ಮಗ ಖಲೀದ್​ ಅವರನ್ನು ಕೊಲ್ಲಲಾಗಿತ್ತು. ಇನ್ನು ಮೂರನೇ ಮಗನನ್ನು 2009ರಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆ ಮಾಡಾಗಿತ್ತು.​

ಹಂಝ ಅಮೆರಿಕ, ಲಂಡನ್​ ಫ್ರಾನ್ಸ್​ ಮತ್ತು ಇಸ್ರೇಲ್​ ಮೇಲೆ ಯುದ್ಧ ನಡೆಸಲು ತನ್ನ ಬೆಂಬಲಿಗರಿಗೆ ಒತ್ತಾಯಿಸಿದ್ದನು. ಅಲ್ಲದೇ ಭಯೋತ್ಪಾದಕರ ಗುಂಪಿನ ನಾಯಕರ ಅಯ್ಮಾನ್​ ಆಲ್​ ಜಾವಹರಿ ಸಹಾಯಕರರಾಗಿ ಈತ ಕಾರ್ಯ ನಿರ್ವಹಿಸುತ್ತಿದ್ದ.

ಪಶ್ಚಿಮಾತ್ಯ ಗುಪ್ತಚಾರ ಇಲಾಖೆ ಹಂಝಗಾಗಿ ಕಳೆದ ಎರಡು ವರ್ಷಗಳಿಂದ ಹುಡುಕಾಟ ನಡೆಸಿದೆ. ಇನ್ನು ಒಸಾಮ ಬಿನ್​ ಲಾಡೆನ್​ ಬರೆದ ಪತ್ರವನ್ನು ವಶಪಡಿಸಿಕೊಂಡಾಗ ಸಂಘಟನೆಯಲ್ಲಿ ಹಂಝ ಸ್ಥಾನವನ್ನು ಬದಲಾಯಿಸುವಂತೆ ಆತ ಕೋರಿಕೊಂಡಿದ್ದ.
Loading...

ಲಾಡೆನ್​ ಮೂವರು ಪತ್ನಿಯರಯ ಮತ್ತು ಬದುಕುಳಿದ ಮಕ್ಕಳು ಸೌದಿ ಅರೇಬಿಯಾಕ್ಕೆ ಮರಳಿದ್ದು,  ಅಲ್ಲಿ ಮಾಜಿ ರಾಜಕುಮಾರ  ಮೊಹಮ್ಮದ್ ಬಿನ್ ನೆಯೆಫ್ ಆಶ್ರಯ ನೀಡಿದರು.

ಒಸಾಮ ಬಿನ್​ ಲಾಡೆನ್​ ತಾಯಿ ಆಲಿಯ ಘಾನೆಮ್​ ಜೊತೆ ಈ ಮಹಿಳೆಯರು ಮೂವರು ಮಕ್ಕಳು ನಿಕಟ ಸಂಬಂಧ ಹೊಂದಿದ್ದರು ಎಂದು ಗಾರ್ಡಿಯ ಪತ್ರಿಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಿಳಿದುಬಂದಿದೆ.
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...