• Home
  • »
  • News
  • »
  • national-international
  • »
  • Muslim PM: ಭಾರತದ ಮುಸಲ್ಮಾನರಿಗೆ ಸಿಕ್ಕಷ್ಟು ಸ್ವಾತಂತ್ರ್ಯ ಇಸ್ಲಾಮಿಕ್ ರಾಷ್ಟ್ರದಲ್ಲಿ ಊಹಿಸಲೂ ಸಾಧ್ಯವಿಲ್ಲ: IAS ಷಾ ಫೈಸಲ್

Muslim PM: ಭಾರತದ ಮುಸಲ್ಮಾನರಿಗೆ ಸಿಕ್ಕಷ್ಟು ಸ್ವಾತಂತ್ರ್ಯ ಇಸ್ಲಾಮಿಕ್ ರಾಷ್ಟ್ರದಲ್ಲಿ ಊಹಿಸಲೂ ಸಾಧ್ಯವಿಲ್ಲ: IAS ಷಾ ಫೈಸಲ್

ಐಎಎಸ್ ಷಾ ಫೈಸಲ್

ಐಎಎಸ್ ಷಾ ಫೈಸಲ್

ಟ್ವಿಟರ್‌ನಲ್ಲಿ ಮುಸ್ಲಿಂ ಪ್ರಧಾನಿಯ ಬೇಡಿಕೆಯ ಟ್ರೆಂಡ್‌ ಹುಟ್ಟಿಸಿದ ಬೆನ್ನಲ್ಲೇ ಕಾಶ್ಮೀರಿ ಐಎಎಸ್ ಅಧಿಕಾರಿ ಷಾ ಫೈಸಲ್ ಅವರ ಟ್ವೀಟ್ ಭಾರೀ ವೈರಲ್ ಆಗುತ್ತಿದೆ. ಷಾ ಫೈಸಲ್ ತಮ್ಮ ಟ್ವೀಟ್ ಮೂಲಕ ಇಸ್ಲಾಮಿಕ್ ದೇಶಗಳನ್ನು ಗುರಿಯಾಗಿಸಿದ್ದಾರೆ.

  • Share this:

ನವದೆಹಲಿ(ಅ.26): ಟ್ವಿಟರ್‌ನಲ್ಲಿ ಮುಸ್ಲಿಂ ಪ್ರಧಾನಿಯಾಗಬೇಕೆಂಬ (Muslim Prime Minister) ಬೇಡಿಕೆ ಟ್ರೆಂಡ್‌ ಬಳಿಕ ಕಾಶ್ಮೀರಿ ಐಎಎಸ್ ಷಾ ಫೈಸಲ್ (IAS Officer Shah Faesal) ಅವರ ಟ್ವೀಟ್ ಭಾರೀ ವೈರಲ್ ಆಗುತ್ತಿದೆ. ಷಾ ಫೈಸಲ್ ತಮ್ಮ ಟ್ವೀಟ್ ಮೂಲಕ ಇಸ್ಲಾಮಿಕ್ ದೇಶಗಳನ್ನು ಗುರಿಯಾಗಿಸಿದ್ದಾರೆ. ಇದರೊಂದಿಗೆ ಭಾರತದ ಪ್ರಜಾಸತ್ತಾತ್ಮಕ ಸೌಂದರ್ಯವನ್ನೂ ಶ್ಲಾಘಿಸಲಾಗಿದೆ. ಷಾ ಫೈಸಲ್ ಸರಣಿ ಟ್ವೀಟ್ ಮಾಡಿ ಇಂತಹ ಬೇಡಿಕೆ ಇಟ್ಟವರಿಗೆ ಮಾತಿನ ಪೆಟ್ಟು ನೀಡಿದ್ದಾರೆ. ಇನ್ನು ಅವರು ತಮ್ಮ ಟ್ವೀಟ್​ನಲ್ಲಿ 'ಕಾಶ್ಮೀರದ ಮುಸ್ಲಿಂ ಯುವಕ ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯಲು ಭಾರತದಲ್ಲಿ ಮಾತ್ರ ಸಾಧ್ಯ. ಈ ಮೂಲಕ ಸರ್ಕಾರದ ಉನ್ನತ ಇಲಾಖೆಗಳನ್ನು ತಲುಪಬಹುದು. ಸರ್ಕಾರದ ವಿರುದ್ಧ ಮಾತನಾಡಬಹುದು. ಬಳಿಕ ಅದೇ ಸರ್ಕಾರ ಅವನನ್ನು ರಕ್ಷಿಸುತ್ತದೆ ಹಾಗೂ ತನ್ನದಾಗಿಸಿಕೊಳ್ಳುತ್ತದೆ ಎಂದಿದ್ದಾರೆ.


ಇದಲ್ಲದೆ, ಐಎಎಸ್ ಷಾ ಫೈಸಲ್ ಟ್ವೀಟ್ ಮಾಡಿ 'ರಿಷಿ ಸುನಕ್ ಅವರು ಬ್ರಿಟನ್‌ನ ಪ್ರಧಾನಿಯಾಗುವುದು ಖಂಡಿತವಾಗಿಯೂ ನಮ್ಮ ನೆರೆಹೊರೆಯವರಲ್ಲಿ ಅಚ್ಚರಿ ಮೂಡಿಸಬಹುದು, ಅಲ್ಲಿ ಸಂವಿಧಾನವು ಮುಸ್ಲಿಮೇತರರು ಸರ್ಕಾರದ ಮುಖ್ಯ ಇಲಾಖೆಗಳನ್ನು ಪ್ರವೇಶಿಸುವುದನ್ನು ತಡೆಯುತ್ತದೆ. ಆದರೆ ಭಾರತೀಯ ಸಂವಿಧಾನವು ಜನಾಂಗೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಎಂದಿಗೂ ತಾರತಮ್ಯ ಮಾಡಿಲ್ಲ. ಇಸ್ಲಾಮಿಕ್ ದೇಶಗಳು ಊಹಿಸಲೂ ಸಾಧ್ಯವಾಗದಷ್ಟು ಸ್ವಾತಂತ್ರ್ಯದೊಂದಿಗೆ ಭಾರತೀಯ ಮುಸ್ಲಿಮರು ಸಮಾನ ನಾಗರಿಕರಾಗಿ ಬದುಕುತ್ತಿದ್ದಾರೆ ಎಂದಿದ್ದಾರೆ.


ಇದನ್ನೂ ಓದಿ: Sundar Pichai on T20 WC: ಪಾಕ್ ಕ್ರಿಕೆಟ್ ಪ್ರೇಮಿಗೆ ಸುಂದರ್ ಪಿಚ್ಚೈ ಕೌಂಟರ್, ವೈರಲ್ ಆಯ್ತು ಗೂಗಲ್ ಸಿಇಒ ರಿಪ್ಲೈ!


ಇದಲ್ಲದೆ, ನನ್ನ ಜೀವನವೂ ಒಂದು ಪ್ರಯಾಣದಂತೆ, ನಾನು 130 ಕೋಟಿ ದೇಶವಾಸಿಗಳೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಡೆದಿದ್ದೇನೆ ಎಂದು ಐಎಎಸ್ ಷಾ ಫೈಸಲ್ ಹೇಳಿದರು. ಇಲ್ಲಿ ನಾನು ಆತ್ಮೀಯತೆ, ಗೌರವ, ಪ್ರೋತ್ಸಾಹ ಮತ್ತು ಪ್ರತಿಯೊಂದು ಕ್ಷಣದಲ್ಲೂ ಪ್ರೀತಿಯನ್ನು ಅನುಭವಿಸಿದ್ದೇನೆ ಎಂದಿದ್ದಾರೆ.
ಅಲ್ಲದೇ ಇದು ನನ್ನ ಭಾರತ. ಮೌಲಾನಾ ಆಜಾದ್‌ನಿಂದ ಡಾ. ಮನಮೋಹನ್ ಸಿಂಗ್ ಮತ್ತು ಡಾ. ಜಾಕಿರ್ ಹುಸೇನ್‌ನಿಂದ ರಾಷ್ಟ್ರಪತಿ ದ್ರೌಪದಿ ಮುರ್ಮುವರೆಗೆ ಭಾರತವು ಯಾವಾಗಲೂ ಎಲ್ಲರಿಗೂ ಸಮಾನ ಅವಕಾಶ ನೀಡುವ ದೇಶವಾಗಿದೆ ಎಂದು ಷಾ ಫೈಸಲ್ ಟ್ವೀಟ್ ಮಾಡಿದ್ದಾರೆ. ಈಗಲೂ ಉನ್ನತ ಹಂತಕ್ಕೇರುವ ತಲುಪುವ ದಾರಿ ಎಲ್ಲರಿಗೂ ಮುಕ್ತವಾಗಿದೆ. ನಾನೇ ಎಲ್ಲವನ್ನೂ ಖುದ್ದು ಅನುಭವಿಸಿ ಈ ಮಾತುಗಳನ್ನು ಹೇಳುತ್ತಿದ್ದೇನೆ. ಹೀಗಾಗಿ ಇದು ತಪ್ಪಾಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.


ಇದನ್ನೂ ಓದಿ: India vs China: ಅಗ್ರ ವಿಜ್ಞಾನಿಗಳ ಸಂಖ್ಯೆಯಲ್ಲೂ ಭಾರತ-ಚೀನಾ ತೀವ್ರ ಪೈಪೋಟಿ


ಈ ಟ್ವೀಟ್ ಹಂಚಿಕೊಂಡಿದ್ದಕ್ಕೆ ಐಎಎಸ್ ಷಾ ಫೈಸಲ್​ ಅವರನ್ನು ಅನೇಕರು ಹೊಗಳಿದ್ದಾರೆ. ಒಬ್ಬ ಬಳಕೆದಾರ ಇದನ್ನು ಓದಲೇಬೇಕು, ಎಂಥಾ ಕಥೆ, ಯಾವಾಗಲೂ ನೀವು ಮಿಂಚುತ್ತಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಮಯತ್ತೊಬ್ಬ ಬಳಕೆದಾರ ಇದೊಂದು ಆಸಕ್ತಿದಾಯಕ ವಿಚಾರ ಎಂದಿದ್ದಾರೆ.

Published by:Precilla Olivia Dias
First published: