Congress Protest: ಕಾಂಗ್ರೆಸ್ ಮುಖಂಡನ ತಲೆಗೂದಲು ಹಿಡಿದೆಳೆದ ಪೊಲೀಸ್, ವಿಡಿಯೋ ವೈರಲ್

ಬಿವಿ ಶ್ರೀನಿವಾಸ್

ಬಿವಿ ಶ್ರೀನಿವಾಸ್

ದೆಹಲಿ ಪೊಲೀಸ್ ಸಿಬ್ಬಂದಿ ಮಂಗಳವಾರ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ್ ಬಿವಿ ಅವರ ಕೂದಲು ಹಿಡಿದು ಎಳೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.

  • Share this:

ದೆಹಲಿ(ಜು.27): ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ (Sonia Gandhi) ಅವರನ್ನು ಮೂರನೇ ರೌಂಡ್ ವಿಚಾರಣೆ ಮಾಡುತ್ತಿರುವ ಇಡಿ ಇಂದೂ ಕೂಡಾ ವಿಚಾರಣೆ ಮಾಡಲಿದೆ. ಜು.26ರಂದು ವಿಚಾರಣೆ ನಂತರ ಇಂದು ವಿಚಾರಣೆ ನಡೆಯಲಿದೆ. ಸೋನಿಯಾ ಗಾಂಧಿ ವಿಚಾರಣೆ ಹಿನ್ನೆಲೆ ಕಾಂಗ್ರೆಸ್ (Congress) ಭಾರೀ ಪ್ರತಿಭಟನೆ ನಡೆಸುತ್ತಿದ್ದು ಪೊಲೀಸರು (Police) ಕೆಲವರನ್ನು ವಶಕ್ಕೂ ಪಡೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಪ್ರತಿಭಟನೆಯ ವಿಡಿಯೋ ಒಂದು ಈಗ ಎಲ್ಲ ಕಡೆಯಲ್ಲಿ ವೈರಲ್ (Viral) ಆಗಿದೆ. ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ (Congress Leader) ಬಿವಿ ಶ್ರೀನಿವಾಸ್ (BV Srinivas) ಅವರ ಕೂದಲನ್ನು ಪೊಲೀಸರು ಹಿಡಿದೆಳೆದಿರುವ ವೀಡಿಯೊ ವೈರಲ್ (Video Viral) ಆಗಿದೆ. ಈ ವಿಡಿಯೋಗೆ ದೆಹಲಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ (National Herlad Scam) ಜಾರಿ ನಿರ್ದೇಶನಾಲಯ (ED) ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಶ್ರೀನಿವಾಸ್ ಅವರ ತಲೆಗೂದಲು ಹಿಡಿದು ಬಲವಂತವಾಗಿ ಕಾರಿಗೆ ಹತ್ತಿಸಿದ ಪೊಲೀಸರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


ಸಿಬ್ಬಂದಿಯನ್ನು ಗುರುತಿಸಿದ ನಂತರ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಹೇಳಿಕೆಯಲ್ಲಿ, ದೆಹಲಿ ಪೊಲೀಸರು, "ನಾವು ಸಿಬ್ಬಂದಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಗುರುತಿಸಿದ ನಂತರ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗುವುದು" ಎಂದು ಹೇಳಿದ್ದಾರೆ.


ದೆಹಲಿ ಪೊಲೀಸ್ ಸಿಬ್ಬಂದಿ ಮಂಗಳವಾರ ಪ್ರತಿಭಟನೆಯ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ಶ್ರೀನಿವಾಸ್ ಬಿವಿ ಅವರ ಕೂದಲು ಹಿಡಿದು ಎಳೆದಿರುವುದು ವಿಡಿಯೋದಲ್ಲಿ ದಾಖಲಾಗಿದೆ.


ವಿಡಿಯೋದಲ್ಲಿ ಏನಿದೆ?


ಪ್ರತಿಭಟನೆಯ ವೇಳೆ ಪೊಲೀಸರು ಶ್ರೀನಿವಾಸ್ ಅವರ ತಲೆಗೂದಲು ಹಿಡಿದು ಬಲವಂತವಾಗಿ ವಾಹನಕ್ಕೆ ಹತ್ತಿಸುವುದನ್ನು ವೀಡಿಯೊ ತೋರಿಸಿದೆ. ಶ್ರೀನಿವಾಸ್ ಅವರನ್ನು ಸದೆಬಡಿಯಲು ಪೊಲೀಸರು ನಡೆಸಿದ ಯತ್ನಗಳನ್ನು ವಿರೋಧಿಸಿ  ಅವರು ಕೂಗುತ್ತಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಪೆಟ್ಟಾಗಿದೆ ಎಂದು ಹೇಳಿದ ಕಾಂಗ್ರೆಸ್ ನಾಯಕ


ಶ್ರೀನಿವಾಸ್ ಅವರನ್ನು ವಾಹನಕ್ಕೆ ತಳ್ಳಲು ಪೊಲೀಸ್ ಸಿಬ್ಬಂದಿಯೊಬ್ಬರು ಶ್ರೀನಿವಾಸ್ ಅವರ ತಲೆಗೂದಲು ಹಿಡಿದುಕೊಂಡ ನಂತರ, ಅವರ ಪ್ರಯತ್ನಗಳನ್ನು ವಿರೋಧಿಸಿದ ಕಾಂಗ್ರೆಸ್ ನಾಯಕ, "ನನಗೆ ಪೆಟ್ಟಾಗಿದೆ" ಎಂದು ಸುದ್ದಿಗಾರರಿಗೆ ತಿಳಿಸಿದರು.



"ಆಪ್ ಲೋಗ್ ಕ್ಯೂನ್ ಮಾರ್ ರಹೇ? (ನೀವು ನನ್ನನ್ನು ಏಕೆ ಹೊಡೆಯುತ್ತಿದ್ದೀರಿ?)" ಎಂದು ಯುವ ಕಾಂಗ್ರೆಸ್ ನಾಯಕ ಕೇಳಿದರು. ಇದಕ್ಕೆ ಆರ್‌ಎಎಫ್ ಸಿಬ್ಬಂದಿಯೊಬ್ಬರು, "ಯಾರೂ ನಿಮ್ಮನ್ನು ಹೊಡೆಯುತ್ತಿಲ್ಲ" ಎಂದು ಉತ್ತರಿಸಿದರು.


ಪ್ರಜಾಪ್ರಭುತ್ವದ ಅರ್ಥವೇನು?


ನಂತರ ಟ್ವಿಟ್ಟರ್​​ನಲ್ಲಿ ಶ್ರೀನಿವಾಸ್ ಅವರು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ಮದಾರೆ. ಸ್ವತಂತ್ರ ಭಾರತದಲ್ಲಿ, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಕೇಂದ್ರ ಕಚೇರಿಯಿಂದ ಹೊರಗೆ ಬರಲು ಸಾಧ್ಯವಾಗದಿದ್ದರೆ, ಪ್ರಜಾಪ್ರಭುತ್ವದ ಅರ್ಥವೇನು? ಸರ್ವಾಧಿಕಾರಿ ಏಕೆ ಭಯಪಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: Tomato Fever: ಟೊಮೆಟೊ ಜ್ವರ ಬರ್ತಿದೆ ಹುಷಾರ್! ಟೊಮೆಟೊ ತಿಂದರೆ ಈ ಜ್ವರ ಬರುತ್ತಾ?


ಹಲವಾರು ನಾಯಕರ ಬಂಧನ


ಪಕ್ಷದ ಮುಖ್ಯಸ್ಥರ ವಿರುದ್ಧ ಪ್ರತಿಭಟಿಸಲು ರಾಷ್ಟ್ರಪತಿ ಭವನಕ್ಕೆ ಸಂಸದರು ನಡೆಸಿದ ಮೆರವಣಿಗೆಯಲ್ಲಿ ಮಂಗಳವಾರ ವಿಜಯ್ ಚೌಕ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಹಲವಾರು ನಾಯಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.


ಸಂಸತ್ತಿನಿಂದ ವಿಜಯ್ ಚೌಕ್‌ಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಬಂಧನಕ್ಕೊಳಗಾಗಿದ್ದ ರಾಹುಲ್ ಗಾಂಧಿ ಅವರನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.


ಇದನ್ನೂ ಓದಿ: National Herald Case: ಇಂದು ಮತ್ತೆ ಸೋನಿಯಾ ಗಾಂಧಿ ವಿಚಾರಣೆ, ಇಂದಿಗೆ ಮುಗಿಯುತ್ತಾ?

top videos


    ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪದ ವಿರುದ್ಧ ಕಾಂಗ್ರೆಸ್ ನಾಯಕರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿಯವರ ಎರಡನೇ ಸುತ್ತಿನ ವಿಚಾರಣೆ ಮಂಗಳವಾರ ಆರಂಭವಾಯಿತು. ಬುಧವಾರ ಮೂರನೇ ಸುತ್ತಿನ ವಿಚಾರಣೆ ನಡೆಯುತ್ತಿದೆ.

    First published: