• Home
  • »
  • News
  • »
  • national-international
  • »
  • Omicron BF.7: ಭಾರತದಲ್ಲಿ ಓಮಿಕ್ರಾನ್ ಹೊಸ ರೂಪಾಂತರ BF.7 ಭೀತಿ; ತಜ್ಞರಿಂದ ಎಚ್ಚರಿಕೆ

Omicron BF.7: ಭಾರತದಲ್ಲಿ ಓಮಿಕ್ರಾನ್ ಹೊಸ ರೂಪಾಂತರ BF.7 ಭೀತಿ; ತಜ್ಞರಿಂದ ಎಚ್ಚರಿಕೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೋವಿಡ್ ಮುನ್ನೆಚ್ಚರಿಕೆಗಳನ್ನು ದೇಶದಲ್ಲಿ ಒಂದೊಂದಾಗಿ ತೆಗೆಯುತ್ತಾ ಬಂದಿದ್ದರೂ ಕೋವಿಡ್ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಹಾಗಾಗಿ ಜನರು ವೈಯಕ್ತಿಕವಾಗಿ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಓಮಿಕ್ರಾನ್ ಉಪ-ರೂಪಾಂತರಗಳಾದ BA.5.1.7 ಮತ್ತು BF.7 ಚೀನಾದ ಮಂಗೋಲಿಯಾದ ಪ್ರದೇಶದಿಂದ ಪತ್ತೆಯಾದ ನಂತರ ಈಗ ಇತರ ಭಾಗಗಳಿಗೆ ವಿಸ್ತರಿಸುತ್ತಿದೆ ಹಾಗೂ ಹೊಸ ಆರೋಗ್ಯ ಅಪಾಯಗಳ ಬೆದರಿಕೆಗಳಿಗೆ ಕಾರಣವಾಗಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಕೋವಿಡ್ (COVID) ರೂಪಾಂತರಗಳಾದ BA.7 ಮತ್ತು BA.5.1.7 ಹೆಚ್ಚಿನ ಹರಡುವಿಕೆಯೊಂದಿಗೆ ಸಾಂಕ್ರಾಮಿಕ ರೋಗವನ್ನು ಇನ್ನಷ್ಟು ಪಸರಿಸುವ ಭೀತಿ ಇದೆ ಎಂದು ಹೇಳಿದ್ದಾರೆ. ಕೋವಿಡ್ ಮುನ್ನೆಚ್ಚರಿಕೆಗಳನ್ನು ದೇಶದಲ್ಲಿ ಒಂದೊಂದಾಗಿ ತೆಗೆಯುತ್ತಾ ಬಂದಿದ್ದರೂ ಕೋವಿಡ್ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ ಹಾಗಾಗಿ ಜನರು ವೈಯಕ್ತಿಕವಾಗಿ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು ಎಂದು ತಜ್ಞರು (Experts) ಸಲಹೆ ನೀಡಿದ್ದಾರೆ. ಓಮಿಕ್ರಾನ್ (Omicron) ಉಪ-ರೂಪಾಂತರಗಳಾದ BA.5.1.7 ಮತ್ತು BF.7 ಚೀನಾದ ಮಂಗೋಲಿಯಾದ ಪ್ರದೇಶದಿಂದ ಪತ್ತೆಯಾದ ನಂತರ ಈಗ ಇತರ ಭಾಗಗಳಿಗೆ ವಿಸ್ತರಿಸುತ್ತಿದೆ ಹಾಗೂ ಹೊಸ ಆರೋಗ್ಯ (Health) ಅಪಾಯಗಳ ಬೆದರಿಕೆಗಳಿಗೆ ಕಾರಣವಾಗಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.


ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು
 ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಮಾರಣಾಂತಿಕ ವೈರಸ್ ವಿರುದ್ಧ ಪ್ರಾಥಮಿಕ ರಕ್ಷಣೆಯಾಗಿದ್ದು ಪ್ರತಿಯೊಬ್ಬರೂ ಆದಷ್ಟು ಇದರ ಪಾಲನೆ ಮಾಡಬೇಕು ಎಂದು ಸೂಚಿಸಿದ್ದಾರೆ. ಎರಡು ಅಧ್ಯಯನಗಳ ಪ್ರಕಾರ, BF.7 ಇತರ ಅನೇಕ ಓಮಿಕ್ರಾನ್ ಉಪ-ವ್ಯತ್ಯಯಗಳಿಗಿಂತಲೂ ಮುಂಚಿನ ಕಾಯಿಲೆಗಳು ಅಥವಾ ವ್ಯಾಕ್ಸಿನೇಷನ್‌ಗಳಿಂದ ಉಂಟಾದ ಪ್ರತಿಕಾಯಗಳಿಂದ ಪಾರಾಗುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ದೆಹಲಿಯಲ್ಲಿ ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳು
ಅಧಿಕೃತ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಮಾರಕ ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆ ಉಂಟಾಗಿದ್ದು ಮತ್ತು ಪರೀಕ್ಷಾ ಸಕಾರಾತ್ಮಕತೆಯ ದರವು ಶೇಕಡಾ 2 ಕ್ಕಿಂತ ಹೆಚ್ಚಿದೆ ಎಂಬುದಾಗಿ ವರದಿಗಳು ತಿಳಿಸಿವೆ.


ಇದನ್ನೂ ಓದಿ: Delhi Air Quality: ನಿಷೇಧವಿದ್ದರೂ ಸಿಡಿದ ಪಟಾಕಿಗಳು, ರಾಷ್ಟ್ರ ರಾಜಧಾನಿಯಲ್ಲಿ 'ವಿಷ'ಗಾಳಿ, ಪರಿಸ್ಥಿತಿ ಮತ್ತಷ್ಟು ಹದಗೆಡುವ ಆತಂಕ!


ಕಳೆದ ಎರಡು ದಿನಗಳಲ್ಲಿ ಯಾವುದೇ ಸಾವು ನೋವುಗಳು ವರದಿಯಾಗದಿದ್ದರೂ, ದೆಹಲಿಯಲ್ಲಿ 135 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಕಳೆದ ವಾರ 112 ಪ್ರಕರಣಗಳು 1.75% ದಷ್ಟು ಪರೀಕ್ಷಾ ಧನಾತ್ಮಕ ದರದೊಂದಿಗೆ ಕಂಡುಬಂದಿದ್ದು, ಶನಿವಾರ, ದಾಖಲಾದ ಕೋವಿಡ್-19 ಪ್ರಕರಣಗಳ ಸಂಖ್ಯೆ 130 ಆಗಿದೆ ಹಾಗೂ ಧನಾತ್ಮಕ ದರ 1.84% ಎಂಬುದು ತಿಳಿದು ಬಂದಿದೆ.


ಹೊಸ ಓಮಿಕ್ರಾನ್ ರೂಪಾಂತರಗಳು ಮಾರಕವಾಗಿದೆಯೇ?
ಕೋವಿಡ್‌ನ ಹೊಸ ರೂಪಾಂತರಗಳ ಪ್ರಸರಣ ದರದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದು, ರೋಗದ ಆರಂಭಿಕ ಚಿಹ್ನೆಗಳು ಲಸಿಕೆ ಪ್ರತಿರಕ್ಷೆಯ ವಲಯವನ್ನು ಮೀರಿ ಮುನ್ನುಗ್ಗುತ್ತಿರುವುದು ಅಪಾಯದ ಸೂಚನೆಯಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.


ಅದೂ ಅಲ್ಲದೆ ಹಬ್ಬದ ಸಮಯಗಳಲ್ಲಿ ಜನರು ಸಂತೋಷ ಸಡಗರದಲ್ಲಿರುವುದರಿಂದ ರೋಗದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅಂತೆಯೇ ಸುರಕ್ಷತೆಗಳನ್ನು ಪಾಲಿಸುವುದಿಲ್ಲ ಎಂದಾಗಿ ತಿಳಿಸಿದ್ದಾರೆ. ಇದರಿಂದಾಗಿ ಕೋವಿಡ್‌ನ ಹೊಸ ರೂಪಾಂತರಗಳು ಕ್ಷಿಪ್ರವಾಗಿಯೇ ಪಸರಿಸುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.


ಓಮಿಕ್ರಾನ್ BF.7 ನ ರೋಗಲಕ್ಷಣಗಳು
 ಇತರ ರೂಪಾಂತರಗಳಂತೆ, ಓಮಿಕ್ರಾನ್ BF.7 ನ ರೋಗಲಕ್ಷಣಗಳು ಸಮಾನವಾಗಿದ್ದು ಒಂದೇ ರೀತಿಯ ಲಕ್ಷಣಗಳನ್ನು ಪ್ರದರ್ಶಿಸಿವೆ. ಆದರೆ ತಜ್ಞರು ಹೇಳುವಂತೆ ದೇಹದಲ್ಲುಂಟಾಗುವ ನೋವುಗಳು ಸ್ವಲ್ಪ ಯಾತನಾಮಯವಾಗಿರಬಹುದು ಎಂದು ತಜ್ಞರು ಸೂಚಿಸಿದ್ದಾರೆ.


  • ಶೀತ, ಮೂಗು ಕಟ್ಟುವಿಕೆ

  • ಗಂಟಲು ಕೆರತ

  • ಸುಸ್ತು ಮತ್ತು ಆಯಾಸ

  • ಕೆಮ್ಮು ಮತ್ತು ಶೀತ

  • ಸ್ರವಿಸುವ ಮೂಗು


ಇದನ್ನೂ ಓದಿ:  Explained: 100 ಮಿಲಿಯನ್ ಡೋಸ್​ ಕೋವಿಶೀಲ್ಡ್ ಲಸಿಕೆ ನಾಶಪಡಿಸಿದ್ದೇಕೆ ಭಾರತ? ಕಾರಣಗಳೇನು?


ಹೀಗೆ ಓಮಿಕ್ರಾನ್ ಹೊಸ ರೂಪಾಂತರದ ರೋಗ ಲಕ್ಷಣಗಳನ್ನು ವೈದ್ಯರು ತಿಳಿಸಿದ್ದಾರೆ. ಈ ಹಿಂದೆಯೂ ಕೋವಿಡ್‌ನ ಎಲ್ಲಾ ಅಲೆಗಳ ಸಂದರ್ಭದಲ್ಲಿ ತೆಗೆದುಕೊಂಡ ಅದೇ ರೀತಿಯ ಮುನ್ನೆಚ್ಚರಿಕೆಗಳನ್ನು ಜನರು ಪಾಲಿಸಬೇಕು ಎಂದು ತಜ್ಞರು ಸಲಹೆ ಇತ್ತಿದ್ದಾರೆ.

Published by:Ashwini Prabhu
First published: