ಸುಪ್ರೀಂ ಆದೇಶಕ್ಕೆ ಬೆನ್ನು ತೋರಿಸಿದ ಆಯೋಗ; ಮತ ಎಣಿಕೆಗೆ ಮುಂಚೆಯೇ ವಿವಿಪ್ಯಾಟ್ ತಾಳೆಗೆ ವಿರೋಧ ಪಕ್ಷಗಳ ಪಟ್ಟು

ಮತಯಂತ್ರಗಳು ಹಾಗೂ ವಿವಿಪ್ಯಾಟ್​ನಲ್ಲಿ ದಾಖಲಾದ ಎಲ್ಲಾ ಮತಗಳನ್ನು ತಾಳೆ ನೊಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಕಳೆದ ಹಲವು ದಿನಗಳಿಂದ ಸುಪ್ರೀಂ ಕೋರ್ಟ್​ಗೆ ಎಡತಾಕುತ್ತಿವೆ. ಅಲ್ಲದೆ ಈ ಕುರಿತು ನ್ಯಾಯಾಲಯದಲ್ಲಿ ಹತ್ತಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಹ ದಾಖಲಾಗಿದ್ದವು.

MAshok Kumar | news18
Updated:May 22, 2019, 9:19 AM IST
ಸುಪ್ರೀಂ ಆದೇಶಕ್ಕೆ ಬೆನ್ನು ತೋರಿಸಿದ ಆಯೋಗ; ಮತ ಎಣಿಕೆಗೆ ಮುಂಚೆಯೇ ವಿವಿಪ್ಯಾಟ್ ತಾಳೆಗೆ ವಿರೋಧ ಪಕ್ಷಗಳ ಪಟ್ಟು
ಪತ್ರಿಕಾಗೋಷ್ಠಿಯಲ್ಲಿ ಗುಲಾಂ ನಭಿ ಆಜಾದ್.
  • News18
  • Last Updated: May 22, 2019, 9:19 AM IST
  • Share this:
ನವ ದೆಹಲಿ (ಮೇ.22); ಚುನಾವಣೆ ಮತ ಎಣಿಕೆಗೆ ಮುಂಚಿತವಾಗಿಯೇ ಆಯ್ದ 5 ವಿವಿಪ್ಯಾಟ್ ಯಂತ್ರಗಳ ಮತಗಳನ್ನು ತಾಳೆ ಹಾಕಬೇಕು. ಮತಗಳು ತಾಳೆಯಾದ ನಂತರವೇ ಉಳಿದ ಎಲ್ಲಾ ಯಂತ್ರಗಳ ಮತ ಎಣಿಕೆ ನಡೆಸಬೇಕು ಎಂದು ಒತ್ತಾಯಿಸಿ 22 ವಿರೋಧ ಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿವೆ.

ಅಲ್ಲದೆ ವಿವಿಪ್ಯಾಟ್ ಪರಿಶೀಲನೆ ಸಮಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ, ಆ ಮತಗಟ್ಟೆಯ ಎಲ್ಲಾ ಮತಯಂತ್ರಗಳ ಜೊತೆಗೂ ಶೇ.100 ರಷ್ಟು ವಿವಿಪ್ಯಾಟ್​ ಮತಗಳನ್ನು ಖಡ್ಡಾಯವಾಗಿ ತಾಳೆ ಹಾಕಬೇಕು. ಆ ನಂತರವೇ ಫಲಿತಾಂಶ ಘೋಷಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

ಈ ಕುರಿತು ಮನವಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಂತರ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಗುಲಾಮ್​ ನಭಿ ಆಜಾದ್, “ಮತ ಎಣಿಕೆಗೆ ಮುಂಚಿತವಾಗಿ 5 ವಿವಿಪ್ಯಾಟ್​ ನಲ್ಲಿ ದಾಖಲಾಗಿರುವ ಮತಗಳನ್ನು ಮೊದಲು ತಾಳೆ ಹಾಕಬೇಕು ಎಂದು ಸುಪ್ರೀಂ ಆದೇಶ ನೀಡಿದೆ. ಆದರೆ, ಚುನಾವಣಾ ಆಯೋಗ ಅದಕ್ಕೆ ನಿರಾಕರಿಸಿದೆ. ಆದರೆ, ಸುಪ್ರೀಂ ಆದೇಶ ಪಾಲಿಸಲೇಬೇಕು ಎಂದು ವಿರೋಧ ಪಕ್ಷಗಳ ಸಭೆ ಆಯೋಗಕ್ಕೆ ಮನವಿ ಮಾಡಿದೆ. ಈ ಕುರಿತು ಬುಧವಾರ ಚರ್ಚಿಸಿ ತೀರ್ಮಾನ ಘೋಷಿಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಇವಿಎಂ ದುರ್ಬಳಕೆ ಸಂಶಯ: ಶೇ 50 ವಿವಿಪ್ಯಾಟ್​ ಎಣಿಕೆಗೆ ವಿಪಕ್ಷಗಳ ಒತ್ತಾಯ

ಸುಪ್ರೀಂ ತೀರ್ಪಿಗೂ ಬೆಲೆ ಕೊಡದ ಆಯೋಗ; ಮತಯಂತ್ರಗಳು ಹಾಗೂ ವಿವಿಪ್ಯಾಟ್​ನಲ್ಲಿ ದಾಖಲಾದ ಎಲ್ಲಾ ಮತಗಳನ್ನು ತಾಳೆ ನೊಡಬೇಕು ಎಂದು ಒತ್ತಾಯಿಸಿ ವಿರೋಧ ಪಕ್ಷಗಳು ಕಳೆದ ಹಲವು ದಿನಗಳಿಂದ ಸುಪ್ರೀಂ ಕೋರ್ಟ್​ಗೆ ಎಡತಾಕುತ್ತಿವೆ. ಅಲ್ಲದೆ ಈ ಕುರಿತು ನ್ಯಾಯಾಲಯದಲ್ಲಿ ಹತ್ತಾರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಹ ದಾಖಲಾಗಿದ್ದವು.

ಈ ಕುರಿತ ಅರ್ಜಿಗಳ ಸತತ ವಿಚಾರಣೆಯಿಂದ ಕೆಂಡಾಮಂಡಲವಾಗಿದ್ದ ಸುಪ್ರೀಂ ಶೇ.100 ರಷ್ಟು ವಿವಿಪ್ಯಾಟ್ ಯಂತ್ರಗಳನ್ನು ತಾಳೆ ನೋಡುವ ವಿರೋಧ ಪಕ್ಷಗಳ ಕೋರಿಕೆಯನ್ನು ತಳ್ಳಿಹಾಕಿತ್ತು. ಅಲ್ಲದೆ "ಎಲ್ಲಾ ಮತಗಟ್ಟೆಗಳ ಮತ ಎಣಿಕೆ ಆರಂಭವಾಗುವ ಮುನ್ನ ಯಾದೃಚ್ಛಿಕವಾಗಿ 5 ವಿವಿಪ್ಯಾಟ್​ಗಳಲ್ಲಿ ದಾಖಲಾಗಿರುವ​ ಮತಗಳನ್ನು ತಾಳೆ ನೋಡಿದ ನಂತರವೇ ಮತ ಎಣಿಕೆ ಆರಂಭವಾಗಬೇಕು" ಎಂದು ಆದೇಶಿಸಿತ್ತು.

ಇದನ್ನೂ ಓದಿ : ಉತ್ತರಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾದ ಇವಿಎಂ ಯಂತ್ರಗಳ ರವಾನೆ ವದಂತಿ ; ಸಮಸ್ಯೆ ನಿವಾರಿಸಿದ ಆಯೋಗಆದರೆ, ಸುಪ್ರೀಂ ಆದೇಶಕ್ಕೆ ಬೆನ್ನು ತೋರಿಸಿರುವ ಚುನಾವಣಾ ಆಯೋಗ ಮೊದಲು ಎಲ್ಲಾ ಮತಯಂತ್ರಗಳ ಎಣಿಕೆ ಮುಗಿದ ನಂತರವೇ 5 ವಿವಿಪ್ಯಾಟ್​ ಮತಗಳನ್ನು ತಾಳೆ ಹಾಕಲಾಗುವುದು ಎಂದು ತಿಳಿಸಿತ್ತು. ಇದು ಸಾಮಾನ್ಯವಾಗಿ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಎಲ್ಲಾ 22 ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ಮೊದಲು ವಿವಿಪ್ಯಾಟ್ ತಾಳೆ ಹಾಕಲು ಮನವಿ ಮಾಡಿವೆ. ಈ ಕುರಿತು ಆಯೋಗ ಬುಧವಾರ ಸಭೆಯಲ್ಲಿ ಚರ್ಚೆ ನಡೆಸಲಿದ್ದು ಸಂಜೆ ವೇಳೆಗೆ ತೀರ್ಮಾನ ಹೊರಹಾಕಲಿದೆ ಎಂದು ತಿಳಿದುಬಂದಿದೆ.

First published: May 22, 2019, 9:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading