Omicron: ಒಮಿಕ್ರಾನ್ ವೈರಸ್ ಬಗ್ಗೆ ICMR ವಿಜ್ಞಾನಿಗಳು ಹೇಳಿದ್ದೇನು ಗೊತ್ತೇ?

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪಾಂಡಾ “ವೈರಸ್ ಅನ್ನು ಹೆಚ್ಚು ಮಾರಕವಾಗಿಸುವುದು ಈ ರೂಪಾಂತರಗಳ ಸಂಖ್ಯೆಗಳು ಅಲ್ಲ, ಬದಲಾಗಿ ಈ ರೂಪಾಂತರಗೊಂಡ ಪ್ರಬೇಧದ ಹರಡುವಿಕೆಯಿಂದ ಎಂದು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಒಂದೂವರೆ ವರ್ಷದಿಂದ ಕೋವಿಡ್-19(COVID-19) ವೈರಸ್ ಹಾವಳಿಂದಾಗಿ ಇಡೀ ವಿಶ್ವ(World)ವೇ ನಲುಗಿ ಹೋಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಬಹುತೇಕವಾಗಿ ಎಲ್ಲಾ ದೇಶಗಳಲ್ಲಿಯೂ ಈ ಕೋವಿಡ್-19 ವೈರಸ್ ವಿರುದ್ಧ ಹೋರಾಡುವ ಲಸಿಕೆ(Vaccine)ಯನ್ನು ಜನರಿಗೆ ಹಾಕಿಸಿದ್ದು, ಎಲ್ಲವೂ ಸಾಧಾರಣ ಸ್ಥಿತಿಗೆ ಬಂದಿದೆ ಎಂದು ಜನಜೀವನ ಸುಧಾರಣೆಯ ಹಾದಿಯಲ್ಲಿದೆ ಎಂದು ಹೇಳುತ್ತಿರುವಾಗಲೇ ಹೊಸ ಪ್ರಬೇಧದ ಆತಂಕ ಶುರುವಾಗಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೆ ಅಪಾಯಕಾರಿ ವೈರಸ್ ಪ್ರಬೇಧವೆಂದು ಗುರುತಿಸಲಾದ ಡೆಲ್ಟಾ ವೈರಸ್‌ಗಿಂತಲೂ ಹೆಚ್ಚು ಅಪಾಯಕಾರಿ ಈ ಒಮಿಕ್ರಾನ್ ಪ್ರಬೇಧದ ವೈರಸ್ ಎಂದು ಹೇಳಲಾಗುತ್ತಿದ್ದು, ಜನರಲ್ಲಿ ಮತ್ತೊಮ್ಮೆ ಇದರ ಬಗ್ಗೆ ಆತಂಕ ಹೆಚ್ಚುತ್ತಿದೆ ಎಂದು ಹೇಳಬಹುದು. ಆದರೆ ಈ ಹೊಸ ಪ್ರಬೇಧದ ವೈರಸ್ ಬಗ್ಗೆ ಐಸಿಎಂಆರ್ ವಿಜ್ಞಾನಿಗಳು ಹೇಳುವುದೇನು ಗೊತ್ತೇ? ಬನ್ನಿ ಹಾಗಾದರೆ ಈ ಹೊಸ ಪ್ರಬೇಧದ ಬಗ್ಗೆ ಏನು ಹೇಳುತ್ತಿದ್ದಾರೆ ನೋಡೋಣ.

ಐಸಿಎಂಆರ್ ವಿಜ್ಞಾನಿಯಾದ ಡಾ. ಸಮೀರನ್ ಪಾಂಡಾ ಅವರು ನ್ಯೂಸ್ 18 ಜೊತೆಗೆ ಮಾತನಾಡುತ್ತಾ “ರೂಪಾಂತರಗೊಳ್ಳುತ್ತಿರುವ ವೈರಸ್ ಮಾರಕವಾಗಿರುವುದಿಲ್ಲ, ಆದರೆ ಇದರ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕವಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Omicron: ಕೋವಿಡ್​​ ಲಸಿಕೆಗೂ ಬಗ್ಗಲ್ಲ ದಕ್ಷಿಣ ಆಫ್ರಿಕಾದ ಸೋಂಕು; ಹೆಚ್ಚಿದ ಆತಂಕದ ಹಿನ್ನಲೆ ಪ್ರಧಾನಿ ತುರ್ತು ಸಭೆ

ಒಮಿಕ್ರಾನ್​ ಎಂದು ಹೆಸರಿಟ್ಟ WHO

ಹೊಸ ಕೊರೊನಾ ವೈರಸ್ ರೂಪಾಂತರ ಬಿ.1.1.529, ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು 'ಒಮಿಕ್ರಾನ್' ಎಂದು ಹೆಸರಿಸಿದ್ದಾರೆ. ಆತಂಕಕಾರಿಯಾಗಿ ಹೆಚ್ಚಿನ ಸಂಖ್ಯೆಯ ರೂಪಾಂತರಗಳಿಂದಾಗಿ ವಿಜ್ಞಾನಿಗಳು ವೈರಸ್ ಅನ್ನು ಲಸಿಕೆಗಳಿಗೆ ಹೆಚ್ಚು ಪ್ರತಿರೋಧಕವಾಗಿಸಬಹುದು ಎಂದು ಹೇಳಿದ್ದಾರೆ. ಈ ವೈರಸ್ ಹೆಚ್ಚು ತೀವ್ರವಾದ ರೋಗ ಲಕ್ಷಣಗಳಿಗೆ ಕಾರಣವಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಈ ರೂಪಾಂತರವು ಒಟ್ಟಾರೆಯಾಗಿ 50 ರೂಪಾಂತರಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.

ICMR ವಿಜ್ಞಾನಿಗಳು ಹೇಳುವುದು ಹೀಗೆ..!

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪಾಂಡಾ “ವೈರಸ್ ಅನ್ನು ಹೆಚ್ಚು ಮಾರಕವಾಗಿಸುವುದು ಈ ರೂಪಾಂತರಗಳ ಸಂಖ್ಯೆಗಳು ಅಲ್ಲ, ಬದಲಾಗಿ ಈ ರೂಪಾಂತರಗೊಂಡ ಪ್ರಬೇಧದ ಹರಡುವಿಕೆಯಿಂದ ಎಂದು ಹೇಳಿದ್ದಾರೆ.

ಜೀವಕೋಶಗಳಿಗೆ ಹಾನಿ ಮಾಡಲ್ಲ

"ವೈರಸ್ ನಲ್ಲಿರುವ ಬಹು ರೂಪಾಂತರಗಳು ಮಾನವ ದೇಹದಲ್ಲಿನ ಜೀವಕೋಶಗಳಿಗೆ ಹಾನಿ ಮಾಡುವುದಿಲ್ಲ" ಎಂದು ಅವರು ಹೇಳಿದರು, "ಭಾರೀ ರೂಪಾಂತರಗಳಿಂದಾಗಿ ವೈರಸ್ ನಲ್ಲಾಗುವ ರಚನಾತ್ಮಕ ಬದಲಾವಣೆಗಳು ಮಾನವ ಜೀವಕೋಶಗಳಲ್ಲಿ ಸೇರಿಕೊಂಡಾಗ ನಕಾರಾತ್ಮಕ ಪರಿಣಾಮ ಬೀರಬಹುದು" ಎಂದು ಅವರು ಹೇಳಿದರು.

ಮಾರಣಾಂತಿಕ ವೈರಸ್

ಕೆಲವೊಮ್ಮೆ ವೈರಸ್ ರೂಪಾಂತರಗೊಳ್ಳುತ್ತಿರುವುದರಿಂದ ಈ ವೈರಸ್ ಪ್ರಬೇಧಕ್ಕೆ ಸ್ವಲ್ಪ ಪ್ರಯೋಜನ ನೀಡುತ್ತವೆ ಮತ್ತು ನಾವು ಡೆಲ್ಟಾದಲ್ಲಿ ನೋಡಿದಂತೆ ಅದನ್ನು ಹೆಚ್ಚು ಪ್ರಸರಣ ದಕ್ಷ ಗೊಳಿಸುತ್ತವೆ ಎಂಬುದನ್ನು ಸಹ ಗಮನಿಸಬೇಕು" ಎಂದು ಅವರು ಹೇಳಿದರು. "ವೈರಸ್ ತನ್ನ ಪ್ರಸರಣಕ್ಕಾಗಿ ಜೀವಂತ ದೇಹದ ಮೇಲೆ ಅವಲಂಬಿತವಾಗಿರುವುದರಿಂದ, ಮನುಷ್ಯನು ಜೀವಂತವಾಗಿ ಉಳಿಯದಿರುವವರೆಗೆ ಮಾತ್ರ ವೈರಸ್ ಮಾರಣಾಂತಿಕವಾಗಿ ಹರಡುವ ಸಾಧ್ಯತೆ ಇರುತ್ತದೆ. ಮರಣದ ನಂತರ ವೈರಸ್ ಉಳಿದಿರುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ" ಎಂದು ಹೇಳಿದ್ದಾರೆ.

ಭಾರತದಲ್ಲಿ ಕಟ್ಟುನಿಟ್ಟಿನ ಕ್ರಮ

ಹೊಸದಾಗಿ ಹೊರಹೊಮ್ಮುತ್ತಿರುವ ರೂಪಾಂತರವನ್ನು ವಿಶ್ವ ಆರೋಗ್ಯ ಪ್ರಾಧಿಕಾರವು ತೀವ್ರವಾದ ರೋಗಕ್ಕೆ ಕಾರಣವಾಗುತ್ತಿದೆಯೇ ಎಂದು ಪರಿಶೀಲಿಸಲು ಅಧ್ಯಯನ ಮಾಡುತ್ತಿದೆ. ದಕ್ಷಿಣ ಆಫ್ರಿಕಾ ಮತ್ತು ಹಾಂಗ್ ಕಾಂಗ್ ನಿಂದ ಬರುವ ಪ್ರಯಾಣಿಕರನ್ನು ಮತ್ತು ಅವರ ಸಂಪರ್ಕಗಳನ್ನು ಕಠಿಣವಾಗಿ ತಪಾಸಣೆ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರದಂದು ಆದೇಶಿಸಿದೆ.

ಇದನ್ನೂ ಓದಿ: Tomato Price: ಶೀಘ್ರದಲ್ಲೇ ಕಡಿಮೆಯಾಗಲಿದೆ ಟೊಮೆಟೊ ಬೆಲೆ, ಯಾವಾಗ ಗೊತ್ತಾ?

ಭಾರತದಲ್ಲಿ ಈವರೆಗೆ ಅಂತಹ ಯಾವುದೇ ರೂಪಾಂತರ ಕಂಡುಬಂದಿಲ್ಲ

ಭಾರತದಲ್ಲಿ ಇಲ್ಲಿಯವರೆಗೆ ಅಂತಹ ಯಾವುದೇ ರೂಪಾಂತರವನ್ನು ಗಮನಿಸಲಾಗಿಲ್ಲ. "ಸಾರ್ಸ್-ಕೋವ್-2 ನಲ್ಲಿನ ಜೀನೋಮಿಕ್ ವ್ಯತ್ಯಾಸಗಳನ್ನು ಸೆಂಟಿನೆಲ್ ಅನುಕ್ರಮಣಿಕೆ ಪ್ರಯತ್ನದಿಂದ ಇನ್ಸಾಸಿಒಜಿ ಮೇಲ್ವಿಚಾರಣೆ ಮಾಡುತ್ತಿದೆ. ವೈರಸ್ ನ ಹೊಸದಾಗಿ ಹೊರಹೊಮ್ಮುತ್ತಿರುವ ರೂಪಾಂತರಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಜಾಗರೂಕ ತಪಾಸಣೆಯನ್ನು ಜಾರಿಗೆ ತರಲಾಗುತ್ತಿದೆ" ಎಂದು ಅವರು ಹೇಳಿದರು.
Published by:Latha CG
First published: