ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ(Pakistan) ದಿನನಿತ್ಯ ಬಳಸುವ ವಸ್ತುಗಳು (Daily Items)ದುಬಾರಿ ಬೆಲೆಯಾಗಿದ್ದು, ಮತ್ತೊಮ್ಮೆ ಶ್ರೀಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. 2022 ರಲ್ಲಿ ಉಂಟಾದ ಭಾರೀ ಪ್ರವಾಹ (Floods) ಉಂಟಾಗಿದ್ದು, ಜನ ಚೇತರಿಸಿಕೊಳ್ಳುವ ಮುನ್ನವೇ ಹಣದುಬ್ಬರ ಉಂಟಾಗಿದೆ. 2022ರ ಜನವರಿ 6 ರಂದು ಈರುಳ್ಳಿ (Onion) ಕೆಜಿಗೆ 36.7 ರೂ. ಇತ್ತು. ಆದರೆ 2023ರ ಜನವರಿ 5ರ ವೇಳೆಗೆ ಈರುಳ್ಳಿ ಬೆಲೆ 220.4 ರೂ. ಆಗಿದೆ. ಈರುಳ್ಳಿ ಬೆಲೆ ವರ್ಷದಿಂದ ವರ್ಷಕ್ಕೆ 501 ರಷ್ಟು ಏರಿಕೆಯಾಗಿದೆ. ಡೀಸೆಲ್ ಬೆಲೆ (Diesel price) 61 ರಷ್ಟು ಏರಿಕೆಯಾಗಿದೆ ಮತ್ತು ಪೆಟ್ರೋಲ್ ಬೆಲೆ (Petrol Price) ಪ್ರತಿ 48 ರಷ್ಟು ಏರಿಕೆಯಾಗಿದೆ. ಅಕ್ಕಿ, ಬೇಳೆಕಾಳುಗಳು ಮತ್ತು ಗೋಧಿಗಳ ಬೆಲೆಯು ಒಂದು ವರ್ಷದಲ್ಲಿ ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಿದೆ.
2022ರಲ್ಲಿ ಪಾಕಿಸ್ತಾನ ಹಣದುಬ್ಬರ ದ್ವಿಗುಣಗೊಂಡಿದೆ
ಒಟ್ಟಾರೆಯಾಗಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಪ್ರಕಾರ, ಪಾಕಿಸ್ತಾನದಲ್ಲಿ ಮುಖ್ಯವಾಗಿ ಹಣದುಬ್ಬರವು ಡಿಸೆಂಬರ್ 2021 ರಲ್ಲಿ ಶೇಕಡಾ 12.3 ರಿಂದ ಡಿಸೆಂಬರ್ 2022 ರಲ್ಲಿ ಶೇಕಡಾ 24.5 ಕ್ಕೆ ದ್ವಿಗುಣಗೊಂಡಿದೆ. ಬೆಲೆ ಏರಿಕೆ ಹೆಚ್ಚಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಉಂಟಾಗಿದೆ. ಆಹಾರ ಹಣದುಬ್ಬರ ದರವು ಡಿಸೆಂಬರ್ 2021 ರಲ್ಲಿ ಶೇಕಡಾ 11.7 ರಿಂದ ಡಿಸೆಂಬರ್ 2022 ರಲ್ಲಿ ಶೇಕಡಾ 32.7 ಕ್ಕೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಮತ್ತು ದೇಶವು ಕೇವಲ ಚಿಲ್ಲರೆ ಮಾರುಕಟ್ಟೆಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಪಾಕಿಸ್ತಾನದ ಸ್ಥೂಲ ಆರ್ಥಿಕ ಚಿತ್ರಣವೂ ಕಠೋರವಾಗಿ ಕಾಣುತ್ತದೆ.
ಒಂದು ವರ್ಷದಲ್ಲಿ ಅರ್ಧದಷ್ಟು ಕಡಿಮೆಯಾದ ತನ್ನ ವಿದೇಶಿ ವಿನಿಮಯ ಸಂಗ್ರಹವನ್ನು ಪಾಕಿಸ್ತಾನ ವೇಗವಾಗಿ ಕಳೆದುಕೊಳ್ಳುತ್ತಿದೆ. ದೇಶದ ವಿದೇಶೀ ವಿನಿಮಯ ಮೀಸಲು 2021ರ ಡಿಸೆಂಬರ್ನಲ್ಲಿ USD 23.9 ಬಿಲಿಯನ್ ಆಗಿತ್ತು ಮತ್ತು 2022ರ ಡಿಸೆಂಬರ್ನಲ್ಲಿ ಕೇವಲ USD 11.4 ಶತಕೋಟಿಗೆ ಕುಸಿಯಿತು.
ವಿದೇಶಿ ವಿನಿಮಯವು ತನ್ನ ದೇಶೀಯ ಕರೆನ್ಸಿಯ ಮೌಲ್ಯವನ್ನು ಸ್ಥಿರ ದರದಲ್ಲಿ ಮತ್ತು ಡಾಲರ್ಗಿಂತ ಕಡಿಮೆ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಆಗುವ ವ್ಯರ್ಥವನ್ನು ನಿರ್ವಹಿಸುತ್ತದೆ ಮತ್ತು ದೇಶದ ಅಂತರರಾಷ್ಟ್ರೀಯ ಹಣಕಾಸು ಜವಾಬ್ದಾರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಆಂತರಿಕ ಯೋಜನೆಗಳಿಗೆ ಧನಸಹಾಯ ಮತ್ತು ವಿದೇಶಿ ಹೂಡಿಕೆದಾರರಿಗೆ ಭರವಸೆ ನೀಡುವುದು ದೇಶಗಳು ವಿದೇಶಿ ಮೀಸಲುಗಳನ್ನು ಉಳಿಸಿಕೊಳ್ಳಲು ಇತರ ಕಾರಣಗಳಾಗಿವೆ.
ಇತ್ತೀಚಿಗಷ್ಟೇ ಪಾಕ್ನಲ್ಲಿ ಹಿಟ್ಟಿನ ಬೆಲೆ ಏರಿಕೆ
ಪಾಕಿಸ್ತಾನದಲ್ಲಿ ಆರ್ಥಿಕತೆ ಕುಸಿಯುತ್ತಿರುವುದರಿಂದ ಈಗಾಗಲೇ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಇತ್ತೀಚೆಗಷ್ಟೇ ಹಿಟ್ಟಿನ ಬೆಲೆ ಏರಿಕೆಯನ್ನು ಕೂಡ ಜನ ಎದುರಿಸುತ್ತಿದ್ದಾರೆ. ಸರ್ಕಾರ ನಾಗಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಎಲ್ಪಿಜಿ (ಅಡುಗೆ ಅನಿಲ) ಅಗತ್ಯಗಳನ್ನು ಪೂರೈಸಲು ಜನರಿಗೆ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಬಳಸುವಂತೆ ಒತ್ತಾಯಿಸಲಾಗುತ್ತಿದೆ.
ಮಾರುಕಟ್ಟೆ, ಮಾಲ್, ಮದುವೆ ಹಾಲ್ ಕೂಡ ಬಂದ್
ಇನ್ನೊಂದೆಡೆ ಪಾಕಿಸ್ತಾನ ಸರ್ಕಾರ ಇಂಧನ ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು, ಮಾರುಕಟ್ಟೆ ಹಾಗೂ ಮಾಲ್ಗಳನ್ನು ರಾತ್ರಿ 8:30ಕ್ಕೆ ಮುಚ್ಚಲಾಗುತ್ತದೆ. ಮದುವೆ ಮಂಟಪಗಳನ್ನು ರಾತ್ರಿ 10:00 ಗಂಟೆಗೆ ಮುಚ್ಚಲಾಗುತ್ತದೆ. ಈ ಕ್ರಮದಿಂದ ನಮಗೆ 60 ಶತಕೋಟಿ ರೂ. ಉಳಿತಾಯವಾಗುತ್ತದೆ ಎಂದು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ