ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ (Heart Attack)ಸಾವನ್ನಪ್ಪುವವರ ಸಂಖ್ಯೆ ಏರಿಕೆಯಾಗುತ್ತಿದೆ. ಯುವಕರಿಂದ ಹಿರಿಯರವರೆಗೂ ಹೃದಯಾಘಾತ ಸಾಮಾನ್ಯವಾಗುತ್ತಿದೆ. ಜಿಮ್ ಮಾಡುವಾಗ, ಭಾಷಣ ಮಾಡುವಾಗ, ಹೋಟೆಲ್ನಲ್ಲಿ ಊಟ ಮಾಡುವ ಸಂದರ್ಭಗಳಲ್ಲೂ ಹೃದಯಾಘಾತದಿಂದ ಸಾವು ಸಂಭವಿಸಿದ ಘಟನೆಗಳು ವರದಿಯಾಗಿದೆ. ಅದೇ ರೀತಿ ಹೈದರಾಬಾದ್ನಲ್ಲಿ(Hyderabad) ಹಳದಿ (Haldi) ಸಮಾರಂಭದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬರು ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಸಾವಿನಿಂದ ವಿವಾಹದ ಸಂಭ್ರಮದಲ್ಲಿರಬೇಕಾದ ಮನೆ ಸಾವಿನ ಸೂತಕದಲ್ಲಿ ಮುಳುಗಿದ್ದು, ಮದುವೆಯನ್ನು (Marriage) ಮುಂದೂಡಲಾಗಿದೆ.
ಫೆಬ್ರವರಿ 20 ರಂದು ಹೈದರಾಬಾದ್ ನಗರದ ಕಾಲಾ ಪಥರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಮೊಹಮ್ಮದ್ ರಬ್ಬಾನಿ ಎಂಬ ವ್ಯಕ್ತಿ ಹಳದಿ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಹಠಾತ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಗುರುವಾರ ಹೈದರಾಬಾದ್‌ನಲ್ಲೇ ಇದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿದ್ದು, 24 ವರ್ಷದ ವಿಶಾಲ್ ಎಂಬ ಪೊಲೀಸ್ ಪೇದೆ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ಅರಿಸಿನ ಲೇಪಿಸುವಾಗಲೇ ಕೊನೆಯುಸಿರು
ವೈರಲ್ ಆಗುತ್ತಿರುವ ಈ ಹಳದಿ ಸಮಾರಂಭದ ವೀಡಿಯೊದಲ್ಲಿ ರಬ್ಬಾನಿ ವರನ ಪಾದಗಳ ಮೇಲೆ ಅರಿಶಿನವನ್ನು ಲೇಪಿಸುತ್ತಿದ್ದರು. ಸಮಾರಂಭದಲ್ಲಿದ್ದ ಅತಿಥಿಗಳೊಂದಿಗೆ ನಗುತ್ತಾ ಮಾತನಾಡುತ್ತಿದ್ದರು . ಸ್ಥಳದಲ್ಲಿ ಹಾಜರಿದ್ದ ಇತರ ಅತಿಥಿಗಳು ನಗುವುದು ಮತ್ತು ಹಾಸ್ಯ ಚಟಾಕಿ ಹಾರಿಸುವುದು ಈ ವಿಡಿಯೋದಲ್ಲಿ ನೋಡಬಹುದು. ಆದರೆ ನಗು ನಗುತ್ತಲೇ ಅರಿಶಿನ ಹಚ್ಚಲು ಬಾಗಿದಾಗ ಹೃದಯ ಸ್ತಂಭನಕ್ಕೊಳಗಾಗಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.
ಮದುವೆ ಸಮಾರಂಭ ಮುಂದೂಡಿಕೆ
ವರ ಮತ್ತು ಇತರ ಅತಿಥಿಗಳು ತಕ್ಷಣವೇ ಅವರನ್ನು ತಕ್ಷಣ ಕುಸಿದು ಬಿದ್ದಿದ್ದ ರಬ್ಬಾನಿಯವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮರುದಿನ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರೆಂದು ತಿಳಿದುಬಂದಿದೆ. ರಬ್ಬಾನಿ ದಿಢೀರ್ ಮರಣದ ನಂತರ ಮದುವೆ ಸಮಾರಂಭವನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ವರ್ಕೌಟ್ ಮಾಡುತ್ತಿದ್ದಾಗಲೇ ಹಾರ್ಟ್ ಅಟ್ಯಾಕ್!
ಇತ್ತೀಚೆಗಷ್ಟೇ ಹೈದರಾಬಾದಿನ ಬೋಯಿನಪಲ್ಲಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ನಗರದ ಆಸಿಫ್‌ನಗರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿರುವ ವಿಶಾಲ್ ಪ್ರತಿದಿನದಂತೆ ಇಂದು ಬೆಳಗ್ಗೆಯೂ ವಿಶಾಲ್ ಬೋಯಿನಪಲ್ಲಿ ಜಿಮ್‌ಗೆ ತೆರಳಿ ವ್ಯಾಯಾಮ ಮಾಡಿದರು. ಬಹಳ ಹೊತ್ತು ಪುಷ್-ಅಪ್ಸ್ ಮಾಡಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದರು. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Groom’s relative #DiedSuddenly at Haldi ceremony 💉👀 pic.twitter.com/HRNqiailD4
— JamaicanPattee 🧡✌️🧡 (@JamaicanPattee) February 23, 2023
ಇನ್ನೂ ಕಾನ್ಸ್ಟೇಬಲ್ ವಿಶಾಲ್ ಕುಸಿದು ಬೀಳುವ ಭಯಾನಕ ದೃಶ್ಯಗಳು ಜಿಮ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಡ ನೋಡುತ್ತಲೇ ಕ್ಷಣಾರ್ಧದಲ್ಲಿ ವಿಶಾಲ್ ಕುಸಿದು ಬೀದಿದ್ದಾರೆ. ವಿಶಾಲ್ ಅವರು ಕಳೆದ ಕೆಲ ವರ್ಷಗಳಿಂದ ಜಿಮ್ ಮಾಡಿ ತುಂಬಾ ಫಿಟ್ ಆಗಿ ಕಾಣುತ್ತಿದ್ದರು. ಆದರೆ ಇಂದು ಏನಾಯಿತು ಎಂದು ತಿಳಿಯುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.
23 Feb 2023 : 🇮🇳 : Young Hyderabad constable suffers 🫀arrest💉 while working out, dies
CCTV footage from the gym shows 24-year-old Vishal completing his workout and stepping aside to stretch, when he suddenly collapsed.#heartattack2023 #TsunamiOfDeath 🚨 pic.twitter.com/wHqc9UTJTQ
— Anand Panna (@AnandPanna1) February 24, 2023
ವಾಸ್ತವವಾಗಿ, ಹೃದಯಾಘಾತವು ತುಂಬಾ ಆರೋಗ್ಯಕರವಾಗಿರುವ, ಉತ್ತಮ ಆಹಾರಕ್ರಮವನ್ನು ಅನುಸರಿಸುವ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವವರಲ್ಲಿಯೂ ಸಹ ಸಾಮಾನ್ಯವಾಗಿದೆ. ಜಿಮ್‌ನಲ್ಲಿ ಭಾರವಾದ ಭಾರವನ್ನು ಎತ್ತುವುದು ಮತ್ತು ದೇಹವನ್ನು ಒಮ್ಮೆಗೆ ಹೆಚ್ಚಿನ ಒತ್ತಡಕ್ಕೆ ಒಳಪಡಿಸುವುದರಿಂದ ದೇಹದ ಆಮ್ಲಜನಕದ ಬೇಡಿಕೆಯನ್ನು ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ