ರಾಜ್ ಠಾಕ್ರೆ ಜನ್ಮದಿನಕ್ಕೆ ಸರ್​ಪ್ರೈಸ್; ಪೆಟ್ರೋಲ್ ಬೆಲೆ 9 ರೂ ಇಳಿಕೆ


Updated:June 14, 2018, 6:13 PM IST
ರಾಜ್ ಠಾಕ್ರೆ ಜನ್ಮದಿನಕ್ಕೆ ಸರ್​ಪ್ರೈಸ್; ಪೆಟ್ರೋಲ್ ಬೆಲೆ 9 ರೂ ಇಳಿಕೆ
ರಾಜ್ ಠಾಕ್ರೆ

Updated: June 14, 2018, 6:13 PM IST
- ನ್ಯೂಸ್18 ಕನ್ನಡ

ಮುಂಬೈ(ಜೂನ್ 14): ಇತ್ತೀಚೆಗೆ ದೇಶದೆಲ್ಲೆಡೆ ಹೆಚ್ಚುತ್ತಿರುವ ಪೆಟ್ರೋಲ್​ ಮತ್ತು ಡೀಸೆಲ್​ ದರದ್ದೇ ಮಾತು. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಇಂಧನದ ಬೆಲೆಯನ್ನು ಕಡಿಮೆಗೊಳಿಸಲು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕ ವಲಯದಿಂದ ಬಹಳ ಟೀಕೆಗಳು ಕೇಳಿಬರುತ್ತಿವೆ. ಮಹಾರಾಷ್ಟ್ರದ ಜನರಿಗೆ ಗುರುವಾರ ಶಾಕಿಂಗ್ ನ್ಯೂಸ್ ಕಾದಿತ್ತು. ತಮ್ಮ ಜನ್ಮದಿನವಾದ ಗುರುವಾರದಂದು ಪೆಟ್ರೋಲ್ ಬಂಕ್​ಗಳಿಗೆ ಹೋದರೆ ಜನರಿಗೆ ಭರ್ಜರಿ ಗಿಫ್ಟ್ ಸಿಗುತ್ತದೆಂದು ರಾಜ್ ಠಾಕ್ರೆ ಘೋಷಿಸಿದರು. ಪೆಟ್ರೋಲ್ ಬಂಕ್​ಗೆ ಹೋದ ಜನರಿಗೆ ನಿಜವಾಗಿಯೂ ಅಚ್ಚರಿ ಕಾದಿತ್ತು. ಅಚ್ಚರಿ ಅಷ್ಟೇ ಅಲ್ಲ ಶಾಕ್ ಕೂಡ ಆಗಿತ್ತು. ಇವತ್ತು ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ 4-9 ರೂ ಕಡಿಮೆ ದರದಲ್ಲಿ ಪೆಟ್ರೋಲ್ ಮಾರಾಟ ಮಾಡಲಾಗುತ್ತಿತ್ತು. ಆದರೆ, ಆಯ್ದ ಪೆಟ್ರೋಲ್ ಬಂಕ್​ಗಳಲ್ಲಿ ಮಾತ್ರ ಈ ಆಫರ್ ಇತ್ತು. ಒಟ್ಟಾರೆ, ರಾಜ್ ಠಾಕ್ರೆ ಅವರ ಈ ನಿರ್ಧಾರವು ಮಹಾರಾಷ್ಟ್ರ ಜನರಿಂದ ಮೆಚ್ಚುಗೆಗೂ ಪಾತ್ರವಾಯಿತು. ಬಹಳಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಠಾಕ್ರೆಗೆ ಅಭಿನಂದನೆ ಸಲ್ಲಿಸಿದ್ದಾರೆ. 50 ವರ್ಷ ತುಂಬಿದ ಸಂಭ್ರಮದಲ್ಲಿ ರಾಜ್ ಠಾಕ್ರೆಯಿಂದ ಮಹಾರಾಷ್ಟ್ರದ ಜನರಿಗೆ ಸರ್​ಪ್ರೈಸ್ ಗಿಫ್ಟ್ ಸಿಕ್ಕಂತಾಗಿದೆ.
First published:June 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ