ಬಾಲಾಕೋಟ್​​ ದಾಳಿಗೆ ಸಾಕ್ಷಿ ಕೇಳಿದ್ದು ಪಾಕ್​ಗೆ ಬಲ ನೀಡಿದಂತೆ; ನೆಟ್​ವರ್ಕ್​18 ಸಂದರ್ಶನದಲ್ಲಿ ಅಸಮಾಧಾನ ಹೊರಹಾಕಿದ ಮೋದಿ

ಭಾರತೀಯ ವಾಯುಸೇನೆ ನಡೆಸಿದ ಏರ್​ಸ್ಟ್ರೈಕ್​ ಬಗ್ಗೆ ವಿಪಕ್ಷಗಳು ತೀವ್ರ ಅನುಮಾನ ವ್ಯಕ್ತಪಡಿಸಿದ್ದವು. ಈ ದಾಳಿಗೆ ಸಾಕ್ಷಿ ಕೇಳುವ ಕೆಲಸವನ್ನು ಕೆಲವರು ಮಾಡಿದ್ದರು. ಈ ಬಗ್ಗೆ ಮೋದಿ ಅಸಮಾಧಾನ ಹೊರಹಾಕಿದ್ದಾರೆ.

Rajesh Duggumane | news18
Updated:April 9, 2019, 1:32 PM IST
ಬಾಲಾಕೋಟ್​​ ದಾಳಿಗೆ ಸಾಕ್ಷಿ ಕೇಳಿದ್ದು ಪಾಕ್​ಗೆ ಬಲ ನೀಡಿದಂತೆ; ನೆಟ್​ವರ್ಕ್​18 ಸಂದರ್ಶನದಲ್ಲಿ ಅಸಮಾಧಾನ ಹೊರಹಾಕಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಮತ್ತು ನೆಟ್​ವರ್ಕ್​18 ಮುಖ್ಯ ಸಂಪಾದಕ ರಾಹುಲ್​ ಜೋಶಿ
  • News18
  • Last Updated: April 9, 2019, 1:32 PM IST
  • Share this:
ನವದೆಹಲಿ (ಏ.9): ಜಮ್ಮು-ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಜೈಷ್​-ಇ-ಮೊಹ್ಮದ್​ ಸಂಘಟನೆಯ ಉಗ್ರ ನಡೆಸಿದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ 40 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿತ್ತು. ದಾಳಿ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆಟ್​ವರ್ಕ್​18 ಮುಖ್ಯ ಸಂಪಾದಕ ರಾಹುಲ್ ಜೋಶಿ ಅವರ ಜತೆಗಿನ ವಿಶೇಷ ಸಂದರ್ಶನದಲ್ಲಿ ನೆನಪಿಸಿಕೊಂಡರು.

ದಾಳಿ ನಡೆದ ತಕ್ಷಣ ಪಾಕಿಸ್ತಾನಕ್ಕೆ ನಾವು ಎಚ್ಚರಿಕೆ ನೀಡಿದ್ದೆವು ಎಂದರು ಮೋದಿ. “ಪುಲ್ವಾಮಾ ದಾಳಿ ನಡೆದ ದಿನವೇ ನಾನು ಪಾಕಿಸ್ತಾನ ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದ್ದೆ. ನಾವು ಪ್ರತೀಕಾರ ತೆಗೆದುಕೊಳ್ಳಲು ಶಾರ್ಟ್​ಕಟ್​ ಬಳಸುವುದಿಲ್ಲ, ಕಳೆದ ಬಾರಿಯಂತೆ ಸರ್ಜಿಕಲ್​ ಸ್ಟ್ರೈಕ್​ ನಡೆಸುವುದಿಲ್ಲ ಎಂದು ಹೇಳಿದ್ದೆವು. ಹಾಗಾಗಿ ನಾವು ಏರ್​ಸ್ಟ್ರೈಕ್​ ನಡೆಸಿದೆವು,” ಎಂದರು ಅವರು.

ಭಾರತೀಯ ವಾಯುಸೇನೆ ನಡೆಸಿದ ಏರ್​ಸ್ಟ್ರೈಕ್​ ಬಗ್ಗೆ ವಿಪಕ್ಷಗಳು ತೀವ್ರ ಅನುಮಾನ ವ್ಯಕ್ತಪಡಿಸಿದ್ದವು. ಈ ದಾಳಿಗೆ ಸಾಕ್ಷಿ ಕೇಳುವ ಕೆಲಸವನ್ನು ಕೆಲವರು ಮಾಡಿದ್ದರು. ಈ ಬಗ್ಗೆ ಮೋದಿ ಅಸಮಾಧಾನ ಹೊರಹಾಕಿದ್ದು, ಈ ರೀತಿ ಮಾಡುವುದರಿಂದ ವೈರಿ ರಾಷ್ಟ್ರಕ್ಕೆ ಬಲ ಸಿಕ್ಕಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.‘

ಇದನ್ನೂ ಓದಿ: ಕಳೆದ ಬಾರಿಗಿಂತ ಈ ಸಲ ಎನ್​​ಡಿಎ ಹೆಚ್ಚಿನ ಸೀಟು ಗೆಲ್ಲಲಿದೆ; ನ್ಯೂಸ್​-18 ಎಕ್ಸ್​​ಕ್ಲೂಸಿವ್​​ ಸಂದರ್ಶನದಲ್ಲಿ ಪ್ರಧಾನಿ ಮೋದಿ!

“ಕಾಂಗ್ರೆಸ್​ ಮರ್ಯಾದೆಯನ್ನು ಪೂರ್ತಿಯಾಗಿ ಕಳೆದುಕೊಂಡಿದೆ. ಬಾಲಾಕೋಟ್​ ಮೇಲೆ ನಡೆದ ದಾಳಿಯ ಕುರಿತು ವಿಪಕ್ಷಗಳು ಆಡಿದ ಮಾತಿನಿಂದ ನಮ್ಮ ವೈರಿಗೆ ಬಲ ಸಿಕ್ಕಂತಾಗಿದೆ. ಸಾಕ್ಷಿ ಕೇಳುವ ಮೂಲಕ ವಿಪಕ್ಷಗಳು ಪಾಕಿಸ್ತಾನದ ವೈಖರಿಯನ್ನು ಬೆಂಬಲಿಸಿದೆ. ನಾವು ಹೇಳುವುದರ ಒಳಗಾಗಿಯೇ ಪಾಕಿಸ್ತಾನ ಟ್ವೀಟ್​ ಮಾಡುವ ಮೂಲಕ ಏರ್​ಸ್ಟ್ರೈಕ್​ ಆಗಿದ್ದನ್ನು ಒಪ್ಪಿಕೊಂಡಿತ್ತು,” ಎಂದು ಮೋದಿ ಹೇಳಿದರು.

ಜಮ್ಮು-ಕಾಶ್ಮೀರದ ಪುಲ್ವಾಮಾ ಪ್ರದೇಶದಲ್ಲಿ ಭಾರತೀಯ ಸೈನಿಕರು ಸಾಗುತ್ತಿದ್ದ ಬಸ್​ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ದಾಳಿ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನ ಬಾಲಾ​ಕೋಟ್​ ಪ್ರದೇಶದಲ್ಲಿರುವ ಉಗ್ರರ ನೆಲೆ ಮೇಲೆ ದಾಳಿ ನಡೆಸಿತ್ತು.

ಇದನ್ನೂ ಓದಿ: ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದು ಚೀನಾ ಮಾತ್ರ; ನೆಟ್​ವರ್ಕ್​18 ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತು
First published:April 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading