ಸರ್ಕಾರಿ ನೌಕರಿ: ONGC ಸಂಸ್ಥೆಯ 4 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅಕೌಂಟೆಂಟ್, ಸಹಾಯಕ ಎಚ್ಆರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಕ್ಯಾನಿಕ್, ವೆಲ್ಡರ್, ಕಂಪ್ಯೂಟರ್ ಆಪರೇಟರ್ ಇತ್ಯಾದಿ..

zahir | news18
Updated:March 22, 2019, 4:09 PM IST
ಸರ್ಕಾರಿ ನೌಕರಿ: ONGC ಸಂಸ್ಥೆಯ 4 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
.
zahir | news18
Updated: March 22, 2019, 4:09 PM IST
ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) 4 ಸಾವಿರಕ್ಕೂ ಹೆಚ್ಚಿನ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಇಲ್ಲಿ ಅಕೌಂಟೆಂಟ್, ಸಹಾಯಕ ಎಚ್ಆರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಕಾನಿಕ್, ವೆಲ್ಡರ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಹಲವು ಹುದ್ದೆಗಳು ಖಾಲಿಯಿದ್ದು, ಆಸಕ್ತರು ಮಾರ್ಚ್ 28 ರೊಳಗೆ ಅರ್ಜಿ ಸಲ್ಲಿಸಬೇಕಿದೆ. ಅಭ್ಯರ್ಥಿಗಳ ಆಯ್ಕೆಯು ವಿವಿಧ ನಗರಗಳನ್ನು ಕೇಂದ್ರೀಕರಿಸಿ ನಡೆಯಲಿದ್ದು, ಆಯಾ ರಾಜ್ಯದ ಅರ್ಜಿದಾರರನ್ನು ಅರ್ಹತೆಗೆ ಅನುಗುಣವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

ಹುದ್ದೆಗಳ ಹೆಸರು:
ಅಕೌಂಟೆಂಟ್, ಸಹಾಯಕ ಎಚ್ಆರ್, ಎಲೆಕ್ಟ್ರಿಷಿಯನ್, ಫಿಟ್ಟರ್, ಮೆಕಾನಿಕ್, ವೆಲ್ಡರ್, ಕಂಪ್ಯೂಟರ್ ಆಪರೇಟರ್ ಇತ್ಯಾದಿ

ವಿದ್ಯಾರ್ಹತೆ:
ಐಟಿಐ ಪದವಿ ಹೊಂದಿರುವವರು ಸಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ಅರ್ಹತೆ ಹೊಂದಿರಬೇಕಾಗುತ್ತದೆ.

ವಯೋಮಿತಿ:ಅರ್ಜಿದಾರನ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯೋಮಿತಿ 24 ವರ್ಷಗಳು

ಆಯ್ಕೆ ಪ್ರಕ್ರಿಯೆ:
ಆಯಾ ಹುದ್ದೆಗಳಿಗೆ ONGC ವೆಬ್​ಸೈಟ್​ನಲ್ಲಿ ಅರ್ಹತೆಗಳನ್ನು ತಿಳಿಸಲಾಗಿದ್ದು, ಇದರ ಅನುಗುಣವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ:
ಒಎನ್​ಜಿಸಿಯ ಅಧಿಕೃತ ವೆಬ್​ಸೈಟ್​ www.ongcapprentices.co.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಚಡ್ಡಿಗೂ ಸಿಕ್ತು ಸ್ಥಾನ..!

ಪ್ರಮುಖ ದಿನಾಂಕಗಳು:
ಅರ್ಜಿ ಹಾಕಲು ಕೊನೆಯ ದಿನಾಂಕ - 28 ಮಾರ್ಚ್ 2019

ಇದನ್ನೂ ಓದಿ: ಯಜಮಾನನ ಮಾನವೀಯತೆ: ಹಾಸಿಗೆ ಹಿಡಿದ ನಟನ ನೆರವಿಗೆ ನಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್
First published:March 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ