ಇವಿಎಂ ವಿವಾದಕ್ಕೆ ಮುಕ್ತಿ: ಚುನಾವಣೆ ಆಯೋಗ ಜತೆಗೆ ಬ್ಯಾಲೆಟ್​ ಪೇಪರ್ ಕುರಿತು ವಿಪಕ್ಷಗಳ ಚರ್ಚೆ


Updated:August 27, 2018, 12:06 PM IST
ಇವಿಎಂ ವಿವಾದಕ್ಕೆ ಮುಕ್ತಿ: ಚುನಾವಣೆ ಆಯೋಗ ಜತೆಗೆ ಬ್ಯಾಲೆಟ್​ ಪೇಪರ್ ಕುರಿತು ವಿಪಕ್ಷಗಳ ಚರ್ಚೆ

Updated: August 27, 2018, 12:06 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​​.27): ಇವಿಎಂ ಸಮಸ್ಯೆಗೆ ಮುಕ್ತಿ ಕಾಣಿಸಲು ಕೊನೆಗೂ ಕೇಂದ್ರ ವಿರೋಧ ಪಕ್ಷಗಳು ಮುಂದಾಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್​ ಪೇಪರ್​ ಬಳಸುವಂತೆ ಕೇಂದ್ರ ಚುನಾವಣ ಆಯೋಗಕ್ಕೆ ಆಗ್ರಹಿಸಲು ತೀರ್ಮಾನಿಸಿವೆ. ನಿಸ್ಪಕ್ಷಪಾತ ಚುನಾವಣೆಗಾಗಿ ಬ್ಯಾಲೆಟ್​ ಪೇಪರ್​ ಬಳಸುವಂತೆ ಇಂದಿನ ಸಭೆಯಲ್ಲಿ ಆಗ್ರಹಿಸಲಿದ್ದೇವೆ ಎಂದು ಕೇಂದ್ರ ವಿಪಕ್ಷದ ನಾಯಕರೊಬ್ಬರು ತಿಳಿಸಿದ್ಧಾರೆ.

ಕೇಂದ್ರ ಚುನಾವಣೆಯ ಆಯೋಗದಿಂದ ನಿಖರತೆ, ಪಾರದರ್ಶಕತೆ ಮತ್ತು ನಿಸ್ಪಕ್ಷಪಾತ ಚುನಾವಣೆ ನಡೆಸಲು ಕಾಂಗ್ರೆಸ್​, ಬಿಜೆಪಿ ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಪ್ರಾದೇಶಿಕ ಪಕ್ಷಗಳ ಸಭೆಯನ್ನು ಸೋಮವಾರ(ಇಂದು) ಕರೆಯಲಾಗಿದೆ. ಸಭೆಯಲ್ಲಿ ಮತ್ತೆ ಬ್ಯಾಲೆಟ್​ ಪೇಪರ್​ ಬಳಕೆ ವ್ಯವಸ್ಥೆಗೆ ವಿಪಕ್ಷಗಳು ಆಗ್ರಹಿಸಲಿವೆ ಎನ್ನಲಾಗಿದೆ.

ಚುನಾವಣೆ ಅಧಿಕಾರಿಗಳು ಏಳು ರಾಷ್ಟ್ರೀಯ ಪಕ್ಷಗಳು ಮತ್ತು ರಾಜ್ಯ ಪ್ರತಿನಿಧಿಸುವ 51 ಪ್ರಾದೇಶಿಕ ಪಕ್ಷಗಳೊಂದಿಗೆ ಸಭೆ ನಡೆಸಲಿದ್ಧಾರೆ. ಈ ಸಂದರ್ಭದಲ್ಲಿಯೇ ಮುಂದಿನ ಲೋಕಸಭಾ ಚುನಾವಣೆಯ ಸಂಬಂಧಿತ ಹಲವು ವಿಚಾರಗಳನ್ನು ಚರ್ಚಿಸಲಿದ್ಧಾರೆ. ಚುನಾವಣೆಯ ದಿನಾಂಕ ಸೇರಿದಂತೆ ಎಲ್ಲರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಲಿದ್ಧಾರೆ ಎನ್ನುತ್ತಿವೆ ಮೂಲಗಳು.

ಇತ್ತೀಚೆಗೆ ಎನ್​ಡಿಎ ಸಖ್ಯ ತೊರೆದಿರುವ ಶಿವಸೇನಾ, ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​, ಬಹಜನ ಸಮಾಜ ಪಕ್ಷ, ಕಾಂಗ್ರೆಸ್​, ಜೆಡಿಎಸ್​, ತೆಲುಗು ದೇಶಂ ಪಾರ್ಟಿ, ನ್ಯಾಷನಲ್​ ಕಾಂಗ್ರೆಸ್​ ಪಾರ್ಟಿ(ಎನ್​ಸಿಪಿ), ಎಸ್​ಪಿ, ಸಿಪಿಎಂ, ಆರ್​ಜೆಡಿ, ಡಿಎಂಕೆ, ವೈಎಸ್​ಆರ್ ಕಾಂಗ್ರೆಸ್​​ ಸೇರಿದಂತೆ ಸುಮಾರು 17 ಪಕ್ಷಗಳು ಇವಿಎಂ ವ್ಯವಸ್ಥೆಯನ್ನು ವಿರೋಧಿಸುತ್ತಿವೆ.

ಸಭೆಯಲ್ಲಿ ಪ್ರಮುಖವಾಗಿ ಪಾರದರ್ಶಕತೆ, ನಿಖರತೆ, ಎಲ್ಲರನ್ನು ಒಳಗೊಂಡು ಹೇಗೆ ಚುನಾವಣೆ ನಡೆಸಬೇಕು ಎಂದು ಚರ್ಚಿಸಲಿದ್ಧಾರೆ. ಚುನಾವಣೆ ಖರ್ಚು ವೆಚ್ಚಗಳು, ಭದ್ರತೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಲಿದ್ಧಾರೆ. ಈ ವೇಳೆ ಎಲ್ಲಾ ಪಕ್ಷಗಳ ಅಭಿಪ್ರಾಯದೊಂದಿಗೆ ಮುಂದಿನ ನಿರ್ಣಯ ಅಧಿಕಾರಿಗಳು ಕೈಗೊಳ್ಳಲಿದ್ಧಾರೆ.

ಈ ಮೊದಲು ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಇವಿಎಂ ವಿವಾದದ ಬಗ್ಗೆ ಚರ್ಚಿಸಲಾಗಿತ್ತು. ಬಳಿಕ ಕಾಂಗ್ರೆಸ್​ ಹಿರಿಯ ನಾಯಕ ಗುಲಾಂ ನಬಿ ಆಜಾದ್​ ಅವರ ದೆಹಲಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಇವಿಎಂ ತಿರುಚುವುದರ ಬಗ್ಗೆ ಎಲ್ಲಾ ಪಕ್ಷಗಳ ಗಮನಕ್ಕೆ ತರಲು ಚಿಂತಿಸಿದ್ದರು.   ​
Loading...

ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​, ಸಮಾಜವಾದಿ ಪಕ್ಷ, ಬಿಎಸ್​ಪಿ, ಎನ್​ಸಿಪಿ, ಆರ್​ಜೆಡಿ, ಆಪ್​, ವೈಎಸ್​ಆರ್​, ಡಿಎಂಕೆ, ಜೆಡಿಎಸ್​​, ಟಿಡಿಪಿ ಹಾಗೂ ಸಿಪಿಐ, ಸಿಪಿಎಂ ಎಡ ಪಕ್ಷಗಳು ಇವಿಎಂ ಮತಯಂತ್ರ ವ್ಯವಸ್ಥೆಯನ್ನು ಬದಲಿಸುವಂತೆ ಸುಪ್ರೀಂಕೋರ್ಟ್​ ಮೊರೆಯೂ ಹೋಗಿದ್ದರು. ಸದ್ಯ ಎಲ್ಲಾ ಪ್ರಯತ್ನಗಳ ನಂತರ ಸಭೆಯಲ್ಲಿ ಮುಕ್ತಿ ಕಾಣಿಸಲು ಮುಂದಾಗಿದ್ಧಾರೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...