Love Marriage: ಅವಳು 5 ಮಕ್ಕಳನ್ನ ಬಿಟ್ಟು ಬಂದ್ಲು, ಇವನೂ 5 ಮಕ್ಕಳನ್ನು ಬಿಟ್ಟು ಹೋದ! ಈಗ ವಿವಾಹಿತರಿಬ್ಬರೂ ಎಸ್ಕೇಪ್!

Love Marriage: ಪ್ರೀತಿಸಿ ಮದುವೆಯಾಗೋದು ತಪ್ಪಲ್ಲ ಆದರೆ ಮದುವೆಯಾಗಿ ಐದುಜನ ಮಕ್ಕಳಾದಮೇಲೆ ಮತ್ತೆ ಪ್ರೀತಿಸಿ ಮದುವೆಯಾದ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರೀತಿಸಿ (Love)  ಮದುವೆಯಾಗೋದು ತಪ್ಪಲ್ಲ ಆದರೆ ಮದುವೆಯಾಗಿ ಐದುಜನ ಮಕ್ಕಳಾದ ಮೇಲೆ ಮತ್ತೆ ಪ್ರೀತಿಸಿ ಮದುವೆಯಾದ ಪ್ರಕರಣ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು (Women) ತನ್ನ ಪತಿ ಮತ್ತು ಐದು ಮಕ್ಕಳನ್ನು (Children) ಬಿಟ್ಟು ತನ್ನ ಪ್ರಿಯಕರನನ್ನು ಮದುವೆಯಾಗಿದ್ದಾಳೆ. ಮಹಿಳೆಯ ಪ್ರಿಯಕರನಿಗೂ ಐವರು ಮಕ್ಕಳಿದ್ದಾರೆ. ಈ ಮದುವೆಯಿಂದ (Marriage) 10 ಮಕ್ಕಳು ತಾಯಿ ಪ್ರೀತಿಯಿಂದ ವಂಚಿತರಾಗಿದ್ದಾರೆ. ಈ ಮಹಿಳೆಯ ಪ್ರಿಯಕರನೂ ಸಹ ತನ್ನ ಪತ್ನಿ ಮತ್ತು ಐವರು ಮಕ್ಕಳನ್ನು ಬಿಟ್ಟು(Leave)  ಬಂದಿದ್ದಾನೆ.

ಮಹಿಳೆ ತನ್ನ ಮಕ್ಕಳನ್ನು ಬಾಲ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಪ್ರೇಮಿಯ ಐದು ಮಕ್ಕಳು ಮತ್ತು ಅವರ ಮೊದಲ ಹೆಂಡತಿಯನ್ನು ಅವರ ಅಜ್ಜಿಯರು ಕರೆದುಕೊಂಡು ಹೋಗಿದ್ದಾರೆ. ಪ್ರಿಯಕರನ ತಂದೆ ಮಗನ ಈ ನಡೆಯಿಂದ ಅಸಮಾಧಾನಗೊಂಡಿದ್ದು ಆತನನ್ನು ಕುಟುಂಬದಿಂದ ಹೊರಹಾಕಿದ್ದಾರೆ.

ಮೌಸಮ್ ಖಾನ್ ಕೂಡ ಮದುವೆಯಾಗಿದ್ದಾರೆ 
ಪೊಲೀಸರ ಪ್ರಕಾರ ಪ್ರಕರಣವು ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಹರಿಯಾಣದ ತವಾಡು ನಿವಾಸಿ ಮಹಿಳಾ ನೂರ್‌ಜಹಾನ್ 2007 ರಲ್ಲಿ ಅಲ್ವಾರ್ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಜೋರ್ ವಾಸ್ನಾ ನಿವಾಸಿ ತೈಬ್ ಖಾನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ 15 ವರ್ಷಗಳ ನಂತರ, ಅಲ್ವಾರ್‌ನ ಟೋಲೆಡಾ ಗ್ರಾಮದ ನಿವಾಸಿ ಮೌಸಮ್ ಖಾನ್ ಅವರನ್ನು ಮದುವೆಯಾಗಿದ್ದಾಳೆ.

ಅನಾಥಾಲಕ್ಕೆ ಸೇರಿದ ಮಕ್ಕಳು
ನೂರ್ಜಹಾನ್ ತನ್ನ ಮಕ್ಕಳನ್ನು ಮಕ್ಕಳ ರಕ್ಷಣಾ ಆಯೋಗದ ಸದಸ್ಯರ ಬಳಿ ಬಿಟ್ಟು ತನ್ನ ಪ್ರಿಯಕರನೊಂದಿಗೆ ತನ್ನ ಮನೆಗೆ ಹೋದಾಗ ಮಕ್ಕಳು ಅಳಲು ಪ್ರಾರಂಭಿಸಿದರು. ಆ ಮಕ್ಕಳು ತಮ್ಮ ತಾಯಿಯ ಹಿಂದೆ ಓಡಲು ಪ್ರಾರಂಭಿಸಿದರು. ಆದರೆ ಪೊಲೀಸರು ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ಅದನ್ನು ನೋಡುತ್ತಾ ಅಸಹಾಯಕರಾಗಿ ನಿಂತಿದ್ದರು. ಅದಾದ ನಂತರ ಮಕ್ಕಳನ್ನು ಅನಾಥಾಶ್ರಮಕ್ಕೆ ಕಳುಹಿಸಿದರು.
ಮತ್ತೊಂದೆಡೆ, ಮೌಸಮ್ ಪ್ರೇಮಿಕಾ ಅವರನ್ನು ಮದುವೆಯಾದ ನಂತರ ಅವರ ಪೋಷಕರು ತಮ್ಮ ಮೊಮ್ಮಕ್ಕಳು ಮತ್ತು ಸೊಸೆಯನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದಾರೆ ಅವರು ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಮೌಸಂನನ್ನು ಕುಟುಂಬದಿಂದ ಹೊರಹಾಕಿದ್ದಾರೆ.

ಇದನ್ನೂ ಓದಿ : ಷಹ ಜಹಾನ್‌ನ ಬಳಿ ಇದ್ದ ನವಿಲಿನ ಸಿಂಹಾಸನ ತಾಜ್‌ಮಹಲ್‌ಗಿಂತ ಕಾಸ್ಟ್ಲಿ!

ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಪ್ರೇಯಸಿಯೊಡನೆ ಹೋದ ವ್ಯಕ್ತಿಯ

ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಪ್ರೇಯಸಿಯೊಡನೆ ಹೋದ ವ್ಯಕ್ತಿಯ ಪೋಷಕರಿಗೆ ಇನ್ನೇನು ಮಾಡಲು ಸಾಧ್ಯ ಎಂದು ಮೌಸಮ್ ತಂದೆ ಪೊಲೀಸರಿಗೆ ಹೇಳಿದ್ದಾರೆ. ಆದುದರಿಂದಲೇ ಆತನನ್ನು ಮನೆ ಆಸ್ತಿಯಿಂದ ಹೊರಹಾಕಿ ಕೈಬಿಟ್ಟಿದ್ದೇವೆ ಎಂದು ಅವರ ತಂದೆ ಹೇಳಿದ್ದಾರೆ. ನೂರ್ ಜಹಾನ್ ಮತ್ತು ಮೌಸಮ್ ಖಾನ್ ಗುರುವಾರ ರಾತ್ರಿ ಜೈಪುರ ಹೈಕೋರ್ಟ್‌ನಿಂದ ರಕ್ಷಣೆಯೊಂದಿಗೆ ಅಲ್ವಾರ್‌ಗೆ ಬಂದಿದ್ದಾರೆ ಎಂದು ಅಲ್ವಾರ್‌ನ ಸದರ್ ಪೊಲೀಸ್ ಠಾಣೆಯ ಎಎಸ್‌ಐ ಬ್ರಹ್ಮ ಪ್ರಕಾಶ್ ಹೇಳಿದ್ದಾರೆ.
ನೂರ್ ಜಹಾನ್ 3 ತಿಂಗಳ ಹಿಂದೆ ಜೈಪುರದಲ್ಲಿ ಮೌಸಮ್ ನನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಮದುವೆಯಾಗಿದ್ದಾಗಿ ಹೇಳುತ್ತಾಳೆ. ಈಗ 4 ಮಕ್ಕಳನ್ನು ಮಕ್ಕಳ ರಕ್ಷಣಾ ಸಮಿತಿಗೆ ಒಪ್ಪಿಸಿ ಹೊರಡಲು ಬಯಸಿದ್ದಾಳೆ. ಒಂದು ಮಗು ಹರಿಯಾಣದಲ್ಲಿದೆ. ಅವನು ಅಲ್ಲಿ ಕೆಲಸ ಮಾಡುತ್ತಾನೆ.

ಇದನ್ನೂ ಓದಿ: 700 ಸಕ್ರಿಯ ನಕ್ಸಲರು, ಮಾವೋವಾದಿ ಬೆಂಬಲಿಗರಿಂದ ಶರಣಾಗತಿ

ಸದರ್ ಪೊಲೀಸ್ ಠಾಣೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯು ನೂರ್ಜಹಾನ್‌ಗೆ ಮನವರಿಕೆ ಮಾಡಲು ಪ್ರಯತ್ನಿಸಿತು. ಮೊದಮೊದಲು ತನ್ನದೇ ಸ್ವಂತ ಮಕ್ಕಳನ್ನು ಸ್ವೀಕರಿಸಲು ಸಿದ್ಧವಿರದ ಈಕೆ  ನಂತರ ಮನಸ್ಸು ಬದಲಾಯಿಸಿದಳು. ನೂರ್ ಜಹಾನ್ ತನ್ನ ಮಾಜಿ ಪತಿ ಟ್ರಕ್ ಡ್ರೈವರ್ ಎಂದು ಆತ ಮನೆಗೆಯಲ್ಲಿ ಉಳಿದುಕೊಳ್ಳುವುದಿಲ್ಲ. ಆಗಾಗ ಬಂದು ಹೋಗುತ್ತಾನೆ ಮಕ್ಕಳ ಜವಾಬ್ಧಾರಿಯೂ ಅವನಿಗಿಲ್ಲ ಎಂದು ಹೇಳಿದ್ದಾಳೆ. ಬಂದಾಗಲೂ ಸಹ ಅವನು ಕುಡಿದಿರುತ್ತಾನೆ ಎಂದು ಹೇಳಿದ್ದಾಳೆ.
First published: