Omicron Effect: ಶೇ. 20 ರಷ್ಟು ವಿಮಾನ ಹಾರಾಟ ರದ್ದುಗೊಳಿಸಿದ ಇಂಡಿಗೋ

ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲು ಕಷ್ಟವಾಗಬಾರದೆಂದು ವಿಮಾನಯಾನ ಕಂಪನಿಯು ತನ್ನ ಎಲ್ಲಾ ಗ್ರಾಹಕರನ್ನು ಡಿಜಿಟಲ್ ಚಾನೆಲ್ ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಸಾಂದರ್ಭೀಕ ಚಿತ್ರ

ಸಾಂದರ್ಭೀಕ ಚಿತ್ರ

  • Share this:
ಕಳೆದ ತಿಂಗಳಷ್ಟೇ ಇನ್ನೇನು ಕೋವಿಡ್ ಪ್ರಕರಣಗಳು ಭಾರತದಲ್ಲಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎನ್ನುವಾಗಲೇ ಕೋವಿಡ್-19 ವೈರಸ್‌ನ ಹೊಸ ರೂಪಾಂತರಿ ಆದಂತಹ ಓಮೈಕ್ರಾನ್(Omicron) ತನ್ನ ಅಟ್ಟಹಾಸ ಮೆರೆಯಲು ಪ್ರಾರಂಭಿಸಿರುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಈಗ ಮತ್ತೆ ದೇಶಾದ್ಯಂತ ಬಹುತೇಕ ರಾಜ್ಯ ಸರ್ಕಾರಗಳು ವೀಕೆಂಡ್‌ ಲಾಕ್‌ಡೌನ್(Lockdown), ಕರ್ಫ್ಯೂ(Curfew) ಹೇರಿದ್ದರು.ಈಗಾಗಲೇ ಕೆಲವು ದೇಶಗಳಿಗೆ (Country) ಹೋಗುವ ಅಂತಾರಾಷ್ಟೀಯ ವಿಮಾನಗಳನ್ನು ರದ್ದು ಗೊಳಿಸಿರುವುದು ನಮಗೆಲ್ಲಾ ತಿಳಿದೇ ಇದೆ, ಆದರೆ ಈಗ ಈ ನಿಟ್ಟಿನಲ್ಲಿ ವಿಮಾನಯಾನ ಕಂಪನಿ ಇಂಡಿಗೋ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ ಎಂದು ಹೇಳಬಹುದು.

ಇಂಡಿಗೋ ಮನ್ನಾ
ಕೋವಿಡ್ ಪ್ರಕರಣಗಳ ಮತ್ತು ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂಡಿಗೋ ವಿಮಾನಯಾನ ಕಂಪನಿಯು ತನ್ನ ಶೇಕಡಾ 20ರಷ್ಟು ವಿಮಾನಗಳನ್ನು ರದ್ದುಗೊಳಿಸುವುದಾಗಿ ಮತ್ತು ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸಿ ಮಾರ್ಚ್ 31 ರವರೆಗೆ ಬದಲಾವಣೆ ಶುಲ್ಕ ಮನ್ನಾ ಮಾಡುವುದಾಗಿ ಇಂಡಿಗೋ ಅಧಿಕೃತವಾಗಿ ಹೇಳಿದೆ. ಏನಿದು ಬದಲಾವಣೆ ಶುಲ್ಕ ಅಂತೀರಾ? ಸಾಮಾನ್ಯವಾಗಿ ಈ ಬದಲಾವಣೆ ಶುಲ್ಕವನ್ನು ಪ್ರಯಾಣಿಕರು ಅವರು ಪ್ರಯಾಣಿಸಬೇಕಿದ್ದ ಒಂದು ವಿಮಾನದ ಟಿಕೆಟ್ ಅನ್ನು ಬೇರೆ ವಿಮಾನಕ್ಕೆ ಮತ್ತು ಬೇರೆಯ ದಿನಾಂಕಕ್ಕೆ ಬದಲಾಯಿಸಲು ಈ ಬದಲಾವಣೆ ಶುಲ್ಕವನ್ನು ಪ್ರಯಾಣಿಕರು ವಿಮಾನಯಾನ ಕಂಪನಿಗೆ ನೀಡುತ್ತಾರೆ. ಈ ಬದಲಾವಣೆ ಶುಲ್ಕವನ್ನು ಇಂಡಿಗೋ ಈಗ ಸಂಪೂರ್ಣವಾಗಿ ಮನ್ನಾ ಮಾಡಿದೆ ಎಂದು ಹೇಳಿದೆ.

ಇದನ್ನೂ ಓದಿ: ವಿಮಾನಕ್ಕೆ ಲಗೇಜ್ ಲೋಡ್ ಮಾಡ್ತಿದ್ದವ್ನು ಅಲ್ಲೇ ನಿದ್ದೆ ಹೋಗ್ಬಿಟ್ಟ, ಎಚ್ಚರವಾದಾಗ ಬೇರೆ ದೇಶದಲ್ಲಿ ಲ್ಯಾಂಡ್ ಆಗ್ಬಿಟ್ಟಿದ್ದ! ಎಂಥಾ ಅವಸ್ಥೆ ಮಾರ್ರೆ!

ಬುಕಿಂಗ್‌ಗಳಿಗೆ ಉಚಿತ
ಹೆಚ್ಚುತ್ತಿರುವ ಕೋವಿಡ್ ಮತ್ತು ಓಮೈಕ್ರಾನ್ ಪ್ರಕರಣಗಳಿಂದಾಗಿ, ಹೆಚ್ಚಿನ ಸಂಖ್ಯೆಯ ಇಂಡಿಗೋ ಪ್ರಯಾಣಿಕರು ಮತ್ತು ಗ್ರಾಹಕರು ತಮ್ಮ ಪ್ರಯಾಣ ಯೋಜನೆಗಳನ್ನು ಬದಲಾಯಿಸುತ್ತಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಗ್ರಾಹಕರಿಗೆ ಇಂತಹ ಸಂದರ್ಭದಲ್ಲಿ ಆರ್ಥಿಕ ಹೊರೆ ಆಗದಂತೆ ಇಂಡಿಗೋ ಈ ಬದಲಾವಣೆ ಶುಲ್ಕವನ್ನು ಮನ್ನಾ ಮಾಡುತ್ತಿದೆ ಮತ್ತು ಮಾರ್ಚ್ 31, 2022 ರವರೆಗೆ ಇದು ಅನ್ವಯಿಸುತ್ತದೆ ಮತ್ತು ಈಗಾಗಲೇ ಜನವರಿ 31 ರವರೆಗೆ ಮಾಡಲಾದ ಎಲ್ಲಾ ಹೊಸ ಮತ್ತು ಅಸ್ತಿತ್ವದಲ್ಲಿರುವ ಬುಕಿಂಗ್‌ಗಳಿಗೆ ಉಚಿತ ಬದಲಾವಣೆಗಳನ್ನು ನೀಡುತ್ತಿದೆ" ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ವೆಬ್‌ಸೈಟ್‌ನಲ್ಲಿ ಪ್ಲ್ಯಾನ್ ಬಿ ವಿಭಾಗದ ಆಯ್ಕೆ
ಕಡಿಮೆ ಬೇಡಿಕೆ ಇರುವುದರಿಂದಲೂ ಸಹ ಕೆಲವು ವಿಮಾನಗಳನ್ನು ಸೇವೆಯಿಂದ ಹಿಂತೆಗೆದುಕೊಳ್ಳುವುದಾಗಿ ಇಂಡಿಗೋ ತಿಳಿಸಿದೆ. "ನಮ್ಮ ಪ್ರಸ್ತುತ ನಿಗದಿತ ಕಾರ್ಯಾಚರಣೆಗಳಲ್ಲಿ ಸುಮಾರು ಶೇಕಡಾ 20ರಷ್ಟು ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ತೆಗೆದು ಕೊಳ್ಳುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಸಾಧ್ಯವಿರುವಲ್ಲಿ, ವಿಮಾನಗಳ ರದ್ದತಿಯನ್ನು ವಿಮಾನದ ಸಮಯಕ್ಕೆ ಕನಿಷ್ಠವಾದರೂ 72 ಗಂಟೆಗಳ ಮುಂಚಿತವಾಗಿ ನೀಡಲಾಗುತ್ತದೆ ಮತ್ತು ಗ್ರಾಹಕರನ್ನು ಮುಂದಿನ ಲಭ್ಯವಿರುವ ವಿಮಾನಕ್ಕೆ ಸ್ಥಳಾಂತರಿಸಲಾಗುತ್ತದೆ ಮತ್ತು ನಮ್ಮ ವೆಬ್‌ಸೈಟ್‌ನಲ್ಲಿ ಪ್ಲ್ಯಾನ್ ಬಿ ವಿಭಾಗದ ಆಯ್ಕೆ ಬಳಸುವ ಮೂಲಕ ತಮ್ಮ ಪ್ರಯಾಣವನ್ನು ಬದಲಾಯಿಸಲು ಸಾಧ್ಯವಾಗುತ್ತದೆ" ಎಂದು ಇಂಡಿಗೋ ತಿಳಿಸಿದೆ.

ಇದನ್ನೂ ಓದಿ: ಇಂಡಿಗೋ ಮೂಲಕ ಮಾಲ್ಡೀವ್ಸ್‌, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ಪ್ರಯಾಣಿಸುತ್ತಿದ್ದೀರಾ? ಇಲ್ಲಿದೆ ಮಾರ್ಗಸೂಚಿಗಳು

ಈಗಾಗಲೇ ಇಂಡಿಗೋ ಕಾಲ್ ಸೆಂಟರ್‌ಗಳು ಗ್ರಾಹಕರಿಂದ ಹೆಚ್ಚಿನ ಪ್ರಮಾಣದ ಕರೆಗಳನ್ನು ಪಡೆಯುತ್ತಿರುವುದರಿಂದ ಅದನ್ನು ನಿರ್ವಹಿಸುವುದು ಮತ್ತು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡಲು ಕಷ್ಟವಾಗಬಾರದೆಂದು ವಿಮಾನಯಾನ ಕಂಪನಿಯು ತನ್ನ ಎಲ್ಲಾ ಗ್ರಾಹಕರನ್ನು ಡಿಜಿಟಲ್ ಚಾನೆಲ್ ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ವೈರಸ್ ಪ್ರಕರಣಗಳು ಹೆಚ್ಚಾದಾಗ ಅನೇಕ ವಿಮಾನಯಾನ ಕಂಪನಿಗಳು ತಮ್ಮ ವಿಮಾನ ಸೇವೆಯನ್ನು ತುಂಬಾ ಸಾರಿ ರದ್ದುಗೊಳಿಸಿದ್ದರು.
Published by:vanithasanjevani vanithasanjevani
First published: