1 ಕೆ.ಜಿ.ಈರುಳ್ಳಿಗೆ 25 ರೂಪಾಯಿ; ಖರೀದಿಗಾಗಿ ಮುಗಿಬಿದ್ದ ಜನರು

ಈರುಳ್ಳಿ ಬೆಲೆ ಹೆಚ್ಚಾಗಿರುವುದರಿಂದ ಬಡವರ್ಗದ ಜನರಿಗೆ ಕೊಂಡುಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ಕೆಲವು ಕಡೆ ಸ್ವಯಂ ಸೇವಕರು ಅಥವಾ ಸಂಘಸಂಸ್ಥೆಗಳು ಕಡಿಮೆ ದರದಲ್ಲಿ ಬಡವರಿಗೆ ಈರುಳ್ಳಿ ಮಾರಾಟ ಮಾಡುತ್ತಿದ್ಧಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಗ್ರಾಹಕರು ಈರುಳ್ಳಿ ಕತ್ತರಿಸುವ ಮುನ್ನವೇ ಅಂದರೆ ಖರೀದಿ ಮಾಡುವಾಗ ಕಣ್ಣೀರು ಸುರಿಸುವಂತಾಗಿದೆ. ಬೆಲೆ ಏರಿಕೆಯಾಗಿದ್ದರೂ ಈರುಳ್ಳಿಗೆ ಅಧಿಕ ಬೇಡಿಕೆ ಇದೆ. ಕನಿಷ್ಠ120ರೂ. ನಿಂದ ಗರಿಷ್ಠ 180ರೂ.ವರೆಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಕಡಿಮೆ ಇರುವುದರಿಂದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈರುಳ್ಳಿ ಬೆಲೆ ಹೆಚ್ಚಾಗಿರುವುದರಿಂದ ಬಡವರ್ಗದ ಜನರಿಗೆ ಕೊಂಡುಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ಕೆಲವು ಕಡೆ ಸ್ವಯಂ ಸೇವಕರು ಅಥವಾ ಸಂಘಸಂಸ್ಥೆಗಳು ಕಡಿಮೆ ದರದಲ್ಲಿ ಬಡವರಿಗೆ ಈರುಳ್ಳಿ ಮಾರಾಟ ಮಾಡುತ್ತಿದ್ಧಾರೆ.

ಈರುಳ್ಳಿ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ಸಿಎಂ ಜಗನ್​ ಮೋಹನ್​ ರೆಡ್ಡಿ ಸರ್ಕಾರ ಈರುಳ್ಳಿ ಮೇಲೆ ಸಬ್ಸಿಡಿ ಘೋಷಣೆ ಮಾಡಿದೆ. ಹೀಗಾಗಿ ಕೆ.ಜಿ 160 ರೂ.ಗಿಂತ ಹೆಚ್ಚಾಗಿದ್ದ ಈರುಳ್ಳಿ ಬೆಲೆ ಈಗ ಕೇವಲ 25 ರೂ. ಆಗಿದೆ. ರಾಜ್ಯಾದ್ಯಂತ ಗ್ರಾಹಕರು ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಲು ಮುಗಿಬೀಳುತ್ತಿದ್ದಾರೆ.

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮಾರುಕಟ್ಟೆಯೊಂದರಲ್ಲಿ (ರಿತು ಬಜಾರ್​​) ಸೋಮವಾರ ಸರ್ಕಾರದ ವತಿಯಿಂದ ಸಬ್ಸಿಡಿ ದರದಲ್ಲಿ 1 ಕೆ.ಜಿ ಈರುಳ್ಳಿಯನ್ನು 25 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಈರುಳ್ಳಿ ಖರೀದಿಸಲು ನಿಂತಿದ್ದ 56 ವರ್ಷದ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ವಿಶ್ವನಾಥ್ ನಮ್ಮ ಗುರುಗಳು, ಅವರನ್ನು ಕೈ​ ಬಿಡುವ ಪ್ರಶ್ನೆಯೇ ಇಲ್ಲ; ಶಾಸಕ ಎಸ್​.ಟಿ.ಸೋಮಶೇಖರ್​​
First published: