ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ವಿಚಾರ; ಇಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಪ್ತಸಭೆ

ಜಮ್ಮು-ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನ ಮಧ್ಯೆ ದ್ವಿಪಕ್ಷೀಯ ವಿಚಾರ ವಾಗಿದೆ. ಮೂರನೇ ಪಕ್ಷದ ಮಧ್ಯಪ್ರವೇಶದ ಅಗತ್ಯವಿಲ್ಲ. 370ನೇ ವಿಧಿಯನ್ನು ರದ್ದು ಮಾಡಿದ್ದು ಭಾರತದ ಆಂತರಿಕ ವಿಚಾರವಾಗಿದೆ ಎಂಬುದು ಭಾರತದ ನಿಲುವು.

Rajesh Duggumane | news18
Updated:August 16, 2019, 8:51 AM IST
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ವಿಚಾರ; ಇಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಪ್ತಸಭೆ
ವಿಶ್ವಸಂಸ್ಥೆ ಕಚೇರಿ
  • News18
  • Last Updated: August 16, 2019, 8:51 AM IST
  • Share this:
ನವದೆಹಲಿ (ಆ.16): ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ವಿಚಾರಕ್ಕೆ ಪಾಕಿಸ್ತಾನ ಅಪಸ್ವರ ಎತ್ತಿತ್ತು. ಈ ಬೆನ್ನಲ್ಲೇ ಇಂದು ವಿಶ್ವಸಂಸ್ಥೆಯಲ್ಲಿ ವಿಶೇಷ ಸಭೆ ನಡೆಯಲಿದೆ.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಬೆಳಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 7:30) ಸಭೆ ಆರಂಭಗೊಳ್ಳಲಿದೆ. 1965ರಲ್ಲಿ ಹಿಮಾಲಯ ಭಾಗದ ವಿಚಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಗೆ ಬಂದಿತ್ತು. ಅದನ್ನು ಹೊರತುಪಡಿಸಿದರೆ ಈಗ ಕಾಶ್ಮೀರದ ವಿಚಾರ ಚರ್ಚೆಯಾಗುತ್ತಿದೆ.

ಕಾಶ್ಮೀರ ವಿಚಾರದ ಬಗ್ಗೆ ಭದ್ರತಾ ಮಂಡಳಿಯಲ್ಲಿ ತುರ್ತು ಸಭೆ ನಡೆಸುವಂತೆ ಪಾಕಿಸ್ತಾನವು ಮಂಗಳವಾರವೇ ಕೋರಿಕೆ ಸಲ್ಲಿಸಿತ್ತು. ಈ ವಿಚಾರದಲ್ಲಿ ಪಾಕಿಸ್ತಾನಕ್ಕೆ ಸಹಾಯಹಸ್ತ ಚಾಚಿದ ಮಿತ್ರ ರಾಷ್ಟ್ರ ಚೀನಾ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಗುಪ್ತ ಸಮಾಲೋಚನೆ(Closed Consultations) ನಡೆಸುವಂತೆ ಮನವಿ ಮಾಡಿತ್ತು. ಯುಎನ್​ಎಸ್​ಸಿಯಲ್ಲಿ ಖಾಯಂ ಸದಸ್ಯನಾಗಿರುವ ಚೀನಾದ ಮನವಿಗೆ ಒಪ್ಪಿರುವ ಮಂಡಳಿಯು ಇಂದು ಚರ್ಚೆ ನಡೆಸಲು ತೀರ್ಮಾನಿಸಿದೆ.

ಜಮ್ಮು-ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನ ಮಧ್ಯೆ ದ್ವಿಪಕ್ಷೀಯ ವಿಚಾರ ವಾಗಿದೆ. ಮೂರನೇ ಪಕ್ಷದ ಮಧ್ಯಪ್ರವೇಶದ ಅಗತ್ಯವಿಲ್ಲ. 370ನೇ ವಿಧಿಯನ್ನು ರದ್ದು ಮಾಡಿದ್ದು ಭಾರತದ ಆಂತರಿಕ ವಿಚಾರವಾಗಿದೆ ಎಂಬುದು ಭಾರತದ ನಿಲುವು. ಆದರೆ, ಅಮೆರಿಕ, ಚೀನಾ ಸೇರಿದಂತೆ ಹೊರಗಿನ ದೇಶಗಳನ್ನು ಕಾಶ್ಮೀರದ ವಿಚಾರಕ್ಕೆ ಭಾಗಿಯಾಗಿಸಲು ಚೀನಾ ಮೊದಲಿಂದಲೂ ಪ್ರಯತ್ನಿಸುತ್ತಲೇ ಇದೆ. ಕಾಶ್ಮೀರದಲ್ಲಿ ಭಾರತ ಸರ್ಕಾರದಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತಲು ಪಾಕಿಸ್ತಾನ ಯತ್ನಿಸುತ್ತಿದ್ದರೂ ಅದು ನಿರೀಕ್ಷಿಸಿದಷ್ಟು ಬೆಂಬಲ ಸಿಕ್ಕಿಲ್ಲ.

ಇದನ್ನೂ ಓದಿ: ಕಾಶ್ಮೀರ ವಿಚಾರದಲ್ಲಿ ಪಾಕ್ ಬೆನ್ನಿಗೆ ನಿಂತ ಚೀನಾ

 ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇದರ ಚರ್ಚೆ ನಡೆಯುತ್ತಿರುವುದು ಪಾಕಿಸ್ತಾನಕ್ಕೆ ಒಂದು ರೀತಿಯಲ್ಲಿ ನಿರಾಳ ತಂದಿದೆ. ಕಾಶ್ಮೀರ ವಿಚಾರದಲ್ಲಿ ನ್ಯಾಯದ ಪರವಾಗಿ ನಿಲ್ಲುತ್ತೇವೆ ಎಂದು ಚೀನಾ ದೇಶ ತಮಗೆ ಭರವಸೆ ನೀಡಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಇತ್ತೀಚೆಗೆ ಹೇಳಿದ್ದರು. ಅದರಂತೆ ಈಗ ಚೀನಾ ದೇಶವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರದ ವಿಚಾರ ಚರ್ಚೆಯಾಗುವಂತೆ ನೋಡಿಕೊಳ್ಳುತ್ತಿದೆ.

First published: August 16, 2019, 8:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading