ಭೋಪಾಲ್: ಯುವ ಜನತೆ ಪ್ರೀತಿ (Love) ಮಾಡುವಾಗ ಯಾರ ಬಗ್ಗೆಯೂ ಕೂಡ ಯೋಚಿಸುವುದಿಲ್ಲ. ಪಾರ್ಕ್ (Park), ಸಿನಿಮಾ, (Movie), ಹೋಟೆಲ್ (Hotel) ಹೀಗೆ ಸುತ್ತಾಡುತ್ತ ಕಾಲ ಕಳೆಯುತ್ತಿರುತ್ತಾರೆ. ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಮನೆಯವರ ಬಗ್ಗೆ ಯೋಚನೆ ಕೂಡ ಬರುವುದಿಲ್ಲ. ಆದರೆ ಮದುವೆ (Marriage) ಎಂಬ ವಿಚಾರ ಬಂದಾಗ ಎಷ್ಟೋ ಮಂದಿ ಹಿಂದೆ ಸರಿದುಬಿಡುತ್ತಾರೆ. ಯಾವುದಾದರೂ ಒಂದು ನೆಪ ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರೀತಿ ಮಾಡುವ ಜೋಡಿಯಲ್ಲಿ 100 ಜೋಡಿಗಳಲ್ಲಿ ಮದುವೆಯಾಗುವುದು ಮಾತ್ರ 1 ಜೋಡಿ ಅಂತೆ. ಹಾಗೆ ಇಲ್ಲೋರ್ವ ಯುವಕ ಮದುವೆಯಾಗಲು ನಿರಾಕರಿಸಿದ ಯುವತಿಗೆ ಮನಬಂದಂತೆ ಅಮಾನುಷವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ (Madhya Pradesh) ರೇವಾ (Reva) ಜಿಲ್ಲೆಯಲ್ಲಿ ನಡೆದಿದೆ.
ಹಾಡಹಗಲೇ ಗರ್ಲ್ಫ್ರೆಂಡ್ಗೆ ಹಿಗ್ಗಾಮುಗ್ಗ ಥಳಿಸಿದ
19 ವರ್ಷದ ಯುವತಿ ಹಾಗೂ 24 ವರ್ಷದ ಯುವಕ ಇಬ್ಬರೂ ಪ್ರೇಮಿಗಳಾಗಿದ್ದರು. ಆದರೀಗ ಯುವತಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಬಾಯ್ಫ್ರೆಂಡ್ ಹಾಡಹಗಲೇ ಆಕೆಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಇನ್ನೂ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೊಬೈಲ್ನಲ್ಲಿ ಕೃತ್ಯ ಸೆರೆ ಹಿಡಿದ ಸ್ನೇಹಿತ
ವೀಡಿಯೋದಲ್ಲಿ ಯುವಕ ಯುವತಿ ಇಬ್ಬರು ಕೈ ಹಿಡಿದುಕೊಂಡು ಬರುತ್ತಿರುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ಪ್ರಿಯಕರ ಗರ್ಲ್ಫ್ರೆಂಡ್ಗೆ ಕಪಾಳಮೋಕ್ಷ ಮಾಡಿ, ಆಕೆಯ ಕೂದಲು ಹಿಡಿದು ಎಳೆದಾಡಿ, ನೆಲಕ್ಕೆ ಆಕೆಯ ತಲೆಯನ್ನು ಹೊಡೆಸುತ್ತಾನೆ. ಇಷ್ಟು ಸಲದು ಅಂತ ಮುಖಕ್ಕೆ ಗುದ್ದುತ್ತಾ, ಆಕೆಗೆ ಮನಬಂದಂತೆ ಒದೆಯುತ್ತಾನೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಯುವತಿ ಸ್ಥಳದಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬೀಳುತ್ತಾಳೆ. ಹೀಗಿದ್ದರೂ ಆಕೆಯ ಮೇಲೆ ಪ್ರಿಯಯತಮ ನಿರಂತರವಾಗಿ ಹಲ್ಲೆ ನಡೆಸುತ್ತಲೇ ಇರುತ್ತಾನೆ, ಜೊತೆಗೆ ಈ ವೀಡಿಯೋವನ್ನು ಸೆರೆಹಿಡಿಯುತ್ತಿದ್ದ ಆತನ ಸ್ನೇಹಿತನಿಗೆ ವೀಡಿಯೋವನ್ನು ಡಿಲೀಟ್ ಮಾಡುವಂತೆ ಹೇಳುತ್ತಿರುವುದನ್ನು ಕೂಡ ವೀಡಿಯೋದಲ್ಲಿ ಕೇಳಿಸಿಕೊಳ್ಳಬಹುದಾಗಿದೆ. ಅಲ್ಲದೇ ಸುಮಾರು ಹೊತ್ತು ಯುವತಿ ರಸ್ತೆಯಲ್ಲಿಯೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನಾವು ಕಾಣಬಹುದಾಗಿದೆ.
ರೇವಾದ ಮೌಗಂಜ್ ಪ್ರದೇಶದಲ್ಲಿ ಘಟನೆ
ಬುಧವಾರ ರೇವಾದ ಮೌಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದೀಗ ಪೊಲೀಸರು ಇಬ್ಬರು ಆರೋಪಿ ಪಂಕಜ್ ತ್ರಿಪಾಠಿ ಮತ್ತು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಯುವಕನ ವಿರುದ್ಧ ಐಪಿಸಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಇಬ್ಬರನ್ನು ಬಂಧಿಸಿದ್ದಾರೆ.
ಆರೋಪಿ ಆತನ ಸ್ನೇಹಿತ ಅರೆಸ್ಟ್
ಘಟನೆ ಬಳಿಕ ಆರೋಪಿ ಪಂಕಜ್ ತ್ರಿಪಾಠಿ ದಿನಪೂರ್ತಿ ನಾಪತ್ತೆಯಾಗಿದ್ದ, ಆದರೆ ನಂತರ ಉತ್ತರ ಪ್ರದೇಶದ ಮಿರ್ಜಾಪುರದಿಂದ ಸಿಕ್ಕಿಬಿದ್ದಿದ್ದಾನೆ. ಸದ್ಯ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮದುವೆ ತನ್ನ ಮನೆಯವರು ಒಪ್ಪುವುದಿಲ್ಲ ಎಂದು ಯುವತಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಕೋಪಗೊಂಡು ಈ ಕೃತ್ಯ ವೆಸಗಿರುವುದಾಗಿ ಆರೋಪಿ ಪಂಕಜ್ ಹೇಳಿದ್ದಾನೆ.
ಯುವತಿ ಬಗ್ಗೆ ಮಾಹಿತಿ ಪೊಲೀಸರಿಗೆ ಕೊಟ್ಟ ಸ್ಥಳೀಯರು
ರಸ್ತೆ ಬದಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದು ನಂತರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: Pathaan: ಶಾರುಖ್ ಖಾನ್ ತನ್ನ ಮಗಳ ಜೊತೆ ಪಠಾಣ್ ಸಿನಿಮಾ ನೋಡಲಿ; ಮಧ್ಯಪ್ರದೇಶ ಸ್ಪೀಕರ್ ಚಾಲೆಂಜ್!
ಈ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ರೇವಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಸೋನ್ಕರ್ ಅವರು, ಆರೋಪಿ ಮೌಗಂಜ್ ಪಟ್ಟಣದ ಧೇರಾ ಗ್ರಾಮದ ನಿವಾಸಿಯಾಗಿದ್ದು, ಯುವತಿ ಬೇರೆ ಗ್ರಾಮದ ನಿವಾಸಿಯಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಯಾವುದೋ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಯುವಕ ಯುವತಿಗೆ ಥಳಿಸಿದ್ದಾನೆ. ನಂತರ ಸ್ಥಳೀಯರು ಈ ಬಗ್ಗೆ ನಮಗೆ ಮಾಹಿತಿ ನೀಡಿದ್ದು, ಬಳಿಕ ನಾವು ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ ಯುವತಿಯ ತಾಯಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ