ಸಿಎಎ ಬಗ್ಗೆ ಚರ್ಚಿಸಲು ಸಿದ್ಧ, ಆದರೆ ಬಿಹಾರದಲ್ಲಿ ಎನ್ಆರ್​ಸಿಗೆ ಅವಕಾಶ ಇಲ್ಲ: ಸಿಎಂ ನಿತೀಶ್ ಕುಮಾರ್

ಸಿಎಎ ಪರವಾಗಿ ನಿತೀಶ್ ನಿಲುವು ತಳೆದಿದ್ದರೂ ಎನ್​ಆರ್​ಸಿಯನ್ನು ಅವರು ಬಲವಾಗಿ ವಿರೋಧಿಸಿದ್ಧಾರೆ. ಬಿಹಾರದಲ್ಲಿ ಯಾವುದೇ ಕಾರಣಕ್ಕೂ ಎನ್​ಆರ್​ಸಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸತತವಾಗಿ ಹೇಳುತ್ತಲೇ ಬಂದಿದ್ಧಾರೆ.

news18
Updated:January 13, 2020, 1:14 PM IST
ಸಿಎಎ ಬಗ್ಗೆ ಚರ್ಚಿಸಲು ಸಿದ್ಧ, ಆದರೆ ಬಿಹಾರದಲ್ಲಿ ಎನ್ಆರ್​ಸಿಗೆ ಅವಕಾಶ ಇಲ್ಲ: ಸಿಎಂ ನಿತೀಶ್ ಕುಮಾರ್
ನಿತೀಶ್ ಕುಮಾರ್
  • News18
  • Last Updated: January 13, 2020, 1:14 PM IST
  • Share this:
ಪಾಟ್ನಾ(ಜ. 13): ರಾಷ್ಟ್ರೀಯ ನಾಗರಿಕ ನೊಂದಣಿ(ಎನ್​ಆರ್​ಸಿ) ಯೋಜನೆಯನ್ನು ಬಿಹಾರದಲ್ಲಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ. ಆದರೆ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಸಂಸತ್​ನಲ್ಲಿ ಚರ್ಚೆಯಾಗಬೇಕೆಂದು ಅವರು ಸಲಹೆ ನೀಡಿದ್ಧಾರೆ.

ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಜೆಡಿಎಸ್ ಮುಖಂಡರೂ ಆದ ಅವರು, ಎಲ್ಲಾ ಪಕ್ಷಗಳು ಒಪ್ಪಿದಲ್ಲಿ ಸಂಸತ್​ನಲ್ಲಿ ಸಿಎಎ ಬಗ್ಗೆ ವಿಚಾರ ವಿನಿಯಮವಾಗಲಿ ಎಂದಿದ್ಧಾರೆ.

ಸಿಎಎ ಮತ್ತು ಎನ್​ಆರ್​ಸಿ ವಿಚಾರದಲ್ಲಿ ಜೆಡಿಯು ಪಕ್ಷದಲ್ಲಿ ತುಸು ಗೊಂದಲ ಇದೆ. ಜೆಡಿಯು ಪಕ್ಷದ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಅವರು ಸಿಎಎ ಮತ್ತು ಎನ್​ಆರ್​ಸಿಯ ಪ್ರಬಲ ವಿರೋಧಿಯಾಗಿದ್ಧಾರೆ. ಸಿಎಎ ವಿರುದ್ಧ ದೇಶಾದ್ಯಂತ ವಿಪಕ್ಷಗಳ ಏಕತೆ ಸಾಧಿಸುವ ಪ್ರಯತ್ನದಲ್ಲಿ ಅವರು ಮುಂಚೂಣಿಯಲ್ಲಿದ್ಧಾರೆ. ಬಿಜೆಪಿಯೇತರ ಮುಖ್ಯಮಂತ್ರಿಗಳ ಮನವೊಲಿಸುವ ಕೆಲಸದಲ್ಲಿದ್ದಾರೆ.

ಇದನ್ನೂ ಓದಿ: ನಿಮಗೆ ಬೇಕಾದ 5 ಟೀಕಾಕಾರರೊಂದಿಗಾದರೂ ಪ್ರಶ್ನೋತ್ತರ ನಡೆಸಿ: ಮೋದಿಗೆ ಚಿದಂಬರಮ್ ಸವಾಲು

“ಸಂಸತ್​ನಲ್ಲಿ ಬಹುಮತಕ್ಕೇನೋ ಗೆಲುವು ಸಿಕ್ಕಿತು. ಈ ಕಾಯ್ದೆಗಳನ್ನು ಜಾರಿಗೊಳಿಸುವುದು ರಾಜ್ಯ ಸರ್ಕಾರಗಳೇ ಆಗಿವೆ. ಈಗ ನ್ಯಾಯಾಂಗವನ್ನೂ ಮೀರಿ ಭಾರತದ ಆತ್ಮವನ್ನು ಉಳಿಸಿಕೊಳ್ಳುವ ಜವಾಬ್ದಾರಿ 16 ಬಿಜೆಪಿಯೇತರ ಮುಖ್ಯಮಂತ್ರಿಗಳ ಕೈಲಿದೆ” ಎಂದು ಪ್ರಶಾಂತ್ ಕಿಶೋರ್ ಕರೆ ನೀಡಿದ್ಧಾರೆ.

ಪ್ರಶಾಂತ್ ಕಿಶೋರ್ ಅವರ ವಿರೋಧದ ನಡುವೆಯೂ ಪೌರತ್ವ ಕಾಯ್ದೆಗೆ ಸಂಸತ್​ನಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಬೆಂಬಲ ನೀಡಿದ್ದು ಅಚ್ಚರಿ ಮೂಡಿಸಿತು. ಆದರೆ, ಸಿಎಎ ಪರವಾಗಿ ನಿತೀಶ್ ನಿಲುವು ತಳೆದಿದ್ದರೂ ಎನ್​ಆರ್​ಸಿಯನ್ನು ಅವರು ಬಲವಾಗಿ ವಿರೋಧಿಸಿದ್ಧಾರೆ. ಬಿಹಾರದಲ್ಲಿ ಯಾವುದೇ ಕಾರಣಕ್ಕೂ ಎನ್​ಆರ್​ಸಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸತತವಾಗಿ ಹೇಳುತ್ತಲೇ ಬಂದಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
Published by: Vijayasarthy SN
First published: January 13, 2020, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading