Omicron Effect: ದುಬೈ ವಿಮಾನ ಪ್ರಯಾಣ ದರ ಅರ್ಧಕ್ಕರ್ಧ ಇಳಿಕೆ, ಈಗಿನ ಟಿಕೆಟ್ ಬೆಲೆ ಎಷ್ಟಿದೆ ನೋಡಿ

ಅಕ್ಟೋಬರ್‌ನಲ್ಲಿ, ಲೇಓವರ್ ಫ್ಲೈಟ್‌ಗೆ ಟಿಕೆಟ್ ದರಗಳು 150% ಹೆಚ್ಚಿತ್ತು ಮತ್ತು ಭಾರತದ ಎಲ್ಲಾ ವಿಮಾನ ನಿಲ್ದಾಣಗಳಿಂದ ದುಬೈ ಮತ್ತು ಶಾರ್ಜಾಕ್ಕೆ ನೇರ ವಿಮಾನಕ್ಕೆ 200% ಹೆಚ್ಚು ದರವಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋವಿಡ್‌ - 19 (Covid - 19) ಸಾಂಕ್ರಾಮಿಕದಿಂದ ಹೆಚ್ಚು ನಲುಗಿದ ಕ್ಷೇತ್ರಗಳ ಪೈಕಿ ಪ್ರಮುಖವಾಗಿ ಕೇಳಿಬರುವ ಹೆಸರು ಏರ್‌ಲೈನ್ಸ್‌ (Airline) ಅಥವಾ ವಿಮಾನಯಾನ ಕ್ಷೇತ್ರ. ಅಂತಾರಾಷ್ಟ್ರೀಯ ವಿಮಾನಗಳ ಸೇವೆ ಸ್ಥಗಿತ, ಲಾಕ್‌ಡೌನ್‌ (Lockdown) ಮುಂತಾದ ಕಾರಣಗಳಿಂದ ವಿಮಾನಗಳ ಸೇವೆ ಅಸ್ತವ್ಯಸ್ತವಾಗಿದೆ. ಕೋವಿಡ್‌ - 19 ಪ್ರಕರಣಗಳ ಸಂಖ್ಯೆ ಕಡಿಮೆಯಾದಾಗಿನಿಂದ ಹಾಗೂ ಲಸಿಕೆ ಪ್ರಮಾಣ (Vaccine rate) ಹೆಚ್ಚುತ್ತಿದ್ದಂತೆ ವಿಮಾನಯಾನ ಕ್ಷೇತ್ರ ಇನ್ನೇನು ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ ಈಗ ಓಮಿಕ್ರಾನ್‌ (Omicron) ಎಂಬ ಹೊಸ ಕೋವಿಡ್‌ ರೂಪಾಂತರದ ಆತಂಕ ಹೆಚ್ಚಾಗಿದೆ. ಓಮಿಕ್ರಾನ್‌ ಆತಂಕದಿಂದಾಗಿ ವಿಮಾನಯಾನ ಸಂಸ್ಥೆಗಳು ರದ್ದತಿ ಮತ್ತು ಕಡಿಮೆ (Bookings) ಬುಕಿಂಗ್‌ಗಳಿಗೆ ಸಾಕ್ಷಿಯಾಗುತ್ತಿರುವುದರಿಂದ ವಿಮಾನ ದರಗಳು ಕೋವಿಡ್-ಪೂರ್ವ ಮಟ್ಟಕ್ಕೆ ಮರಳುತ್ತಿವೆ.

50%ರಷ್ಟು ಕಡಿಮೆ
ದುಬೈನಿಂದ ಮಂಗಳೂರಿಗೆ ಬರುವ ವಿಮಾನ ಟಿಕೆಟ್‌ಗಳ ಬೆಲೆಗಳು ಅಕ್ಟೋಬರ್‌ನ ದರಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಸುಮಾರು 50%ರಷ್ಟು ಕಡಿಮೆಯಾಗಿದೆ. ಉದಾಹರಣೆಗೆ, ದುಬೈನಿಂದ ಕರಾವಳಿ ನಗರಕ್ಕೆ ರಿಟರ್ನ್‌ ವಿಮಾನ ಟಿಕೆಟ್ ಅಕ್ಟೋಬರ್‌ನಲ್ಲಿ 1 ಲಕ್ಷ ರೂಪಾಯಿ ಇತ್ತು. ಈಗ 50,000 ರೂ. ಅಥವಾ ಅದಕ್ಕಿಂತ ಕಡಿಮೆ ಬೆಲೆ ಇದೆ.

ಇದನ್ನೂ ಓದಿ: Omicron Threat: ಜನವರಿ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ಇರುವುದಿಲ್ಲ

ಕ್ರಿಸ್ಮಸ್ ರಜಾದಿನ
ಮಧ್ಯಪ್ರಾಚ್ಯಕ್ಕೆ ಹಾರುವ ವಿಮಾನಯಾನ ಸಂಸ್ಥೆಗಳು ವಾರ್ಷಿಕ ಶಾಲಾ ರಜೆಗಳು, ಈದ್ ಮತ್ತು ಕ್ರಿಸ್ಮಸ್ ರಜಾದಿನಗಳಲ್ಲಿ ಹೆಚ್ಚು ಪ್ರಯಾಣಿಕರನ್ನು ನೋಡುತ್ತವೆ. ಈ ಅವಧಿಗಳಲ್ಲಿ ಅಂದರೆ, ಜೂನ್ ಅಂತ್ಯದಿಂದ ಡಿಸೆಂಬರ್‌ವರೆಗೆ - ವಿಮಾನ ದರಗಳು ದ್ವಿಗುಣಗೊಳ್ಳುತ್ತವೆ. ಈ ತಿಂಗಳು ದರಗಳು ಕಡಿಮೆಯಾಗುವುದರೊಂದಿಗೆ, ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು ರಜೆಗಾಗಿ ಮನೆಗೆ ಮರಳಲು ಹೆಚ್ಚು ಹಣ ಖರ್ಚು ಮಾಡಬೇಕಾಗಿಲ್ಲ.

ನೇರ ವಿಮಾನ
ಅಕ್ಟೋಬರ್‌ನಲ್ಲಿ, ಲೇಓವರ್ ಫ್ಲೈಟ್‌ಗೆ ಟಿಕೆಟ್ ದರಗಳು 150% ಹೆಚ್ಚಿತ್ತು ಮತ್ತು ಭಾರತದ ಎಲ್ಲಾ ವಿಮಾನ ನಿಲ್ದಾಣಗಳಿಂದ ದುಬೈ ಮತ್ತು ಶಾರ್ಜಾಕ್ಕೆ ನೇರ ವಿಮಾನಕ್ಕೆ 200% ಹೆಚ್ಚು ದರವಿತ್ತು. ಸಾಂಕ್ರಾಮಿಕ ಮತ್ತು ಬಬಲ್ ಪ್ರಯಾಣದ ವ್ಯವಸ್ಥೆಗಳು ಸಹ ವಿಮಾನಗಳ ಸಂಖ್ಯೆಯನ್ನು ನಿರ್ಬಂಧಿಸಿವೆ. ಇನ್ನು, ಆರಂಭಿಕ ಸೀಟ್-ಕ್ಯಾಪಿಂಗ್ ನಿಯಮಗಳ ಪರಿಣಾಮವಾಗಿ ಬೆಲೆಗಳು 9,000 - 12,000 ರಿಂದ 16,000- 25,000 ರೂ. ಗೆ ಏರಿದೆ.

ರದ್ದತಿ ಮತ್ತು ಮರುಬುಕಿಂಗ್
ಡಿಸೆಂಬರ್‌ನಲ್ಲಿ ರಜಾ ಕಾಲಕ್ಕಿಂತ ಮುಂಚಿತವಾಗಿ ಅಕ್ಟೋಬರ್‌ನಲ್ಲಿ ದರಗಳು ಏರಿದ್ದವು. ಆದರೆ ಹೆಚ್ಚಿನ ಬುಕಿಂಗ್ ಇರಲಿಲ್ಲ. ಈ ಹಿನ್ನೆಲೆ ಅನೇಕ ವಿಮಾನಯಾನ ಸಂಸ್ಥೆಗಳು ಟಿಕೆಟ್ ದರ ಕಡಿಮೆ ಮಾಡುವಂತೆ ಅಯಿತು. ಇದರಿಂದ ಈ ಹಿಂದೆ ತಮ್ಮ ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸಿದವರು ಸಹ ಈಗ ರದ್ದುಗೊಳಿಸುತ್ತಿದ್ದಾರೆ ಮತ್ತು ಅಗ್ಗದ ದರದಲ್ಲಿ ಮತ್ತೆ ಬುಕ್ ಮಾಡುತ್ತಿದ್ದಾರೆ”ಎಂದು ಏರ್‌ಲೈನ್ ಅಧಿಕಾರಿಯೊಬ್ಬರು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

ಒನ್‌ ವೇ ವಿಮಾನ ದರ
ಈಗ, ಮಂಗಳೂರು-ದುಬೈ ಒನ್‌ ವೇ ವಿಮಾನ ದರವು ಜನವರಿ ಮಧ್ಯದವರೆಗೆ 21,000 ರೂ.ಗಳಿಂದ 25,000 ರೂ.ಗಳು ಮತ್ತು ವಾರಾಂತ್ಯದಲ್ಲಿ ಸುಮಾರು 30,000 ರೂ. ಇದೆ. ಆದರೆ, ಅಕ್ಟೋಬರ್‌ನಲ್ಲಿ ಇದೇ ಟಿಕೆಟ್‌ಗಳ ಬೆಲೆ ಸುಮಾರು 50,000 ರೂ ಇತ್ತು. ಈ ಮಧ್ಯೆ, ಕಳೆದ 3 ದಿನಗಳಲ್ಲಿ ಬುಕ್ಕಿಂಗ್‌ಗಳು ನಿಧಾನವಾಗಿ ಹೆಚ್ಚುತ್ತಿದ್ದು, ದುಬೈ-ಮಂಗಳೂರು ರಿಟರ್ನ್ ದರ 45,000 ರೂ.ನಿಂದ 51,000 ರೂ.ಗೆ ಅಂದರೆ, 6,000 ರೂ. ಏರಿಕೆಯಾಗಿದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: Omicron ಆತಂಕದ ನಡುವೆಯೇ ದುಪ್ಪಟ್ಟಾದ ವಿಮಾನ ಪ್ರಯಾಣ ದರಗಳು

ದೇಶೀಯ ವಿಮಾನಯಾನ
ಕೋವಿಡ್-19 ಎಂಬ ಮಹಾಮಾರಿ ಜನರ ಜೀವನವನ್ನು ಹೈರಾಣಗೊಳಿಸಿತ್ತು. ದೇಶದ ಜನರ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ಸಾರಿಗೆ ಸಂಸ್ಥೆಗಳು ಬಸ್ ಸಂಚಾರಕ್ಕೆ ಕಡಿವಾಣ ಹಾಕಿತ್ತು. ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದವು. ದೇಶದಿಂದ ದೇಶಕ್ಕೆ , ರಾಜ್ಯದಿಂದ ರಾಜ್ಯಕ್ಕೆ ಜನರು ಪ್ರಯಾಣ ಬೆಳೆಸುವುದರಿಂದ ಕೋವಿಡ್ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇತ್ತು.

ಈ ಎಲ್ಲಾ ಅಂಶಗಳನ್ನು ಮನಗಂಡ ವಾಯುಯಾನ ಸಂಸ್ಥೆ ಎಲ್ಲಾ ವಿಮಾನಗಳ ಹಾರಾಟ ನಿಲ್ಲಿಸುವುದರ ಮೂಲಕ ಜನರ ಆರೋಗ್ಯದ ಕಡೆ ಕಾಳಜಿ ತೋರಿತ್ತು. ಇದೀಗ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಹೌದು, ದೇಶೀಯ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 18 ರಿಂದ 100 ಪ್ರತಿಶತದಷ್ಟು ಕಾರ್ಯನಿರ್ವಹಿಸಲು ಅನುಮತಿ ನೀಡಲಾಗುವುದು ಎಂದು ಮಂಗಳವಾರ ಸರ್ಕಾರದ ಪ್ರಕಟಣೆ ತಿಳಿಸಿತ್ತು.
Published by:vanithasanjevani vanithasanjevani
First published: