ಇಂದು ಮುಂಜಾನೆ ದೆಹಲಿಯಲ್ಲಿ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಪೇಪರ್ ಪ್ರಿಂಟಿಂಗ್ ಪ್ರೆಸ್

ಗುರುವಾರ ಬೆಳಗ್ಗೆ ಈ ದುರಂತ ನಡೆದಿದ್ದು, ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಗೆ ದೆಹಲಿಯ ಪಟ್ಪರ್​ಗಂಜ್ ಕೈಗಾರಿಕಾ ಪ್ರದೇಶದ ಪೇಪರ್ ಪ್ರಿಂಟಿಂಗ್ ಪ್ರೆಸ್ ಆಹುತಿಯಾಗಿದೆ.

Sushma Chakre | news18-kannada
Updated:January 9, 2020, 8:13 AM IST
ಇಂದು ಮುಂಜಾನೆ ದೆಹಲಿಯಲ್ಲಿ ಬೆಂಕಿ ಅವಘಡ; ಧಗಧಗನೆ ಹೊತ್ತಿ ಉರಿದ ಪೇಪರ್ ಪ್ರಿಂಟಿಂಗ್ ಪ್ರೆಸ್
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜ. 9): ಇಂದು ಮುಂಜಾನೆ ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ ನಡೆದಿದ್ದು, ಪೇಪರ್ ಪ್ರಿಂಟಿಂಗ್ ಪ್ರೆಸ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಮೃತಪಟ್ಟಿದ್ದಾನೆ. 35 ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ಆರಿಸುವ ಕಾರ್ಯದಲ್ಲಿ ನಿರತವಾಗಿವೆ.

ಗುರುವಾರ ಬೆಳಗ್ಗೆ ಈ ದುರಂತ ನಡೆದಿದ್ದು, ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಗೆ ದೆಹಲಿಯ ಪಟ್ಪರ್​ಗಂಜ್ ಕೈಗಾರಿಕಾ ಪ್ರದೇಶದ ಪೇಪರ್ ಪ್ರಿಂಟಿಂಗ್ ಪ್ರೆಸ್ ಆಹುತಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಎಷ್ಟು ಜನ ಬೆಂಕಿಯಲ್ಲಿ ಸಿಲುಕಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ದೆಹಲಿಯ ಪೀರಾಗರ್ಹಿಯಲ್ಲಿನ ಇನ್​ವರ್ಟರ್​ ಬ್ಯಾಟರೀಸ್​ ಉತ್ಪಾದನಾ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡವೇ ಕುಸಿದು ಬಿದ್ದಿತ್ತು. ಈ ದುರಂತದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸಾವನ್ನಪ್ಪಿದ್ದರು ಹಾಗೂ 14ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಅದಾಗಿ ಒಂದೇ ವಾರದಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದೆ.

ಇದನ್ನೂ ಓದಿ: ಇರಾನ್ ದಾಳಿಯಲ್ಲಿ ಅಮೆರಿಕದ ಯಾವೊಬ್ಬ ಯೋಧರೂ ಮೃತಪಟ್ಟಿಲ್ಲ, ಯುದ್ಧವೂ ಇಲ್ಲ; ಡೊನಾಲ್ಡ್ ಟ್ರಂಪ್ ಸ್ಪಷ್ಟನೆ

ಡಿಸೆಂಬರ್ ಕೊನೆಯ ವಾರದಲ್ಲಿ ಕೂಡ ದೆಹಲಿಯ ಕಿರಾರಿಯಲ್ಲಿ ಬೆಂಕಿ ದುರಂತ ಸಂಭವಿಸಿತ್ತು. ದೆಹಲಿಯ ಹೊರವಲಯದ ಕಿರಾರಿಯಲ್ಲಿನ ಮೂರು ಮಹಡಿಯ ವಸತಿ ಮತ್ತು ವಾಣಿಜ್ಯ ಕಟ್ಟಡದಲ್ಲಿ ಡಿ. 23ರ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 9 ಮಂದಿ ಮೃತಪಟ್ಟಿದ್ದರು. ಬೆಂಕಿಗೆ ಆಹುತಿಯಾದ ಅಪಾರ್ಟ್​ಮೆಂಟ್​ನ ಕೆಳಗೆ ಬಟ್ಟೆಯ ಗೋದಾಮಿತ್ತು. ಸೋಮವಾರ ನಸುಕಿನ ಜಾವ ಗೋದಾಮಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದ ಬೆಂಕಿ ಅಪಾರ್ಟ್​ಮೆಂಟ್​ಗೂ ಹಬ್ಬಿತ್ತು.
First published: January 9, 2020, 8:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading