ಉಗ್ರರಿಗೆ ಪಿಂಚಣಿ ನೀಡುತ್ತಿದ್ದೇವೆ ಎಂದು ಪಾಕ್​ ಒಪ್ಪಿಕೊಳ್ಳಲಿದೆಯೇ?; ಇಮ್ರಾನ್​ ಖಾನ್​ಗೆ ಭಾರತ ತಿರುಗೇಟು

ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಅಲ್​-ಖೈದಾ ಹಾಗೂ ಇತರರ ಸಂಘಟನೆಯ 130 ಉಗ್ರರಿಗೆ ಪಿಂಚಣಿ ನೀಡುತ್ತಿರುವ ಏಕೈಕ ರಾಷ್ಟ್ರ ಎಂದು ಪಾಕಿಸ್ತಾನ ಒಪ್ಪಿಕೊಳ್ಳಲಿದೆಯೇ? ಎಂದು ಪಾಕ್​ಗೆ ಭಾರತ ಪ್ರಶ್ನೆ ಮಾಡಿದೆ.

Rajesh Duggumane | news18-kannada
Updated:September 28, 2019, 11:41 AM IST
ಉಗ್ರರಿಗೆ ಪಿಂಚಣಿ ನೀಡುತ್ತಿದ್ದೇವೆ ಎಂದು ಪಾಕ್​ ಒಪ್ಪಿಕೊಳ್ಳಲಿದೆಯೇ?; ಇಮ್ರಾನ್​ ಖಾನ್​ಗೆ ಭಾರತ ತಿರುಗೇಟು
ವಿಧಿಶಾ
  • Share this:
ನವದೆಹಲಿ (ಸೆ.28): ಅಣ್ವಸ್ತ್ರಶಕ್ತ ರಾಷ್ಟ್ರಗಳ ನಡುವೆ ಯುದ್ಧ ನಡೆದ ಅದರ ಪರಿಣಾಮವನ್ನು ಇಡೀ ವಿಶ್ವವೇ ಅನುಭವಿಸಬೇಕು ಎನ್ನುವ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಹೇಳಿಕೆಗೆ ಭಾರತ ತಿರುಗೇಟು ನೀಡಿದೆ. ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಉಗ್ರರಿಗೆ ಪಿಂಚಣಿ ನೀಡುತ್ತಿರುವ ವಿಚಾರವನ್ನು ಪಾಕ್​ ಒಪ್ಪಿಕೊಳ್ಳಲಿದೇಯೇ ಎಂದು ಪ್ರಶ್ನಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್​ಜಿಎ) ಮಾತನಾಡಿದ್ದ ಇಮ್ರಾನ್​ ಖಾನ್​ ಯುದ್ಧೋನ್ಮಾದ ತೋರಿದ್ದರು. ಇದಕ್ಕೆ ವಿದೇಶಾಂಗ ಸಚಿವಾಲಯದ ಮೊದಲ ಕಾರ್ಯದರ್ಶಿ ವಿಧಿಶಾ ಮೈತ್ರಾ ತಿರುಗೇಟು ನೀಡಿದ್ದಾರೆ.

“ಇಮ್ರಾನ್​ ಖಾನ್​ ಮಾತನಾಡಿದ್ದರ ಅರ್ಥ ಹೇಗಿತ್ತು ಎಂದರೆ ತಿಕ್ಕಾಟ ನಡೆಯುತ್ತಿರುವುದು ಅಮೆರಿಕ ಮತ್ತು ಅವರ ನಡುವೆ, ಶ್ರೀಮಂತರು-ಬಡವರು, ಉತ್ತರ ಮತ್ತು ದಕ್ಷಿಣ, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ, ಮುಸ್ಲಿಂ ಮತ್ತು ಇತರರ ನಡುವೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ ,” ಎಂದು ವಿಧಿಶಾ ಟೀಕಿಸಿದರು.

“ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಅಲ್​-ಖೈದಾ ಹಾಗೂ ಇತರರ ಸಂಘಟನೆಯ 130 ಉಗ್ರರಿಗೆ ಪಿಂಚಣಿ ನೀಡುತ್ತಿರುವ ಏಕೈಕ ರಾಷ್ಟ್ರ ಎಂದು ಪಾಕಿಸ್ತಾನ ಒಪ್ಪಿಕೊಳ್ಳಲಿದೆಯೇ?,” ಎಂದು ಅವರು ಪ್ರಶ್ನಿಸಿದರು.

“ನಿನ್ನೆ ಮಾತನಾಡಿದ್ದ ಇಮ್ರಾನ್​, “ಆರ್​ಎಸ್​​ಎಸ್​ ಮತ್ತು ಮೋದಿ ಮೇಲೆ ಖಾನ್​ ವೈಯಕ್ತಿಕ ದಾಳಿ ನಡೆಸಿದ್ದರು. ಭಾರತಕ್ಕಿಂತ ಏಳು ಪಟ್ಟು ಸಣ್ಣದಾಗಿರುವ ಪಾಕ್​ ಎದುರು ಭಾರತ ಯುದ್ಧ ಮತ್ತು ಶರಣಾಗತಿಯ ಆಯ್ಕೆ ಇಟ್ಟರೆ ನಾವು ಯುದ್ಧವನ್ನೇ ಆರಿಸುತ್ತೇವೆ. ಇದರ ಪರಿಣಾಮವನ್ನು ಇಡಿ ವಿಶ್ವವೇ ಎದುರಿಸಬೇಕು ಎಂದರು,” ಎಂದು ಎಚ್ಚರಿಕೆ ನೀಡಿದರು.

First published:September 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ