Bumper Lottery: ಅಬ್ಬಬ್ಬಾ ಜಾಕ್‍ಪಾಟ್! ನೀವು ಲಕ್ಕಿಯಾಗಿದ್ರೆ 25 ಕೋಟಿ ಗೆಲ್ಲಬಹುದು!

ಕೇರಳದಲ್ಲಿ ಈ ಬಾರಿ ಓಣಂ ಪ್ರಯುಕ್ತ ಸರ್ಕಾರ ದೊಡ್ಡ ಕೊಡುಗೆಯೊಂದನ್ನು ಘೋಷಿಸಿದೆ. ಓಣಂಗೆ ನಮ್ಮಲ್ಲಿಗೆ ಬನ್ನಿ, 25 ಕೋಟಿ ಗೆಲ್ಲಿ. ಇತಿಹಾಸದಲ್ಲಿ ದೊಡ್ಡ ಮೊತ್ತ ಇದು. ನಿಮ್ಮ ಲಕ್ ಪರೀಕ್ಷಿಸಿಕೊಳ್ಳಿ ಎಂದು ಕೇರಳ ಸರ್ಕಾರ ಘೋಷಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಲಾಟರಿ ಅಂದ್ರೆ ಕೆಲವರಿಗೆ ಲಕ್. ಇನ್ನೂ ಕೆಲವರಿಗೆ ಅನ್‍ಲಕ್. ಲಾಟರಿ (Lottery) ಕೊಂಡು ದುಡ್ಡು ಪಡೆದು ಉದ್ಧಾರ ಆಗಿರುವವರಿಗಿಂತ, ಹಾಳಾಗಿರುವವರೇ ಹೆಚ್ಚು. ಲಾಟರಿ ಹಿಂದೆ ಬಿದ್ದ ಅದೆಷ್ಟೋ ಕುಟುಂಬಗಳು (Family) ಬೀದಿ ಪಾಲಾಗಿವೆ. ದುಡಿದ ಹಣವನ್ನೆಲ್ಲಾ ಲಾಟರಿಗೆ ಸುರಿದು ಸೋತವರು ಇದ್ದಾರೆ. ಅದೆಷ್ಟೋ ಜನ ಆಸ್ತಿ-ಪಾಸ್ತಿ, ಮನೆ-ಮಠ ಕಳೆದುಕೊಂಡಿದ್ದಾರೆ. ಆದ ಕಾರಣ ಹಲವು ರಾಜ್ಯಗಳಲ್ಲಿ ಲಾಟರಿಯನ್ನು ನಿಷೇಧಿಸಲಾಗಿದೆ. ಕನಾಟಕದಲ್ಲೂ (Karnataka) ಸಹ ಲಾಟರಿಯನ್ನು ಬ್ಯಾನ್ ಮಾಡಲಾಗಿದೆ. ಇನ್ನೂ ಕೆಲವರು ಲಾಟರಿ ಪಡೆದು ಅದೃಷ್ಟದಿಂದ ಶ್ರೀಮಂತರಾದ ಉದಾಹರಣೆಯೂ ಇದೆ. ಕೇರಳದಲ್ಲಿ (Kerala) ಈ ಬಾರಿ ಓಣಂ ಪ್ರಯುಕ್ತ ಸರ್ಕಾರ ದೊಡ್ಡ ಕೊಡುಗೆಯೊಂದನ್ನು ಘೋಷಿಸಿದೆ. ಓಣಂಗೆ (Onam) ನಮ್ಮಲ್ಲಿಗೆ ಬನ್ನಿ, 25 ಕೋಟಿ ಗೆಲ್ಲಿ. ಇತಿಹಾಸದಲ್ಲಿ ದೊಡ್ಡ ಮೊತ್ತ ಇದು. ನಿಮ್ಮ ಲಕ್ ಪರೀಕ್ಷಿಸಿಕೊಳ್ಳಿ ಎಂದು ಘೋಷಿಸಿದೆ. 

  ಲಕ್ ನಿಮ್ಮದಾದ್ರೆ 25 ಕೋಟಿ ಒಲಿಯುತ್ತೆ!
  ಲಾಟರಿಯಿಂದ ಹಲವರು ಬೀದಿಗೆ ಬರುತ್ತಿದ್ದರೂ ಸಹ ದುಡ್ಡಿನ ಆಸೆಯಿಂದ ಕೇರಳ ಸರ್ಕಾರ ಲಾಟರಿಯನ್ನು ಬ್ಯಾನ್ ಮಾಡಿಲ್ಲ. ಲಾಟರಿ ಇಲಾಖೆಯು ಈ ವರ್ಷದ ಓಣಂ ಬಂಪರ್ ಲಾಟರಿಗೆ ಸರ್ಕಾರದಿಂದ ಅನುಮೋದನೆ ಪಡೆದಿದೆ. ಹೀಗಾಗಿ ಲಾಟರಿ ಪ್ರಿಯರನ್ನು ಸೆಳೆದು ದುಡ್ಡು ಮಾಡುವ ಪ್ಲ್ಯಾನ್ ನಲ್ಲಿ ಇದೆ. ಅಲ್ಲದೇ ಓಣಂಗೆ ಇಲ್ಲಿಗೆ ಬಂದು ನಿಮ್ಮ ಅದೃಷ್ಟ ಪರೀಕ್ಷಿಸಕೊಳ್ಳಿ ಎಂದಿದೆ. ಅಲ್ಲದೇ ಇದೇ ಮೊದಲ ಬಾರಿಗೆ 25 ಕೋಟಿಯ ಆರ್ ನೀಡಿದೆ.

  ಯಾವ ಸ್ಥಾನಕ್ಕೆ ಎಷ್ಟು ಬಹುಮಾನ?
  ಕೇರಳ ಸರ್ಕಾರವೂ ಓಣಂ ನೆಪ ಮಾಡಿಕೊಂಡು ಘೋಷಿಸಿರುವ ಲಾಟರಿ ಮೊತ್ತ ಈ ರೀತಿ ಇದೆ. ಪ್ರಥಮ ಬಹುಮಾನ 25 ಕೋಟಿ, ದ್ವಿತೀಯ ಬಹುಮಾನ 5 ಕೋಟಿ, ತೃತೀಯ ಬಹುಮಾನವನ್ನು 10 ಜನರಿಗೆ ಕೊಡಲಾಗುತ್ತೆ. ಅದು ತಲಾ ಒಬ್ಬೊಬ್ಬರಿಗೆ 1 ಕೋಟಿ ನೀಡಲಾಗುತ್ತೆ. ಈ ವರ್ಷ 90 ಲಕ್ಷ ಲಾಟರಿ ಟಿಕೆಟ್‍ಗಳನ್ನು ಪ್ರಿಂಟ್ ಹಾಕಿಸಿದ್ದಾರಂತೆ.

  ಟಿಕೆಟ್ ದರ ಎಷ್ಟು? ಯಾವಾಗಿನಿಂದ ಮಾರಾಟ?
  ದೊಡ್ಡ ಮೊತ್ತದ ಅಂದ್ರೆ 25 ಕೋಟಿ ನೀಡಲು ನಿರ್ಧರಿಸಿರುವ ಲಾಟರಿ ಇಲಾಖೆಯೂ ಟಿಕೆಟ್ ಮೊತ್ತವನ್ನು ಹೆಚ್ಚಿಸಿಯೇ ಇರುತ್ತೆ. ಕಳೆದ ವರ್ಷ 300 ರೂಪಾಯಿ ಇದ್ದ ಟಿಕೆಟ್ ಅನ್ನು ಈ ವರ್ಷ 500 ರೂಪಾಯಿಗೆ ಏರಿಸಲಾಗಿದೆ. ಜುಲೈ 18ರಿಂದ ಟಿಕೆಟನ್ನು ನೀಡಲಾಗುತ್ತೆ. ಸೆಪ್ಟೆಂಬರ್ 18 ರಂದು ಡ್ರಾ ನಡೆಯಲಿದೆ. ಅಂದು ಗೊತ್ತಾಗಲಿದೆ 25 ಕೋಟಿ ಬಹುಮಾನ ಪಡೆದ ಆ ಅದೃಷ್ಟಶಾಲಿ ಯಾರೆಂದು!

  12 ಕೋಟಿಯಿಂದ 25 ಕೋಟಿ!
  2019ರಿಂದ ಲಾಟರಿ ಬಹುಮಾನವು 12 ಕೋಟಿ ಇತ್ತು. ಆದ್ರೆ ಈ ವರ್ಷವೇ ಅಂದ್ರೆ ಇತಿಹಾಸದಲ್ಲೇ ಮೊದಲ ಬಾರಿಗೆ 25 ಕೋಟಿ ಆರ್ ನೀಡಿದೆ. ಹಣಕಾಸು ಇಲಾಳೆಯೂ ಸರ್ಕಾರದ ಮುಂದೆ ಈ ಬಾರಿ 25, 28, 50 ಕೋಟಿಯ ಲಾಟರಿ ಮೊತ್ತ ಮಾಡಲು ಪ್ರಸ್ತಾವನೆ ಸಲ್ಲಿಸಿತ್ತು. ಸರ್ಕಾರವು 25 ಕೋಟಿ ಲಾಟರಿ ಟಿಕೆಟ್ ನಿಗದಿ ಮಾಡಲು ಒಪ್ಪಿತು. 25 ಕೋಟಿ ಗೆದ್ದವರಿಗೆ ಎಲ್ಲಾ ತೆರಿಗೆ ಸೇರಿ 15.75 ಕೋಟಿ ಸಿಗಲಿದೆ.

  ಇದನ್ನೂ ಓದಿ: Kerala: ದಾನಿ ಹೃದಯದಿಂದ ಬದುಕುಳಿದ ವಿದ್ಯಾರ್ಥಿನಿ ಪಿಯುಸಿಯಲ್ಲಿ ಡಿಸ್ಟಿಂಕ್ಷನ್: ದಾನಿ ಕುಟುಂಬಕ್ಕೆ ಭೇಟಿ ನೀಡಿ ಸಿಹಿ ಹಂಚಿದ ಬಾಲಕಿ

  ಓಣಂ ಆಚರಣೆ ಹೇಗಿರುತ್ತೆ?
  ಓಣಂ ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿ ನಡೆಯುವ ಅತಿದೊಡ್ಡ ಹಬ್ಬವಾಗಿದೆ. ಈ ಹಬ್ಬವನ್ನು ಮಲಯಾಳೀ ಪಂಚಾಂಗದ ಮೊದಲ ತಿಂಗಳು ಅಂದರೆ ಆಗಸ್ಟ್, ಸೆಪ್ಟೆಂಬರ್‍ನಲ್ಲಿ ಆಚರಿಸಲಾಗುತ್ತೆ. ಪುರಾಣಪ್ರಸಿದ್ಧ ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.

  ಇದನ್ನೂ ಓದಿ: Model Minister: ಯುವಕನ ಕಿಡ್ನಿ ಟ್ರೀಟ್ಮೆಂಟ್‌ಗೆ ಚಿನ್ನದ ಬಳೆಯನ್ನೇ ಕಳಚಿಕೊಟ್ಟ ಸಚಿವೆ! ಜನಪ್ರತಿನಿಧಿಗೆ ಜನರಿಂದ ಮೆಚ್ಚುಗೆ

  ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ಪುರುಷರು ಅಂಗಿ ಮತ್ತು ಮುಂಡು ಎಂದು ಕರೆಯಲಾಗುವ ಪಂಚೆ ತರದ ಉಡುಪನ್ನು ಧರಿಸಿದರೆ, ಮಹಿಳೆಯರು ಅದೇ ತರಹದ ಮುಂಡುವಿನ ಮೇಲೊಂದು ಚಿನ್ನದ ಬಣ್ಣದ ನರಿಯತ್ತು ಎಂದು ಕರೆಯಲಾಗುವ ಮೇಲಂಗಿಯನ್ನು ತೊಟ್ಟು ಸಂಭ್ರಮಿಸುತ್ತಾರೆ. ಬಾಲಕಿಯರು ಪಾವಡ ವೆಂಬ ಲಂಗ, ಮೇಲೊಂದು ರವಿಕೆಯನ್ನು ತೊಟ್ಟು ಸಡಗರದಿಂದ ಓಡಾಡುತ್ತಿರುತ್ತಾರೆ. ಓಣಂ ಕೇರಳದ ಸುಗ್ಗಿಯ ಹಬ್ಬವೂ ಹೌದು.
  Published by:Savitha Savitha
  First published: