ದುಬೈನಲ್ಲಿ ಸಿಗುವ ಈ ವಡಾ ಪಾವ್ ಬೆಲೆ ಕೇಳಿದರೆ ನೀವು ಬೆಚ್ಚಿ ಬೀಳುವುದು ಖಂಡಿತ!

ಬುಧವಾರದಂದು ಎಂದರೆ ಸೆಪ್ಟೆಂಬರ್ 1 ರಂದು ‘22 ಕ್ಯಾರೆಟ್ ಗೋಲ್ಡ್ ವಡಾ ಪಾವ್’ ಎಂಬ ಹೊಸ ಖಾದ್ಯದ ವೀಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಪೋಸ್ಟ್​ ಮಾಡಿದ ಕೂಡಲೇ ದುಬೈನಲ್ಲಿರುವ ಓ'ಪಾವೊ ಎಂಬ ರೆಸ್ಟೋರೆಂಟ್ ಅಂತರ್ಜಾಲದಲ್ಲಿ ಟ್ರೆಂಡ್​ ಆಗಲು ಆರಂಭಿಸಿತು.

ವಿಶ್ವದ ಮೊದಲ 22 ಕ್ಯಾರೆಟ್ ಒ'ಗೋಲ್ಡ್ ವಡಾಪಾವ್

ವಿಶ್ವದ ಮೊದಲ 22 ಕ್ಯಾರೆಟ್ ಒ'ಗೋಲ್ಡ್ ವಡಾಪಾವ್

  • Share this:
ನೀವು ರಸ್ತೆ ಬದಿಯಲ್ಲಿ ಮಾಡುವಂತಹ ವಡಾ ಪಾವ್ ಖಂಡಿತವಾಗಿಯೂ ರುಚಿ ನೋಡಿರುತ್ತೀರಾ ಮತ್ತು ಅದಕ್ಕೆ ನೀವು ಅಬ್ಬಬ್ಬಾ ಅಂದರೂ  10 ರಿಂದ  20 ರೂಪಾಯಿ ಖರ್ಚು ಮಾಡಿರುತ್ತೀರಿ ಅಂದುಕೊಳ್ಳಿ. ಆದರೆ ಇಲ್ಲೊಂದು ವಡಾ ಪಾವ್ ಇದೆ. ಆದರೆ, ಆ ವಡಾ ಪಾವ್​  ಬೆಲೆಯನ್ನು ಯಾರಿಂದಲೂ ಊಹಿಸಲು ಸಾಧ್ಯವಾಗುವುದಿಲ್ಲ. ಏಕೆ ಅಂತೀರಾ? ಈ ವಡಾ ಪಾವ್ ಅನ್ನು ತಯಾರಿಸಿದ್ದು ನಮ್ಮ ದೇಶದಲ್ಲಿ ಅಲ್ಲ. ದೂರದ ದುಬೈ ನಲ್ಲಿರುವಂತಹ ಒಂದು ರೆಸ್ಟೋರೆಂಟ್ ನಲ್ಲಿ ತಯಾರಾಗಿರುವ ಈ ವಿಶೇಷ ವಾದವಡಾ ಪಾವ್​ ನಿಜಕ್ಕೂ ತುಂಬಾ ಸ್ಪೆಷಲ್​. ಅಂತದ್ದೇನು ವಿಶೇಷತೆ ಇದೆ ಈ ವಡಾ ಪಾವ್​ನಲ್ಲಿ ಅಂತೀರಾ? ಈ ವೈರಲ್ ಆದಂತಹ ವೀಡಿಯೋ ಒಮ್ಮೆ ನೋಡಿ, ನಿಮಗೆ ಒಂದು ಅಚ್ಚರಿಯ ಸಂಗತಿ ಕಾದಿದೆ.  

ಬುಧವಾರದಂದು ಎಂದರೆ ಸೆಪ್ಟೆಂಬರ್ 1 ರಂದು ‘22 ಕ್ಯಾರೆಟ್ ಗೋಲ್ಡ್ ವಡಾ ಪಾವ್’ ಎಂಬ ಹೊಸ ಖಾದ್ಯದ ವೀಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಪೋಸ್ಟ್​ ಮಾಡಿದ ಕೂಡಲೇ ದುಬೈನಲ್ಲಿರುವ ಓ'ಪಾವೊ ಎಂಬ ರೆಸ್ಟೋರೆಂಟ್ ಅಂತರ್ಜಾಲದಲ್ಲಿ ಟ್ರೆಂಡ್​ ಆಗಲು ಆರಂಭಿಸಿತು.
View this post on Instagram


A post shared by O’Pao (@opaodxb)


ಫೋಟೋ ಹಂಚಿಕೆ ಆ್ಯಪ್ ನಲ್ಲಿ ಓ'ಪಾವೊ ಈ ಬಂಗಾರದ ವಡಾ ಪಾವ್ ಹೇಗೆ ತಯಾರಿಸಲಾಯಿತು ಅಂತ ಖಾದ್ಯವನ್ನು ಮಾಡುವ ವಿಧಾನದ ಒಂದು ವೀಡಿಯೋ ತುಣುಕಿನಲ್ಲಿ ಸೆರೆಹಿಡಿದು ಅದನ್ನು ಹಂಚಿಕೊಂಡಿದ್ದಾರೆ. "ನಾವು ವಿಶ್ವದ ಮೊದಲ 22 ಕ್ಯಾರೆಟ್ ಒ'ಗೋಲ್ಡ್ ವಾಡಾ ಪಾವ್ ಅನ್ನು ತಯಾರಿಸಿದ್ದೇವೆ" ಎಂಬ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.

ಇದನ್ನೂ ಓದಿ: Thalaivii Release: ದಿ ಜಯಲಲಿತಾರ ಸ್ಮಾರಕಕ್ಕೆ ಭೇಟಿ ಕೊಟ್ಟ ನಟಿ Kangana Ranaut

ಈ ಬಂಗಾರದ ವಡಾಪಾವ್ ತಯಾರಿಸಲು ಬೆಣ್ಣೆ ಮತ್ತು ಚೀಸ್ ಅನ್ನು ಸಹ ಉಪಯೋಗಿಸಿದ್ದು,  ಆಲೂಗಡ್ಡೆಯ ಪ್ಯಾಟಿಯನ್ನು ತಯಾರಿಸಿದ ಬಗೆಯನ್ನು ತೋರಿಸಿದ್ದಾರೆ. ವಡಾವನ್ನು ಚಿನ್ನದಂತೆ ಕಾಣುವ ಹಿಟ್ಟಿನಲ್ಲಿ ಅದ್ದಿ, ನಂತರ ಬಿಸಿ ಎಣ್ಣೆಯ ಬಾಣಲೆಯಲ್ಲಿ ಹಾಕಿ ಹುರಿಯಲಾಯಿತು. ವಡಾಪಾವ್ ಅನ್ನು ಸಿಹಿ ಆಲೂಗಡ್ಡೆ ಫ್ರೈಸ್ ಮತ್ತು ಪುದೀನಾ ನಿಂಬೆ ಪಾನಕದೊಂದಿಗೆ ಅಲಂಕಾರಿಕ ಮರದ ಪೆಟ್ಟಿಗೆಯಲ್ಲಿ ನೀಡಲಾಗುತ್ತದೆ ಎಂಬುದನ್ನು ವೀಡಿಯೋ ದಲ್ಲಿ ನೋಡಬಹುದಾಗಿದೆ.

ವಿಶ್ವದ ಮೊದಲ 22 ಕ್ಯಾರೆಟ್ ಒ'ಗೋಲ್ಡ್ ವಡಾಪಾವ್

"ವಿಶ್ವದ ಮೊದಲ 22 ಕ್ಯಾರೆಟ್ ಒ'ಗೋಲ್ಡ್ ವಡಾ ಪಾವ್ ಅನ್ನು ಜನರ ಮುಂದೆ ಬಿಡುಗಡೆ ಮಾಡಲು ನಾವು ತುಂಬಾನೇ ಸಂತೋಷ ಪಡುತ್ತೇವೆ" ಎಂದು ಓ'ಪಾವೊ ತಮ್ಮ ಪೋಸ್ಟ್​ನ ಶೀರ್ಷಿಕೆಯಲ್ಲಿ ತಿಳಿಸಿದ್ದಾರೆ.

ಈ ಬಂಗಾರದ ವಡಾ ಪಾವ್ ಬೆಲೆ ಭಾರತದ ರೂಪಾಯಿಗಳಲ್ಲಿ ಅಂದಾಜು 1,968 ರೂಪಾಯಿ ಆಗಿದ್ದು, ಈ ಗೋಲ್ಡ್ ವಡಾ ಪಾವ್​ನ ವೀಡಿಯೊವನ್ನು ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಅಚ್ಚರಿ ವ್ಯಕ್ತ ಪಡಿಸಿದ್ದಾರೆ ಹಾಗೂ ತಮ್ಮ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋವನ್ನು ಈಗಾಗಲೇ ತುಂಬಾ ಜನರು ವೀಕ್ಷಿಸಿದ್ದು, 700ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ: ಗರ್ಲ್​ಫ್ರೆಂಡ್ಸ್​​ಗೆ ಸಹೋದರಿಯ ಬಟ್ಟೆಯನ್ನು ಉಡುಗೊರೆಯಾಗಿ ಕೊಡುತ್ತಿದ್ದ Ranbir Kapoor..!

ವಡಾ ಪಾವ್ ಮಹಾರಾಷ್ಟ್ರದಲ್ಲಿ ಪ್ರಧಾನವಾಗಿ ಲಭ್ಯವಿರುವ ಒಂದು ಭಕ್ಷ್ಯವಾಗಿದ್ದು, ಇದನ್ನು ಚಟ್ನಿ ಮತ್ತು ಮಸಾಲಾಗಳೊಂದಿಗೆ ಎರಡು ತುಂಡು ಪಾವ್ ನಡುವೆ ಆಲೂಗಡ್ಡೆ ಪ್ಯಾಟಿಯಿಂದ ತಯಾರಿಸಲಾಗುತ್ತದೆ. ಈಗ ಈ ವಡಾ ಪಾವ್ ಎಲ್ಲ ಕಡೆಯಲ್ಲೂ ಲಭ್ಯವಿದ್ದರೂ, ನಿಮಗೆ ಮಹಾರಾಷ್ಟ್ರದ ವಡಾ ಪಾವ್ ರುಚಿ ಎಲ್ಲಿಯೂ ಸಿಗುವುದಿಲ್ಲ.
Published by:Anitha E
First published: