Seema.RSeema.R
|
news18 Updated:April 11, 2019, 3:42 PM IST
ಸೋನಿಯಾ ಗಾಂಧಿ
- News18
- Last Updated:
April 11, 2019, 3:42 PM IST
ರಾಯ್ಬರೇಲಿ (ಏ.11): ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ
2004ರಲ್ಲೂ ತಾವೇ ಅಧಿಕಾರ ಹಿಡಿಯುತ್ತೇವೆ ಎಂದು ಅತಿಯಾದ ಆತ್ಮವಿಶ್ವಾದಿಂದ ಬೀಗಿತ್ತು. ಆದರೆ, ಸರ್ಕಾರ ರಚಿಸಿದ್ದು ನಾವು ಆ ಚುನಾವಣಾ ಫಲಿತಾಂಶವನ್ನು ಮರೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಟಾಂಗ್ ನೀಡಿದ್ದಾರೆ.
ಇಂದು ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸೋನಿಯಾ, ಮೋದಿ ಓರ್ವ ದುರಹಂಕಾರಿ. ಭಾರತದ ಇತಿಹಾಸದಲ್ಲಿ ಅನೇಕ ಜನರು ಭಾರತೀಯರಿಗಿಂತ ತಾವೇ ದೊಡ್ಡವರು ಹಾಗೂ ನಾವೇ ಗೆಲ್ಲುತ್ತೇವೆ ಎಂಬ ನಂಬಿಕೆಯಿಂದ ಬೀಗಿದವರು ಇದ್ದಾರೆ ಆದರೆ, ಭಾರತ ಜನ ಎಂದಿಗೂ ಇಂತವರ ಬೆನ್ನಿಗೆ ನಿಲ್ಲಲಿಲ್ಲ" ಎಂದು ಮೋದಿ ವಿರುದ್ಧ ಹೌಹಾರಿದರು.
ಕಳೆದ ಐದು ವರ್ಷದ ಮೋದಿ ಸಾಧನೆಯ ವಿರುದ್ಧ ಕಿಡಿ ಕಾರಿದ ಅವರು, "ತಮ್ಮ ಅಧಿಕಾರದ ಅವಧಿಯಲ್ಲಿ ನರೇಂದ್ರ ಮೋದಿ ಜನರಿಗಾಗಿ ಏನನ್ನು ಮಾಡಿಲ್ಲ. ಹೀಗಾಗಿ ಗೆಲ್ಲುವ ಅವರ ನಿರೀಕ್ಷೆಯನ್ನು ಮತದಾರರು ಖಂಡಿತ ಹುಸಿಗೊಳಿಸುತ್ತಾರೆ" ಎಂದು ಕುಟುಕಿದರು.
1996,1998 ಮತ್ತು 1999ರಲ್ಲಿ ಅಟಲ್ ಬಿಹಾರಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಸರ್ಕಾರ ರಚಿಸುವ ವಿಶ್ವಾಸವನ್ನು ಹೊಂದಿತ್ವ್ಯತು. ಭಾರತ ಪ್ರಜ್ವಲಿಸುತ್ತಿದೆ ಎಂದು ರಾಷ್ಟ್ರಾದ್ಯಂತ ಪ್ರಚಾರ ನಡೆಸಿ ಗೆದ್ದೆ ಬಿಡುತ್ತೇವೆ ಎಂದು ಅತಿಯಾದ ಆತ್ಮವಿಶ್ವಾಸದಲ್ಲಿತ್ತು. ಆದರೆ, ಅವರ ಊಹೆ ಕೊನೆ ಕ್ಷಣದಲ್ಲಿ ತಲೆಕೆಳಗಾಗಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಅವರದೇ ಪಕ್ಷದ ಇತಿಹಾಸವನ್ನು ಒಮ್ಮೆ ನೆನಪಿಸಿದರು.
ಇದನ್ನು ಓದಿ: ಅನುಕಂಪಕ್ಕಾಗಿ ಏ.16ರಂದು ಸುಮಲತಾ ಕಡೆಯವರು ಕಲ್ಲಲ್ಲಿ ಹೊಡೆಸಿಕೊಂಡು ನಾಟಕವಾಡುತ್ತಾರೆ; ಸಿಎಂ ಗಂಭೀರ ಆರೋಪ
ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ಶೋ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ನಡೆಸಿದರು. ಇದಕ್ಕೂ ಮುನ್ನ ಸೋನಿಯಾ ಗಾಂಧಿ ಕುಟುಂಬ ಪಕ್ಷದ ಕೇಂದ್ರ ಕಚೇರಿಯಲ್ಲಿ ಹೋಮ-ಹವನ ನಡೆಸಿದರು.
First published:
April 11, 2019, 3:34 PM IST