ಪ್ರಸ್ತುತ ಹೆಚ್ಚು ಹರಡುತ್ತಿರುವ ಓಮೈಕ್ರಾನ್ ರೂಪಾಂತರದ (Omicron mutation) ಬಗ್ಗೆ ಸಾಕಷ್ಟು ಮಾಹಿತಿ ತಿಳಿದಿಲ್ಲದೇ ಇದ್ದರೂ ತಜ್ಞರು ಹೇಳಿರುವಂತೆ ಹೊಸ ರೂಪಾಂತರದ ರೋಗಲಕ್ಷಣಗಳು ಕೋವಿಡ್-19ನ ಸಾಮಾನ್ಯ ರೋಗಲಕ್ಷಣಗಳಿಗಿಂತ (Symptoms) ಭಿನ್ನವಾಗಿದೆ ಎಂದಾಗಿದೆ. ಕೋವಿಡ್-19ನ (Covid-19) ಪ್ರಬಲ ರೂಪಾಂತರ ಎಂಬುದಾಗಿ ಕರೆಯಿಸಿಕೊಂಡಿರುವ ಓಮೈಕ್ರಾನ್ ಬರೇ ಒಂದು ತಿಂಗಳಲ್ಲಿ ಸಂಪೂರ್ಣ ವಿಶ್ವವನ್ನೇ ತನ್ನ ಕಬಂಧ ಬಾಹುವಲ್ಲಿ ಬಂಧಿಸಿದೆ. ಈ ರೂಪಾಂತರವು ಸಾಂಕ್ರಾಮಿಕದ ಪ್ರಕರಣಗಳನ್ನು ಹೆಚ್ಚಿಸುತ್ತಿದ್ದು ಕೋವಿಡ್ ಅಪಾಯವನ್ನು ಏಕಾಏಕಿಯಾಗಿ ಏರಿಸಿದೆ.ಪ್ರಸ್ತುತ ಸನ್ನಿವೇಶದಲ್ಲಿ ಉಸಿರಾಟದ (Respiratory) ಸೋಂಕಿನ ಕುರಿತಾಗಿರುವ ವಿಶಿಷ್ಟ ಹಾಗೂ ಅಸಾಮಾನ್ಯ ಚಿಹ್ನೆಗಳ ಬಗ್ಗೆ ತಿಳಿದಿರುವುದು ನಿರ್ಣಾಯಕವಾಗಿದ್ದು ಯಾವುದೇ ರೀತಿಯ ಅನಿರೀಕ್ಷಿತ ಹಾಗೂ ಅಪಾಯಕಾರಿ ಘಟನೆಗಳನ್ನು ಹತ್ತಿಕ್ಕಲು ಇದು ಸಹಕಾರಿಯಾಗಿದೆ ಹಾಗೂ ಶೀಘ್ರವೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲಕರವಾಗಿದೆ.
ತ್ವಚೆ, ತುಟಿ ಹಾಗೂ ಉಗುರುಗಳಲ್ಲಿ ಕಂಡುಬರುವ ಓಮೈಕ್ರಾನ್ ರೋಗಲಕ್ಷಣಗಳೇನು?
ಓಮೈಕ್ರಾನ್ ರೂಪಾಂತರದ ಮೂರು ಪ್ರಮುಖ ರೋಗಲಕ್ಷಣಗಳ ಹೊರತಾಗಿಯೂ ತ್ವಚೆ, ತುಟಿ ಹಾಗೂ ಉಗುರುಗಳಲ್ಲಿ ಕಾಣಿಸಿಕೊಳ್ಳುವ ಕಡಿಮೆ ರೋಗಲಕ್ಷಣಗಳ ಬಗ್ಗೆಯೂ ರೋಗಿಗಳು ಅಲಕ್ಷ್ಯ ಮಾಡದೆಯೇ ತುರ್ತು ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಆಮ್ಲಜನಕದ ಮಟ್ಟ ಕಡಿಮೆಯಾಗಿದೆ ಎಂಬುದನ್ನು ಅರಿತುಕೊಳ್ಳುವುದು ಹೇಗೆ?
ಕೋವಿಡ್-19ನ ಹೊಸ ಮ್ಯೂಟೆಂಟ್ ಸ್ಟ್ರೈನ್ನ ಸೋಂಕಿಗೆ ಒಳಗಾದ ಜನರು ವ್ಯಾಪಕ ಶ್ರೇಣಿಯ ರೋಗಲಕ್ಷಣಗಳನ್ನು ಬಹಿರಂಗಪಡಿಸುತ್ತಾರೆ ಎಂಬುದಾಗಿ ಅಮೆರಿಕನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC) ವರದಿ ಮಾಡಿದೆ. ಇದೀಗ ಚರ್ಮ, ತುಟಿ, ಉಗುರುಗಳ ಮೇಲೆ ಕಂಡುಬರುವ ರೋಗಲಕ್ಷಣಗಳು ವೈರಸ್ನ ಲಕ್ಷಣಗಳಲ್ಲೊಂದಾಗಿದೆ. CDC ಎಚ್ಚರಿಸಿರುವಂತೆ ತ್ವಚೆ, ತುಟಿ ಹಾಗೂ ಉಗುರಿನ ಮೇಲ್ಭಾಗದಲ್ಲಿ ತೆಳುವಾದ ಬೂದು ಅಥವಾ ನೀಲಿ ಬಣ್ಣ ಕಂಡುಬಂದರೆ ಇದು ರಕ್ತದಲ್ಲಿ ಆಮ್ಲಜನಕದ ಕಡಿಮೆ ಮಟ್ಟವನ್ನು ಸೂಚಿಸುತ್ತದೆ ಎಂಬುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಇನ್ನು, ಉಗುರು ನೀಲಿ ಅಥವಾ ಬೂದು ಬಣ್ಣಕ್ಕೆ ಮಾರ್ಪಟ್ಟರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಿಳಿಸಿದೆ. ಆರೋಗ್ಯ ಸಂಸ್ಥೆಯು ಈ ಚಿಹ್ನೆಗಳನ್ನು ತುರ್ತು ಎಚ್ಚರಿಕೆ ಚಿಹ್ನೆಗಳು ಎಂಬುದಾಗಿ ಗುರುತಿಸಿದ್ದು ಈ ಲಕ್ಷಣಗಳಿಗೆ ಕೂಡಲೇ ವೈದ್ಯಕೀಯ ಆರೈಕೆ ಪಡೆದುಕೊಳ್ಳಬೇಕು ಎಂದು ತಿಳಿಸಿದೆ.
ಓಮೈಕ್ರಾನ್ ಪ್ರಮುಖ ರೋಗಲಕ್ಷಣಗಳೇನು?
ರೋಗಲಕ್ಷಣಗಳು ಮೇಲೆ ತಿಳಿಸಿರುವ ಲಕ್ಷಣಗಳನ್ನು ಒಳಗೊಂಡಿರುವುದು ಮಾತ್ರವಲ್ಲದೆ ಉಸಿರಾಟದ ತೊಂದರೆ, ನಿರಂತರ ನೋವು, ಎದೆಯಲ್ಲಿ ಒತ್ತಡ, ಎಚ್ಚರವಾಗಿರುವ ಅಸಮರ್ಥತೆಗಳನ್ನು ಒಳಗೊಂಡಿರಬಹುದು ಎಂಬುದಾಗಿ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ತೀವ್ರ ದಣಿವು, ಸುಸ್ತು ಓಮೈಕ್ರಾನ್ ರೂಪಾಂತರದ ರೋಗಲಕ್ಷಣಗಳೇ?
ಓಮೈಕ್ರಾನ್ ಇರುವ ರೋಗಿಗಳಲ್ಲಿ ತೀವ್ರ ಆಯಾಸ ಬಳಲಿಕೆ ಕಂಡುಬರುತ್ತದೆ. ಎಲ್ಲಾ ವಯಸ್ಸಿನವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುವ ಲಕ್ಷಣವಾಗಿದೆ. ಇನ್ನು ದಕ್ಷಿಣ ಆಫ್ರಿಕಾದ ಮೆಡಿಕಲ್ ಅಸೋಸಿಯೇಷನ್ನ ಅಧ್ಯಕ್ಷ ಎಂಜೆಲಿಕ್ ಕೋಟ್ಜಿ ತಿಳಿಸಿರುವ ಹಾಗೆ ಯುವ ರೋಗಿಗಳು ತೀವ್ರ ದಣಿವನ್ನು ಪ್ರದರ್ಶಿಸಬಹುದು ಎಂದು ತಿಳಿಸಿದ್ದಾರೆ. ಆಮ್ಲಜನಕ ಆರ್ದ್ರೀಕರಣ ಮಟ್ಟದಲ್ಲಿ ತೀವ್ರ ಕುಸಿತವಿಲ್ಲ. ಏಕೆಂದರೆ ಕೋವಿಡ್-19 ಎರಡನೇ ಅಲೆಯ ಸಮಯದಲ್ಲಿ ರೋಗಿಗಳು ಆಮ್ಲಜನಕ ಆರ್ದ್ರೀಕರಣ ಮಟ್ಟದಲ್ಲಿ ತೀವ್ರ ಕುಸಿತಕ್ಕೊಳಗಾಗಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.
ಅದೇ ರೀತಿ ಹೊಸ ರೂಪಾಂತರದ ದಾಳಿಗೆ ಒಳಗಾದವರು ಕೂಡ ವಾಸನೆ ಹಾಗೂ ರುಚಿಯ ನಷ್ಟವನ್ನು ಕಳೆದುಕೊಂಡಿಲ್ಲ. ಓಮಿಕ್ರಾನ್ ರೋಗಿಗಳು ಗಂಟಲಿನ ಕಿರಿಕಿರಿ ಅನುಭವಿಸಿರುವುದು ಕಂಡುಬಂದಿದೆ. ಓಮೈಕ್ರಾನ್ ರೋಗಲಕ್ಷಣಗಳು ಡೆಲ್ಟಾಗಿಂತ ಭಿನ್ನವಾಗಿರುವುದಕ್ಕಿಂತ ಸಾಮಾನ್ಯ ಸಾಮ್ಯತೆಗಳನ್ನು ಹೊಂದಿವೆ ಎಂಬುದಾಗಿ ನಿರೀಕ್ಷಿಸಲಾಗಿದೆ. ಇನ್ನಿತರ ರೋಗಲಕ್ಷಣಗಳೆಂದರೆ ಬೆನ್ನುನೋವು, ಸುರಿಯುತ್ತಿರುವ ಮೂಗು ಹಾಗೂ ಮೂಗು ಕಟ್ಟುವಿಕೆ, ತಲೆನೋವು, ಆಯಾಸ, ಸೀನು, ರಾತ್ರಿ ಬೆವರುವುದು, ಮೈಕೈ ನೋವು ಇತ್ಯಾದಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ