ಹಿಂದಿಯಲ್ಲಿ ದೀಪಾವಳಿ ಶುಭಾಶಯ ತಿಳಿಸಿದ ಇಸ್ರೇಲ್ ಪ್ರಧಾನಿ!; ಅದಕ್ಕೆ ಮೋದಿ ಕೊಟ್ಟ ಉತ್ತರ ಏನು ಗೊತ್ತಾ?

Rajesh Duggumane | news18
Updated:November 7, 2018, 9:55 AM IST
ಹಿಂದಿಯಲ್ಲಿ ದೀಪಾವಳಿ ಶುಭಾಶಯ ತಿಳಿಸಿದ ಇಸ್ರೇಲ್ ಪ್ರಧಾನಿ!; ಅದಕ್ಕೆ ಮೋದಿ ಕೊಟ್ಟ ಉತ್ತರ ಏನು ಗೊತ್ತಾ?
ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ ಮೋದಿ ದೀಪಾವಳಿ ಆಚರಿಸಿಕೊಂಡಿದ್ದರು
Rajesh Duggumane | news18
Updated: November 7, 2018, 9:55 AM IST
ನ್ಯೂಸ್​ 18 ಕನ್ನಡ

ನವದೆಹಲಿ (ನ.7): ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ನಂತರದಲ್ಲಿ ಭಾರತ ಹಾಗೂ ಇಸ್ರೇಲ್​ ನಡುವಣ ಸಂಬಂಧ ಉತ್ತಮವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಹಿಂದಿ ಭಾಷೆಯಲ್ಲಿ ದೀಪಾವಳಿ ಶುಭಾಶಯ ತಿಳಿಸಿದ್ದಾರೆ!

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ‘ಇಸ್ರೇಲ್​ ಜನತೆಯ ಪವರವಾಗಿ ನಾನು ನನ್ನ ಗೆಳೆಯ ನರೇಂದ್ರ ಮೋದಿ ಹಾಗೂ ಭಾರತೀಯ ಜನತೆಗೆ ದೀಪಾವಳಿಯ ಶುಭಾಶಯ ಕೋರುತ್ತೇನೆ. ಈ ಹಬ್ಬ ನಿಮ್ಮ ಬಾಳಲ್ಲಿ ಸಂತಸ ನೀಡಲಿ’ ಎಂದು ಬರೆದುಕೊಂಡಿದ್ದಾರೆ.


Loading...ಇದಕ್ಕೆ ಹೀಬ್ರೂ ಭಾಷೆಯಲ್ಲಿ ಉತ್ತರಿಸಿರುವ ಮೋದಿ, ‘ನಾನು ಪ್ರತಿ ವರ್ಷ ದೀಪಾವಳಿಯಂದು ಗಡಿ ಪ್ರದೇಶಕ್ಕೆ ಭೇಟಿ ನೀಡಿ ಸೈನಿಕರಿಗೆ ಸರ್​​ಪ್ರೈಸ್​ ನೀಡುತ್ತೇನೆ. ಈ ಬಾರಿಯೂ ನಮ್ಮ ಸೈನಿಕರೊಂದಿಗೆ ದೀಪಾವಳಿ ಆಚರಿಸಿಕೊಳ್ಳುತ್ತೇನೆ. ಅವರ ಜೊತೆ ಸಮಯ ಕಳೆಯುವುದು ವಿಶೇಷ’  ಎಂದಿದ್ದಾರೆ. ಅಷ್ಟೇ ಅಲ್ಲ ಬುಧವಾರ ಮಧ್ಯಾಹ್ನ ಇದರ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಿದ್ದಾರಂತೆ.ಪ್ರಧಾನಿ ಮೋದಿ ಪ್ರಧಾನಿಯಾದ ನಂತರ ಪ್ರತಿ ವರ್ಷ ದೀಪಾವಳಿಯನ್ನು ಸೈನಿಕರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. 2015ರಲ್ಲಿ ದೀಪಾವಳಿಯಂದು ಪಂಜಾಬ್​ ಗಡಿಗೆ ಭೇಟಿ ನೀಡಿದ್ದರು. 2016ರಲ್ಲಿ ಇಂಡೋ-ಟಿಬೇಟ್​ ಗಡಿ ಪೊಲೀಸರ ಜತೆ, ಕಳೆದ ವರ್ಷ ಜಮ್ಮು ಕಾಶ್ಮೀರದಲ್ಲಿ ಆಚರಿಸಿಕೊಂಡಿದ್ದರು.
First published:November 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...