• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Sudan Clashes: ಸುಡಾನ್‌ ಕನ್ನಡಿಗರ ಬಗ್ಗೆ ಸಿದ್ದರಾಮಯ್ಯ ಆತಂಕ; ಜೈಶಂಕರ್‌ ‘ರಾಜಕೀಯ’ ಹೇಳಿಕೆಗೆ ಮಾಜಿ ಸಿಎಂ ಕೌಂಟರ್‌!

Sudan Clashes: ಸುಡಾನ್‌ ಕನ್ನಡಿಗರ ಬಗ್ಗೆ ಸಿದ್ದರಾಮಯ್ಯ ಆತಂಕ; ಜೈಶಂಕರ್‌ ‘ರಾಜಕೀಯ’ ಹೇಳಿಕೆಗೆ ಮಾಜಿ ಸಿಎಂ ಕೌಂಟರ್‌!

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ

ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ

ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಟ್ವೀಟ್‌ ಮಾಡಿ ಅವರ ರಕ್ಷಣೆಗೆ ಒತ್ತಾಯಿಸಿದ್ದರು. ಇದಕ್ಕೆ ಕಿಡಿಕಾರಿದ್ದ ವಿದೇಶಾಂಗ ಸಚಿವ ಜೈಶಂಕರ್ ‘ಇದನ್ನು ರಾಜಕೀಯಗೊಳಿಸಬೇಡಿ’ ಎಂದಿದ್ದರು. ಇದೀಗ ಜೈಶಂಕರ್‌ಗೆ ಸಿದ್ದರಾಮಯ್ಯ ನೀಡಿರುವ ತಿರುಗೇಟು ಕುತೂಹಲ ಮೂಡಿಸಿದೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • New Delhi, India
 • Share this:

ನವದೆಹಲಿ: ಸುಡಾನ್‌ನ ಮಿಲಿಟರಿ ಮತ್ತು ಮುಖ್ಯ ಪ್ಯಾರಾ ಮಿಲಿಟರಿ ಪಡೆಯ (Sudan Crisis) ನಡುವೆ ಉಂಟಾದ ಸಂಘರ್ಷದಲ್ಲಿ ನಿನ್ನೆ ಬೆಳಗ್ಗಿನ ತನಕ ಕನಿಷ್ಠ 200 ಮಂದಿ ಮೃತಪಟ್ಟು, 1,800ಕ್ಕೂ ಹೆಚ್ಚು ಮಂದಿ ನಾಗರಿಕರು ಮತ್ತು ಹೋರಾಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿತ್ತು. (Sudan Clashes) ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಕನ್ನಡಿಗರೂ (Sudan Kannadiga's) ಸಿಲುಕಿಕೊಂಡಿದ್ದು, ಈ ಬಗ್ಗೆ ಅವರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೇಂದ್ರ ಸರ್ಕಾರಕ್ಕೆ ಟ್ವೀಟ್‌ ಮಾಡಿ ರಕ್ಷಣೆಗೆ ಒತ್ತಾಯಿಸಿದ್ದರು. ಇದೀಗ ಕನ್ನಡಿಗರ ರಕ್ಷಣೆಯ ವಿಚಾರವೂ ರಾಜಕೀಯ ತಿರುವು ಪಡೆದುಕೊಳ್ಳುವ ಹಂತದಲ್ಲಿದೆ.


ಸಿದ್ದರಾಮಯ್ಯ ಟ್ವೀಟ್‌ನಲ್ಲೇನಿದೆ?


ಸುಡಾನ್‌ನ ಮಿಲಿಟರಿ ಮತ್ತು ಮುಖ್ಯ ಪ್ಯಾರಾ ಮಿಲಿಟರಿ ಪಡೆಯ ಸಂಘರ್ಷದಲ್ಲಿ ಹೊರಬರಲಾರದೆ ಸಿಲುಕಿಕೊಂಡಿರುವ ಕನ್ನಡಿಗರ ರಕ್ಷಣೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಇಲಾಖೆ ಮತ್ತು ವಿದೇಶಾಂಗ ಇಲಾಖೆ ಮತ್ತು ಸಿಎಂ ಬೊಮ್ಮಾಯಿಗೆ ಟ್ವೀಟ್‌ ಮಾಡಿದ್ದರು. ಆ ಟ್ವೀಟ್‌ನಲ್ಲಿ ‘ಸುಡಾನ್‌ನಲ್ಲಿ ಕಳೆದ ಕೆಲವು ದಿನಗಳಿಂದ ಕರ್ನಾಟಕ ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದ 31 ಮಂದಿ ಆಹಾರವಿಲ್ಲದೆ ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಕೇಂದ್ರ ಸರ್ಕಾರ ಅವರನ್ನು ಮರಳಿ ಕರೆತರಲು ಇನ್ನೂ ಕ್ರಮ ಕೈಗೊಂಡಿಲ್ಲ. ಬಿಜೆಪಿ ಸರ್ಕಾರ ರಾಜತಾಂತ್ರಿಕ ಮಾತುಕತೆ ನಡೆಸಬೇಕು ಮತ್ತು ಅವರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದರು.


ಇದನ್ನೂ ಓದಿ: Nandini Products: ಬ್ಯಾಂಕ್‌ಗಳನ್ನು ತಿಂದು ಮುಕ್ಕಿದ್ದಾಯಿತು, ಈಗ ‘ನಂದಿನಿ’ಯ ಆಪೋಶನಕ್ಕೆ ಮುಂದಾಗಿದ್ದಾರೆ! ಸಿಡಿದ ಸಿದ್ದರಾಮಯ್ಯ


ಕನ್ನಡಿಗರ ರಕ್ಷಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಟ್ವೀಟ್‌ಗೆ ವಿದೇಶಾಂಗ ಸಚಿವ ಜೈಶಂಕರ್ ಪ್ರತಿಕ್ರಿಯೆ ನೀಡಿದ್ದು, ‘ನಿಮ್ಮ (ಸಿದ್ದರಾಮಯ್ಯ) ಟ್ವೀಟ್‌ ನೋಡಿ ಆಘಾತವಾಯಿತು. ಅಲ್ಲಿ ಜೀವಗಳು ಅಪಾಯದಲ್ಲಿದೆ. ದಯವಿಟ್ಟು ಇದರಲ್ಲಿ ರಾಜಕೀಯ ಮಾಡಬೇಡಿ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಏಪ್ರಿಲ್ 14 ರಂದು ಸಂಘರ್ಷ ಪ್ರಾರಂಭವಾದಾಗಿನಿಂದ, ಖಾರ್ಟೂಮ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಸುಡಾನ್‌ನಲ್ಲಿರುವ ಹೆಚ್ಚಿನ ಭಾರತೀಯ ಪ್ರಜೆಗಳು ಮತ್ತು ಪಿಐಒಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಭದ್ರತಾ ಕಾರಣಗಳಿಗಾಗಿ ಸುಡಾನ್‌ನಲ್ಲಿರುವ ಭಾರತೀಯರ ವಿವರಗಳನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.


ಜೈಶಂಕರ್‌ ಟ್ವೀಟ್‌ಗೆ ಸಿದ್ದರಾಮಯ್ಯ ಕೌಂಟರ್‌


ಇನ್ನು ಸುಡಾನ್‌ನಲ್ಲಿ ಇರುವ ಭಾರತೀಯರ ರಕ್ಷಣೆ ವಿಚಾರವನ್ನು ರಾಜಕೀಯಗೊಳಿಸಬೇಡಿ ಎಂದು ವಿದೇಶಾಂಗ ಸಚಿವ ಜೈಶಂಕರ್‌ ಟ್ವೀಟ್‌ಗೆ ಕೌಂಟರ್ ಕೊಟ್ಟಿರುವ ರಾಜ್ಯ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ನೀವು ವಿದೇಶಾಂಗ ವ್ಯವಹಾರಗಳ ಸಚಿವರು ಆಗಿರೋದ್ರಿಂದ ನಾನು ನಿಮಗೆ ಸಹಾಯಕ್ಕಾಗಿ ಮನವಿ ಮಾಡಿದ್ದೇನೆ. ಆದರೆ ನೀವು ಆಶ್ಚರ್ಯಗೊಳ್ಳೋದ್ರಲ್ಲೇ ಬ್ಯುಸಿಯಾಗಿದ್ದರೆ ದಯವಿಟ್ಟು ನಮ್ಮ ಜನರನ್ನು ಮರಳಿ ಕರೆತರಲು ಸಹಾಯ ಮಾಡುವ ವ್ಯಕ್ತಿಯನ್ನು ಸಂಪರ್ಕ ಮಾಡಿಕೊಡಿ. ಮುಂದೆ ನಾವು ನೋಡಿಕೊಳ್ಳುತ್ತೇವೆ’ ಎಂದು ತಿರುಗೇಟು ನೀಡಿದ್ದಾರೆ.


ಇದನ್ನೂ ಓದಿ:  Siddaramaiah: ಮೋದಿಯವ್ರೇ, ನೀವು ರಾಜ್ಯಕ್ಕೆ ಬರೋದು ಕನ್ನಡಿಗರಿಗೆ ಕೊಡೋದಕ್ಕೋ, ಕಿತ್ಕೊಳ್ಳೋದಕ್ಕೋ? ಸಿದ್ದರಾಮಯ್ಯ ವ್ಯಂಗ್ಯ


ಭಾರತೀಯರಿಗೆ ಎಚ್ಚರಿಕೆ ನೀಡಿದ ಸುಡಾನ್ ರಾಯಭಾರ ಕಚೇರಿ


ಇನ್ನು ಸುಡಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮುನ್ನೆಚ್ಚರಿಕೆ ನೀಡಿದ್ದು, ಆಗಾಗ ಫೈರಿಂಗ್‌ಗಳು, ಘರ್ಷಣೆಗಳು ನಡೆಯುತ್ತಿರುವ ಬಗ್ಗೆ ವರದಿ ಆಗ್ತಿರೋದ್ರಿಂದ ಸುಡಾನ್‌ನಲ್ಲಿರುವ ಎಲ್ಲಾ ಭಾರತೀಯರು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ತಕ್ಷಣಕ್ಕೆ ಯಾರೂ ಹೊರಗೆ ಬಂದು ಸಾಹಸ ಮಾಡಬಾರದು. ಆಹಾರ ಪಡಿತರಗಳನ್ನು ಲೂಟಿ ಮಾಡುತ್ತಿರುವುದು ಕೂಡ ವರದಿಯಾಗ್ತಿದೆ. ದಯವಿಟ್ಟು ಯಾರೂ ಕೂಡ ಹೊರಗೆ ಹೋಗಬೇಡಿ. ಪರಿಸ್ಥಿತಿ ಕೆಲ ದಿನಗಳ ಕಾಲ ಹೀಗೆ ಮುಂದುವರೆಯಬಹುದು. ಹಾಗಾಗಿ ನಿಮ್ಮ ನೆರೆಹೊರೆಯವರೊಂದಿಗೆ ಸಹಾಯ ಪಡೆಯಲು ಪ್ರಯತ್ನಿಸಿ ಎಂದು ರಾಯಭಾರ ಕಚೇರಿ ಭಾರತೀಯರಿಗೆ ಸೂಚನೆ ನೀಡಿದೆ.

top videos  ಜೊತೆಗೆ ಸುಡಾನ್‌ಗೆ ಬರಲು ಪ್ಲಾನ್‌ ಮಾಡಿರುವವರು ಪ್ರವಾಸವನ್ನು ಮುಂದೂಡಬೇಕು ಎಂದು ಸುಡಾನ್‌ನ ಭಾರತೀಯ ರಾಯಭಾರ ಕಚೇರಿ ಮನವಿ ಮಾಡಿದೆ.

  First published: