Priyanaka Gandhi: ಪ್ರಿಯಾಂಕಾ ಗಾಂಧಿ ಕಸ ಗುಡಿಸುತ್ತಿರುವ ವಿಡಿಯೋ ವೈರಲ್; ಅವರು ಅದಕ್ಕೆ ‘ಲಾಯಕ್ಕು‘ ಎಂದ ಸಿಎಂ ಯೋಗಿ

“ಜನ್‍ತಾ ಉನ್ ಕೋ ಉಸೀ ಲಾಯಕ್ ಬನಾನ ಚಾಹ್‍ತೀ ಹೈ (ಜನರು ಅವರನ್ನು ಅದಕ್ಕೆ ಲಾಯಕ್ಕಾಗಿಸಲು ಬಯಸುತ್ತಾರೆ) “ ಎಂದು ಮುಖ್ಯಮಂತ್ರಿ ಯೋಗಿ ಸಿಎನ್‍ಎನ್-ನ್ಯೂಸ್ 18 ಜೊತೆಗಿನ ವಿಶೇಷ ಸಂಭಾಷಣೆಯಲ್ಲಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ಕಸ ಗುಡಿಸುತ್ತಿರುವ ದೃಶ್ಯ

ಪ್ರಿಯಾಂಕಾ ಗಾಂಧಿ ಕಸ ಗುಡಿಸುತ್ತಿರುವ ದೃಶ್ಯ

  • Share this:
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(Priyanaka Gandhi) ಅವರು ಸೀತಾಪುರ(Seethapura) ಅತಿಥಿ ಗೃಹದಲ್ಲಿ ಕಸ ಗುಡಿಸುತ್ತಿರುವ ದೃಶ್ಯ ವೈರಲ್ ಆಗುತ್ತಿದ್ದು, ಮತದಾರರು ಆಕೆ ಅದಕ್ಕೇ ಲಾಯಕ್ಕು ಎಂದು ಭಾವಿಸುತ್ತಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Uttar Pradesh CM Yogi Adithyanath) ಹೇಳಿದ್ದಾರೆ.

“ಜನ್‍ತಾ ಉನ್ ಕೋ ಉಸೀ ಲಾಯಕ್ ಬನಾನ ಚಾಹ್‍ತೀ ಹೈ (ಜನರು ಅವರನ್ನು ಅದಕ್ಕೆ ಲಾಯಕ್ಕಾಗಿಸಲು ಬಯಸುತ್ತಾರೆ) “ ಎಂದು ಮುಖ್ಯಮಂತ್ರಿ ಯೋಗಿ ಸಿಎನ್‍ಎನ್-ನ್ಯೂಸ್ 18 ಜೊತೆಗಿನ ವಿಶೇಷ ಸಂಭಾಷಣೆಯಲ್ಲಿ ಹೇಳಿದ್ದಾರೆ.

ಸೀತಾಪುರ ಅತಿಥಿಗೃಹದಲ್ಲಿ ನೆಲವನ್ನು ಗುಡಿಸುತ್ತಿದ್ದರು, ಅಲ್ಲಿ ಲಖೀಂಪುರ ಕೇರಿಗೆ ಭೇಟಿ ನೀಡುವ ಪ್ರಯತ್ನದಲ್ಲಿದ್ದ ಅವರನ್ನು ಬಂಧಿಸಲಾಯಿತು. ಲಖೀಂಪುರ ಕೇರಿಯಲ್ಲಿ ಅಕ್ಟೋಬರ್ 3 ರಂದು ಹಿಂಸಾತ್ಮಕ ಘರ್ಷಣೆಯಲ್ಲಿ ನಾಲ್ಕು ಜನ ರೈತರು ಸೇರಿದಂತೆ ಎಂಟು ಜನರು ಹತ್ಯೆಗೈಯಲ್ಪಟ್ಟಿದ್ದರು.

ಪ್ರಿಯಾಂಕಾ ಗಾಂಧಿಯ ಈ ನಡೆಯನ್ನು ಹೊಗಳುತ್ತಾ, ಕಾಂಗ್ರೆಸ್ 42 ಸೆಕೆಂಡುಗಳ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ, ಪೋಸ್ಟ್ ಮಾಡಿದ್ದು, ಬ್ರೀಟಿಷರು ಆಡಳಿತದ ವಿರುದ್ಧ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಅಹಿಂಸಾ ಸತ್ಯಾಗ್ರಹ ನಡೆಸಿದಾಗ ತೋರಿಸಿಕೊಟ್ಟ ದಾರಿಯಲ್ಲಿ ತಮ್ಮ ನಾಯಕಿ ನಡೆಯುತ್ತಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ:Lakhimpur Kheri Violence| ಲಖೀಂಪುರ್ ಖೇರಿ ರೈತ ಹತ್ಯಾಕಾಂಡ; ಪೊಲೀಸ್ ವಿಚಾರಣೆಗೆ ಕೊನೆಗೂ ಹಾಜರಾದ ಆಶಿಶ್ ಮಿಶ್ರಾ

“ಮಹಾತ್ಮಗಾಂಧಿ ಅವರು ತೋರಿಸಿಕೊಟ್ಟ ಹಾದಿಯಲ್ಲಿ, ಸೀತಾಪುರ ಪೋಲಿಸ್ ಲೈನ್ ಒಳಗೆ ಪ್ರಿಯಾಂಕಾ ಗಾಂಧಿ ಶ್ರಮದಾನದೊಂದಿಗೆ ತಮ್ಮ ಉಪವಾಸವನ್ನು ಆರಂಭಿಸಿದರು” ಎಂದು ಕಾಂಗ್ರೆಸ್ ಹೇಳಿದೆ. ಲಖೀಂಪುರ ಕೇರಿ ಹಿಂಸೆಯ ಕುರಿತು ಮಾತನಾಡಿದ ಸಿಎಂ ಯೋಗಿ, ಈ ಘಟನೆ ದುಃಖದಾಯಕ ಮತ್ತು ದುರದೃಷ್ಟಕರ ಎಂದು ಹೇಳಿದ್ದು, ಈ ಘಟನೆಯ ಆಳಕ್ಕೆ ಇಳಿದು ಪರಿಶೀಲನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ. “ ಯಾರೇ ಆಗಲಿ ಅಹಿಂಸೆ ಮತ್ತು ಕಾನೂನನ್ನು ಕೈಗೆ ಎತ್ತಿಕೊಳ್ಳಲು ಅವಕಾಶ ಇಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಬಂಧಿಸುವ ಮೊದಲು ಸಾಕ್ಷಿಯ ಅಗತ್ಯ ಇರುತ್ತದೆ. ನಾನು ಯಾವುದೇ ಅಪರಾಧಿಯನ್ನು ಬಿಡುವುದಿಲ್ಲ” ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದ್ದಾರೆ.

ಈ ಘಟನೆಯ ಬಗ್ಗೆ ಮುಚ್ಚಿಟ್ಟುಕೊಳ್ಳುವಂತದ್ದು ಏನೂ ಇಲ್ಲ ಎಂದು ಅವರು ಹೇಳಿದರು.” ನಾವು ದೂರಿನ ಅನ್ವಯ ಎಫ್‍ಐಆರ್ ದಾಖಲಿಸಿದ್ದೇವೆ. ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆ. ವಿರೋಧ ಪಕ್ಷದಲ್ಲಿನ ಕೆಲವರು ಈ ಹಿಂಸಾಚಾರದ ಹಿಂದೆ ಇದ್ದಾರೆ, ಅವರು ಅಲ್ಲಿಗೆ ಶಾಂತಿ ಕಾಪಾಡಲು ಹೋಗುತ್ತಿಲ್ಲ” ಎಂದು ಸಿಎಂ ಯೋಗಿ ಹೇಳಿದರು.

ಭಾನುವಾರ ಹಿಂಸಾಚಾರದಲ್ಲಿ ಸತ್ತವರಲ್ಲಿ ನಾಲ್ಕು ಮಂದಿ, ಬಿಜೆಪಿ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ವಾಹನದ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಅದನ್ನು ಕಂಡು ಕೋಪಗೊಂಡ ಕೆಲವು ರೈತರು ವಾಹನದ ಒಳಗಿದ್ದವರಿಗೆ ಕಲ್ಲು ಎಸೆದರು. ಆ ಹಿಂಸಾಚಾರದಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರು ಮತ್ತು ಅವರ ಚಾಲಕ ಮೃತಪಟ್ಟರು.
ವಾಹನಗಳೊಂದರಲ್ಲಿ ಆಶೀಶ್ ಮಿಶ್ರಾ ಇದ್ದರು ಎಂದು ರೈತರು ಆರೋಪಿಸಿದ್ದು, ಆ ಆರೋಪವನ್ನು ನಿರಾಕರಿಸಿರುವ ಆತ ಮತ್ತು ಆತನ ತಂದೆ, ತಾವು ಆ ಸಮಯದಲ್ಲಿ ಬೇರೆ ಕಾರ್ಯಕ್ರಮದಲ್ಲಿ ಇದ್ದೆವು ಎಂಬುದಕ್ಕೆ ಪುರಾವೆ ಒದಗಿಸುವುದಾಗಿ ಹೇಳಿದ್ದಾರೆ. ಸಚಿವರ ಪುತ್ರ ಮತ್ತು ಇತರರ ವಿರುದ್ಧ ದಾಖಲಿಸಲಾದ ಎಫ್‍ಐಆರ್ ಕುರಿತು ತನಿಖೆ ನಡೆಸಲು ಡಿಐಜಿ ಉಪೇಂದ್ರ ಅಗರ್‍ವಾಲ್ ನೇತೃತ್ವದ ಒಂಭತ್ತು ಜನರ ತಂಡವನ್ನು ರಚಿಸಲಾಗಿದೆ.

ಛತ್ತೀಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಭಾಘೆಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಚರಣ್‍ಜೀತ್ ಸಿಂಗ್ ಚನೈ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿರುವ ಬಗ್ಗೆ ಮಾತನಾಡುತ್ತಾ, ಮುಖ್ಯಮಂತ್ರಿ ಯೋಗಿ ಅವರು, “ ಅವರಿಗೆ ತಮ್ಮ ರಾಜ್ಯಗಳನ್ನೇ ನಿರ್ವಹಿಸಲು ಆಗುತ್ತಿಲ್ಲ, ಆದರೆ ಲಖೀಂಪುರಕ್ಕೆ ಬರಲು ಬಯಸುತ್ತಿದ್ದಾರೆ.ಪಂಜಾಬ್ ಮುಖ್ಯಮಂತ್ರಿಗೆ ತಮ್ಮ ಸ್ವಂತ ಡಿಜಿಪಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿಲ್ಲ. ಇದು ನಾಚಿಕೆಗೇಡು. ಅವರು ಕೇವಲ ತಮ್ಮ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳಲು ಬಯಸುತ್ತಿದ್ದಾರೆ” ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ “ರಾಜಕೀಯ ಪ್ರವಾಸ” ಮಾಡುತ್ತಿರುವುದಕ್ಕೆ ವಿರೋಧ ಪಕ್ಷದ ನಾಯಕರನ್ನು ಸಿಎಂ ಯೋಗಿ ತರಾಟೆಗೆ ತೆಗೆದುಕೊಂಡರು. “ಅವರಿಗೆ ನಕಾರಾತ್ಮಕತೆಯನ್ನು ಹರಡುವುದನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ಇಲ್ಲ. ಕರೋನಾ ವೈರಸ್ ಸಾಂಕ್ರಾಮಿಕ ಉಲ್ಬಣಗೊಂಡಿದ್ದಾಗ ಅವರು ಗೈರು ಹಾಜರಾಗಿದ್ದರು. ಅವರು ಲಖೀಂಪುರದಲ್ಲಿ ಅಸಾಮರಸ್ಯದ ಪರಿಸ್ಥಿತಿಯನ್ನು ಸೃಷ್ಟಿಸಲು ಬಯಸಿದ್ದರು” ಎಂದು ಯೋಗಿ ಹೇಳಿದ್ದಾರೆ.

ಲಖೀಂಪುರ ಕೇರಿ ಹಿಂಸೆಯ ಕುರಿತು ಮಾತನಾಡಿದ ಸಿಎಂ ಯೋಗಿ, ಈ ಘಟನೆ ದುಃಖದಾಯಕ ಮತ್ತು ದುರದೃಷ್ಟಕರ ಎಂದು ಹೇಳಿದ್ದು, ಈ ಘಟನೆಯ ಆಳಕ್ಕೆ ಇಳಿದು ಪರಿಶೀಲನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.
Published by:Latha CG
First published: