ಧಾರ್ಮಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡೋಣ: ಭಾರತ ಭೇಟಿ ವೇಳೆ ಮೈಕ್ ಪೋಂಪಿಯೋ ಕರೆ

ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಇಬ್ಬರೂ ಅಪಾಯ ಎದುರಿಸಲು ಭಯಪಡುವುದಿಲ್ಲ. ಇವರ ನೇತೃತ್ವದಲ್ಲಿ ಭಾರತ ಮತ್ತು ಅಮೆರಿಕ ಒಗ್ಗೂಡಿ ಸಾಧನೆ ಮಾಡಬಲ್ಲುವು ಎಂದು ಮೈಕ್ ಪೋಂಪಿಯೋ ಹೇಳಿದ್ದಾರೆ.

Vijayasarthy SN | news18
Updated:June 26, 2019, 10:49 PM IST
ಧಾರ್ಮಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡೋಣ: ಭಾರತ ಭೇಟಿ ವೇಳೆ ಮೈಕ್ ಪೋಂಪಿಯೋ ಕರೆ
ಮೈಕ್ ಪೋಂಪಿಯೋ ಮತ್ತು ಎಸ್. ಜೈಶಂಕರ್
  • News18
  • Last Updated: June 26, 2019, 10:49 PM IST
  • Share this:
ನವದೆಹಲಿ(ಜೂನ್ 26): ಭಾರತಕ್ಕೆ 2 ದಿನಗಳ ಭೇಟಿ ನೀಡಿರುವ ಅಮೆರಿಕ ವಿದೇಶಾಂಗ ಸಚಿವ ಮೈಕ್ ಪೋಂಪಿಯೋ ಅವರು ಧಾರ್ಮಿಕ ಸ್ವಾತಂತ್ರ್ಯ ಎತ್ತಿಹಿಡಿಯುವ ಬಗ್ಗೆ ಮಾತನಾಡಿದ್ಧಾರೆ. ಇವತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದ ನಂತರ ಅಂತಿಮ ಭಾಷಣ ಮಾಡಿದ ಮೈಕ್ ಪೋಂಪಿಯೋ, ಎರಡೂ ದೇಶಗಳು ಧಾರ್ಮಿಕ ಸ್ವಾತಂತ್ರ್ಯ ಎತ್ತಿಹಿಡಿಯುವ ಕೆಲಸ ಮಾಡಬೇಕಿದೆ ಎಂದು ಕರೆನೀಡಿದರು.

"ಭಾರತವು ನಾಲ್ಕು ಪ್ರಮುಖ ವಿಶ್ವ ಧರ್ಮಗಳಿಗೆ ಮೂಲವಾಗಿದೆ. ಪ್ರತಿಯೊಬ್ಬರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅವಕಾಶ ನೀಡಲು ನಾವು ಬದ್ಧರಾಗಬೇಕಿದೆ. ಈ ಹಕ್ಕುಗಳನ್ನ ಕಾಪಾಡಲು ನಾವು ಗಟ್ಟಿಯಾಗಿ ಮಾತನಾಡೋಣ. ಈ ಹಕ್ಕುಗಳ ವಿಚಾರದಲ್ಲಿ ನಾವು ಸ್ವಲ್ಪ ಸಡಿಲ ಬಿಟ್ಟರೂ ವಿಶ್ವಕ್ಕೆ ಕೇಡುಗಾಲ" ಎಂದು ಪೋಂಪಿಯೋ ಎಚ್ಚರಿಸಿದರು.

ಇದನ್ನೂ ಓದಿ: ಭಾರತ ಮತ್ತು ಅಮೆರಿಕ ವಿದೇಶಾಂಗ ಸಚಿವರ ಭೇಟಿ; ಸಂಬಂಧ ಗಟ್ಟಿಗೊಳಿಸಲು ಚರ್ಚೆ

ಅಮೆರಿಕದ "2018ರ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ವರದಿ"ಯಲ್ಲಿ ಭಾರತದಲ್ಲಿ ಧರ್ಮಸಂಬಂಧಿತ ಹಿಂಸಾಚಾರಗಳನ್ನು ಟೀಕಿಸಿರುವ ಹೊತ್ತಿನಲ್ಲಿ ಮೈಕ್ ಪೋಂಪಿಯೋ ಅವರ ಈ ಹೇಳಿಕೆ ಗಮನ ಸೆಳೆದಿದೆ. ಭಾರತದಲ್ಲಿ ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ, ದೊಂಬಿ ಹಿಂಸಾಚಾರ ಇತ್ಯಾದಿ ಕೃತ್ಯಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಈ ವರದಿ ಟೀಕಿಸಿದೆ. ಅಮೆರಿಕ ಸರ್ಕಾರದ ವೆಬ್​ಸೈಟ್​ನಲ್ಲೇ ಈ ವರದಿ ಲಭ್ಯವಿದೆ.

ಆದರೆ, ಭಾರತ ಸರ್ಕಾರ ಈ ವರದಿಯ ಸತ್ಯಾಸತ್ಯತೆಯನ್ನು ಅಲ್ಲಗಳೆಯುತ್ತಾ ಬಂದಿದೆ. ಭಾರತದ ಸಂವಿಧಾನದಲ್ಲಿ ಎಲ್ಲಾ ನಾಗರಿಕರಿಗೂ ಮೂಲಭೂತ ಹಕ್ಕು ಇದ್ದೇ ಇದೆ. ಅಮೆರಿಕದ ಸಂಸ್ಥೆಯ ಈ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಮೂರು ದಿನಗಳ ಹಿಂದಷ್ಟೇ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದರು.

ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಪ್ರಭಾವ ತಡೆಯಲು ಟಿಎಂಸಿಯೊಂದಿಗೆ ಕೈ ಜೋಡಿಸಲು ಸಿಪಿಐ(ಎಂ), ಕಾಂಗ್ರೆಸ್​ಗೆ ಮಮತಾ ಬ್ಯಾನರ್ಜಿ ಆಹ್ವಾನ

ಇದೇ ವೇಳೆ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದ ಪ್ಯಾಲೆಸ್ಟೀನಿಯನ್ ಎನ್​ಜಿಓ ಸಂಸ್ಥೆಯ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ ಚಲಾಯಿಸಿದ ಕ್ರಮವನ್ನು ಪ್ರಶಂಸಿಸಲು ಮೈಕ್ ಪೋಂಪಿಯೋ ಮರೆಯಲಿಲ್ಲ. ಭಾರತ ವಿಶ್ವರಂಗದಲ್ಲಿ ತನ್ನ ಛಾಪು ಮೂಡಿಸುತ್ತಿದೆ ಎಂದವರು ಶ್ಲಾಘಿಸಿದರು.ಇನ್ನು, ಅಮೆರಿಕದ ವಿದೇಶಾಂಗ ಸಚಿವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರನ್ನ ಹೋಲಿಕೆ ಮಾಡಿ ಹೊಗಳಿದ್ದು ವಿಶೇಷ. ಈ ಇಬ್ಬರು ಮುಖಂಡರು ಅಪಾಯ ಮೈಮೇಲೆ ಎಳೆದುಕೊಳ್ಳಲು ಭಯ ಪಡುವುದಿಲ್ಲ. ಇವರ ನೇತೃತ್ವದಲ್ಲಿ ಎರಡೂ ದೇಶಗಳು ಒಗ್ಗೂಡಿ ಪ್ರಚಂಡ ಕೆಲಸಗಳನ್ನ ಮಾಡಬಲ್ಲವು ಎಂದು ಪೋಂಪಿಯೋ ವಿಶ್ವಾಸ ವ್ಯಕ್ತಪಡಿಸಿದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ