ಡೀಸೆಲ್ ಚಾಲಿತ ಟ್ರಕ್ ಸಂಚಾರ ನಿಷೇಧ; ನ. 27ರಿಂದ ಸಿಎನ್​ಜಿ ವಾಹನಗಳಿಗೆ ವಿನಾಯಿತಿ

Delhi Pollution- ದೆಹಲಿಯಲ್ಲಿ ವಿಪರೀತ ಏರುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ವಿವಿಧ ಕ್ರಮಗಳನ್ನ ಕೈಗೊಳ್ಳುತ್ತಿದೆ. ಅದರಲ್ಲಿ ಟ್ರಕ್, ಟೆಂಪೋ ಸಂಚಾರ ನಿಷೇಧವೂ ಒಂದು. ಇದರಲ್ಲಿ ಸಿಎನ್ಜಿ ಚಾಲಿತ ವಾಹನಗಳ ಸಂಚಾರಕ್ಕೆ ನ. 27ರಿಂದ ಅನುವು ಮಾಡಿಕೊಡಲಾಗಿದೆ.

ದೆಹಲಿ ಟ್ರಾಫಿಕ್ ಮತ್ತು ಮಾಲಿನ್ಯ

ದೆಹಲಿ ಟ್ರಾಫಿಕ್ ಮತ್ತು ಮಾಲಿನ್ಯ

  • Share this:
ದೆಹಲಿ: ಚಳಿಗಾಲ ಬಂತೆಂದರೆ ಸಾಕು, ದೆಹಲಿಯಲ್ಲಿನ ವಾಯುಮಾಲಿನ್ಯ ಮಟ್ಟವು (Air Pollution Level in Delhi) ನೋಡ ನೋಡುತ್ತಿದ್ದಂತೆಯೇ ಹೆಚ್ಚಾಗುತ್ತದೆ. ಅಲ್ಲಿನ ಜನರು ಈ ವಾಯುಮಾಲಿನ್ಯದಿಂದ ಬೇಸತ್ತು ಮನೆಯಿಂದ ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರ ಬರುತ್ತಾರಂತೆ. ಪ್ರತಿ ವರ್ಷದಂತೆ ಈ ವರ್ಷವೂ ಈ ವಾಯು ಮಾಲಿನ್ಯವು ಅಲ್ಲಿನ ಸರ್ಕಾರಕ್ಕೆ ತುಂಬಾ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈಗಾಗಲೇ ದೆಹಲಿ ಸರ್ಕಾರವು ಎಲ್ಲಾ ವಾಹನ ಸವಾರರು ತಮ್ಮ ವಾಹನವನ್ನು ಮನೆಯಿಂದ ಹೊರ ತೆಗೆದು ರಸ್ತೆಯ ಮೇಲೆ ತೆಗೆದುಕೊಂಡು ಬಂದರೆ ಅವರು ವಾಹನದ ಹೊಗೆ ಹೊರಸೂಸುವಿಕೆಯ ತಪಾಸಣೆ ಮಾಡಿಸಿ ಅದರ ಪ್ರಮಾಣ ಪತ್ರವನ್ನು (Emission test certificate) ತಮ್ಮ ಜೇಬಿನಲ್ಲಿಯೇ ಇರಿಸಿಕೊಂಡಿರಬೇಕು. ಪೊಲೀಸರು ವಾಹನ ಸವಾರರ ಬಳಿ ಈ ಪ್ರಮಾಣ ಪತ್ರ ಕೇಳಿದಾಗ ಅದನ್ನು ತೋರಿಸದೆ ಹೋದರೆ ಭಾರಿ ದಂಡ ಕಟ್ಟಬೇಕಾಗುತ್ತದೆ ಮತ್ತು ವಾಹನ ಸವಾರರ ಚಾಲನೆ ಲೈಸೆನ್ಸ್ (Driving License) ರದ್ದುಗೊಳಿಸುವುದಾಗಿ ಹೇಳಿತ್ತು.

ನಂತರ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಎಲ್ಲಾ ವಾಹನ ಸವಾರರಿಗೆ ವಾರಕ್ಕೆ ಒಂದು ದಿನ ತಮ್ಮ ವಾಹನವನ್ನು ಮನೆಯಿಂದ ಹೊರತೆಗೆಯದೇ ಬಸ್ಸಿನಲ್ಲಿ ಓಡಾಡಲು ವಿನಂತಿಸಿಕೊಂಡಿದ್ದರು. ಹೀಗೆಲ್ಲಾ ಅನೇಕ ತರಹದ ಮಾರ್ಗಗಳನ್ನು ಪ್ರಯತ್ನಿಸಿದ ದೆಹಲಿ ಸರ್ಕಾರ ಹೆಚ್ಚುತ್ತಿರುವ ವಾಯು ಮಾಲಿನ್ಯದ ಮೇಲೆ ನಿಯಂತ್ರಣ ಸಾಧಿಸಲು ಅಗತ್ಯವಲ್ಲದ ವಸ್ತುಗಳನ್ನು ನಗರಕ್ಕೆ ಸಾಗಿಸುವ ಭಾರಿ ಸರಕು ವಾಹನಗಳ ಪ್ರವೇಶವನ್ನು (Heavy Transport Vehicles) ನವೆಂಬರ್ 22ರಂದು ನಿಷೇಧಿಸಿತ್ತು.

ಆದರೆ ಈಗ ಈ ನಿಷೇಧದಲ್ಲಿ ಸ್ವಲ್ಪ ಸಡಿಲಿಕೆ ನೀಡಿದ್ದು, ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು, ಸಿಎನ್‌ಜಿ ಚಾಲಿತ ಟ್ರಕ್‌ ಮತ್ತು ಟೆಂಪೋಗಳನ್ನು (Vehicles run by CNG) ಮಾತ್ರ ನವೆಂಬರ್ 27ರಿಂದ ದೆಹಲಿ ನಗರ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್‌ ಇಂದು ತಿಳಿಸಿದ್ದಾರೆ.

ಇದನ್ನೂ ಓದಿ: PM Modi: ಐತಿಹಾಸಿಕ ಯೋಜನೆಗೆ ಮೋದಿ ಶಿಲಾನ್ಯಾಸ: ಹೇಗಿರಲಿದೆ ಗೊತ್ತಾ ಏಷ್ಯಾದ ಅತಿ ದೊಡ್ಡ ಏರ್​ಪೋರ್ಟ್?

ದೆಹಲಿಯಲ್ಲಿ ಇತರ ಇಂಧನಗಳನ್ನು ಬಳಸಿ ಓಡಿಸುವ ಟ್ರಕ್‌ಗಳ ಪ್ರವೇಶದ ಮೇಲಿನ ನಿಷೇಧ ಡಿಸೆಂಬರ್ 3ರವರೆಗೆ ಮುಂದುವರಿಯಲಿದೆ ಎಂದು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯ ನಂತರ ಪರಿಸರ ಸಚಿವರು ಹೇಳಿದರು.

ಶಾಲಾ ಕಾಲೇಜು ತರಗತಿ, ಸರ್ಕಾರಿ ಕಚೇರಿ ಪುನಾರಂಭ: 

ಹೆಚ್ಚಿನ ಮಾಲಿನ್ಯ ಮಟ್ಟದಿಂದಾಗಿ ಸ್ಥಗಿತಗೊಳಿಸಲಾದ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಆಫ್‌ಲೈನ್ ತರಗತಿಗಳು ನವೆಂಬರ್ 29 ರಿಂದ ಪುನರಾರಂಭಗೊಳ್ಳಲಿವೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸೋಮವಾರದಿಂದ ಎಲ್ಲಾ ಸರ್ಕಾರಿ ಕಚೇರಿಗಳು ತೆರೆಯಲಿದ್ದು, ಸಾರ್ವಜನಿಕ ಸಾರಿಗೆ ಬಳಸುವಂತೆ ಸರ್ಕಾರಿ ಸಿಬ್ಬಂದಿಯನ್ನು ಒತ್ತಾಯಿಸಿದರು. ಅವರಿಗಾಗಿ ವಿಶೇಷ ಬಸ್‌ಗಳನ್ನು ನಿಯೋಜಿಸಲಾಗುವುದು ಎಂದು ಸಚಿವ ರಾಯ್‌ ಹೇಳಿದರು.

ಇದನ್ನೂ ಓದಿ: Bank Holidays in December: ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 12 ದಿನ ಬ್ಯಾಂಕ್ ರಜೆ; ಲಿಸ್ಟ್ ಇಲ್ಲಿದೆ ನೋಡಿ

ಇತ್ತೀಚೆಗೆ ಸ್ವಲ್ಪ ವಾಯು ಗುಣಮಟ್ಟದಲ್ಲಿ ಸುಧಾರಣೆ ತೋರಿಸಿದ್ದರಿಂದ ದೆಹಲಿ ಸರ್ಕಾರ ಸೋಮವಾರ ಕಟ್ಟಡ ನಿರ್ಮಾಣ (Building Construction) ಮತ್ತು ನೆಲಸಮ ಚಟುವಟಿಕೆಗಳ (Demolition Activities) ಮೇಲಿನ ನಿಷೇಧ ತೆಗೆದುಹಾಕಿದೆ. ನವೆಂಬರ್ 13ರಂದು ಹೆಚ್ಚಿನ ವಾಯುಮಾಲಿನ್ಯ ಮಟ್ಟದಿಂದಾಗಿ ದೆಹಲಿಯ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ದೆಹಲಿ ಸರ್ಕಾರ ಆದೇಶಿಸಿತ್ತು.

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: