ಆನ್​ಲೈನ್​ ಗೇಮ್​ಗೆ ಯುವತಿ ಬಲಿ; ಮುಂಗೈನಲ್ಲಿ ಬರೆದಿತ್ತು ಪ್ರಪಂಚ ತೊರೆಯುವ ದಾರಿ?

ಆಕೆಯ ಕೈ ಮೇಲಿನ ಬರಹ ಆತ್ಮಹತ್ಯೆಗೆ ಪ್ರಚೋದಿಸುವಂತಿದೆ ಎಂದು ಊಹಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ

Seema.R | news18
Updated:December 7, 2018, 3:56 PM IST
ಆನ್​ಲೈನ್​ ಗೇಮ್​ಗೆ ಯುವತಿ ಬಲಿ; ಮುಂಗೈನಲ್ಲಿ ಬರೆದಿತ್ತು ಪ್ರಪಂಚ ತೊರೆಯುವ ದಾರಿ?
Cyber crime representational pic.
Seema.R | news18
Updated: December 7, 2018, 3:56 PM IST
ನಾಗ್ಪುರ (ಡಿ.07): ಒಂದು ಕಾಲದಲ್ಲಿ ಕೊಕ್ಕೊ, ಕಬಡ್ಡಿ, ವಾಲೀಬಾಲ್​, ಕ್ರಿಕೆಟ್​ ಎಂದು ಮಕ್ಕಳು ಆಡುತ್ತಿದ್ದರು. ಆದರೆ ಇವತ್ತಿನ ಜಮಾನ ಬದಲಾಗಿದೆ. ಎಲ್ಲವೂ ಕಂಪ್ಯೂಟರ್​, ಮೊಬೈಲ್​, ಟ್ಯಾಬ್​ಗಳಲ್ಲೇ ಸಿಗುತ್ತವೆ. ಹೀಗಿರುವಾಗ ಸಹಜವಾಗಿ ಮಕ್ಕಳ ಮನಸ್ಸು ಆನ್​ಲೈನ್​ ಗೇಮ್​ಗಳತ್ತ ಮುಖ ಮಾಡಿದೆ. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ ಎಂಬುದು ಪ್ರಕೃತಿ ಸಹಜ ನಿಯಮವಾಗಿರಬಹುದು, ಆದರೆ ಆ ಬದಲಾವಣೆ ಒಳ್ಳೆಯ ದಿಕ್ಕಿನತ್ತ ಕರೆದೊಯ್ಯುತ್ತಿದೆಯಾ? ಎಂಬ ಪ್ರಶ್ನೆ ಕೇಳಿಕೊಂಡರೆ ಬಹುಶಃ ಬೇಸರದ ಉತ್ತರವೇ ಬಹುತೇಕವಾಗಿರುತ್ತದೆ.

ಆನ್​ಲೈನ್​ ಆಟಗಳಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಒಂದಾದ ಮೇಲೊಂದು ಕೇಳಿ ಬರುತ್ತಿವೆ. ಬ್ಲೂ ವೇಲ್​, ಮೋಮೋ ಥರದ ಆಟಗಳಿಗೆ ಈಗಾಗಲೇ ಅನೇಕ ಮಕ್ಕಳು ಬಲಿಯಾಗಿದ್ದಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಅಪಾಯಕಾರಿ ಆಟದಿಂದ ಯುವಜನತೆ ಹಿಂದೆ ಸರಿಯುತ್ತಿಲ್ಲ ಎಂಬುದಕ್ಕೆ ಮತ್ತೊಂದು ಘಟನೆ ಜ್ವಲಂತ ನಿದರ್ಶನವಾಗಿದೆ.

ಇಲ್ಲಿನ ಬೆಲ್ಟ್​ರೋಡಿ ಪ್ರದೇಶದ 17 ವರ್ಷದ ಯುವತಿಯೊಬ್ಬಳು ಆನ್​ಲೈನ್​ ಗೇಮ್​ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಡಿ.4ರಂದು ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು. ಆಕೆ ಕೈ ಮಣಿಕಟ್ಟಿನ ಮೇಲೆ “ಪ್ರಪಂಚದಿಂದ ಹೋಗಲು ಇಲ್ಲಿ ಕತ್ತರಿಸಿ,” ಎಂದು ಬರೆದು ಕೊಂಡಿದ್ದಾಳೆ.

ಆಕೆಯ  ಕೈ ಮೇಲಿನ ಬರಹ ಆತ್ಮಹತ್ಯೆಗೆ ಪ್ರಚೋದನೆ ನೀಡಿದೆ ಎಂಬ ಅನುಮಾನ ಬಲವಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇನ್ನು ಈ ಕುರಿತು ಮಾತನಾಡಿರುವ ಅವರ ಪೋಷಕರು, ತಮ್ಮ ಮಗಳಿಗೆ ಪ್ರತ್ಯೇಕ ಕೊಠಡಿ ಇತ್ತು. ಆಕೆ ಅಲ್ಲಿಯೇ ಓದಿ ಕೊಳ್ಳುತ್ತಿದ್ದಳು. ಆಕೆ ಯಾವಾಗಲೂ ಆನ್​ಲೈನ್​ ಗೇಮ್​ ಆಡುತ್ತಿದ್ದಳು. ಅದು ಯಾವ ಆಟ ಎಂದು ತಿಳಿದು ಬಂದಿಲ್ಲ, ಎನ್ನುತ್ತಾರೆ ಯುವತಿಯ ಅಪ್ಪ-ಅಮ್ಮ.

ಇದನ್ನು ಓದಿ: ಮೋಸ ಮಾಡಿ ವಿವಾಹವಾಗಿದ್ದಾರಾ ಪ್ರಿಯಾಂಕಾ: ಪಿಗ್ಗಿ ವಂಚನೆಗೆ ಬಲಿಯಾದರಾ ನಿಕ್​..?

ಯುವತಿ ಯಾವ ಆಟ ಆಡುತ್ತಿದ್ದಳು ಎಂಬ ಬಗ್ಗೆ ಪೊಲೀಸರು ಕೂಡ ತನಿಖೆ ಶುರು ಮಾಡಿದ್ದು, ಆಕೆಯ ಮೊಬೈಲ್​ ಹಾಗೂ ಕಂಪ್ಯೂಟರ್​ ಪರಿಶೀಲನೆ ಮಾಡಲಾಗುತ್ತಿದೆ. ಈ ಆಟ ಅಪಾಯಕಾರಿಯೇ ಎಂಬ ಬಗ್ಗೆಯೂ ವಿಶ್ಲೇಷಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Loading...

ಯುವತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳಾ ಎಂಬ ಕುರಿತೂ ವಿಚಾರಣೆ ನಡೆಸಲಾಗುತ್ತಿದೆ. ಮೂಲಗಳ ಪ್ರಕಾರ ಯುವತಿ ಕ್ಲಾಸ್​ 12ರಲ್ಲಿ ಟಾಪರ್​ ಆಗಿದ್ದರೂ ಆಕೆಗೆ ಇಷ್ಟವಿಲ್ಲದ ಕಾಲೇಜಿಗೆ ಅದರ ನಂತರ ಸೇರಿಸಲಾಗಿತ್ತು ಎನ್ನಲಾಗಿದೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ