PM's Birthday: ಶುಕ್ರವಾರ ಮೋದಿ ಹುಟ್ಟುಹಬ್ಬದಂದು ದೇಶದಲ್ಲಿ ದಾಖಲೆ ಲಸಿಕೆ ವಿತರಣೆ ಗುರಿ

ಆಗಸ್ಟ್​ 27ರಂದು ದೇಶದಲ್ಲಿ 1. 03 ಕೋಟಿ ಲಸಿಕೆ ವಿತರಣೆ ಮಾಡಲಾಗಿತ್ತು. ಈ ದಾಖಲೆ ಮೀರಿ ಸಾಧನೆ ಮಾಡುವ ಗುರಿ ಹೊಂದಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸೆಪ್ಟೆಂಬರ್​ 17ರ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ (PM Modi Birthday) ಅವರ 71ನೇ ಹುಟ್ಟುಹಬ್ಬ. ಅವರ ಹುಟ್ಟುಹಬ್ಬದ ಹಿನ್ನಲೆ ದೇಶದಲ್ಲಿ ಹೊಸ ದಾಖಲೆ ಸೃಷ್ಟಿಸುವ ಮೂಲಕ ಅವರಿಗೆ ಉಡುಗೊರೆ ನೀಡಬೇಕು ಎಂದು ಬಿಜೆಪಿ ತಯಾರಿ ನಡೆಸಿದೆ. ಇದೇ ಕಾರಣಕ್ಕೆ ಅಂದು ದಾಖಲೆ ಪ್ರಮಾಣದಲ್ಲಿ ದೇಶದಲ್ಲಿ ಜನರಿಗೆ ಲಸಿಕೆ ವಿತರಣೆಯ (vaccine drive) ಗುರಿಯನ್ನು ಮಾಡಲಾಗಿದೆ. ಈಗಾಗಲೇ ಆಗಸ್ಟ್​ 27ರಂದು ರಂದು ಒಂದೇ ದಿನದಲ್ಲಿ ದಾಖಲೆ ಲಸಿಕೆ ವಿತರಣೆ ಮಾಡಲಾಗಿದೆ. ಆಗಸ್ಟ್​ 27ರಂದು ದೇಶದಲ್ಲಿ 1. 03 ಕೋಟಿ ಲಸಿಕೆ ವಿತರಣೆ ಮಾಡಲಾಗಿತ್ತು. ಈ ಹಿನ್ನಲೆ ಈ ದಾಖಲೆ ಮೀರಿ ಸಾಧನೆ ಮಾಡುವ ಗುರಿಯನ್ನು ಈಗ ನಾಯಕರು ಹೊಂದಿದ್ದಾರೆ. ಇದಕ್ಕಾಗಿ ಈಗಾಗಲೇ ರಾಜ್ಯದ ಅಧಿಕಾರಿಗಳು ಲಸಿಕೆ ದುಪ್ಪಟ್ಟನ್ನು ಹೆಚ್ಚಿಸಲು ಸೂಚನೆ ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಕೂಡ ಈ ಸವಾಲನ್ನು ಸ್ವೀಕಾರ ಮಾಡಿದ್ದಾರೆ.

  ಈ ಕುರಿತು ಮಾತನಾಡಿರುವ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಸುಜಿತ್​​ ಸಿಂಗ್​, ನಮ್ಮ ಪ್ರಧಾನಿಗಳ ಹುಟ್ಟುಹಬ್ಬದಂದು ಹೊದ ದಾಖಲೆ ಮಾಡುವ ಪ್ರಯತ್ನವನ್ನು ನಾವು ನಡೆಸಿದ್ದೇವೆ ಎಂದಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
  ಈ ವರ್ಷಾಂತ್ಯದೊಳಗೆ ದೇಶದ ವಾಸಿಗಳಿಗೆ ಲಸಿಕೆ ವಿತರಣೆ ಗುರಿಯನ್ನು ಸಂಪೂರ್ಣ ಗೊಳಿಸುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬಕ್ಕೆ ಹೆಚ್ಚಿನ ಲಸಿಕೆ ನೀಡುವ ಗುರಿ ರೂಪಿಸಲಾಗಿದೆ. ಅದರಲ್ಲೂ ಬಿಜೆಪಿ ಆಡಳಿತ ಪಕ್ಷದಲ್ಲಿ ಈ ಸಂಖ್ಯೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.

  ಕಳೆದ ಜೂನ್​ನಲ್ಲಿ ಮಧ್ಯ ಪ್ರದೇಶ ಆಡಳಿತವು ಸರಿಸುಮಾರು 17 ಲಕ್ಷ ಲಸಿಕೆ ನೀಡಲಾಗಿತ್ತು. ಉತ್ತರ ಪ್ರದೇಶದಲ್ಲಿ ಶೇಕಡಾ 7 ಕ್ಕಿಂತ ಕಡಿಮೆ ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ - ಕಳೆದ ವಾರ ನಿಗದಿಪಡಿಸಿದ 35 ಲಕ್ಷ ಡೋಸ್‌ಗಳ "ಏಕದಿನ ದಾಖಲೆಯನ್ನು ಗಮನಾರ್ಹವಾಗಿ ಉತ್ತಮಗೊಳಿಸುವುದು" ಗುರಿಯಾಗಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತವೆ.

  ಇದನ್ನು ಓದಿ: ಕೆಲಸ ಕಳೆದುಕೊಂಡ ನಿರುದ್ಯೋಗಿಗಳಿಗೆ ಸರ್ಕಾರದಿಂದ ಶೇ 50ರಷ್ಟು ಭತ್ಯೆ; ಮಾಡಬೇಕಿರುವುದು ಇಷ್ಟೇ!

  ಸೆಪ್ಟೆಂಬರ್​ 17ರಂದು ಈ ವಿಶೇಷ ಲಸಿಕಾ ಅಭಿಯಾನ ನಡೆಸಲಾಗುತ್ತಿದ್ದು, ಉತ್ತರ ಪ್ರದೇಶದ 192 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಗುರಿ ಹೊಂದಾಲಾಗಿದೆ ಎಂದು ಆರೋಗ್ಯ ಅಧಿಕಾರಿ ಎಸ್​ಕೆ ತಿವಾರಿ ತಿಳಿಸಿದ್ದಾರೆ.

  ಇದನ್ನು ಓದಿ: ಜೆಇಇ ಮೇನ್ ಫಲಿತಾಂಶ ಪ್ರಕಟ; ಕರ್ನಾಟಕದ ಗೌರಬ್ ದಾಸ್​ಗೆ First Rank ​

  ಇದರ ಜೊತೆಗೆ ಬಿಜೆಪಿ ಪಕ್ಷ ಕೂಡ ಹಲವು ಯೋಜನೆಗಳನ್ನು ರೂಪಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕ ಆಡಳಿತ ಸೇವಾ ಬದ್ಧತೆಯನ್ನು ಪ್ರಶಂಸಿಸಿ ದೇಶಾದ್ಯಂತ ಎಲ್ಲಾ ಬೂತ್​ಗಳಲ್ಲಿ 5 ಕೋಟಿ ಪೋಸ್ಟ್​ ಕಾರ್ಡ್​ ಕಳುಹಿಸಲಾಗುವುದು. ಇನ್ನು ಈ ವಿಶೇಷ ದಿನದಂದು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ವಿವಿಧ ಕಾರ್ಯಕ್ರಮ, ಭೇಟಿ ವೇಳೆ ಪಡೆದ ಉಡುಗೊರೆಗಳನ್ನು ಹಾರಾಜು ಪ್ರಕ್ರಿಯೆ ನಡೆಸುವಂತೆ ಕೂಡ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದೆ.

  ದೇಶದ ಎಲ್ಲಾ ರಾಜ್ಯಗಳ ಜಿಲ್ಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀವನದ ಕುರಿತು ತಿಳಿಸುವ ಅಭಿಯಾನ ಪ್ರದರ್ಶನ ನಡೆಸುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ, ಡಿ ಪುರಂದೇಶ್ವರಿ, ವಿನೋದ್ ಸೋಂಕರ್ ಮತ್ತು ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಜ ಕುಮಾರ ಚಾಹರ್ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ. ಈ ವೆಳೆ ಬಡವರಿಗೆ ಉಚಿತ ಆಹಾರ ಸಾಮಾಗ್ರಿ ವಿತರಣೆ ಜೊತೆಗೆ ಲಸಿಕೆ ವಿತರಣೆ ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ. ಇದೇ ಸಂದರ್ಭದಲ್ಲಿ ಜನರಿಗೆ ಖಾದಿ ಸಾಮಾಗ್ರಿ ಮತ್ತು ಸ್ಥಳೀಯ ವಸ್ತುಗಳ ಬಳಕೆಗೆ ಉತ್ತೇಜಿಸುವ ಕುರಿತು ಅಭಿಯಾನ ನಡೆಸಲಾಗುವುದು.
  Published by:Seema R
  First published: