Constitution Day: ಸಂವಿಧಾನ ದಿನ ಬಹಿಷ್ಕಾರಕ್ಕೆ ಮುಂದಾದ ವಿಪಕ್ಷಗಳು; ಸಂಸತ್ತಿನಲ್ಲಿ ನಡೆಯಲಿದೆ ಭಾರೀ ಪ್ರತಿಭಟನೆ

ಸಂವಿಧಾನ ದಿನವನ್ನು ಬಹಿಷ್ಕಾರ ಹಾಕುವ ವಿಚಾರದಲ್ಲಿ ಎಲ್ಲ ವಿಪಕ್ಷಗಳು ಇಂದು ಸಭೆ ಸೇರಲಿವೆ. ಈ ಮೂಲಕ ಮಹಾರಾಷ್ಟ್ರ ಬೆಳವಣಿಗೆಯನ್ನು ವಿರೋಧಿಸಲು ವಿಪಕ್ಷಗಳು ಒಂದಾಗಿವೆ ಎಂಬುವ ಸಂದೇಶ ಸಾರಲಿದ್ದಾರೆ.

Rajesh Duggumane | news18-kannada
Updated:November 26, 2019, 11:51 AM IST
Constitution Day: ಸಂವಿಧಾನ ದಿನ ಬಹಿಷ್ಕಾರಕ್ಕೆ ಮುಂದಾದ ವಿಪಕ್ಷಗಳು; ಸಂಸತ್ತಿನಲ್ಲಿ ನಡೆಯಲಿದೆ ಭಾರೀ ಪ್ರತಿಭಟನೆ
ಸಂಸತ್ತು
  • Share this:
ನವದೆಹಲಿ (ನ.26): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಸಂಸತ್​ ಅಧಿವೇಶನದಲ್ಲಿ ‘ಸಂವಿಧಾನ ದಿನ’ವನ್ನು ಆಚರಿಸಲು ಸಿದ್ಧತೆ ನಡೆಸಿದೆ. ಈ ಮಧ್ಯೆ ಕಾಂಗ್ರೆಸ್​ ಸೇರಿ ಅನೇಕ ವಿಪಕ್ಷಗಳು ಸಂವಿಧಾನ ದಿನವನ್ನು ಬಹಿಷ್ಕರಿಸಿ, ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿವೆ.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್​ ಮುಖ್ಯಮಂತ್ರಿಯಾಗಿ ಮತ್ತು ಹಾಗೂ ಅಜಿತ್​ ಪವಾರ್​ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದು ಅಸಂವಿಧಾನಿಕ ನಡೆ ಎಂದು ಕಾಂಗ್ರೆಸ್​ ಜರಿದಿತ್ತು. ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದನ್ನು ಖಂಡಿಸಿ ಕಾಂಗ್ರೆಸ್​,  ಎನ್​ಸಿಪಿ, ಟಿಎಂಸಿ, ಆರ್​ಜೆಡಿ ಟಿಡಿಪಿ ಮತ್ತು ಡಿಎಂಕೆ ಒಟ್ಟಾಗಿ ಪಾರ್ಲಿಮೆಂಟ್​ ಒಳಭಾಗದಲ್ಲಿರುವ ಅಂಬೇಡ್ಕರ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಿವೆ.

ಸಂವಿಧಾನ ದಿನವನ್ನು ಬಹಿಷ್ಕಾರ ಹಾಕುವ ವಿಚಾರದಲ್ಲಿ ಎಲ್ಲ ವಿಪಕ್ಷಗಳು ಇಂದು ಸಭೆ ಸೇರಲಿವೆ. ಈ ಮೂಲಕ ಮಹಾರಾಷ್ಟ್ರ ಬೆಳವಣಿಗೆಯನ್ನು ವಿರೋಧಿಸಲು ವಿಪಕ್ಷಗಳು ಒಂದಾಗಿವೆ ಎಂಬುವ ಸಂದೇಶ ಸಾರಲಿದ್ದಾರೆ. ಈ ಪ್ರತಿಭಟನೆಗೆ ಶಿವಸೇನೆ ಕೂಡ ಕೈ ಜೋಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತ ಸಂವಿಧಾನ ಅನುಷ್ಠಾನಗೊಂಡು ಇಂದಿಗೆ 70 ವರ್ಷ. ಈ ಹಿನ್ನೆಲೆಯಲ್ಲಿ ಸರ್ಕಾರ ಸಂವಿಧಾನ ದಿನವನ್ನು ಆಚರಣೆ ಮಾಡುತ್ತಿದೆ. ರಾಷ್ಟ್ರಪತಿ  ರಾಮನಾಥ್​ ಕೋವಿಂದ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್​ ಓಮ್​ ಬಿರ್ಲಾ, ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
First published: November 26, 2019, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading