ಮತ್ತೆ ಮುನ್ನಲೆಗೆ ಬಂದ ಪ್ರತ್ಯೇಕ ಧರ್ಮದ ಹೋರಾಟ: ಮೋದಿಯನ್ನು ಹೊಗಳಿ ಆಶ್ಚರ್ಯ ಮೂಡಿಸಿದ ಮಾತೆ ಮಹಾದೇವಿ


Updated:August 15, 2018, 10:35 PM IST
ಮತ್ತೆ ಮುನ್ನಲೆಗೆ ಬಂದ ಪ್ರತ್ಯೇಕ ಧರ್ಮದ ಹೋರಾಟ: ಮೋದಿಯನ್ನು ಹೊಗಳಿ ಆಶ್ಚರ್ಯ ಮೂಡಿಸಿದ ಮಾತೆ ಮಹಾದೇವಿ
ಸಾಂದರ್ಭೀಕ ಚಿತ್ರ

Updated: August 15, 2018, 10:35 PM IST
ರಾಚಪ್ಪ ಬನ್ನಿದಿನ್ನಿ, ನ್ಯೂಸ್​-18 ಕನ್ನಡ

ಬಾಗಲಕೋಟೆ(ಆಗಸ್ಟ್​.15): ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ಬರುವ ಅಕ್ಟೋಬರ್ ತಿಂಗಳಲ್ಲಿ ದೆಹಲಿಯಲ್ಲಿ ಮೂರು ದಿನ ರ್ಯಾಲಿ ನಡೆಸಲು ನಿಧ೯ರಿಸಲಾಗಿದೆ ಎಂದು ಬಸವ ಧರ್ಮದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕೂಡಲಸಂಗಮದಲ್ಲಿ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಅಕ್ಟೋಬರ್ 6, 7ರಂದು ದೆಹಲಿಯಲ್ಲಿ ಸಭೆಯಲ್ಲಿ ನಡೆಸಲಾಗುತ್ತೆ, ಬಳಿಕ ಅಕ್ಟೋಬರ್ 8ರಂದು ದೆಹಲಿಯಲ್ಲಿ ಬೃಹತ್ ರ್ಯಾಲಿ ನಡೆಸೋದಾಗಿ ಹೇಳಿದ್ರು.

ಈ ಸಂಬಂಧ ಈಗಾಗಲೇ ಸಿದ್ಧತೆ ಕೂಡಾ ನಡೆದಿದೆ. ಇನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸ್ಸು ಮಾಡಿದೆ. ಆದರೆ ಕೇಂದ್ರ ಸರಕಾರ ಈ ಬಗ್ಗೆ ಕಾರ್ಯಪ್ರವೃತ್ತವಾಗಿಲ್ಲ, ಹೀಗಾಗಿ ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸ್ಸಿಗೆ ಮಾನ್ಯತೆ ನೀಡಬೇಕು.

ಇನ್ನು ಕೇಂದ್ರ ದಿಂದ ಶಿಫಾರಸು ಪರಾಮರ್ಶಿಸಲು ರಾಜ್ಯ ಸರಕಾರಕ್ಕೆ ಕಳುಸಿದೆ ಅನ್ನೋದು ಸುಳ್ಳು. ಕೆಲವು ಮಾಧ್ಯಮಗಳು ಈ ರೀತಿ ತಪ್ಪು ಸುದ್ದಿ ಬಿತ್ತರಿಸಿವೆ. ಕೇಂದ್ರ ಸರಕಾರ ಶಿಫಾರಸು ತಿರಸ್ಕರಿಸಿದ ಬಳಿಕ ಸುಪ್ರೀಂಕೋರ್ಟ್ ಮೊರೆ ಹೋಗಬಹುದು.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ದೆಹಲಿಯಲ್ಲಿ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ. ಇನ್ನು ಪ್ರಧಾನಮಂತ್ರಿ ಮೋದಿಯವರು ವಿಚಾರವಂತರು, ಪ್ರಗತಿಪರರು, ಆರ್. ಎಸ್.ಎಸ್ ನಲ್ಲಿ ಬೆಳೆದ್ರೂ ವಿಚಾರಶೀಲರಿದ್ದಾರೆ.

ಈ ಮಧ್ಯೆ ಮೋದಿಯವರು ಬಸವಣ್ಣವರ ವಚನ ಉಲ್ಲೇಖ ಮಾಡ್ತಿದ್ದಾರೆ, ಹೀಗಾಗಿ
ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವ ವಿಶ್ವಾಸವಿದೆ ಎಂದ್ರು. ಇನ್ನು ಲೋಕಸಭಾ ಚುನಾವಣೆಯಲ್ಲಿ ಪಕ್ಷ ಬೆಂಬಲಿಸೋ ವಿಚಾರದಲ್ಲಿ ಸದ್ಯ ನಾವು ತಟಸ್ಥ ಧೋರಣೆ ಅನುಸರಿಸುತ್ತೇವೆ. ಅದಕ್ಕೆ ಇನ್ನು ಸಮಯಾವಕಾಶವಿದೆ ನೋಡೋಣ ಎಂದರು.‌

ಇನ್ನು ಬಸವಣ್ಣನವರ ಸಾವಿನ ಬಗ್ಗೆ ಕೆ ಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಬಸವಣ್ಣನವರ ಬಗ್ಗೆ ಭಗವಾನ್ ಹುಚ್ಚರ ರೀತಿ ಮಾತನಾಡಬಾರದು,  ಅವರನ್ನು ಚಾಕು ಹಾಕಿ ಕೊಲೆ ಮಾಡಿದ್ದಾರೆ ಎಂದು ಹೇಳೋದು ತಪ್ಪು, ಬಸವಣ್ಣನವರು ವಣಾ೯ಂತರ ವಿವಾಹ ಮಾಡಿದ್ರು, ಅದಕ್ಕಾಗಿ ಅವರನ್ನು ಗಡಿಪಾರು ಮಾಡಲಾಗಿತ್ತು.

ಕೂಡಲಸಂಗಮಕ್ಕೆ ಬಂದು ಬಸವಣ್ಣವರು ಯೋಗಾನುಷ್ಟಾನ ಮಾಡಿದ್ರು, ಬಳಿಕ ಬಸವಣ್ಣನವರು ಇಚ್ಚಾಮರಣ ಹೊಂದಿದ್ದಾರೆ, ಇದು ಗೊತ್ತಿಲ್ಲದೆ ಸಾಹಿತಿಗಳು ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡಬಾರದೆಂದು ಸಾಹಿತಿಗಳ ವಿರುದ್ಧ ಮಾತೆ ಮಹಾದೇವಿ ಹರಿಹಾಯ್ದರು.
First published:August 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ