ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ಇದೇ ತಿಂಗಳ 17ಕ್ಕೆ ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಹೊರಬೀಳುವ ನಿರೀಕ್ಷೆ

ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ವಾದ-ಪ್ರತಿವಾದವನ್ನು ಆಲಿಸಿ, ಪಾಕಿಸ್ತಾನ ನೀಡಿದ್ದ ಮರಣ ದಂಡನೆ ಶಿಕ್ಷೆಯನ್ನು 2017ರ ಮೇ 18 ರದ್ದುಗೊಳಿಸಿ, ತೀರ್ಪನ್ನು ಕಾಯ್ದಿರಿಸಿತ್ತು.

HR Ramesh | news18
Updated:July 4, 2019, 10:03 PM IST
ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ಇದೇ ತಿಂಗಳ 17ಕ್ಕೆ ಕುಲಭೂಷಣ್ ಜಾಧವ್ ಪ್ರಕರಣದ ತೀರ್ಪು ಹೊರಬೀಳುವ ನಿರೀಕ್ಷೆ
ಕುಲಭೂಷಣ್ ಜಾಧವ್
  • News18
  • Last Updated: July 4, 2019, 10:03 PM IST
  • Share this:
ನವದೆಹಲಿ: ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯದಿಂದ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್ ಜಾಧವ್​ ಪ್ರಕರಣದ ಅಂತಿಮ ತೀರ್ಪು ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ಇದೇ ತಿಂಗಳ 17ರಂದು ಹೊರಬೀಳುವ ನಿರೀಕ್ಷೆ ಇದೆ. 

ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಯಾಗಿರುವ ಕುಲಭೂಷಣ್ ಜಾಧವ್ (48) ಬೇಹುಗಾರಿಗೆ ಮತ್ತು ಭಯೋತ್ಪಾದನೆ ಕೃತ್ಯ ಎಸಗಿದ ಆರೋಪದ ಮೇಲೆ ಪಾಕಿಸ್ತಾನ ಮಿಲಿಟರಿ ನ್ಯಾಯಾಲಯ 2017ರ ಏಪ್ರಿಲ್​ನಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಭಾರತ 2017ರ ಮೇನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು.

ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ವಾದ-ಪ್ರತಿವಾದವನ್ನು ಆಲಿಸಿ, ಪಾಕಿಸ್ತಾನ ನೀಡಿದ್ದ ಮರಣ ದಂಡನೆ ಶಿಕ್ಷೆಯನ್ನು 2017ರ ಮೇ 18 ರದ್ದುಗೊಳಿಸಿ, ತೀರ್ಪನ್ನು ಕಾಯ್ದಿರಿಸಿತ್ತು.

ಪ್ರಕರಣ ಸಂಬಂಧ ಜಾಗತಿಕ ನ್ಯಾಯಾಲಯ ಫೆಬ್ರವರಿಯಲ್ಲಿ ನಾಲ್ಕು ದಿನ ಸಾರ್ವಜನಿಕವಾಗಿ ವಿಚಾರಣೆ ನಡೆಸಿತು. ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳು ಸವಿವರವಾಗಿ ತಮ್ಮ ಮೇಲ್ಮನವಿ ಮತ್ತು ಪ್ರತಿಕ್ರಿಯೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿವೆ.

ಈ ಪ್ರಕರಣದಲ್ಲಿ ಭಾರತ ಎರಡು ಪ್ರಮುಖವಾದ ವಿಷಯಗಳ ಮೇಲೆ ವಾದ ಮಂಡಿಸಿತ್ತು. ಒಂದು ವಿಯೆನ್ನಾ ಒಪ್ಪಂದದ ಉಲ್ಲಂಘನೆ ಮತ್ತು ಬಂಧನ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಮೇಲೆ ಬೆಳಕು ಚೆಲ್ಲಿತ್ತು.

ಇದನ್ನು ಓದಿ: ತೀರ್ಪು ನೀಡುವವರೆಗೂ ‘ಕುಲಭೂಷಣ್ ಜಾಧವ್​​’ರನ್ನು ಗಲ್ಲಿಗೇರಿಸುವಂತಿಲ್ಲ; ಅಂತರಾಷ್ಟ್ರೀಯ ನ್ಯಾಯಲಯ ಆದೇಶ!

ಭಾರತದ ವಾದಕ್ಕೆ ಮನ್ನಣೆ ನೀಡಿದ ಅಂತಾರಾಷ್ಟ್ರೀಯ ನ್ಯಾಯಾಲಯ, ಪಾಕಿಸ್ತಾನ ನೀಡಿದ್ದ ಮರಣ ದಂಡನೆ ಶಿಕ್ಷೆಯನ್ನು ರದ್ದುಗೊಳಿಸಿತ್ತು. ಮತ್ತು ಕುಲಭೂಷನ್ ಜಾಧವ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶ ನೀಡಿತ್ತು.
ಕುಲಭೂಷಣ್ ಜಾಧವ್​ ಒಬ್ಬ ಉದ್ಯಮಿಯಲ್ಲ. ಆತ ಬೇಹುಗಾರ ಎಂದು ಪಾಕಿಸ್ತಾನ ವಾದ ಮಂಡಿಸಿತ್ತು. ಜೊತೆಗೆ ಇರಾನ್​ನಿಂದ ಬಂದ ಜಾಧವ್​ನನ್ನು ಪಾಕಿಸ್ತಾನದ ರಕ್ಷಣಾ ಪಡೆ 2016ರ ಮಾರ್ಚ್​ 3ರಂದು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಬಂಧಿಸಿತ್ತು ಎಂದು ಆರೋಪಿಸಿತ್ತು.


ಉದ್ಯಮದತ್ತ ಆಸಕ್ತಿ ಹೊಂದಿದ್ದ ಜಾಧವ್​ ಭಾರತೀಯ ನೌಕಾಪಡೆಯಿಂದ ನಿವೃತ್ತರಾದ ಬಳಿಕ ಇರಾನ್​ನಲ್ಲಿ ವ್ಯವಹಾರ ಮಾಡಿಕೊಂಡಿದ್ದರು. ಆದರೆ, ಅವರನ್ನು ಅಲ್ಲಿಂದ ಅಪಹರಿಸಲಾಗಿದೆ ಎಂದು ಭಾರತ ಪಾಕ್​ ವಾದಕ್ಕೆ ಪ್ರತ್ಯುತ್ತರ ನೀಡಿತ್ತು.

 

First published: July 4, 2019, 10:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading