Queen Elizabeth-II ಮರಣದ ನಂತರ ಸ್ಕಾಟ್ಲೆಂಡ್‌ನಲ್ಲಿ ಆಪರೇಷನ್ ಯುನಿಕಾರ್ನ್ ಜಾರಿ: ಹೀಗಂದ್ರೆ ಏನು?

ಬ್ರಿಟನ್ ರಾಣಿ ಎಲಿಜಬೆತ್ II ಈ ನಿಧನ ಹೊಂದಿದ ಈ ಸಂದರ್ಭದಲ್ಲಿ ಆಪರೇಷನ್ ಯುನಿಕಾರ್ನ್‌ಗೂ ಚಾಲನೆ ನೀಡಲಾಗಿದೆ. ಅಂದರೆ ಸ್ಕಾಟ್ಲೆಂಡ್‌ನಲ್ಲಿದ್ದಾಗ ರಾಜ ಅಥವಾ ರಾಣಿ ಮರಣಹೊಂದಿದರೆ ಆಪರೇಷನ್ ಯೂನಿಕಾರ್ನ್ ಎಂದು ಕರೆಯಲಾಗುವ ವಿಶೇಷ ನಿಬಂಧನೆಗಳು ಜಾರಿಯಾಗುತ್ತವೆ. ಇದನ್ನೇ ಆಪರೇಷನ್ ಯುನಿಕಾರ್ನ್‌ ಎನ್ನಲಾಗುತ್ತದೆ.

 ಬ್ರಿಟನ್ ರಾಣಿ ಎಲಿಜಬೆತ್-II

ಬ್ರಿಟನ್ ರಾಣಿ ಎಲಿಜಬೆತ್-II

  • Share this:
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರಿಟನ್ ರಾಣಿ ಎಲಿಜಬೆತ್-II (Queen Elizabeth II of Britain) ಅವರು ನಿನ್ನೆ (ಗುರುವಾರ) ರಾತ್ರಿ ನಿಧನರಾಗಿದ್ದಾರೆ. ಬ್ರಿಟನ್‌ನ ಬಲ್‌ಮೋರಾಲ್‌ನಲ್ಲಿ ಸೂಕ್ತ ವೈದ್ಯಕೀಯ ನಿಗಾದಡಿ ಇದ್ದ 96 ವರ್ಷದ ರಾಣಿ ಎಲಿಜಬೆತ್- II ಅವರು ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನೆಲ್ಲಾ ಅಗಲಿದ್ದಾರೆ. ಬಕಿಂಗ್ಹ್ಯಾಮ್ ಅರಮನೆಯು (Buckingham Palace) ಈ ಕುರಿತು ಹೇಳಿಕೆ ಪ್ರಕಟಿಸಿದ್ದು, 10 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ. "ರಾಣಿ ಇಂದು ಮಧ್ಯಾಹ್ನ ಬಾಲ್ಮೋರಲ್‌ನಲ್ಲಿ (Balmoral) ನೆಮ್ಮದಿಯೊಂದಿಗೆ ಅಸ್ತಂಗತರಾದರು" ಎಂದು ಬಕಿಂಗ್‌ಹ್ಯಾಮ್‌ ಅರಮನೆ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ರಾಜ ಮತ್ತು ರಾಣಿ ಪತ್ನಿ ಇಂದು ಸಂಜೆ ಬಾಲ್ಮೋರಲ್‌ನಲ್ಲಿ ಉಳಿಯುತ್ತಾರೆ ಮತ್ತು ನಾಳೆ ಲಂಡನ್‌ಗೆ (London) ಹಿಂತಿರುಗುತ್ತಾರೆ" ಎಂದು ಅರಮನೆ ತಿಳಿಸಿದೆ.

ಬ್ರಿಟನ್ ತಮ್ಮ ರಾಣಿಗೆ ಸಂತಾಪ ಸೂಚಿಸಲು ಸುಮಾರು ಒಂದು ವಾರ ಲಂಡನ್‌ ಸ್ತಬ್ಧವಾಗಲಿದ್ದು, ಇದರಿಂದಾಗಿ ಆರ್ಥಿಕತೆಗೆ ಬಿಲಿಯನ್‌ಗಟ್ಟಲೆ ನಷ್ಟವಾಗಬಹುದು ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ. ಬಕಿಂಗ್ಹ್ಯಾಮ್ ಅರಮನೆಯಲ್ಲಿ ರಾಣಿಯ ಅಂತ್ಯಕ್ರಿಯೆಗಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ವರದಿಯ ಪ್ರಕಾರ ರಾಣಿಯ ನಿಧನಕ್ಕೆ 'ಲಂಡನ್ ಬ್ರಿಡ್ಜ್' ಎಂದು ಕೋಡ್ ನೇಮ್ ಮಾಡಲಾಗಿದೆ ಎಂದು ಪೊಲಿಟಿಕೊದ 2021 ರ ವರದಿ ತಿಳಿಸಿದೆ.

ಆಪರೇಷನ್ ಯೂನಿಕಾರ್ನ್‌ಗೆ ಚಾಲನೆ
ಇದೇ ಸಂದರ್ಭದಲ್ಲಿ ಆಪರೇಷನ್ ಯೂನಿಕಾರ್ನ್‌ಗೂ ಚಾಲನೆ ನೀಡಲಾಗಿದೆ. ಅಂದರೆ ಸ್ಕಾಟ್ಲೆಂಡ್‌ನಲ್ಲಿದ್ದಾಗ ರಾಜ ಅಥವಾ ರಾಣಿ ಮರಣಹೊಂದಿದರೆ ಆಪರೇಷನ್ ಯೂನಿಕಾರ್ನ್ ಎಂದು ಕರೆಯಲಾಗುವ ವಿಶೇಷ ನಿಬಂಧನೆಗಳು ಜಾರಿಯಾಗುತ್ತವೆ. ಇದನ್ನೇ ಆಪರೇಷನ್ ಯೂನಿಕಾರ್ನ್‌ ಎನ್ನಲಾಗುತ್ತದೆ. ಅಂದರೆ ರಾಣಿ ಸ್ಕಾಟ್ಲೆಂಡ್‌ನಲ್ಲಿ ಮರಣಹೊಂದಿದರೆ ಕಾರ್ಯಾಚರಣೆಗೆ ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಪ್ರಾಣಿಯ ಹೆಸರು ಯೂನಿಕಾರ್ನ್‌ ಅನ್ನು ಇಡಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಯುನಿಕಾರ್ನ್ ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಪ್ರಾಣಿಯಾಗಿದೆ ಮತ್ತು ಇಂಗ್ಲೆಂಡ್‌ನ ಸಿಂಹದೊಂದಿಗೆ ರಾಯಲ್ ಕೋಟ್ ಆಫ್ ಆರ್ಮ್ಸ್‌ನ ಭಾಗವಾಗಿದೆ. ಈ ಕಾರ್ಯಾಚರಣೆಯ ಕೆಲವು ಭಾಗಗಳನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದ್ದು, ಸುದ್ದಿ ಮಾಧ್ಯಮ ನಿರೂಪಕರು ಸೇರಿ ಎಲ್ಲರೂ ಕಪ್ಪು ಬಟ್ಟೆ ಧರಿಸಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಜೊತೆಗೆ ಬ್ರಿಟನ್ ಸರ್ಕಾರ ಎಲ್ಲಾ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.

2017 ರಲ್ಲಿ ಮೊದಲಿಗೆ ಆಪರೇಷನ್ ಯೂನಿಕಾರ್ನ್ ಪದ ಬಳಕೆ
2017 ರಲ್ಲಿ ಎಡಿನ್‌ಬರ್ಗ್ ಸಂಸತ್ತಿನ ಆನ್‌ಲೈನ್ ಪೇಪರ್‌ಗಳಲ್ಲಿ ಆಪರೇಷನ್ ಯೂನಿಕಾರ್ನ್ ಎಂಬ ಪದವನ್ನು ಮೊದಲು ಬಳಸಲಾಯಿತು ಎಂದು ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ, ಸ್ಕಾಟ್‌ಲ್ಯಾಂಡ್‌ನಲ್ಲಿ ರಾಜರು ಸತ್ತರೆ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಇದನ್ನೂ ಓದಿ:  Queen Elizabeth II: ಪಾಸ್​ಪೋರ್ಟ್​ ಇರಲಿಲ್ಲ, ವೀಸಾ ಇಲ್ಲದೇ ವಿಶ್ವಾದ್ಯಂತ ಟ್ರಾವೆಲ್ ಮಾಡ್ತಿದ್ದ ರಾಣಿ ಎಜಿಜಬೆತ್!

ಇದರ ಭಾಗವಾಗಿ ಸಂಸತ್ತಿನ ಕಲಾಪವನ್ನು ತಕ್ಷಣವೇ ಸ್ಥಗಿತಗೊಳಿಸಲಾಗುವುದು ಮತ್ತು ರಾಜಕಾರಣಿಗಳು ಸಂತಾಪ ಸೂಚಕ ನಿರ್ಣಯವನ್ನು ಸಿದ್ಧಪಡಿಸುತ್ತಾರೆ ಮತ್ತು ಸರ್ಕಾರಿ ಅಂತ್ಯಕ್ರಿಯೆಗೆ ಸಿದ್ಧರಾಗುತ್ತಾರೆ. ಆಪರೇಷನ್ ಯೂನಿಕಾರ್ನ್ ಭಾಗವಾಗಿ ಯುಕೆ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳ ಮೇಲಿನ ಚಿತ್ರವನ್ನು ವರ್ಷಗಳಲ್ಲಿ ಕ್ರಮೇಣ ಚಾರ್ಲ್ಸ್‌ನಿಂದ ರಾಣಿಯ ಚಿತ್ರಗಳೊಂದಿಗೆ ಬದಲಾಯಿಸಲು ಸಹ ನಿರ್ಧರಿಸಲಾಗಿದೆ.

ಡೌನಿಂಗ್ ಸ್ಟ್ರೀಟ್‌ನಲ್ಲಿರುವ ರಾಷ್ಟ್ರಧ್ವಜವನ್ನು ಈಗಾಗಲೇ ಅರ್ಧಕ್ಕೆ ಇಳಿಸಲಾಗಿದೆ ಮತ್ತು ರಾಜಕಾರಣಿಗಳು ಸಂತಾಪ ಸೂಚಕ ಮತ್ತು ಸರ್ಕಾರಿ ಅಂತ್ಯಕ್ರಿಯೆಯನ್ನು ಸಿದ್ಧಪಡಿಸುತ್ತಿದ್ದಾರೆ.

ಕಂಬನಿ ಮಿಡಿದ ಗಣ್ಯರು
ಎಲಿಜಬೆತ್-II ಅವರು 1953 ರಿಂದ ಬ್ರಿಟನ್ ರಾಣಿಯಾಗಿ ಸುದೀರ್ಘ ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಎಲಿಜಬೆತ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ:  Queen Elizabeth II: ರಾಣಿ ಎಲಿಜಬೆತ್ ಬದುಕಿನ ಅಪರೂಪದ ಚಿತ್ರಗಳಿವು

ಎಲಿಜಬೆತ್ ಅವರ ಮೃತ ದೇಹವನ್ನು ಬಾಲ್ ಮೊರಲ್ ಎಸ್ಟೇಟ್ ನಲ್ಲಿ ಇಡಲಾಗಿದ್ದು ಇಂದು (ಶುಕ್ರವಾರ) ಲಂಡನ್ ಗೆ ಒಯ್ಯಲಾಗುವುದೆಂದು ಮಾಹಿತಿ ತಿಳಿದು ಬಂದಿದೆ.
Published by:Ashwini Prabhu
First published: