ವಿಶ್ವದಲ್ಲಿ Omicronಗೆ ಮೊದಲ ಬಲಿ: ಹೊಸ ರೂಪಾಂತರಿಗೆ ತುತ್ತಾಗಿದ್ದ ಬ್ರಿಟನ್ ವ್ಯಕ್ತಿ ಸಾವು!

UK omicron death: ಓಮಿಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (UK PM Boris Johnson) ಅವರೇ ದೃಢಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾದ (Corona) ಹೊಸ ರೂಪಾಂತರ ಓಮಿಕ್ರಾಸ್​​ (Omicron) ವೈರಸ್​​ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿ ಆತಂಕ ಮೂಡಿಸಿರುವ ಬೆನ್ನಲ್ಲೇ, ಅಘಾತಕಾರಿ ಸುದ್ದಿ ಹೊರ ಬಿದ್ದಿದೆ. ಓಮಿಕ್ರಾನ್​​ಗೆ ಮೊದಲ ಬಲಿಯಾಗಿದೆ(Omicron first death). ಓಮಿಕ್ರಾನ್​​ ಸೋಂಕಿಗೆ ತುತ್ತಾಗಿದ್ದ ಬ್ರಿಟನ್​ನ(UK) ವ್ಯಕ್ತಿ ಮೃತಪಟ್ಟಿದ್ದಾರೆ. ಓಮಿಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (UK PM Boris Johnson) ಅವರೇ ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ರೂಪಾಂತರದ ಓಮಿಕ್ರಾನ್​​ ವಿರುದ್ಧ ಮಹತ್ವಾಕಾಂಕ್ಷೆಯ ಬೂಸ್ಟರ್ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದೂ ಇದೇ ವೇಳೆ ಜಾನ್ಸನ್​ ಘೋಷಿಸಿದರು.

ಲಸಿಕಾ ಕೇಂದ್ರವೊಂದಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಪ್ರಧಾನಿ ಬೋರಿಸ್,​ ದುಃಖಕರ ವಿಷಯ ಬ್ರಿಟನ್​ನಲ್ಲಿ ಸಂಭವಿಸಿದೆ. Omicronಗೆ ತುತ್ತಾಗಿದ್ದ ರೋಗಿಯು ಸಾವನ್ನಪ್ಪಿದ್ದಾರೆ. ಆದರೂ ಹೊಸ ರೂಪಾಂತರಿ ಹೆಚ್ಚು ಅಪಾಯಕಾರಿ ಎಂದು ನಾನು ಭಾವಿಸೋದಿಲ್ಲ, ಸೌಮ್ಯ ಲಕ್ಷಗಳೇ ಇವೆ. ಓಮಿಕ್ರಾನ್​​ ಹೆಚ್ಚು ಜನರಿಗೆ ಹಬ್ಬದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಬೂಸ್ಟರ್​ ಡೋಸ್​ಗೆ ಮುಂದಾಗಬೇಕು ಎಂದು ಬ್ರಿಟನ್​ ಪ್ರಜೆಗಳಲ್ಲಿ ಮನವಿ ಮಾಡಿಕೊಂಡರು. ಭಾರತದಲ್ಲಿ ಈವರೆಗೆ 38 ಮಂದಿಯಲ್ಲಿ ಓಮಿಕ್ರಾನ್​ ರೂಪಾಂತರಿ ಇರುವುದು ದೃಢಪಟ್ಟಿದೆ.

ಇದನ್ನೂ ಓದಿ: Omicron Threat: ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇರುವುದಿಲ್ಲ

ರಾಜ್ಯದಲ್ಲಿ ಓಮ್ರಿಕಾನ್​ ಭೀತಿ

ದೇಶದಲ್ಲಿ ಮೊದಲ ಎರಡು ಓಮಿಕ್ರಾನ್​ ಪ್ರಕರಣಗಳು ಬೆಂಗಳೂರಿನಲ್ಲೇ ಪತ್ತೆಯಾಗಿತ್ತು. ವರದಿ ವರುವಷ್ಟರಲ್ಲಿ ವಿದೇಶಿ ವ್ಯಕ್ತಿ ದೇಶವನ್ನು ತೊರೆದು ದುಬೈಗೆ ತೆರಳಿದ್ದರು. ಮತ್ತೊಬ್ಬ ಸೋಂಕಿತರು ಬೆಂಗಳೂರಿನ ವೈದ್ಯರಾಗಿದ್ದರು. ಯಾವುದೇ ವಿದೇಶ ಪ್ರಯಾಣವಿಲ್ಲದಿದ್ದರೂ ವೈದ್ಯರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ವೈದ್ಯರು ಚೇತರಿಸಿಕೊಳ್ಳುತ್ತಿದ್ದಾರೆ.

ಓಮಿಕ್ರಾನ್ ಎಷ್ಟು ವೇಗವಾಗಿ ಹರಡುತ್ತಿದೆ..?

ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್‌ನ ತ್ವರಿತ ಏರಿಕೆಯು ಸಂಶೋಧಕರನ್ನು ಹೆಚ್ಚು ಚಿಂತೆ ಮಾಡುತ್ತದೆ. ಏಕೆಂದರೆ ಈ ರೂಪಾಂತರವು ಬೇರೆಡೆ COVID-19 ಪ್ರಕರಣಗಳಲ್ಲಿ ಸ್ಫೋಟಕ ಹೆಚ್ಚಳ ಉಂಟುಮಾಡಬಹುದು ಎಂದು ಸೂಚಿಸುತ್ತದೆ. ಡಿಸೆಂಬರ್ 1ರಂದು, ದಕ್ಷಿಣ ಆಫ್ರಿಕಾದಲ್ಲಿ 8,561 ಪ್ರಕರಣಗಳು ದಾಖಲಾಗಿವೆ. ಇದು, ನವೆಂಬರ್ 26ರಂದು 3,402 ಮತ್ತು ನವೆಂಬರ್ ಮಧ್ಯದಲ್ಲಿ ದಿನಕ್ಕೆ ಹಲವಾರು ನೂರು ಪ್ರಕರಣಗಳು ವರದಿಯಾಗಿದ್ದಕ್ಕಿಂತ ಹಲವು ಪಟ್ಟು ಹೆಚ್ಚು. ಹೆಚ್ಚಿನ ಬೆಳವಣಿಗೆಯು ಜೋಹಾನ್ಸ್‌ಬರ್ಗ್‌ನ ನೆಲೆಯಾದ ಗೌಟೆಂಗ್ ಪ್ರಾಂತ್ಯದಲ್ಲಿ ಸಂಭವಿಸಿದೆ.

ಓಮಿಕ್ರಾನ್ ಸೋಂಕಿನ ಲಕ್ಷಣಗಳು

ಓಮಿಕ್ರಾನ್‌ ರೋಗಿಗಳು ತೀವ್ರ ಸುಸ್ತು, ಸೌಮ್ಯವಾದ ಸ್ನಾಯು ನೋವು, ಗಂಟಲು ಕೆರೆತ ಮತ್ತು ಒಣ ಕೆಮ್ಮನ್ನು ವರದಿ ಮಾಡಿದ್ದಾರೆ ಎಂದು ವೈದ್ಯೆ AFPಗೆ ತಿಳಿಸಿದ್ದಾರೆ. ಕೆಲವರು ಮಾತ್ರ ಸ್ವಲ್ಪ ಹೆಚ್ಚಿನ ತಾಪಮಾನ ಹೊಂದಿದ್ದರು ಎಂದೂ ಮಾಹಿತಿ ನೀಡಿದ್ದಾರೆ. ಹೆಚ್ಚಿನ ರೋಗಿಗಳು ಲಕ್ಷಣ ರಹಿತರಾಗಿದ್ದಾರೆ.  ವರದಿಗಳ ಪ್ರಕಾರ, ಇತರ ದೇಶಗಳಲ್ಲಿ ಈ ಹೊಸ ರೂಪಾಂತರದೊಂದಿಗೆ ಕಂಡುಬಂದ ರೋಗಿಗಳು ತೀವ್ರ ಅನಾರೋಗ್ಯವನ್ನು ವರದಿ ಮಾಡಿಲ್ಲ ಮತ್ತು ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ. ಗಂಟಲು ಕೆರೆತ, ವಿಪರೀತ ಸುಸ್ತು, ಲಘು ಜ್ವರ ಇವು ಈ ಓಮಿಕ್ರಾನ್​​ನ ಕೆಲವು ಲಕ್ಷಣಗಳಾಗಿವೆ. ದೇಶದಲ್ಲಿ ಪತ್ತೆಯಾದ ಒಮಿಕ್ರಾನ್ ಕೊರೋನಾ ವೈರಸ್ ರೂಪಾಂತರದ ಒಟ್ಟು 19 ಪ್ರಕರಣಗಳಲ್ಲಿ 16 ಲಕ್ಷಣರಹಿತವಾಗಿವೆ ಎಂದು ಬೋಟ್ಸ್ವಾನಾದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.

ಇದನ್ನೂ ಓದಿ: Vaccine ಪರಿಣಾಮ ಕಡಿತಗೊಳಿಸಿ, ವೇಗವಾಗಿ ಹರಡುತ್ತೆ ಓಮೈಕ್ರಾನ್: WHO ಎಚ್ಚರಿಕೆಯ ಸಂದೇಶ

COVID-19 ರೂಪಾಂತರ ಓಮಿಕ್ರಾನ್ ಸೋಂಕಿನ ಮುಖ್ಯ ಲಕ್ಷಣಗಳು:

ಗಂಟಲು ಕೆರೆತ
ಮೈ-ಕೈ ನೋವು, ತಲೆನೋವು, ಆಯಾಸ,
ಹೆಚ್ಚಿನ ತಾಪಮಾನ (ಎಲ್ಲಾ ಸಂದರ್ಭಗಳಲ್ಲಿ ಅಲ್ಲ)
ಹೊಸ, ನಿರಂತರ ಕೆಮ್ಮು (ಎಲ್ಲಾ ಸಂದರ್ಭಗಳಲ್ಲಿ ಅಲ್ಲ)
ನಿಮ್ಮ ವಾಸನೆ ಅಥವಾ ರುಚಿಯ ಗ್ರಹಿಕೆ ನಷ್ಟ (ಎಲ್ಲಾ ಸಂದರ್ಭಗಳಲ್ಲಿ ಅಲ್ಲ)
Published by:Kavya V
First published: