ದೇಶದಲ್ಲಿ ಹುಲಿಗಳ (tigers) ಸಂತತಿಯನ್ನು ಖಚಿತವಾದ ಚೇತರಿಕೆಯ ಹಾದಿಗೆ ಕೊಂಡೊಯ್ಯಲಾಗಿದೆ, ಚತುರ್ವಾಷಿಕ ಅಖಿಲ ಭಾರತ ಹುಲಿ ಅಂದಾಜಿನ ವರದಿಗಳು ಶೇಕಡಾ 6ರಷ್ಟು ಆರೋಗ್ಯಕರ ವಾರ್ಷಿಕ ಬೆಳವಣಿಗೆ ತೋರಿಸುತ್ತಿರುವುದು ಇದನ್ನು ಸ್ಪಷ್ಟಪಡಿಸುತ್ತಿವೆ ಎಂದು ಪರಿಸರ ಸಚಿವಾಲಯವು (Environment Ministry )ಹೇಳಿದೆ. ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ(Madhya Pradesh) ವರದಿಯಾದ ಹುಲಿಗಳ ಸಾವಿನ ಹಿನ್ನೆಲೆಯಲ್ಲಿ ಪರಿಸರ ಸಚಿವಾಲಯ ಈ ಹೇಳಿಕೆ ನೀಡಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (National Tiger Conservation Authority (ಎನ್‍ಟಿಸಿಎ) ಮೂಲಕ ಸರಕಾರ ಮಾಡಿರುವ ಪ್ರಯತ್ನಗಳಿಂದಾಗಿ, ಹುಲಿಗಳ ಜನಸಂಖ್ಯೆಯನ್ನು (Tiger Populations) ಅಂಚಿನಿಂದ ಚೇತರಿಕೆಯ ಖಚಿತ ಮಾರ್ಗಕ್ಕೆ ತಲುಪಿಸಲಾಗಿದೆ, ಇದು 2006, 2010, 2014 ಮತ್ತು 2018ರಲ್ಲಿ ನಡೆಸಿದ ಚತುರ್ವಾಷಿಕ ಅಖಿಲ ಭಾರತ ಹುಲಿ ಅಂದಾಜಿನ ಸಂಶೋಧನೆಗಳಲ್ಲಿ(Quarterly All India Tiger Survey) ಸ್ಪಷ್ಟವಾಗಿದೆ” ಎಂದು ಸಚಿವಾಲಯ ಹೇಳಿದೆ.
98ರ ಆಸುಪಾಸು
ಸಚಿವಾಲಯದ ಪ್ರಕಟಣೆಯ ಪ್ರಕಾರ, 2012 ರಿಂದ 2021ರ ವರೆಗಿನ ಅವಧಿಯಲ್ಲಿ ದೇಶದಲ್ಲಿ ವಾರ್ಷಿಕ ಸರಾಸರಿ ಹುಲಿಗಳ ಸಾವುಗಳು 98ರ ಆಸುಪಾಸಿನಲ್ಲೇ ಇರುವುದನ್ನು ಗಮನಿಸಬಹುದಾಗಿದೆ, ಇದು ದೃಢವಾದ ಬೆಳವಣಿಗೆಯ ದರದಿಂದ ಎತ್ತಿ ತೋರಿಸಲ್ಪಟ್ಟ ವಾರ್ಷಿಕ ನೇಮಕಾತಿಯಿಂದ ಸಮತೋಲಿತವಾಗಿದೆ.
ಸುಮಾರು 126 ಹುಲಿಗಳ ಸಾವಿನ ಪ್ರಕರಣಗಳಲ್ಲಿ, 60 ಹುಲಿಗಳು ಬೇಟೆಗೆ ತುತ್ತಾಗಿ, ಅಪಘಾತಗಳು, ಸಂರಕ್ಷಿತ ಪ್ರದೇಶಗಳ ಹೊರಗೆ ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಸಂಘರ್ಷದಂತಹ ಅಸಹಜ ಕಾರಣಗಳಿಂದ ಸಾವನ್ನಪ್ಪಿವೆ ಎಂಬ ಸುದ್ದಿ ವರದಿಯೊಂದನ್ನು ಪರಿಸರ ಸಚಿವಾಲಯ ಉಲ್ಲೇಖಿಸಿದ್ದು, ವಿವರವಾದ ವಿಶ್ಲೇಷಣೆಯ ನಂತರವೇ ಅವುಗಳ ಸಾವಿಗೆ ಕಾರಣ ಕಂಡು ಹಿಡಿಯಬಹುದು ಎಂದು ಹೇಳಿದೆ.
ಇದನ್ನೂ ಓದಿ: Man Eater Tiger: ಹುಲಿಗಳು ನರಭಕ್ಷಕರಾಗಲು ಕಾರಣಗಳೇನು ಗೊತ್ತಾ? T-23 `ವ್ಯಾಘ್ರ’ ಸೆರೆಸಿಕ್ಕಿದ್ದೇ ಬಲು ರೋಚಕ!
ಕಾರ್ಯಾಚರಣೆ ನಡೆಸುತ್ತಿರುವ ಎನ್‍ಟಿಸಿಎ
“ಈ ನಿಟ್ಟಿನಲ್ಲಿ, ಎನ್‍ಟಿಸಿಎ, ನಿರ್ದಿಷ್ಟ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನದ ಮೂಲಕ , ಹುಲಿಯ ಸಾವಿಗೆ ಕಾರಣವನ್ನು ಹೇಳಲು ಕಠಿಣ ಪ್ರೋಟೋಕಾಲ್ ಹೊಂದಿದೆ ಎಂದು ಹೇಳುವುದು ಸಮಂಜಸವಾಗಿದೆ. ಫೋಟೋಗಳು ಮತ್ತು ಸಾಂದರ್ಭಿಕ ಪುರಾವೆಗಳ ಹೊರತಾಗಿ, ಶವ ಪರೀಕ್ಷೆಯ ವರದಿಗಳು, ಹಿಸ್ಟೋಪಾಥೋಲಾಜಿಕಲ್ ಮತ್ತು ಫೊರೆನ್ಸಿಕ್ ಮೌಲ್ಯಮಾಪನಗಳನ್ನು ಸಲ್ಲಿಸುವ ಮೂಲಕ, ಸಂಬಂಧಪಟ್ಟ ರಾಜ್ಯದಿಂದ ಸಾಬೀತಾಗಾದ ಹೊರತು ಇದು ಅಸ್ವಾಭಾವಿಕ ಎಂದು ಪರಿಗಣಿಸಲ್ಪಡುತ್ತದೆ. ಇ ದಾಖಲೆಗಳ ವಿವರವಾದ ವಿಶ್ಲೇಷಣೆಯ ನಂತರವೇ ಹುಲಿ ಸಂರಕ್ಷಿತ ಪ್ರದೇಶದ ಹೊರಗೆ ಉಂಟಾದ 60 ಹುಲಿಗಳ ಸಾವಿಗೆ ಕಾರಣ ಕಂಡು ಹಿಡಿಯಬಹುದಾಗಿದೆ” ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ಬೇಟೆಯನ್ನು ನಿಯಂತ್ರಿಸಲು ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಎನ್‍ಟಿಸಿಎ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅದು ಪುನರುಚ್ಚರಿಸಿದೆ.
ಮೌಲ್ಯಮಾಪನ ಪಡೆಯಬಹುದು
ಎನ್‍ಟಿಸಿಎಯು , ತನ್ನ ವೆಬ್‍ಸೈಟ್ ಮತ್ತು ಮೀಸಲಾದ ಪೋರ್ಟಲ್ ಮೂಲಕ, ನಾಗರಿಕರಿಗೆ ಹುಲಿ ಸಾವಿನ ಅಂಶಗಳು ಲಭ್ಯವಾಗಲು ಪಾರದರ್ಶಕತೆಯುಳ್ಳ ಅತ್ಯುತ್ತಮ ಗುಣಮಟ್ಟ ನಿರ್ವಹಿಸುತ್ತದೆ, ಇದರಿಂದ ಜನರು ಬಯಸಿದ್ದಲ್ಲಿ ತಾರ್ಕಿಕ ಮೌಲ್ಯಮಾಪನ ಪಡೆಯಬಹುದು” ಎಂದು ಸಚಿವಾಲಯ ತಿಳಿಸಿದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಉಂಟಾದ ಹುಲಿಗಳ ಸಾವಿಗೆ ಕಾರಣಗಳನ್ನು ಪತ್ತೆ ಮಾಡಲಾಗುತ್ತಿದೆ , ಸಮಗ್ರ ಪರಿಶೀಲನೆ ಮಾಡಲು ಸಮಯ ಹಿಡಿಯುತ್ತದೆ ಎಂದು ಎನ್‍ಟಿಸಿಎಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದರು.
ಇದನ್ನೂ ಓದಿ: Viral Video : ನೋಡ ನೋಡುತ್ತಿದ್ದಂತೆ 11 ಹುಲಿಗಳ ಮುಂದೆ ಹೋಗಿ ನಿಂತ ವ್ಯಕ್ತಿ : ವೈರಲ್ ಆಗ್ತಿದೆ ಎದೆ ಝಲ್ ಅನ್ನೋ ವಿಡಿಯೋ
126 ಹುಲಿಗಳು ಸಾವನ್ನಪ್ಪಿವೆ
ಎನ್‍ಟಿಸಿಎ ಪ್ರಕಾರ, 2021ರಲ್ಲಿ ಭಾರತದಲ್ಲಿ 126 ಹುಲಿಗಳು ಸಾವನ್ನಪ್ಪಿವೆ , ಈ ವರ್ಷ ಮಧ್ಯ ಪ್ರದೇಶದಲ್ಲಿ ಹುಲಿಗಳು ಗರಿಷ್ಟ ಸಂಖ್ಯೆಯಲ್ಲಿ (44) ಸಾವನ್ನಪ್ಪಿದ್ದು, ಮಹಾರಾಷ್ಟ್ರದಲ್ಲಿ 26 ಮತ್ತು ಕರ್ನಾಟಕದಲ್ಲಿ 14 ಹುಲಿಗಳು ಸಾವನ್ನಪ್ಪಿವೆ. ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ಬುಧವಾರ ಹುಲಿಯೊಂದು ಸತ್ತಿದ್ದು, ಅದು ರಾಜ್ಯದಲ್ಲಿ ಹುಲಿಗಳ ಸಾವಿನ ಸಂಖ್ಯೆಯನ್ನು 44ಕ್ಕೆ ತಲುಪಿಸಿದೆ. ವರದಿಗಳ ಪ್ರಕಾರ, ಈ ರಾಜ್ಯದ ಡಿಂಡೋರಿ ಪ್ರದೇಶದಲ್ಲಿ ವಿಷ ಸೇವನೆಯ ಕಾರಣದಿಂದ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ