ಭಾರತದಲ್ಲಿ(ಬೆಂಗಳೂರು) ಗುರುವಾರ ಕೋವಿಡ್-19(COVID-19) ಹೊಸ ರೂಪಾಂತರದ 2 ಓಮಿಕ್ರಾನ್(Omicron) ಪ್ರಕರಣಗಳು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಆದರೆ ಈ ಬೆಳವಣಿಗೆ ಕೋವಿಡ್-19 ಲಸಿಕೆಯ(Vaccine) 2 ಡೋಸ್ಗಳ ನಡುವಿನ ಅಂತರದಲ್ಲಿ ಯಾವುದೇ ಬದಲಾವಣೆಗೆ ಕಾರಣವಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ(Union Health Ministry) ಸ್ಪಷ್ಟಪಡಿಸಿದೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ NITI ಆಯೋಗದ ಸದಸ್ಯ ವಿಕೆ ಪೌಲ್, ‘‘ಕರ್ನಾಟಕದಲ್ಲಿ ಓಮಿಕ್ರಾನ್ ಪ್ರಕರಣ ಪತ್ತೆಯಾದ ಕಾರಣ ಡೋಸ್ ಅಂತರವನ್ನು ಬದಲಾಯಿಸುವ ಯಾವುದೇ ಚಿಂತನೆ ಇಲ್ಲ‘‘ ಎಂದು ಹೇಳಿದರು. ಜನರು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಹಾಗೂ ಮುಖಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಒತ್ತಿ ಹೇಳಿದರು. ಹೊಸ ರೂಪಾಂತರದ ವಿರುದ್ಧ ಹೋರಾಡಲು ಲಸಿಕೆ ಹಾಗೂ ಮಾಸ್ಕ್ ಅತ್ಯಂತ ನಿರ್ಣಾಯಕ ಸಾಧನಗಳಾಗಿವೆ ಎಂದರು. ವಿಜ್ಞಾನ ಮತ್ತು ಅನುಭವದ ಮೂಲಕ ಸರ್ಕಾರವು ಈ ಹೊಸ ಪರಿಸ್ಥಿತಿಯನ್ನು ನಿಭಾಯಿಸುತ್ತದೆ. ಬೂಸ್ಟರ್ನ ಅವಶ್ಯಕತೆ ಇದೆಯೇ ಎಂದು ಪ್ರಸ್ತುತ ಪರಿಶೀಲಿಸಲಾಗುತ್ತಿದೆ ಎಂದು ಪೌಲ್ ಹೇಳಿದರು.
ಇದನ್ನೂ ಓದಿ: Omicron in Bengaluru: ಓಮಿಕ್ರಾನ್ ಪತ್ತೆಯಾಗಿದ್ದು ಹೇಗೆ? ಅದರ ಲಕ್ಷಣಗಳೇನು?
ಸೋಂಕಿತರ ಸಂಪರ್ಕಿತರಿಗಾಗಿ ಹುಡುಕಾಟ
ದೇಶದಲ್ಲಿ ಮೊದಲ ಬಾರಿಗೆ ದೃಢಪಟ್ಟ 2 ಓಮಿಕ್ರಾನ್ ಪ್ರಕರಣಗಳು ಬೆಂಗಳೂರಿನವೇ ಆಗಿವೆ. 66 ವರ್ಷದ ಓರ್ವ ವ್ಯಕ್ತಿ ಹಾಗೂ 46 ವರ್ಷದ ಓರ್ವ ವ್ಯಕ್ತಿಗೆ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ. ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗುತ್ತಿದೆ. ಜಿನೋಮ್ ಕಣ್ಗಾವಲುಗಾಗಿ 10 ಪ್ರಯಾಣಿಕರ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಸಂಪೂರ್ಣ ಲಸಿಕೆ ಹಾಕಿಸಿಕೊಳ್ಳಿ
ಈ ಹೊಸ ವೈರಸ್ ಓಮಿಕ್ರಾನ್ಗೆ ನಾವು ಆತಂಕ ಪಡುತ್ತಿದ್ದೇವೆ. ಆದರೆ ಈ ಸಮಯದಲ್ಲಿ ಸೂಕ್ತವಾದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಬಹಳ ಮುಖ್ಯವಾಗುತ್ತದೆ. ಜನರು ಸಂಪೂರ್ಣ ಲಸಿಕೆಯನ್ನು ಹಾಕಿಸಿಕೊಳ್ಳಲು ಹಿಂಜರಿಯಬಾರದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR)ಯ ಮಹಾನಿರ್ದೇಶಕ ಬಲರಾಮ್ಭಾರ್ಗವ ಹೇಳಿದ್ದಾರೆ.
ತೀವ್ರತರವಾದ ರೋಗ ಲಕ್ಷಣಗಳು ಕಂಡುಬಂದಿಲ್ಲ
ಎಲ್ಲಾ ಓಮಿಕ್ರಾನ್ ಸಂಬಂಧಿತ ಪ್ರಕರಣಗಳು ಇಲ್ಲಿಯವರೆಗೆ ಸೌಮ್ಯವಾದ ರೋಗ ಲಕ್ಷಣಗಳನ್ನು ಹೊಂದಿವೆ ಎಂದು ತಿಳಿದು ಬಂದಿದೆ. ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಪತ್ತೆಯಾದ ಅಂತಹ ಎಲ್ಲಾ ಪ್ರಕರಣಗಳಲ್ಲಿ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ಗುರುತಿಸಲಾಗಿಲ್ಲ ಎಂದು WHO ಹೇಳಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಹೇಳಿದರು.
ಗೌಪ್ಯತೆಯ ಕಾಳಜಿಯನ್ನು ಉಲ್ಲೇಖಿಸಿ ಈ ಎರಡು ಪ್ರಕರಣಗಳ ವಿವರಗಳನ್ನು ಬಹಿರಂಗಪಡಿಸಲು ಅಗರ್ವಾಲ್ ನಿರಾಕರಿಸಿದರು.
ಇದನ್ನೂ ಓದಿ: Omicron Found in US: ಅಮೆರಿಕದಲ್ಲಿ ಮೊದಲ ಓಮಿಕ್ರಾನ್ ಕೇಸ್ ಪತ್ತೆ; ಆತಂಕದಲ್ಲಿ ವಿಶ್ವದ ದೊಡ್ಡಣ್ಣ
ಹೊಸ ಓಮಿಕ್ರಾನ್ ವಿರುದ್ಧ ಹೋರಾಡಲು ಸಜ್ಜು
ಇಂದು ನಮ್ಮಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ನಮ್ಮ ವಿಜ್ಞಾನಿಗಳು ಮತ್ತು ಪ್ರಯೋಗಾಲಯಗಳು ಅದರ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜ್ಞಾನ ಮತ್ತು ಅನುಭವದ ಮೂಲಕ ಹೊಸ ಪರಿಸ್ಥಿತಿಯನ್ನು ನಿಭಾಯಿಸುತ್ತಾರೆ. ವೈರಸ್ ಅನ್ನು ಲಘುವಾಗಿ ತೆಗೆದುಕೊಂಡ ದೇಶಗಳಲ್ಲಿ ಪರಿಸ್ಥಿತಿ ಮತ್ತೆ ಹದಗೆಡುವುದನ್ನು ನೋಡುತ್ತಿವೆ. ನಾವು ಮಾಸ್ಕ್ ಧರಿಸಬೇಕು ಎಂದು ನೀತಿ ಆಯೋಗದ ಆರೋಗ್ಯ ಸದಸ್ಯ ಡಾ ವಿಕೆ ಪೌಲ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ