News18 India World Cup 2019

ವಿಶ್ವವನ್ನು ಬೆಚ್ಚಿಬೀಳಿಸಿದ ಭಯೋತ್ಪಾದಕ ಲಾಡೆನ್ ತಾಯಿಯ ಮನದಾಳದ ಮಾತು

news18
Updated:August 8, 2018, 7:50 PM IST
ವಿಶ್ವವನ್ನು ಬೆಚ್ಚಿಬೀಳಿಸಿದ ಭಯೋತ್ಪಾದಕ ಲಾಡೆನ್ ತಾಯಿಯ ಮನದಾಳದ ಮಾತು
news18
Updated: August 8, 2018, 7:50 PM IST
-ನ್ಯೂಸ್ 18 ಕನ್ನಡ

ವಿಶ್ವವನ್ನೇ ಭಯೋತ್ಪಾದನಾ ಕೂಪಕ್ಕೆ ತಳ್ಳಿದ ಉಗ್ರ ಒಸಾಮ ಬಿನ್ ಲಾಡೆನ್ ಯಾರಿಗೆ ತಾನೇ ಗೊತ್ತಿಲ್ಲ. ಅಲ್-ಖೈದಾ ಎಂಬ ಉಗ್ರಗಾಮಿ ಸಂಘಟನೆ ಕಟ್ಟಿ ದಶಕಗಳವರೆಗೆ ತನ್ನ ಕುಕೃತ್ಯಗಳಿಂದ ವಿಶ್ವವನ್ನು ಬೆಚ್ಚಿಬೀಳಿಸಿದ್ದ ಲಾಡೆನ್ ಇಂದು ಇತಿಹಾಸವಾಗಿದ್ದಾರೆ. ಆದರೆ ಇಂದಿಗೂ ಭಯೋತ್ಪಾದಕ ಎಂದರೆ ಲಾಡೆನ್ ಮುಖ ಒಮ್ಮೆ ಕಣ್ಮುಂದೆ ಬರುತ್ತೆ ಎಂದರೆ ಅವನ ಅಟ್ಟಹಾಸ ಹೇಗಿತ್ತು ಎಂಬುದನ್ನು ಊಹಿಸಬಹುದು. ಭಯೋತ್ಪಾದನೆಗಾಗಿ ತನ್ನ ಕುಟುಂಬವನ್ನೇ ತೊರೆದಿದ್ದ ಲಾಡೆನ್ ತಾಯಿ ಈಗಲೂ ತನ್ನ ಮಗನ ನೆನಪಿನಲ್ಲಿ ಕೊರಗುತ್ತಿದ್ದಾರೆ.ಇದೇ ಮೊದಲ ಬಾರಿ ಒಸಾಮಾನ ತಾಯಿ ಆಲಿಯಾ ಗಾನೆಮ್ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ವಿಶ್ವದಲ್ಲೇ ಕುಖ್ಯಾತಿ ಪಡೆದಿದ್ದ ಮಗನ ಕುರಿತು ಮನಸು ಬಿಚ್ಚಿ ಮಾತನಾಡಿದ್ದಾರೆ.

20ರ ದಶಕದ ಆರಂಭದವರೆಗೂ ಒಸಾಮಾ ಉತ್ತಮ ಮಗನಾಗಿದ್ದನು. ಆದರೆ ವಿಶ್ವವಿದ್ಯಾಲಯಕ್ಕೆ ಸೇರಿದ ಬಳಿಕ ಅವನು ಆಲೋಚನೆಗಳು ಬದಲಾಗಿತ್ತು. ನೀವು ಅವನನ್ನು ಮತಾಂಧ ಎನ್ನಬಹುದು ಆದರೆ ಅವನೊಂದಿಗೆ ಇದ್ದವರಿಗೆ ಹಣ ಬೇಕಾಗಿತ್ತು. ನಾನು ಪ್ರತಿ ಬಾರಿ ಕೂಡ ಅವರಿಂದ ದೂರವಿರಲು ಮಗನಿಗೆ ತಿಳಿ ಹೇಳಿದ್ದೆ. ಆದರೆ ಅವನೇನು ಮಾಡುತ್ತಿದ್ದೇನೆಂದು ಯಾವತ್ತೂ ನನಗೆ ತಿಳಿಸುತ್ತಿರಲಿಲ್ಲ. ಅವನಿಗೆ ನಾನೆಂದರೆ ಅಷ್ಟೊಂದು ಪ್ರೀತಿಯಿತ್ತು, ಎಂದು ಮಗನ ನೆನಪಿಗೆ ಜಾರಿದ್ದರು ಆಲಿಯಾ ಗಾನೆಮ್.

ಶಾಲಾ ಚಟುವಟಿಕೆಗಳಲ್ಲಿ ತುಂಬಾ ಸಕ್ರೀಯನಾಗಿದ್ದ ಲಾಡೆನ್ ನೇರ ನಡವಳಿಕೆಯ ವ್ಯಕ್ತಿತ್ವ ಹೊಂದಿದ್ದನು. ತನ್ನ ವ್ಯವಹಾರದ ಹಣವನ್ನೆಲ್ಲಾ ಅಫ್ಘಾನಿಸ್ತಾನಕ್ಕಾಗಿ ಖರ್ಚು ಮಾಡಿದ್ದನು. ಇದ್ಯಾವುದೂ ಕೂಡ ನನಗೆ ತಿಳಿದಿರಲಿಲ್ಲ. ಅವನು ಜಿಹಾದಿ ಕೃತ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ತಿಳಿದಾಗ ನಾವೆಲ್ಲರೂ ಅಸಮಾಧಾನ ಹೊಂದಿದ್ದೆವು. ಯಾವುದು ನಡೆಯಬಾರದು ಎಂದುಕೊಂಡಿದ್ದೆನೊ ಅದುವೆ ನಡೆದು ಹೋಗಿತ್ತು ಎಂದು ಹೇಳಿ ಒಸಾಮಾ ತಾಯಿ ದುಖಃವನ್ನು ತಡೆದುಕೊಂಡರು.

9/11ರಂದು ಅಮೆರಿಕ ವರ್ಲ್ಡ್​ ಟ್ರೇಡ್ ಸೆಂಟರ್​ಗಳ ಮೇಲೆ ದಾಳಿಯಾಗಿತ್ತು. ಈ ಹತ್ಯಾಕಾಂಡಾ ಒಸಾಮಾ ನಡೆಸಿರುವುದು ಎಂಬುದು ನಮಗೆ ತಿಳಿದದ್ದು 48 ಗಂಟೆಗಳ ಬಳಿಕವಷ್ಟೇ. ಅದೊಂದು ಕೆಟ್ಟ ಅನುಭವ, ನಾವೆಲ್ಲಾ ವಿಚಿತ್ರ ಯಾತನೆ ಅನುಭವಿಸಿದೆವು. ಅವನಿಂದ ನಮ್ಮ ಕುಟುಂಬ ಪ್ರತಿಯೊಬ್ಬರ ಮುಂದೆ ತಲೆ ತಗ್ಗಿಸಬೇಕಾಯಿತು. ಲಾಡೆನ್​ ನಡೆಸಿದ ಈ ಕೃತ್ಯದಿಂದ ನಾವು ಭಯಾನಕ ಪರಿಣಾಮಗಳನ್ನು ಎದುರಿಸಲಿದ್ದೇವೆ ಎಂಬುದು ಅದಾಗಲೇ ನಮಗೆ ತಿಳಿದಾಗಿತ್ತು. ಹೀಗಾಗಿ ವಿದೇಶದಲ್ಲಿರುವ ನಮ್ಮ ಕುಟುಂಬದ ಎಲ್ಲ ಸದಸ್ಯರು ಸೌದಿ ಅರೇಬಿಯಾಗೆ ಮರುಳಿದ್ದೆವು ಎಂದು ಒಸಾಮಾ ಸಹೋದರ ಅಹಮದ್ ಅಣ್ಣನ ಪಾಪ ಕೃತ್ಯದ ನಂತರದ ದಿನಗಳನ್ನು ಮೆಲುಕು ಹಾಕಿಕೊಂಡರು.

ಒಸಾಮನಿಂದ ನಾನು ಹಲವಾರು ವಿಷಯಗಳನ್ನು ಕಲಿತಿದ್ದೇನೆ. ನನ್ನ ಸಹೋದರ ಎಂಬರ್ಥದಲ್ಲಿ ನಾನು ತುಂಬಾ ಹೆಮ್ಮೆ ಪಡುತ್ತಿದ್ದೆ. ಆದರೆ ಮಾನವೀಯ ದೃಷ್ಟಿಯಲ್ಲಿ ಯಾವತ್ತೂ ಒಸಾಮಾನ ಬಗ್ಗೆ ಹೆಮ್ಮೆ ಪಡುವಂತೆ ಬದುಕಲಿಲ್ಲ. ವಿಶ್ವದಲ್ಲೇ ಎಲ್ಲರೂ ಗುರುತಿಸಿದ್ದರೂ, ಅದರಿಂದ ಯಾರಿಗೂ ಪ್ರಯೋಜವಿರಲಿಲ್ಲ ಎಂಬುದೇ ದುರಾದೃಷ್ಟ ಎಂದು ಮತ್ತೊಬ್ಬ ಸಹೋದರ ಹಾಸನ್ ಒಸಾಮಾನ ಬಗ್ಗೆ ಹೇಳಿಕೊಂಡರು.
Loading...

1999ರಲ್ಲಿ ರಷ್ಯಾ ವಿಮಾನ ನಿಲ್ದಾಣದ ಬಳಿ ಒಸಾಮಾ ನಮ್ಮನ್ನು ಬಹಳ ಸಂತೋಷದಿಂದ ಬರಮಾಡಿಕೊಂಡಿದ್ದನು. ಕುಟುಂಬ ಸದ್ಯಸರನ್ನು ಆಮಂತ್ರಿಸಿ ಬಾಡೂಟವನ್ನು ಏರ್ಪಡಿಸಿದ್ದನು. ಆ ದಿನವನ್ನು ಹಬ್ಬದ ರೀತಿಯಲ್ಲಿ ಒಸಾಮಾ ಆಚರಿಸಿಕೊಂಡಿದ್ದನು. ಅದುವೇ ಕೊನೆ ಮತ್ತೆ ಮಗನನ್ನು ಭೇಟಿಯಾಗುವ ಅವಕಾಶ ದೊರೆಯಲಿಲ್ಲ. ಅನಂತರ ನಡೆದಿದೆಲ್ಲವೂ ಇತಿಹಾಸ ಎಂದು ಹೇಳುವಾಗ ಲಾಡೆನ್​ ತಾಯಿ ಆಲಿಯಾ ಗಾನೆಮ್ ಅವರ ಕಣ್ಣಲ್ಲಿ ಮಗ ಮಾಡಿದ ಕೃತ್ಯದ ಪಶ್ಚಾತಾಪದ ಕಣ್ಣೀರು ಜಿನುಗಿತ್ತು.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...