ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಬಿಡುಗಡೆಗೊಳಿಸುವಂತೆ ಪ್ರತಿಪಕ್ಷಗಳ ಆಗ್ರಹ

ಎನ್​ಸಿಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಜನತಾ ದಳ ಸೆಕ್ಯೂಲರ್, ಸಿಪಿಎಂ. ಸಿಪಿಐ, ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮತ್ತು ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರ ಸಹಿಯನ್ನು ಹೊಂದಿರುವ ಈ ನಿರ್ಣಯಕ್ಕೆ ಕಾಂಗ್ರೆಸ್ ಸಹಿ ಹಾಕಿಲ್ಲ ಎಂದು ಮೂಲಗಳು ಹೇಳಿವೆ.

ಓಮರ್ ಅಬ್ದುಲ್ಲಾ

ಓಮರ್ ಅಬ್ದುಲ್ಲಾ

 • Share this:
  ನವದೆಹಲಿ: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ದಿನದಿಂದ ಗೃಹಬಂಧನದಲ್ಲಿ ಇರಿಸಿರುವ ಕಾಶ್ಮೀರದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಬಿಡುಗಡೆಗೊಳಿಸುವಂತೆ ಎಂಟು ಪ್ರತಿಪಕ್ಷಗಳನ್ನು ಒಳಗೊಂಡ ಒಕ್ಕೂಟವು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದೆ.

  ನರೇಂದ್ರ ಮೋದಿ ಆಡಳಿತ ಸಂವಿಧಾನ ವಿರೋಧವಾಗಿದೆ. ಜನರ ಸ್ವಾತಂತ್ರ ಮತ್ತು ಸಮಾನತೆ ಎಲ್ಲವೂ  ಅಳಿವಿನಂಚಿನಲ್ಲಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

  ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ಕಳೆದ ಆಗಸ್ಟ್​ನಲ್ಲಿ ಕೇಂದ್ರ ಸರ್ಕಾರ ಕೊನೆಗೊಳಿಸಿ, ರಾಜ್ಯ ಎರಡು ಕೇಂದ್ರಾಡಳಿತ ಪ್ರದೇಶವೆಂದು ವಿಭಜನೆ ಮಾಡಿತ್ತು. ಆ ದಿನದಿಂದಲೇ ಕಾಶ್ಮೀರದ ಮಾಜಿ ಮುಖ್ಯಮಂತ್ರಿಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ,  ಸೇರಿದಂತೆ ಕೆಲ ರಾಜಕೀಯ ಮುಖಂಡರನ್ನು ಬಂಧನದಲ್ಲಿ ಇರಿಸಲಾಗಿತ್ತು. ಓಮರ್ ಅಬ್ದುಲ್ಲಾ ಮತ್ತು ಮೆಹಬೂಬ್ ಮುಫ್ತಿ ಅವರನ್ನು ಕಠಿಣ ಸಾರ್ವಜನಿಕ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ.

  ಈ ಹಿಂದೆ ಇದೇ ಮೂವರು ನಾಯಕರು ಮತ್ತು ಅವರ ಪಕ್ಷಗಳ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಮೂವರ ದಾಖಲೆಗಳಲ್ಲಿ ಮೋದಿ ಸರ್ಕಾರ ಸುಳ್ಳು ಹೇಳುವಂತೆ ಅವರು ಕಾಶ್ಮೀರದಲ್ಲಿ ಸಾರ್ವಜನಿಕ ಸುರಕ್ಷತೆಗೆ ಯಾವುದೇ ತೊಂದರೆ ಮಾಡಿಲ್ಲ ಎಂದು ಪ್ರತಿಪಕ್ಷಗಳು ಹೇಳಿದೆ.

  ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಮತ್ತು ಇತರ ಕಾರ್ಯಕರ್ತರನ್ನು ಅನಿರ್ದಿಷ್ಟಾವಧಿವರೆಗೆ ಬಂಧಿಸುವುದು ಅವರ ಮೂಲಭೂತ ಹಕ್ಕುಗಳನ್ನು ಹರಣ ಮಾಡಿದಂತೆ. ಇದು ಕಾಶ್ಮೀರದಲ್ಲಿ ನಮ್ಮ ಲಕ್ಷಾಂತರ ಸಹೋದರ ಮತ್ತು ಸಹೋದರಿಯರು ಸಾಂವಿಧಾನಿಕವಾಗಿ ಪಡೆದ  ಹಕ್ಕುಗಳ ಮೇಲಿನ ದಾಳಿ. ಅಲ್ಲದೇ ಸರ್ಕಾರ ಮಾಧ್ಯಮಗಳಿಗೆ ಹೇಳಿದಂತೆ ಕಾಶ್ಮೀರದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದೆ ಎಂಬ ಹೇಳಿಕೆಯ ನಿಜ ಬಣ್ಣವನ್ನು ತೋರಿಸುತ್ತದೆ ಎಂದು ಪ್ರತಿಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದ್ದಾರೆ.

  ಎನ್​ಸಿಪಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಜನತಾ ದಳ ಸೆಕ್ಯೂಲರ್, ಸಿಪಿಎಂ. ಸಿಪಿಐ, ಮತ್ತು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮತ್ತು ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರ ಸಹಿಯನ್ನು ಹೊಂದಿರುವ ಈ ನಿರ್ಣಯಕ್ಕೆ ಕಾಂಗ್ರೆಸ್ ಸಹಿ ಹಾಕಿಲ್ಲ ಎಂದು ಮೂಲಗಳು ಹೇಳಿವೆ.

  ಇದನ್ನು ಓದಿ: 50 ಸಾವಿರ ರೂ. ಹಣದ ಮಿತಿಯನ್ನು ವಾರಾಂತ್ಯದೊಳಗೆ ಹಿಂಪಡೆಯಲಾಗುವುದು; ಯೆಸ್ ಬ್ಯಾಂಕ್ ಆಡಳಿತಾಧಿಕಾರಿ ಭರವಸೆ

  ಕಾಂಗ್ರೆಸ್ ಈ  ನಿರ್ಣಯಕ್ಕೆ ಸಹಿ ಹಾಕದೇ ಇರಲು ಕಾರಣ ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರ ಹಿಡಿದ ಮೇಲೆ  ಕೇಂದ್ರದ ವಿರುದ್ಧದ ಹೋರಾಟದಲ್ಲಿ ಡಿಎಂಕೆ ಜೊತೆ ಕಾಂಗ್ರೆಸ್ ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

  ವರದಿ: ಸಂಧ್ಯಾ ಎಸ್
  First published: