HOME » NEWS » National-international » ONE KILLED OVER 60 INJURED IN JALLIKATTU EVENT IN TAMILNADU LG

ಜಲ್ಲಿಕಟ್ಟು ಕ್ರೀಡೆಯಲ್ಲಿ ಅವಘಡ; ಓರ್ವ ಸಾವು, 60 ಮಂದಿಗೆ ಗಾಯ

ಈ ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನ ಒಂದು ಪ್ರಮುಖ ಆಚರಣೆಯಾಗಿದೆ. ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ. ಇದು ಹೋರಿಗಳೊಂದಿಗೆ ಸೆಣಸಾಡುವ ಅಪಾಯಕಾರಿ ಆಟವಾಗಿದೆ.

news18-kannada
Updated:January 20, 2020, 11:45 AM IST
ಜಲ್ಲಿಕಟ್ಟು ಕ್ರೀಡೆಯಲ್ಲಿ ಅವಘಡ; ಓರ್ವ ಸಾವು, 60 ಮಂದಿಗೆ ಗಾಯ
ಜಲ್ಲಿಕಟ್ಟು ಕ್ರೀಡೆ
  • Share this:
ತಮಿಳುನಾಡು(ಜ.20): ತಮಿಳುನಾಡಿನಲ್ಲಿ ಪೊಂಗಲ್​ ಹಬ್ಬದ ಪ್ರಯುಕ್ತ ನಡೆದ ಜಲ್ಲಿಕಟ್ಟು ಕ್ರೀಡೆಯ ವೇಳೆ ಓರ್ವ ಸಾವನ್ನಪ್ಪಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ.  ಅವರಲ್ಲಿ 30 ಜನರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಈ ಜಲ್ಲಿಕಟ್ಟು ಕ್ರೀಡೆಯನ್ನು ಸೇಂಟ್ ಆಂಟೋನಿ ಚರ್ಚ್​​ ಫೆಸ್ಟಿವಲ್​​​ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ವಿವಿಧ  ಕಡೆಗಳಿಂದ ಯುವಕರು ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.

ರೈಲ್ವೆ ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ಒಂದು ಹೋರಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 600 ಹೋರಿಗಳು ಈ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸಿದ್ದವು. ಈ ವೇಳೆ ತಮಿಳುನಾಡಿನ ಸಚಿವ ಜಿ.ಭಾಸ್ಕರನ್​ ಮತ್ತು ಜಿಲ್ಲಾಧಿಕಾರಿ ಜಯಕಾಂತನ್​ ಪಾಲ್ಗೊಂಡಿದ್ದರು.

‘ಪರೀಕ್ಷಾ ಪೆ ಚರ್ಚಾ’: ದೆಹಲಿಯಲ್ಲಿಂದು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ

ಈ ಜಲ್ಲಿಕಟ್ಟು ಕ್ರೀಡೆ ತಮಿಳುನಾಡಿನ ಒಂದು ಪ್ರಮುಖ ಆಚರಣೆಯಾಗಿದೆ. ಮಧುರೈನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಅದ್ದೂರಿಯಾಗಿ ನಡೆಸಲಾಗುತ್ತದೆ. ಇದು ಹೋರಿಗಳೊಂದಿಗೆ ಸೆಣಸಾಡುವ ಅಪಾಯಕಾರಿ ಆಟವಾಗಿದೆ. ಈ ಜಲ್ಲಿಕಟ್ಟು ಸ್ಪರ್ಧೆಯನ್ನು ನಿಷೇಧ ಮಾಡುವಂತೆ ಸುಪ್ರೀಂಕೋರ್ಟ್​​ ಸೂಚನೆ ನೀಡಿದ್ದರೂ ಸಹ ಸಂಪ್ರದಾಯ ಮುರಿಯಲು ಒಪ್ಪದ ತಮಿಳುನಾಡಿನ ಜನ ಪ್ರತಿವರ್ಷ ಈ ಕ್ರೀಡೆಯನ್ನು ಆಯೋಜನೆ ಮಾಡುತ್ತಾರೆ.

ಈ ಬಾರಿ ತಮಿಳುನಾಡಿನ ಮೂರು ಕಡೆ ಜಲ್ಲಿಕಟ್ಟು ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅವನಿಯಪುರಂ(ಮಧುರೈ ಸಮೀಪ), ಪಲಮೇಡು ಮತ್ತು ಅಲಂಕನಲ್ಲೂರ ಗ್ರಾಮಗಳಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆದಿದೆ.

ಮಂಗಳೂರು ಗೋಲಿಬಾರ್; ಕಮೀಶನರ್ ಡಾ.ಹರ್ಷಾ ರಾಜೀನಾಮೆ ನೀಡಿ ಹುದ್ದೆಯ ಘನತೆ ಉಳಿಸಲಿ ಎಂದು ಬಹಿರಂಗ ಪತ್ರ
Youtube Video
First published: January 20, 2020, 7:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories