Maharashtra Politics: ಜೂನ್ 30ಕ್ಕೆ ಉದ್ಧವ್ ಠಾಕ್ರೆಗೆ ಮಹಾ ಪರೀಕ್ಷೆ! ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

ಜೂ.30ಕ್ಕೆ ವಿಶ್ವಾಸ ಮತ ಯಾಚನೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಸಿಎಂ ಉದ್ಧವ್ ಠಾಕ್ರೆ ಅವರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಿಎಂ ಉದ್ಧವ್ ಠಾಕ್ರೆ ನೇೃತ್ವತ್ವದ ಮೈತ್ರಿ ಸರ್ಕಾರದ ಭವಿಷ್ಯ ಗುರುವಾಗ ಬೆಳಗ್ಗೆ 11 ಗಂಟೆಗೆ ನಿರ್ಧಾರವಾಗಲಿದೆ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ

  • Share this:
ಮಹಾರಾಷ್ಟ್ರ: ವಿಶ್ವಾಸಮತದ ಕೊರತೆ ಎದುರಿಸುತ್ತಿರುವ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ (Maharashtra State Government) ಈಗ ಮತ್ತೊಂದು ಮಹಾ ಪರೀಕ್ಷೆ ಎದುರಾಗಿದೆ. ಗುರುವಾರ ಅಂದರೆ ಜೂ.30ಕ್ಕೆ ವಿಶ್ವಾಸ ಮತ ಯಾಚನೆಗೆ ಮಹಾರಾಷ್ಟ್ರ ರಾಜ್ಯಪಾಲ (Governor) ಭಗತ್ ಸಿಂಗ್ ಕೋಶಿಯಾರಿ (Bhagat Singh Koshyari) ಅವರು ಸಿಎಂ ಉದ್ಧವ್ ಠಾಕ್ರೆ (Uddhav Thackrey) ಅವರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಿಎಂ ಉದ್ಧವ್ ಠಾಕ್ರೆ ನೇೃತ್ವತ್ವದ ಮೈತ್ರಿ ಸರ್ಕಾರದ ಭವಿಷ್ಯ ಗುರುವಾಗ ಬೆಳಗ್ಗೆ 11 ಗಂಟೆಗೆ ನಿರ್ಧಾರವಾಗಲಿದೆ. ಈ ನಡುವೆ ನಮಗೆ 50 ಶಾಸಕರ ಬೆಂಬಲ ಇದೆ ಅಂತ ರೆಬೆಲ್ ಶಾಸಕರ ಬಣದ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ. ಮತ್ತೊಂದೆಡೆ ಸಮಸ್ಯೆಗಳಿದ್ದರೆ ಕೂತು ಮಾತನಾಡಿ ಬಗೆಹರಿಸಿಕೊಳ್ಳೋಣ ಅಂತ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ.

 ರಾಜ್ಯಪಾಲರನ್ನು ಭೇಟಿಯಾಗಿದ್ದ ದೇವೇಂದ್ರ ಫಡ್ನವೀಸ್

 ಇಂದು ಮಾಜಿ ಮುಖ್ಯಮಂತ್ರಿ ಬಿಜೆಪಿಯ ದೇವೇಂದ್ರ ಫಡ್ನವಿಸ್‌, ರಾಜ್ಯಪಾಲರನ್ನು ಭೇಟಿಯಾಗಿದ್ದರು. ಈ ವೇಳೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸುವಂತೆ ಮನವ ಮಾಡಿದ್ದರು. ಅದಲ್ಲದೆ, 8 ಮಂದಿ ಪಕ್ಷೇತರ ಶಾಸಕರು ರಾಜ್ಯಪಾಲರಿಗೆ ಪತ್ರ ಬರೆದು ತಕ್ಷಣವೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಿ ಎಂದು ಆಗ್ರಹಪಡಿಸಿದ್ದರು.

ಜೂನ್ 30ಕ್ಕೆ ವಿಶ್ವಾಸಮತ ಯಾಚನೆಗೆ ಸೂಚನೆ

ಗುರುವಾರ ಅಂದರೆ ಜೂ.30ಕ್ಕೆ ವಿಶ್ವಾಸ ಮತ ಯಾಚನೆಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಸಿಎಂ ಉದ್ಧವ್ ಠಾಕ್ರೆ ಅವರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಸಿಎಂ ಉದ್ಧವ್ ಠಾಕ್ರೆ ನೇೃತ್ವತ್ವದ ಮೈತ್ರಿ ಸರ್ಕಾರದ ಭವಿಷ್ಯ ಗುರುವಾಗ ಬೆಳಗ್ಗೆ 11 ಗಂಟೆಗೆ ನಿರ್ಧಾರವಾಗಲಿದೆ.

ಇದನ್ನೂ ಓದಿ: Maharashtra Politics: ರೆಸಾರ್ಟ್‌ನಿಂದ ಮುಂಬೈಗೆ ಬರ್ತಾರಾ ರೆಬೆಲ್ ಶಾಸಕರು? ನನ್ನ ಜೊತೆ 50 ಮಂದಿ ಇದ್ದಾರೆ ಎಂದ ಶಿಂಧೆ!

ನನ್ನ ಜೊತೆ 50 ಮಂದಿ ಇದ್ದಾರೆ ಎಂದ ಶಿಂಧೆ!

ಇನ್ನು ನಮ್ಮ ಬಳಿ 50 ಶಾಸಕರು ಇದ್ದಾರೆ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ. ಇಲ್ಲಿರುವ ಯಾವುದೇ ಶಾಸಕರನ್ನು ನಿಮಗೆ ಹತ್ತಿಕ್ಕಲು ಸಾಧ್ಯವಿಲ್ಲ. ಇಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ, 50 ಶಾಸಕರು ನಮ್ಮೊಂದಿಗಿದ್ದಾರೆ ಅಂತ ಉದ್ಧವ್ ಠಾಕ್ರೆ ಬಣಕ್ಕೆ ತಿರುಗೇಟು ನೀಡಿದ್ದಾರೆ. ನಾವು ಶಿವಸೇನೆಯಲ್ಲಿ ಇದ್ದೇವೆ, ಶಿವಸೇನೆಯನ್ನು ನಾವೇ ಮುನ್ನಡೆಸುತ್ತೇವೆ. ಈ ವಿಚಾರದಲ್ಲಿ ಯಾರಿಗೂ ಸಂಶಯ ಬೇಡ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ. ನಾವು ಮುಂದೆ ಏನು ಮಾಡಲಿದ್ದೇವೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ. ಕೆಲವೇ ದಿನಗಳಲ್ಲಿ ನಾವು ಮುಂಬೈಗೆ ಹೋಗುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ನಾವು ಯಾರನ್ನೂ ಬಲವಂತವಾಗಿ ಕರೆತಂದಿಲ್ಲ

ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಕೆಲ ದಿನಗಳ ಹಿಂದೆ ಏಕನಾಥ್ ಶಿಂಧೆ ವಿರುದ್ಧ ಆರೋಪ ಮಾಡಿದ್ದರು. 15 ರಿಂದ 20 ಶಾಸಕರನ್ನು ಹೆದರಿಸಿ ಅಪಹರಣ ಮಾಡಿ ತಮ್ಮೊಂದಿಗೆ ಕರೆದೊಯ್ದಿದ್ದಾರೆ ಎಂದು ಏಕನಾಥ್ ಶಿಂಧೆ ವಿರುದ್ಧ ಆದಿತ್ಯ ಠಾಕ್ರೆ ಹರಿಹಾಯ್ದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಶಿಂಧೆ, ನಾವು ಯಾರನ್ನೂ ಒತ್ತಾಯ ಪೂರ್ವಕವಾಗಿ ಕರೆತಂದಿಲ್ಲ. ಎಲ್ಲರೂ ತಮ್ಮ ಸ್ವಇಚ್ಛೆಯಿಂದಲೇ ನಮ್ಮ ಜೊತೆ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Uddhav Thackeray: ತಪ್ಪು ಹೆಜ್ಜೆ ಇಡಬೇಡಿ, ಬನ್ನಿ ಮಾತನಾಡೋಣ! ರೆಬೆಲ್ ಶಾಸಕರಿಗೆ ಉದ್ಧವ್ ಠಾಕ್ರೆ ಭಾವನಾತ್ಮಕ ಪತ್ರ

ರೆಬೆಲ್ ಶಾಸಕರಿಗೆ ಉದ್ಧವ್ ಠಾಕ್ರೆ ಭಾವನಾತ್ಮಕ ಪತ್ರ

ರೆಬೆಲ್ ಶಾಸಕರಿಗೆ ಸಿಎಂ ಉದ್ಧವ್ ಠಾಕ್ರೆ ಭಾವನಾತ್ಮಕ ಪತ್ರ ಬರೆದಿದ್ದಾರೆ. ಮಂಬೈಗೆ ಬನ್ನಿ ಮುಖಾಮುಖಿ ಭೇಟಿಯಾಗಿ ಮಾತನಾಡೋಣ. ಪರಸ್ಪರ ಚರ್ಚಿಸಿ ನಮ್ಮೆಲ್ಲಾ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳೋಣ.  ನಾನು ನಿಮ್ಮ ಕುಟುಂಬದ ಹಿರಿಯ ಸದಸ್ಯನಂತೆ ನೀವು ಯಾವುದೇ ಒತ್ತಡ ಇಲ್ಲದೆ ನನ್ನ ಬಳಿ ಬನ್ನಿ. ನಾವೆಲ್ಲರೂ ಒಟ್ಟಾಗಿ ಈ ಸನ್ನಿವೇಶದಿಂದ ಹೊರಬರೋಣ. ಬಂದು ಮಾತನಾಡಿ ಎಂದು ಪತ್ರದಲ್ಲಿ ಉದ್ಧವ್ ಮನವಿ ಮಾಡಿದ್ದಾರೆ.
Published by:Annappa Achari
First published: