Onion Price: ಗಗನಕ್ಕೇರಿದ ತರಕಾರಿ ಬೆಲೆ; ಈರುಳ್ಳಿ ರೇಟ್ ಕೇಳಿದರೆ ದಂಗಾಗ್ತೀರ!

ಕರ್ನಾಟಕ, ಆಂಧ್ರಪ್ರದೇಶ,  ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಈ ವರ್ಷ ಪ್ರವಾಹ ಉಂಟಾಗಿದ್ದರಿಂದ ಈ ರಾಜ್ಯಗಳಲ್ಲಿ ಈರುಳ್ಳಿ ಬೆಳೆ ಬಹಳ ಕಡಿಮೆಯಾಗಿದೆ.

Sushma Chakre | news18-kannada
Updated:September 22, 2019, 4:35 PM IST
Onion Price: ಗಗನಕ್ಕೇರಿದ ತರಕಾರಿ ಬೆಲೆ; ಈರುಳ್ಳಿ ರೇಟ್ ಕೇಳಿದರೆ ದಂಗಾಗ್ತೀರ!
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಸೆ. 22): ಸಸ್ಯಾಹಾರವೇ ಇರಲಿ ಮಾಂಸಾಹಾರವೇ ಇರಲಿ ಈರುಳ್ಳಿ ಇದ್ದರೆ ಮಾತ್ರ ಅಡುಗೆ ಪರಿಪೂರ್ಣವಾಗುತ್ತದೆ. ಆದರೆ, ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಲೇ ಇದೆ. ಕಳೆದ ವಾರ 50 ರೂ ಇದ್ದ ಈರುಳ್ಳಿ ಬೆಲೆ ಈಗ 80ಕ್ಕೆ ಏರುವ ಸಾಧ್ಯತೆಯಿದೆ. ಈರುಳ್ಳಿ ಬೆಲೆ ಹೆಚ್ಚಾಗಿ, ಮಂಡಿಗಳಲ್ಲಿ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ತರಕಾರಿ ಮಂಡಿಗಳಲ್ಲಿ ಈರುಳ್ಳಿ ಸಂಗ್ರಹವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.

ಕಳೆದ ವಾರ ಈರುಳ್ಳಿ ಪ್ರತಿ ಕೆ.ಜಿ.ಗೆ ದೆಹಲಿಯಲ್ಲಿ 57 ರೂ., ಮುಂಬೈನಲ್ಲಿ 56 ರೂ, ಕೊಲ್ಕತ್ತಾದಲ್ಲಿ 48 ರೂ, ಚೆನ್ನೈನಲ್ಲಿ 34 ರೂ, ಗುರುಗ್ರಾಮದಲ್ಲಿ 60 ರೂ.ನಂತೆ ಮಾರಾಟವಾಗುತ್ತಿತ್ತು. ವ್ಯಾಪಾರ ವಹಿವಾಟಿನ ಅಂಕಿ-ಅಂಶದ ಪ್ರಕಾರ ಈ ವಾರ 70ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ.

ಇದುವರೆಗೂ ಮಂಡಿಗಳಲ್ಲಿ ಸಂಗ್ರಹಿಸಿಡಲಾಗಿದ್ದ ಈರುಳ್ಳಿ ಬೆಳೆಗಳು ದೇಶಾದ್ಯಂತ ಸರಬರಾಜಾಗಿ ಮಾರಾಟವಾಗಿವೆ. ಬೇಸಿಗೆಯಲ್ಲಿ ಬೆಳೆಯಲಾದ ಈರುಳ್ಳಿಗಳು ನವೆಂಬರ್​ ನಂತರ ಮಾರುಕಟ್ಟೆ ಪ್ರವೇಶಿಸಲಿವೆ. ಈ ಬಾರಿ ಮಳೆಯೂ ಹೆಚ್ಚಾಗಿದ್ದರಿಂದ ಬಹುಪಾಲು ಈರುಳ್ಳಿ ಬೆಳೆ ಕೊಳೆತುಹೋಗಿದೆ. ನವೆಂಬರ್​ವರೆಗೆ ಬೇಕಾಗುವಷ್ಟು ಈರುಳ್ಳಿ ಸಂಗ್ರಹ ದೇಶದಲ್ಲಿಲ್ಲ. ಹೀಗಾಗಿ, ಈರುಳ್ಳಿ ಬೆಲೆ ವಾರದಿಂದ ವಾರಕ್ಕೆ ಹೆಚ್ಚಳವಾಗುತ್ತಿದೆ. ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯವಾದ ಮಹಾರಾಷ್ಟ್ರವನ್ನು ಏಷ್ಯಾದ ವಿಸ್ತಾರವಾದ ಈರುಳ್ಳಿ ಮಾರುಕಟ್ಟೆಯೆಂದು ಪರಿಗಣಿಸಲಾಗಿದೆ. ಆದರೆ, ಈ ಬಾರಿ ಮುಂಬೈನಲ್ಲಿ ಉಂಟಾದ ಪ್ರವಾಹದಿಂದ ಈರುಳ್ಳಿ ಕೊಳೆತು ರೈತರು ಸಂಕಷ್ಟದಲ್ಲಿದ್ದಾರೆ.

ವರದಕ್ಷಿಣೆಗಾಗಿ ಸೊಸೆಯನ್ನು ಥಳಿಸಿದ ನಿವೃತ್ತ ನ್ಯಾಯಮೂರ್ತಿ; ಹಲ್ಲೆಯ ವಿಡಿಯೋ ಬಿಡುಗಡೆ ಮಾಡಿದ ಸಂತ್ರಸ್ತೆ

ವಿವಿಧ ಏಜೆನ್ಸಿಗಳಿಂದ ಈರುಳ್ಳಿಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಂಡು ನಂತರ ಮಾರುಕಟ್ಟೆಗೆ ಕಳುಹಿಸಲು ಕೇಂದ್ರ  ಸರ್ಕಾರ ಚಿಂತನೆ ನಡೆಸಿದೆ. ಈರುಳ್ಳಿ ಬೆಲೆ ಹೆಚ್ಚಳವಾಗುವುದನ್ನು ನೋಡಿದರೆ ಕಳೆದ ಬಾರಿ ಆದಂತೆ ಹಣ್ಣುಗಳಿಗಿಂತ ಹೆಚ್ಚು ಬೆಲೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಕೇಂದ್ರ ಸರ್ಕಾರ 56 ಸಾವಿರ ಟನ್​ನಷ್ಟು ಈರುಳ್ಳಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ 16 ಸಾವಿರ ಟನ್​ ಈರುಳ್ಳಿಯನ್ನು ಈಗಾಗಲೇ ಮಾರುಕಟ್ಟೆಗೆ ಕಳುಹಿಸಲಾಗಿದೆ. ದೆಹಲಿಯೊಂದರಲ್ಲೇ 1 ದಿನಕ್ಕೆ 200 ಟನ್ ಈರುಳ್ಳಿ ಮಾರಾಟವಾಗಿದೆ.

ನಾನು ಮಾರಿಕೊಂಡವನಲ್ಲ, ಜೆಡಿಎಸ್​ಗೆ ವಿಷ ಇಟ್ಟಿದ್ದು ಯಾರೆಂದು ಜನತೆಗೆ ಗೊತ್ತಿದೆ; ಮಾಜಿ ಶಾಸಕ ಹೆಚ್. ವಿಶ್ವನಾಥ್

ದಕ್ಷಿಣ ಭಾರತದ ರಾಜ್ಯಗಳಲ್ಲಿಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಈರುಳ್ಳಿ ಬೆಳೆಗಳು ಕೊಳೆತುಹೋಗಿವೆ. ಹೀಗಾಗಿ, ಬೆಳೆ ಕಡಿಮೆಯಾಗಿ ಬೆಲೆ ಏರಿಕೆಯಾಗುತ್ತಿದೆ. ಇಡೀ ದೇಶದಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಬೇರೆ ದೇಶಗಳಿಗೆ ಈರುಳ್ಳಿಯನ್ನು ರಫ್ತು ಮಾಡುವುದು ಕೂಡ ಕಷ್ಟವಾಗಿದೆ. ಕರ್ನಾಟಕ, ಆಂಧ್ರಪ್ರದೇಶ,  ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಈ ವರ್ಷ ಪ್ರವಾಹ ಉಂಟಾಗಿದ್ದರಿಂದ ಈ ರಾಜ್ಯಗಳಲ್ಲಿ ಈರುಳ್ಳಿ ಬೆಳೆ ಬಹಳ ಕಡಿಮೆಯಾಗಿದೆ. ಹೀಗಾಗಿ, ಆ ಭಾಗದಿಂದ ಬರುವ ಈರುಳ್ಳಿಗಳು ಮಾರುಕಟ್ಟೆಗೆ ಬಂದಿಲ್ಲ.
First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ