ಹೈದರಾಬಾದ್: ಅನಾಥ ವ್ಯಕ್ತಿಯನ್ನು ಕೊಲೆ ಮಾಡಿ ನಂತರ ವಿಮೆ ಹಣಕ್ಕಾಗಿ (Insurance Money) ಪ್ರಕರಣವನ್ನು ಅಪಘಾತ ಎಂದು ಬಿಂಬಿಸಿದ ನಾಲ್ವರು ಹಂತಕರನ್ನು ಪೊಲೀಸರು (Police) ಬಂಧಿಸಿದ್ದಾರೆ. ತೆಲಂಗಾಣದಲ್ಲಿ (Telangana Crime News) ಇಂಥದ್ದೊಂದು ಕ್ರೂರ ಘಟನೆ ನಡೆದಿದ್ದು, ಘಟನೆ ನಡೆದ ಒಂದು ವರ್ಷದ ಬಳಿಕ ಇದು ಅಪಘಾತವಲ್ಲ ಉದ್ದೇಶಪೂರ್ವಕ ಹತ್ಯೆ ಎಂದು ನಾಲ್ವರ ಬಣ್ಣವನ್ನು ಪೊಲೀಸರು ಬಟಾಬಯಲು ಮಾಡಿದ್ದಾರೆ.
ವಿಮೆ ಹಣದ ಲಾಭ ಪಡೆಯಲು ಅನಾಥ ವ್ಯಕ್ತಿಯ ಮರ್ಡರ್
ನಾಲ್ವರು ಆರೋಪಿಗಳು ರಂಗಾರೆಡ್ಡಿ ಜಿಲ್ಲೆಯ ಫಾರೂಕ್ನಗರ ಮಂಡಲದ ಮೊಗಿಲಿಗಿಡ್ಡಾ ಗ್ರಾಮದ ಬಳಿ ಅನಾಥ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ. ನಂತರ ಪೊಲೀಸರಿಂದ ತಪ್ಪಿಸಿಕೊಳ್ಳಲು ಮತ್ತು ವಿಮಾ ಹಣವನ್ನು ಕಬಳಿಸಲು ಪ್ರಕರಣವನ್ನು ಅಪಘಾತ ಎಂದು ಬಿಂಬಿಸಿದ್ದರು. ಪೊಲೀಸರು ಸಹ ಮೊದಲು ಇದನ್ನು ಅಪಘಾತವೆಂದೇ ಕೇಸ್ ಕ್ಲೋಸ್ ಮಾಡಿದ್ದರು. ಆದರೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡ ನಂತರ ಪೊಲೀಸರು ಮತ್ತೆ ಕೇಸ್ ಜಾಡು ಹಿಡಿದು ಹೋದಾಗ ಘಟನೆಯ ಸತ್ಯಾಸತ್ಯತೆ ತಿಳಿದಿದೆ.
ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿರುವ ಶಂಶಾಬಾದ್ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಗದೀಶ್ವರ್ ರೆಡ್ಡಿ, ವಾರಂಗಲ್ನ ಚೆನ್ನಾರೋಪೇಟೆಯ ಬೋಡಾ ತಾಂಡಾದ ಶ್ರೀಕಾಂತ್ ಬೋಡಾ ಐಷಾರಾಮಿ ಜೀವನ ನಡೆಸಲು ಈ ರೀತಿಯ ಅಪರಾಧ ಎಸಗಿದ್ದಾನೆ ಎಂದು ಹೇಳಿದ್ದಾರೆ.
ತನ್ನ ಬಳಿ ಕೆಲಸ ಮಾಡುತ್ತಿದ್ದ ಚಾಲಕನನ್ನೇ ಕೊಂದ ಶ್ರೀಕಾಂತ್
ಹೈದರಾಬಾದ್ ಹೊರವಲಯದ ಮೆಡಿಪಲ್ಲಿ ಮೂಲದ ಅನಾಥ ವ್ಯಕ್ತಿ ಭಿಕ್ಷಾಪತಿ (34), ಶ್ರೀಕಾಂತ್ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಬ್ಯಾಂಕ್ಗೆ ಸೇರಿದ ವಿಮಾ ಕಂಪನಿಯಿಂದ ತನ್ನ ಚಾಲಕನ ಹೆಸರಿನಲ್ಲಿ 50 ಲಕ್ಷ ರೂಪಾಯಿ ವಿಮೆಯನ್ನು ತೆಗೆದುಕೊಳ್ಳುವಾಗ ಶ್ರೀಕಾಂತ್ ಭಿಕ್ಷಾಪತಿಯ ಏಕೈಕ ನಾಮಿನಿ ಎಂದು ನೋಂದಾಯಿಸಿಕೊಂಡಿದ್ದ.
ತದನಂತರ ಶ್ರೀಕಾಂತ್ ಭಿಕ್ಷಾಪತಿ ಅದೇ ಬ್ಯಾಂಕ್ನಿಂದ ಅವರ ಚಾಲಕನ ಹೆಸರಿನಲ್ಲಿ 52 ಲಕ್ಷ ರೂಪಾಯಿ ಸಾಲವನ್ನು ಪಡೆದು ತನ್ನನ್ನು ನಾಮಿನಿಯಾಗಿ ನೋಂದಾಯಿಸಿಕೊಂಡರು. ನಂತರ ಭಿಕ್ಷಾಪತಿ ಹೆಸರಿನಲ್ಲಿ ಒಂದು ಮನೆಯನ್ನು ಸಹ ಖರೀದಿ ಮಾಡಿದ್ದನು. ಹಿಗೆ ಈ ಎಲ್ಲಾ ವಿಮಾ ಪ್ರಯೋಜನಗಳನ್ನು ದಕ್ಕಿಸಿಕೊಳ್ಳಲು ಶ್ರೀಕಾಂತ್ ತನ್ನ ಚಾಲಕ ಭಿಕ್ಷಾಪತಿಯನ್ನೇ ಕೊಲೆಗೈಯ್ಯಲು ಸ್ಕೆಚ್ ಹಾಕಿ ಅವನನ್ನು ಇತರೆ ನಾಲ್ವರ ಸಹಾಯದಿಂದ ಹತ್ಯೆ ಮಾಡಿದ್ದಾನೆ.
ಕೊಲೆಗೆ ಪೊಲೀಸ್ ಪೇದೆ ಸಾಥ್
ಆಶ್ಚರ್ಯ ಏನೆಂದರೆ ಕೊಲೆಯಲ್ಲಿ ಓರ್ವ ಪೊಲೀಸ್ ಪೇದೆ ಕೂಡ ಭಾಗಿಯಾಗಿದ್ದಾರೆ. ಪ್ರಸ್ತುತ ಪೊಲೀಸರು ಪೊಲೀಸ್ ಪೇದೆ ಮೋತಿಲಾಲ್ ಸೇರಿ ಶ್ರೀಕಾಂತ್ ಜೊತೆ ಕೆಲಸ ಮಾಡುತ್ತಿದ್ದ ಸತೀಶ್ ಮತ್ತು ಸಮ್ಮಣ್ಣರನ್ನು ಬಂಧಿಸಿದ್ದಾರೆ.
ಕೊಲೆ ಮಾಡಿ, ಕಾರು ಹತ್ತಿಸಿದ ಹಂತಕರು
ಪೊಲೀಸ್ ಪೇದೆ ಮೋತಿಲಾಲ್ ಮಾಡಿದ ಯೋಜನೆಯಂತೆ ಡಿಸೆಂಬರ್ 22, 2021 ರಂದು, ನಾಲ್ವರು ಭಿಕ್ಷಾಪತಿಯನ್ನು ಕಾರಿನಲ್ಲಿ ಕರೆದೊಯ್ದು ಕಂಠಪೂರ್ತಿ ಕುಡಿಸಿದ್ದಾರೆ. ಕಾರು ಮೊಗಿಲಗಿಡ ಗ್ರಾಮದ ಹೊರವಲಯಕ್ಕೆ ಬಂದ ನಂತರ ಭಿಕ್ಷಾಪತಿಯನ್ನು ಹಾಕಿ ಸ್ಟಿಕ್ಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಅಪಘಾತ ಎಂದು ಬಿಂಬಿಸುವ ಯತ್ನದಲ್ಲಿ, ಅವರು ಮೃತ ದೇಹವನ್ನು ರಸ್ತೆಯ ಮೇಲೆ ಇರಿಸಿ ಮತ್ತು ದೇಹದ ಮೇಲೆ ಎರಡು ಬಾರಿ ಕಾರನ್ನು ಹತ್ತಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Flight delay: ರಾಷ್ಟ್ರ ರಾಜಧಾನಿಯಲ್ಲಿ ದಟ್ಟವಾದ ಮಂಜು: ದೆಹಲಿಯ ವಿಮಾನ, ರೈಲು ಸಂಚಾರ ವಿಳಂಬ
ಮರುದಿನ ಸ್ಥಳಕ್ಕಾಗಮಿಸಿದ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಅದನ್ನು ಕೊಲೆ ಎಂದು ಘೋಷಿಸಿದರು. ಮತ್ತೊಂದೆಡೆ, ಆರೋಪಿಗಳು ವಿಮಾ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಗಳನ್ನು ಪ್ರಾರಂಭಿಸಿದರು.
ಇದನ್ನೂ ಓದಿ: Baby Elephant Viral Video: ಪಾಪ, ಈ ಪುಟ್ಟ ಆನೆಮರಿಯ ಸೊಂಡಿಲೇ ತುಂಡಾಗಿದೆ! ವಿಡಿಯೋ ವೈರಲ್
ಈ ನಡುವೆ ವಿಮಾ ಕಂಪನಿಯ ಪ್ರತಿನಿಧಿಗಳು ರಸ್ತೆ ಅಪಘಾತದ ವಿವರ ಪಡೆಯಲು ಮುಂದಾದಾಗ ಪೊಲೀಸರಿಗೆ ಪ್ರಕರಣದ ಸುಳಿವು ಸಿಕ್ಕಿದೆ. ಮೃತರ ಜೊತೆ ಯಾವುದೇ ಸಂಬಂಧ ಹೊಂದಿರದ ವ್ಯಕ್ತಿಯೊಬ್ಬರು ವಿಮೆ ಸೌಲಭ್ಯ ಪಡೆಯಲು ಯತ್ನಿಸುತ್ತಿದ್ದಾಗ ಪೊಲೀಸರಿಗೆ ಅನುಮಾನ ಬಂದಿತ್ತು. ಈ ಸಂಬಂಧ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಂತಕರು ಸತ್ಯ ಬಾಯ್ಬಿಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ