ಕ್ಯಾನ್ಸರ್ ರೋಗದ ಕುರಿತ ಒಂದು ಸಂತಸಕರ ಹಾಗೂ ಸಮಾಧಾನಕರ ಸುದ್ದಿಯೆಂದರೆ ಅದನ್ನು ಗುಣಪಡಿಸಹುದು ಎನ್ನುವ ಸುದ್ದಿ. ಆದರೆ ಕ್ಯಾನ್ಸರ್ ರೋಗವನ್ನು ಅದು ಮೊದಲನೇ ಹಂತದಲ್ಲಿ ಇರುವಾಗ ಪತ್ತೆಹಚ್ಚಿದಾಗ ಮಾತ್ರವೇ ಚಿಕಿತ್ಸೆಗಳು ಫಲಕಾರಿಯಾಗುತ್ತದೆ.
ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದ ನಂತರ ಯಾವುದೇ ಔಷಧಗಳು ಪರಿಣಾಮಕಾರಿಯಾಗಿರುವುದಿಲ್ಲ ಎಂಬುದನ್ನು ಗಮನಿಸಲೇಬೇಕು. ಕ್ಯಾನ್ಸರ್ಗಳಲ್ಲಿ ಬೇರೆ ಬೇರೆ ವಿಧಗಳಿದ್ದು ಕೆಲವೊಂದು ಕ್ಯಾನ್ಸರ್ ಚಿಕಿತ್ಸೆ ದುಬಾರಿಯಾಗಿದ್ದು ಎಲ್ಲಾ ವೈದ್ಯಕೀಯ ಸೌಲಭ್ಯಗಳಲ್ಲಿ ಇದಕ್ಕೆ ಔಷಧಿ ಲಭ್ಯವಿರುವುದಿಲ್ಲ.
ಇದಕ್ಕಾಗಿ ಕ್ಯಾನ್ಸರ್ ಪತ್ತೆಹಚ್ಚಲು ಹಾಗೂ ಎಲ್ಲಾ ಸಮಸ್ಯೆಗಳನ್ನು ದಾಟಿ ಪರಿಣಾಮಕಾರಿ ಚಿಕಿತ್ಸೆ ಪಡೆಯುವಂತಾಗಲು ಸಂಶೋಧನೆಗಳನ್ನು ನಡೆಸುತ್ತಿದ್ದು, ಇಂಗ್ಲೆಂಡ್ನ ವೈದ್ಯರು ರೋಗಲಕ್ಷಣಗಳನ್ನು ಪತ್ತೆಹಚ್ಚುವ ಪ್ರಾಯೋಗಿಕ ಹಂತದಲ್ಲಿದ್ದಾರೆ.
ಇದೀಗ ಇಂಗ್ಲೆಂಡ್ನ NHS ವೈದ್ಯರು 50ಕ್ಕಿಂತಲೂ ಹೆಚ್ಚಿನ ಕ್ಯಾನ್ಸರ್ ವಿಧಗಳನ್ನು ಗುರುತಿಸಲು “ರೆವಲ್ಯೂಶನರಿ” (ಕ್ರಾಂತಿಕಾರಿ) ರಕ್ತ ಪರೀಕ್ಷೆ ನಡೆಸುತ್ತಿದ್ದಾರೆ. ಗ್ಯಾಲರಿ ಪ್ರಕ್ರಿಯೆಯ ಮೂಲಕ ಕರುಳು ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಒಳಗೊಂಡಂತೆ ಗಟ್ಟಿಯಾಗಿರುವ ಗೆಡ್ಡೆಗಳನ್ನು ಪತ್ತೆಹಚ್ಚುವಲ್ಲಿ ಇದು ಅತ್ಯುತ್ತಮವಾಗಿದೆ ಎಂದು Express.co.uk ವರದಿ ಮಾಡಿದೆ. NHS-ಗ್ಯಾಲರಿ ಪ್ರಯೋಗವನ್ನು ಇಂಗ್ಲೆಂಡ್ನ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಹಾಗೂ ಲಂಡನ್ ಕ್ಯಾನ್ಸರ್ ತಡೆಗಟ್ಟುವಿಕೆ ಪ್ರಯೋಗಗಳ ಸಹಭಾಗಿತ್ವದಲ್ಲಿ ನಡೆಸಲಾಗಿದೆ. ಇನ್ನು ಪರೀಕ್ಷಾ ತಂತ್ರಜ್ಞಾನವನ್ನು ಹೆಲ್ತ್ಕೇರ್ ಕಂಪನಿ GRAIL ಅಭಿವೃದ್ಧಿಪಡಿಸಿದೆ.
ಗ್ಯಾಲರಿ ಪ್ರಕ್ರಿಯೆ: ವಿಶ್ವದ ಅತಿದೊಡ್ಡ ಕ್ಲಿನಿಕಲ್ ಪ್ರಯೋಗ:
Express.co.uk ಗೆ ಮಾಹಿತಿ ನೀಡಿರುವ NHS ಮುಖ್ಯ ಕಾರ್ಯನಿರ್ವಾಹಕ ಅಮಂಡಾ ಪ್ರಿಚರ್ಡ್, ಕ್ಯಾನ್ಸರ್ ಪತ್ತೆಗಾಗಿ ಇದೊಂದು ಭರವಸೆಯ ಕ್ಷಣವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಕ್ಯಾನ್ಸರ್ ರೋಗಲಕ್ಷಣಗಳು ಪತ್ತೆಯಾಗುವ ಮುನ್ನವೇ ಅದನ್ನು ಕಂಡುಹಿಡಿಯಬಹುದಾಗಿದೆ. ಕ್ರಾಂತಿಕಾರಿ ಅಥವಾ ರೆವಲ್ಯೂಶನರಿ ಗ್ಯಾಲರಿ ರಕ್ತಪರೀಕ್ಷೆಯಿಂದ ರಕ್ತದಲ್ಲಿನ ಕ್ಯಾನ್ಸರ್ ಪತ್ತೆಯಾಗುತ್ತದೆ ಇದರಿಂದ ಚಿಕಿತ್ಸೆಯನ್ನು ಶೀಘ್ರದಲ್ಲೇ ಆರಂಭಿಸಬಹುದಾಗಿದೆ. ಪರೀಕ್ಷೆಯು ಚೆನ್ನಾಗಿ ಕಾರ್ಯನಿರ್ವಹಣೆಯಾಗುತ್ತದೆ ಎಂಬುದಕ್ಕೆ ಪುರಾವೆಗಳಿದ್ದು NHS ಇದೇ ಮೊದಲ ಬಾರಿಗೆ ನೈಜ ಜೀವನದಲ್ಲಿ ಅಳವಡಿಸುವ ನಿಟ್ಟಿನಲ್ಲಿದೆ.
ಪರೀಕ್ಷೆಯನ್ನು ಹೇಗೆ ನಡೆಸಲಾಗುತ್ತದೆ?
ಈ ಪರೀಕ್ಷೆಯು ಹೇಗೆ ಸಹಕಾರಿಯಾಗಿದೆ?
ಕ್ಯಾನ್ಸರ್ನ ಹಂತ 1 ಹಾಗೂ 2ರಲ್ಲಿ ಸಂಭಾವ್ಯ ಚಿಕಿತ್ಸೆಗಳನ್ನು ಹೊಂದಿದೆ. ಇನ್ನು ಆರಂಭ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದ ರೋಗಿಗಳು ಕ್ಯಾನ್ಸರ್ನ 4ನೇ ಹಂತದಲ್ಲಿ ಪತ್ತೆಯಾದ ರೋಗಿಗಿಂತ ಬದುಕುಳಿಯುವ ಸಾಧ್ಯತೆ ಹತ್ತು ಪಟ್ಟು ಹೆಚ್ಚಾಗಿದೆ.
ಗ್ಯಾಲರಿ ಪರೀಕ್ಷೆಯಲ್ಲಿ ವ್ಯಕ್ತಿಗೆ ಕ್ಯಾನ್ಸರ್ ಇದೆ ಎಂದು ಪತ್ತೆಯಾದಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಇದು ಇನ್ನೂ ಆರಂಭಿಕ ಹಂತದಲ್ಲಿದ್ದು ಫಲಿತಾಂಶ ಹಾಗೂ ಪರಿಣಾಮಕಾರಿ ಅಂಶವನ್ನು 2023ರಲ್ಲಿ ನಿರೀಕ್ಷಿಸಲಾಗಿದೆ. ಇದು ಯಶಸ್ವಿಯಾದಲ್ಲಿ 2024 ಹಾಗೂ 2025ರಲ್ಲಿ ಗ್ಯಾಲರಿಯನ್ನು ಇನ್ನೂ ಒಂದು ಮಿಲಿಯನ್ ಜನರಿಗೆ ತಲುಪಿಸಲಾಗುತ್ತದೆ ಎಂದು ಹೇಳಲಾಗಿದೆ.
ಪ್ರಯೋಗದ ಪ್ರವರ್ತಕ GRAIL ಕಂಪನಿಯ ಕುರಿತು:
ಪ್ರಯೋಗದ ಪರೀಕ್ಷಾ ವೆಚ್ಚವನ್ನು GRAIL ಭರಿಸುತ್ತದೆ ಎಂದು ಗ್ರೇಲ್ ಯುರೋಪಿನ ಅಧ್ಯಕ್ಷ ಸರ್ ಹರಪಾಲ್ ಕುಮಾರ್ ತಿಳಿಸಿದ್ದು ಗ್ಯಾಲರಿ ಪರೀಕ್ಷೆಯ ಮೂಲಕ ವ್ಯಾಪಕ ಶ್ರೇಣಿಯ ಕ್ಯಾನ್ಸರ್ ವಿಧಗಳನ್ನು ಪತ್ತೆ ಹಚ್ಚುವುದಲ್ಲದೆ ಹೆಚ್ಚಿನ ಮಟ್ಟದಲ್ಲಿ ಹಾಗೂ ನಿಖರತೆಯೊಂದಿಗೆ ದೇಹದಲ್ಲಿ ಕ್ಯಾನ್ಸರ್ ಎಲ್ಲಿದೆ ಎಂಬುದನ್ನು ಊಹಿಸಬಹುದು ಇದರಿಂದ ಮಾರಣಾಂತಿಕ ಕ್ಯಾನ್ಸರ್ ಅನ್ನು ಪತ್ತೆಹಚ್ಚಬಹುದು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ