ಕೋವಿಡ್(COVID) ಭೀಕರತೆ ಅಂತ್ಯಗೊಂಡಿದ್ದರೂ ಇದು ಪೂರ್ಣ ಪ್ರಮಾಣದಲ್ಲಿ ಕೊನೆಗೊಂಡಿಲ್ಲ ಎಂಬುದಕ್ಕೆ ಅಲ್ಲಿ-ಇಲ್ಲಿ ಕೇಳಿ ಬರುತ್ತಿರುವ ಸುದ್ದಿಗಳೇ ಸಾಕ್ಷಿಯಾಗಿವೆ. ಸಾಂಕ್ರಾಮಿಕವು (Pandemic) ಆರಂಭದಿಂದಲೂ ತನ್ನ ರೂಪ ಬದಲಿಸಿಕೊಳ್ಳುತ್ತಿದೆ ಹಾಗೂ ರೂಪಾಂತರಗೊಳ್ಳುತ್ತಲೇ ಇದೆ ಅದೂ ಅಲ್ಲದೆ ಅನೇಕ ರೂಪಾಂತರಗಳನ್ನು ಸೃಷ್ಟಿಸಿದೆ. ಅವುಗಳಲ್ಲಿ ಕೆಲವು ಸೋಂಕುಗಳು ಮಾರಾಣಾಂತಿಕ ನಷ್ಟಕ್ಕೂ ಕಾರಣವಾಗಿವೆ.
ಓಮಿಕ್ರಾನ್ ಉಪ ರೂಪಾಂತರಗಳ ದಾಂಧಲೆ
ಇಂತಹ ಮಾರಾಣಾಂತಿಕ ರೂಪಾಂತರಗಳಲ್ಲಿ ಓಮಿಕ್ರಾನ್ ಕೂಡ ಒಂದು. ಇದು ಅತ್ಯಂತ ಪರಿಣಾಮಕಾರಿಯಾಗಿರುವ ರೂಪಾಂತರ ಎಂದೆನಿಸಿದ್ದು, ಅದು ಸೃಷ್ಟಿಸಿರುವ ಉಪ ರೂಪಾಂತರಗಳು ಜಾಗತಿಕವಾಗಿ ಪ್ರಸಾರಗೊಳ್ಳುತ್ತಲೇ ಇದೆ.
ಇದನ್ನೂ ಓದಿ: Weather Update: ಕೇವಲ 30 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ಬಾರಿ ಬಡಿದ ಸಿಡಿಲು, 5 ಮಂದಿ ಸಾವು; ಭಾರಿ ಮಳೆಯ ಮುನ್ಸೂಚನೆ?
ಇದಕ್ಕೆ ಸರಿಯಾದ ನಿದರ್ಶನ ಎಂದರೆ ಉಪ ರೂಪಾಂತರ BF.7. ಈ ವೈರಸ್ ಚೀನಾದಲ್ಲಿ ಉಲ್ಬಣಕ್ಕೆ ಕಾರಣವಾಯಿತು ಹಾಗೂ ಅನೇಕ ಸಾವುನೋವುಗಳನ್ನುಂಟು ಮಾಡಿತು. ಇನ್ನು ಇನ್ನೊಂದು ಉಪ-ರೂಪಾಂತರ XBB ಪ್ರಸ್ತುತ ಭಾರತದಲ್ಲಿ ಸದ್ದುಮಾಡುತ್ತಿದೆ.
ಓಮಿಕ್ರಾನ್ ರೂಪಾಂತರ ಮೊದಲು ಪತ್ತೆಯಾದುದು ದಕ್ಷಿಣ ಆಫ್ರಿಕಾದಲ್ಲಲ್ಲ
ಓಮಿಕ್ರಾನ್ ಅನ್ನು ಆರಂಭದಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರವೆಂದು ಹೆಸರಿಸಲಾಯಿತು ಅಂತೆಯೇ ಇದರ ಮೊದಲ ಪ್ರಕರಣ ಬೋಟ್ಸ್ವಾನಾದ ಪ್ರಯೋಗಾಲಯಗಳಿಂದ ಹೊರಹೊಮ್ಮಿತು.
ಆದರೆ ಪುಣೆ ಮೂಲದ ಸಂಶೋಧನಾ ಸಂಸ್ಥೆಗಳು ನಡೆಸಿರುವ ಅಧ್ಯಯನವು ಓಮಿಕ್ರಾನ್ ಕುರಿತಾದ ಕೆಲವೊಂದು ಅಂಶಗಳನ್ನು ಬಹಿರಂಗಗೊಳಿಸಿದೆ.
ಪುಣೆಯ CSIR-ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿ (NCL), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (IISER) ಮತ್ತು ಪುಣೆ ನಾಲೆಡ್ಜ್ ಕ್ಲಸ್ಟರ್ ಜೊತೆಯಾಗಿ ನಗರದ ಹತ್ತು ಸ್ಥಳಗಳಿಂದ ಸಂಗ್ರಹಿಸಿದ 442 ತ್ಯಾಜ್ಯನೀರಿನ ಮಾದರಿಗಳನ್ನು ವಿಶ್ಲೇಷಿಸುವ ಮೂಲಕ ಅಧ್ಯಯನವನ್ನು ನಡೆಸಿತು. ಈ ಮಾದರಿಗಳು 7.4 ಮಿಲಿಯನ್ ಮಿಲಿಯನ್ ವ್ಯಕ್ತಿಗಳನ್ನು ಪ್ರತಿನಿಧಿಸುತ್ತದೆ.
ಇದನ್ನೂ ಓದಿ: Viral News: ಇಂಡಿಗೋ ವಿಮಾನದಲ್ಲಿ ವಾಂತಿ-ಮಲವಿಸರ್ಜನೆ ಮಾಡಿದ ಕುಡುಕ ಪ್ರಯಾಣಿಕ! ನೆಟ್ಟಿಗರಿಂದ ತೀವ್ರ ಆಕ್ರೋಶ
ತ್ಯಾಜ್ಯನೀರಿನಲ್ಲಿ ಓಮಿಕ್ರಾನ್ ಪತ್ತೆಯಾಗಿದೆ
ಭೈರೋಬಾ ನಲ್ಲಾದಲ್ಲಿನ ಒಳಚರಂಡಿ ಸಂಸ್ಕರಣಾ ಘಟಕವು ನವೆಂಬರ್ 1, 2021 ರಂದು ಓಮಿಕ್ರಾನ್ ಅಂಶಗಳ ಇರುವಿಕೆಯನ್ನು ನಿಖರಪಡಿಸಿದ್ದು, ಒಟ್ಟು ಹತ್ತು ಕೊಳಚೆ ಸ್ಥಳಗಳ ಪೈಕಿ ಮೂರು ಸ್ಥಳಗಳಲ್ಲಿ ಈಗಾಗಲೇ ಓಮಿಕ್ರಾನ್ ಇರುವಿಕೆಯನ್ನು ಅಧ್ಯಯನ ಕಂಡುಹಿಡಿದಿದೆ.
ಬೋಟ್ಸ್ವಾನಾದಲ್ಲಿ ಮೊದಲ ಬಾರಿಗೆ ರೋಗಿಗಳಲ್ಲಿ ಓಮಿಕ್ರಾನ್ ಇರುವಿಕೆಯನ್ನು ಪತ್ತೆಹಚ್ಚುವ ಹತ್ತು ದಿನಗಳ ಮೊದಲು ಹಾಗೂ ಪುಣೆಯಲ್ಲಿ ಮೊದಲ ಕ್ಲಿನಿಕಲ್ ಪ್ರಕರಣಕ್ಕೆ ಒಂದು ತಿಂಗಳ ಮೊದಲು ಓಮಿಕ್ರಾನ್ ಪತ್ತೆಯಾಗಿದೆ.
ಪುಣೆಯ ಕೊಳಚೆ ಪ್ರದೇಶಗಳಲ್ಲಿ ಮೊದಲೇ ಅಸ್ತಿತ್ವದಲ್ಲಿದ್ದ ಓಮಿಕ್ರಾನ್
ಓಮಿಕ್ರಾನ್‌ನ ಇತರ ವಂಶಾವಳಿಗಳಲ್ಲಿ, ಸಿಂಗಾಪುರ್ ಮತ್ತು ಭಾರತದ ಕೆಲವು ಭಾಗಗಳಲ್ಲಿನ ರೋಗಿಗಳಲ್ಲಿ 2022 ರ ಆಗಸ್ಟ್‌ನಲ್ಲಿ ಪತ್ತೆಯಾದ ಸುಮಾರು ಒಂಬತ್ತು ತಿಂಗಳ ಮೊದಲು XBB ಪುಣೆಯ ವಿವಿಧ ಕೊಳಚೆ ಸ್ಥಳಗಳಲ್ಲಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಪುಣೆಯ ನಾಲೆಡ್ಜ್ ಕ್ಲಸ್ಟರ್‌ನೊಂದಿಗೆ ಸಂಪರ್ಕ ಹೊಂದಿರುವ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರದ (ಎನ್‌ಸಿಬಿಎಸ್) ನಿರ್ದೇಶಕರಾಗಿರುವ ಪ್ರೊಫೆಸರ್ ಎಲ್‌ಎಸ್ ಶಶಿಧರ ತಿಳಿಸಿರುವಂತೆ ಅಧ್ಯಯನವು ಓಮಿಕ್ರಾನ್‌ನ ಮೂಲದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕಾಳಜಿಯ ರೂಪಾಂತರಗಳನ್ನು ಪತ್ತೆಹಚ್ಚಲು ತ್ಯಾಜ್ಯನೀರಿನ ಪರಿಶೀಲನೆ ಸಹಾಯಕ
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ), ಪ್ರಸ್ತುತ, ವೈರಸ್‌ನ (SARS-CoV-2) ಒಂದು ರೂಪಾಂತರವನ್ನು ಗುರುತಿಸಿದೆ, ಇದು ಕರೋನವೈರಸ್ ಕಾಯಿಲೆ 2019 (COVID-19) ಅನ್ನು ಕಾಳಜಿಯ ರೂಪಾಂತರವೆಂದು ಗುರುತಿಸಿದೆ.
ತ್ಯಾಜ್ಯ ನೀರಿನ ಪರಿಶೀಲನೆಯನ್ನು ಈ ಮೊದಲೇ ಮಾಡಿದ್ದರೆ ಈ ರೂಪಾಂತರ ವ್ಯಾಪಕವಾಗಿ ಹರಡುವ ಮುನ್ನವೇ ಇದನ್ನು ಗುರುತಿಸಬಹುದಿತ್ತು.
ತ್ಯಾಜ್ಯನೀರಿನ ಪರಿಶೀಲನೆಯನ್ನು ವೈದ್ಯಕೀಯ ಮಟ್ಟದಲ್ಲಿ ಪರಿಶೋಧಿಸುವ ಮೊದಲು ಇದು ಕಾಳಜಿಯ ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ಪ್ರೊಫೆಸರ್ ಎಲ್.ಎಸ್ ಶಶಿಧರ್ ತಿಳಿಸಿದ್ದಾರೆ.
ಮೊದಲ ರೋಗಲಕ್ಷಣದ ಪ್ರಕರಣದ ಕ್ಲಿನಿಕಲ್ ವರದಿ ಮತ್ತು ಒಂದು ಪ್ರದೇಶದಲ್ಲಿ ಲಕ್ಷಣರಹಿತ ಸೋಂಕಿನ ನಿಜವಾದ ಸಂಭವದ ನಡುವೆ ಸಾಕಷ್ಟು ಸಮಯದ ವಿಳಂಬವಿದೆ. ಹಾಗಾಗಿ ತ್ಯಾಜ್ಯನೀರಿನ ಪರಿಶೀಲನೆ ನಡೆಸುವುದು ವೈರಸ್ ಹರಡುವ ಮುನ್ನ ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ