• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Bilawal Bhutto: ಗುಜರಾತ್​ನ ಕಟುಕ ಇನ್ನೂ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್​ ಸಚಿವನ ಅಸಭ್ಯ ಹೇಳಿಕೆ!

Bilawal Bhutto: ಗುಜರಾತ್​ನ ಕಟುಕ ಇನ್ನೂ ಜೀವಂತವಾಗಿದ್ದಾನೆ: ಮೋದಿ ವಿರುದ್ಧ ಪಾಕ್​ ಸಚಿವನ ಅಸಭ್ಯ ಹೇಳಿಕೆ!

ಪಾಕ್​ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ

ಪಾಕ್​ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ

ಗುರುವಾರ ನ್ಯೂಯಾರ್ಕ್‌ನಲ್ಲಿ ಪತ್ರಿಕಾಗೋಷ್ಠಿಯೊಂದ್ನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್ ತನ್ನೆಲ್ಲಾ ಮಿತಿಗಳನ್ನು ದಾಟಿದರು. 9/11 ಮಾಸ್ಟರ್‌ಮೈಂಡ್ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿದ್ದ ಭಾರತದ ವಿದೇಶಾಂಗ ಸಚಿವರ ಹೇಳಿಕೆ ಬಗ್ಗೆ ಮಾತನಾಡಿದ ಬುಟ್ಟೋ ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್​ನ ಕಟುಕ ಇನ್ನೂ ಜೀವಂತವಾಗಿದ್ದಾನೆ ಎಂದು ಭಾರತದ ಪ್ರಧಾನಿಗೆ ಹೇಳಲಿಚ್ಛಿಸುತ್ತೇನೆ ಎಂದು ಮೋದಿ ವಿರುದ್ಧ ವೈಯುಕ್ತಿಕ ದಾಳಿ ನಡೆಸಿದ್ದಾರೆ.

ಮುಂದೆ ಓದಿ ...
  • Share this:

ಇಸ್ಲಮಾಬಾದ್(ಡಿ.16): ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಜರ್ದಾರಿ ಭುಟ್ಟೋ (Pakistan Foreign Minister Bilawal Bhutto Zardari) ಅಂತರಾಷ್ಟ್ರೀಯ ವೇದಿಕೆಯಲ್ಲೂ ರಾಜಕೀಯ ದಾಳಿ ನಡೆಸುತ್ತಿದ್ದಾರೆ. ಗುರುವಾರ ನ್ಯೂಯಾರ್ಕ್‌ನಲ್ಲಿ (New York) ಪತ್ರಿಕಾಗೋಷ್ಠಿಯೊಂದ್ನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್ ತನ್ನೆಲ್ಲಾ ಮಿತಿಗಳನ್ನು ದಾಟಿದರು. 9/11 ಮಾಸ್ಟರ್‌ಮೈಂಡ್ ಒಸಾಮಾ ಬಿನ್ ಲಾಡೆನ್‌ಗೆ (Osama Bin laden) ಆಶ್ರಯ ನೀಡಿದ್ದ ಭಾರತದ ವಿದೇಶಾಂಗ ಸಚಿವರ ಹೇಳಿಕೆ ಬಗ್ಗೆ ಮಾತನಾಡಿದ ಬುಟ್ಟೋ ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ. ಆದರೆ ಗುಜರಾತ್​ನ (Gujarat) ಕಟುಕ ಇನ್ನೂ ಜೀವಂತವಾಗಿದ್ದಾನೆ ಎಂದು ಭಾರತದ ಪ್ರಧಾನಿಗೆ ಹೇಳಲಿಚ್ಛಿಸುತ್ತೇನೆ ಎಂದು ಮೋದಿ ವಿರುದ್ಧ ವೈಯುಕ್ತಿಕ ದಾಳಿ ನಡೆಸಿದ್ದಾರೆ.


ವಿಶ್ವಸಂಸ್ಥೆಯ ಸಭೆಗಳಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ಆಗಮಿಸಿದ್ದ ಎಸ್.ಜೈಶಂಕರ್ ಅವರ ವಿರುದ್ಧ ವಾಗ್ದಾಳಿ ದಾಳಿ ನಡೆಸಿದ ಭುಟ್ಟೋ, ‘ಮೋದಿ ಪ್ರಧಾನಿಯಾಗುವ ಮುನ್ನವೇ ಅವರ ಪ್ರವೇಶವನ್ನು ಅಮೆರಿಕ ನಿಷೇಧಿಸಿತ್ತು’ ಎಂದಿದ್ದಾರೆ. ಪ್ರಧಾನಿ ಮೋದಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿರುದ್ಧ ಮತ್ತಷ್ಟು ಆರೋಪ ಹೊರಿಸಿದ ಭುಟ್ಟೋ ಇಬ್ಬರೂ(ಮೋದಿ ಹಾಗೂ ಜೈಶಂಕರ್) ಭಾರತದವರಲ್ಲ, ಅವರು ಆರ್‌ಎಸ್‌ಎಸ್‌ನ ಪ್ರಧಾನಿ ಮತ್ತು ವಿದೇಶಾಂಗ ಸಚಿವರು ಎಂದು ಕಿಡಿ ಕಾರಿದ್ದಾರೆ.


BJP ಕೆಣಕಲು RSS ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಕಾಂಗ್ರೆಸ್​! ಸಂಸದ ತೇಜಸ್ವಿ ಸೂರ್ಯ ಕೆಂಡಾಮಂಡಲ


ಭಾರತವು ಹಿಟ್ಲರ್‌ನಿಂದ ಪ್ರಭಾವಿತವಾಗಿದೆ


ನ್ಯೂಯಾರ್ಕ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಲಾವಲ್ ಅವರು ಭಾರತ ಸರ್ಕಾರವು ಗಾಂಧಿಯವರ ಸಿದ್ಧಾಂತವನ್ನು ನಂಬುವ ಬದಲು ತನ್ನ ಕೊಲೆಗಾರನ ತತ್ವಗಳನ್ನು ನಂಬುತ್ತದೆ, ಭಾರತ ಸರ್ಕಾರ ಹಿಟ್ಲರ್‌ನಿಂದ ಪ್ರಭಾವಿತವಾಗಿದೆ ಎಂದು ಹೇಳಿದರು. ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗೆ ಭಾರತವನ್ನು ಹೊಣೆಗಾರರನ್ನಾಗಿ ಮಾಡಿದ ಬಿಲಾವಲ್, ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ನೆರೆಯ ದೇಶದಿಂದ ಬೆಂಬಲ ಸಿಗುತ್ತಿದೆ. ಬಲೂಚಿಸ್ತಾನದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಬಾಹ್ಯ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.


Foreign Minister S Jaishankar Sharp Rebuke as Pakistan Raises Kashmir at UN Security Council
ವಿದೇಶಾಂಗ ಸಚಿವ ಜೈಶಂಕರ್‌


ಲಾಕ್​ಗೆ ಗುದ್ದು ಹಾಕಿದ್ದ ಎಸ್ ಜೈಶಂಕರ್


ಭಾರತದ ವಿದೇಶಾಂಗ ಸಚಿವವು ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಸಚಿವರ ಈ ಅಸಭ್ಯ ಹೇಳಿಕೆ ನೀಡಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬುಧವಾರ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ಪಾಕಿಸ್ತಾನಕ್ಕರ ಛೀಮಾರಿ ಹಾಕಿದ್ದರು. ಪಾಕಿಸ್ತಾನಕ್ಕೆ ಸಲಹೆ ನೀಡಿದ ಜೈಶಂಕರ್, ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್‌ನಂತಹ ಭಯೋತ್ಪಾದಕನಿಗೆ ಆಶ್ರಯ ನೀಡಿದ ಮತ್ತು ನೆರೆಯ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶದಿಂದ ಇಂತಹ ಉಪದೇಶ ಸಲ್ಲದು ಎಂದಿದ್ದರು.


ಸಭೆಯಲ್ಲಿ ಮಾತನಾಡಿದ ಜೈಶಂಕರ್, ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯು ಪ್ರಸ್ತುತ ಕಾಲದ ಪ್ರಮುಖ ಸವಾಲುಗಳಿಗೆ ಅದರ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದರು. ಆ ಸವಾಲು ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಭಯೋತ್ಪಾದನೆ ಅಥವಾ ಯಾವುದೇ ಸಂಘರ್ಷಗಳಾಗಿರಬಹುದು ಮತ್ತು ಅಂತಹ ಬೆದರಿಕೆಗಳನ್ನು ಸಾಮಾನ್ಯ ಸವಾಲುಗಳಾಗಿ ಸ್ವೀಕರಿಸಬಾರದು ಎಂದು ಉಲ್ಲೇಖಿಸಿದ್ದರು. ಇದೇ ವೇಳೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದ ಜೈಶಂಕರ್, ಜಗತ್ತಿಗೆ ಸ್ವೀಕಾರಾರ್ಹವಲ್ಲದ್ದನ್ನು ಸಮರ್ಥಿಸುವ ಪ್ರಶ್ನೆ ಉದ್ಭವಿಸಬಾರದು ಎಂದು ಹೇಳಿದ್ದರು.


Explainer: ಇಡೀ ಕುಟುಂಬದ ಹತ್ಯೆ ಬಳಿಕ ಗ್ಯಾಂಗ್​ರೇಪ್, ದೀರ್ಘಕಾಲದ ಹೋರಾಡಿದ್ರೂ ದೋಷಿಗಳ ಬಿಡುಗಡೆ: ಯಾರು ಈ ಬಿಲ್ಕಿಸ್​ ಬಾನೊ?


ಭುಟ್ಟೋ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿದರು


ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿದರು, ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಯುಎನ್‌ಎಸ್‌ಸಿ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಯುಎನ್‌ಎಸ್‌ಸಿಯಲ್ಲಿ ಭಾರತವನ್ನು ಸೇರಿಸಿಕೊಳ್ಳುವ ಬೇಡಿಕೆಯ ಮೇಲೆ, ಭುಟ್ಟೋ ಅವರು ಹೊಸ ಸದಸ್ಯರನ್ನು ಸೇರಿಸುವುದರಿಂದ ಹೆಚ್ಚಿನ ಯುಎನ್ ಸದಸ್ಯ ರಾಷ್ಟ್ರಗಳಿಗೆ ಭದ್ರತಾ ಮಂಡಳಿಯಲ್ಲಿ ಇರುವ ಅವಕಾಶಗಳು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ನಾವು ಎಲ್ಲಾ ಸದಸ್ಯ ರಾಷ್ಟ್ರಗಳ ಸಾರ್ವಭೌಮತ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದರು.

top videos
    First published: