Corona : ಮತ್ತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಭಯಾನಕ ಓಮಿಕ್ರಾನ್

Omicron variant:ಈಗಾಗಲೇ ಬೆಲ್ಜಿಯಂ, ಬೋಟ್ಸ್ವಾನಾ, ಹಾಂಗ್ ಕಾಂಗ್, ಬ್ರಿಟನ್ ಮತ್ತು ಇಸ್ರೇಲ್ನಲ್ಲಿ ಪತ್ತೆಯಾಗಿದ್ದು ಈಗ ಮತ್ತೆ ಹಲವು ರಾಷ್ಟ್ರಗಳಿಗೆ ಕಾಲಿಟ್ಟ ಓಮಿಕ್ರಾನ್ ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿ ಮಾಡುತ್ತಿದೆ.. ಪರಿಸ್ಥಿತಿ ಈ ರೀತಿ ಇರುವಾಗಲೇ ಮತ್ತಷ್ಟು ರಾಷ್ಟ್ರಗಳಿಗೆ ಭಯಾನಕ ವೈರಸ್ ಓಮಿಕ್ರಾನ್ ಕಾಲಿಟ್ಟಿದ್ದು ಜನರು ಆತಂಕದಿಂದ ಬದುಕುವಂತಾಗಿದೆ

 ಓಮಿಕ್ರಾನ್

ಓಮಿಕ್ರಾನ್

 • Share this:
  ಕೊರೊನಾ( Corona ) ಆತಂಕ ಕಡಿಮೆ ಆಯ್ತು ಮೊದಲಿನಂತೆ ಎಲ್ಲವೂ ನಿರಾಳವಾಗಿ ಇರಲಿದೆ ಇದು ಅಂದುಕೊಳ್ಳುತ್ತಿರುವಾಗಲೇ ದಕ್ಷಿಣ ಆಫ್ರಿಕಾದಲ್ಲಿ( South Africa ) ಪತ್ತೆಯಾಗಿರುವ ಕೋವಿಡ್ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ( Omicron)ಬಗ್ಗೆ ಆತಂಕ ಶುರುವಾಗಿದೆ.ಓಮಿಕ್ರಾನ್ 1.1. 529 ಕೊರೊನಾ ರೂಪಾಂತರಿ ಆತಂಕಕಾರಿ ರೂಪಾಂತರಿ ವೈರಸ್ ಪ್ರಬೇಧವಾಗಿದ್ದು, ಇದು ಡೆಲ್ಟಾ(Delta) ರೂಪಾಂತರಕ್ಕಿಂತಲೂ ಅತ್ಯಂತ ವೇಗವಾಗಿ ಪ್ರಸರಿಸಬಲ್ಲದು. ಹೀಗಾಗಿ ವಿಶ್ವದ ಹಲವು ರಾಷ್ಟ್ರಗಳು
  ಎಚ್ಚರಿಕೆಯ ಗಂಟೆಯಾಗಿ ವಿಮಾನ ಪ್ರಯಾಣವನ್ನು ಗೊಳಿಸುತ್ತಿವೆ.

  ಮತ್ತೆ ಹಲವು ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಓಮಿಕ್ರಾನ್

  ಈಗಾಗಲೇ ಬೆಲ್ಜಿಯಂ, ಬೋಟ್ಸ್ವಾನಾ, ಹಾಂಗ್ ಕಾಂಗ್, ಬ್ರಿಟನ್ ಮತ್ತು ಇಸ್ರೇಲ್ನಲ್ಲಿ ಪತ್ತೆಯಾಗಿದ್ದು ಈಗ ಮತ್ತೆ ಹಲವು ರಾಷ್ಟ್ರಗಳಿಗೆ ಕಾಲಿಟ್ಟ ಓಮಿಕ್ರಾನ್ ಜಗತ್ತಿನೆಲ್ಲೆಡೆ ತಲ್ಲಣ ಸೃಷ್ಟಿ ಮಾಡುತ್ತಿದೆ.. ಪರಿಸ್ಥಿತಿ ಈ ರೀತಿ ಇರುವಾಗಲೇ ಮತ್ತಷ್ಟು ರಾಷ್ಟ್ರಗಳಿಗೆ ಭಯಾನಕ ವೈರಸ್ ಓಮಿಕ್ರಾನ್ ಕಾಲಿಟ್ಟಿದ್ದು ಜನರು ಆತಂಕದಿಂದ ಬದುಕುವಂತಾಗಿದೆ

  1 )ಜೆಕ್ ರಿಪಬ್ಲಿಕ್

  ಉತ್ತರ ಜೆಕ್ ನಗರವಾದ ಲಿಬೆರೆಕ್‌ನಲ್ಲಿರುವ ಪ್ರಾದೇಶಿಕ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ ವೈರಸ್ ನ ಹೊಸ ರೂಪಾಂತರಿ ಓಮಿಕ್ರಾನ್ ಪತ್ತೆಯಾಗಿದೆ .. ಹೊಸ ಮಾದರಿಯ ಓಮಿಕ್ರಾನ್ ಸೋಂಕು ಪತ್ತೆಯಾಗಿರುವ ಮಹಿಳೆ ನಮೀಬಿಯಾಕ್ಕೆ ಭೇಟಿ ನೀಡಿ ದಕ್ಷಿಣ ಆಫ್ರಿಕಾ ಮತ್ತು ದುಬೈ ಮೂಲಕ ಜೆಕ್ ಗಣರಾಜ್ಯಕ್ಕೆ ಮರಳಿದ್ದಾರೆ ಎಂದು ಮಹಿಳೆಯ ಟ್ರಾವೆಲ್ ಹಿಸ್ಟರಿಯನ್ನು ಜೆಕ್ ಪ್ರಧಾನಿ ಆಂಡ್ರೆಜ್ ಬಾಬಿಸ್ ಬಹಿರಂಗಪಡಿಸಿದ್ದಾರೆ.

  ಇದನ್ನೂ ಓದಿ :ಹೊಸ ಅಪಾಯಕಾರಿ ವೈರಸ್; ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕಟ್ಟೆಚ್ಚರ

  2) ಇಟಲಿ

  ಇಟಲಿಯ ನೇಪಲ್ಸ್ ಉಪನಗರ ಕ್ಯಾಸೆರ್ಟಾದಿಂದ ಮೊಜಾಂಬಿಕ್‌ಗೆ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬ ನವೆಂಬರ್ 11ರಂದು ರೋಮ್ ಗೆ ಬಂದಿದ್ದ. ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಈ ವ್ಯಕ್ತಿಯಲ್ಲಿ ಓಮ್ರಿಕಾನ್ ವೈರಸ್ ಪತ್ತೆಯಾಗಿದೆ. ಇಬ್ಬರು ಮಕ್ಕಳು ಸೇರಿ ಈತನ ಕುಟುಂಬದ ಐವರಲ್ಲಿ ಹೊಸ ಮಾದರಿಯ ವೈರಸ್ ಪತ್ತೆಯಾಗಿದ್ದು ಇವರನ್ನು ಪ್ರತ್ಯೇಕವಾಗಿ ಐಸೋಲೆಟ್ ಮಾಡಲಾಗಿದೆ.

  3) ಜರ್ಮನಿ

  ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಿಂದ ವಿಮಾನದಲ್ಲಿ ಜರ್ಮನಿಗೆ ಆಗಮಿಸಿದ ಇಬ್ಬರು ಪ್ರಯಾಣಿಕರಲ್ಲಿ ಓಮಿಕ್ರಾನ್ ರೂಪಾಂತರವು ಕಾಣಿಸಿಕೊಂಡಿದೆ ಎಂದು ಮ್ಯೂನಿಚ್ ಮೂಲದ ಮೈಕ್ರೋಬಯಾಲಜಿ ಸೆಂಟರ್, ಮ್ಯಾಕ್ಸ್ ವಾನ್ ಪೆಟೆನ್‌ಕೋಫರ್ ಇನ್‌ಸ್ಟಿಟ್ಯೂಟ್ ತಿಳಿಸಿದೆ.

  4) ಇಸ್ರೇಲ್ : ಇಸ್ರೇಲ್ ನಲ್ಲಿ ಇದುವರೆಗೆ ಒಂದು ಓಮಿಕ್ರಾನ್ ಪ್ರಕರಣ ದೃಢಪಟ್ಟಿದ್ರೆ,7 ಶಂಕಿತ ಪ್ರಕರಣಗಳಿವೆ. ಇನ್ನು ಹೊಸ ಮಾದರಿಯ ಓಮಿಕ್ರಾನ್ ವೈರಸ್ ಕಾಣಿಸಿಕೊಂಡಿರುವ ವ್ಯಕ್ತಿಗೆ ಸಂಪೂರ್ಣವಾಗಿ ಲಸಿಕೆಯ ನೀಡಲಾಗಿದ್ದು, ಯಾವುದೇ ಆತಂಕವಿಲ್ಲ ಎಂದು ಇಸ್ರೇಲ್ ಆರೋಗ್ಯ ತಜ್ಞರು ತಿಳಿಸಿದ್ದಾರೆ.

  ಇದನ್ನೂ ಓದಿ :ಒಮಿಕ್ರಾನ್ ವೈರಸ್ ಬಗ್ಗೆ ICMR ವಿಜ್ಞಾನಿಗಳು ಹೇಳಿದ್ದೇನು ಗೊತ್ತೇ?

  5) ನೆದರ್ಲ್ಯಾಂಡ್ಸ್ :ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಪಬ್ಲಿಕ್ ಹೆಲ್ತ್ (RIVM) ನೀಡಿರುವ ಮಾಹಿತಿಯ ಪ್ರಕಾರ ದಕ್ಷಿಣ ಆಫ್ರಿಕಾದಿಂದ ಎರಡು ವಿಮಾನಗಳಲ್ಲಿ ಶುಕ್ರವಾರ ಆಮ್‌ಸ್ಟರ್‌ಡ್ಯಾಮ್‌ಗೆ ಬಂದ ಹಲವಾರು ಜನರಲ್ಲಿ ಓಮಿಕ್ರಾನ್ ರೂಪಾಂತರವು ಪತ್ತೆಯಾಗಿದೆ..ಅದೇ 61 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು,
  ಇದು ಹೊಸ ರೂಪಾಂತರ ಎಂದು ಖಚಿತವಾಗಿ ನಿರ್ಧರಿಸಲು ಹೆಚ್ಚಿನ ಅನುಕ್ರಮ ವಿಶ್ಲೇಷಣೆ ನಡೆಯುತ್ತಿದೆ ಎಂದು ಡಚ್ ಇನ್ಸ್ಟಿಟ್ಯೂಟ್ ತಿಳಿಸಿದೆ.

  ಇನ್ನುದಕ್ಷಿಣ ಆಫ್ರಿಕಾದ 6 ನಗರಗಳಾದ, ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಜಿಂಬಾಬ್ವೆ, ನಮೀಬಿಯಾ, ಲೆಸೊಥೊ ಮತ್ತು ಇಸ್ವಾಟಿನಿಯಿಂದ ವಿಶ್ವದ ಹಲವು ರಾಷ್ಟ್ರಗಳ ವಿಮಾನ ಸಂಚಾರವನ್ನು ರದ್ದುಗೊಳಿಸಿದ್ದು ಈ ನಗರದಿಂದ ಬಂದವರು ಕಡ್ಡಾಯವಾಗಿ ತಪಾಸಣೆ ನಡೆಸಿಕೊಳ್ಳುವಂತೆ ಸೂಚಿಸಿವೆ..ಇನ್ನು ಭಾರತ ಸಹ ದಕ್ಷಿಣ ಆಫ್ರಿಕಾ, ಬ್ರೆಜಿಲ್‌, ಬಾಂಗ್ಲಾದೇಶ, ಬೋಟ್ಸ್‌ವಾನಾ, ಚೀನಾ, ಮಾರಿಷಸ್‌, ನ್ಯೂಜಿಲೆಂಡ್‌, ಜಿಂಬಾಬ್ವೆ, ಸಿಂಗಾಪುರ, ಹಾಂಕಾಂಗ್‌, ಇಸ್ರೇಲ್‌ ಹಾಗೂ ಬ್ರಿಟನ್‌ ಸೇರಿದಂತೆ ಐರೋಪ್ಯ ಒಕ್ಕೂಟವನ್ನು ಭಾರತ 'ಹೈ ರಿಸ್ಕ್‌' ದೇಶಗಳು ಎಂದು ಪಟ್ಟಿಮಾಡಿದ್ದು ಶಿಶುಗಳ ಪ್ರಯಾಣಿಕರ ಮೇಲೆ ಹದ್ದಿನಕಣ್ಣು ವಹಿಸುವಂತೆ ಸೂಚನೆ ನೀಡಿದೆ..
  Published by:ranjumbkgowda1 ranjumbkgowda1
  First published: